ಬ್ರೇಕಿಂಗ್ ನ್ಯೂಸ್
28-10-22 08:35 pm Source: Vijayakarnataka ಡಾಕ್ಟರ್ಸ್ ನೋಟ್
ಹವಾಮಾನ ಬದಲಾದಂತೆ ಜನರ ಜೀವನಶೈಲಿ ಬದಲಾಗತೊಡಗುತ್ತದೆ. ಚಳಿಗಾಲದ ವಿಶೇಷವೆಂದರೆ ಈ ಋತುವಿನಲ್ಲಿ ಹಲವಾರು ಹಸಿರು ಎಲೆಗಳ ತರಕಾರಿಗಳು ಲಭ್ಯವಿರುತ್ತವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಹಸಿರು ತರಕಾರಿಗಳಲ್ಲಿ ಸಾಕಷ್ಟು ಖನಿಜಗಳು, ವಿಟಮಿನ್‌ಗಳು ಮತ್ತು ಫೈಬರ್‌ಗಳು ಹೇರಳವಾಗಿ ಕಂಡುಬರುತ್ತವೆ. ಇದಲ್ಲದೇ ಈ ಸೀಸನ್ ನಲ್ಲಿ ಪಾಲಕ್ ಮತ್ತು ಮೆಂತ್ಯ ಸೊಪ್ಪನ್ನು ಜನರು ಇಷ್ಟ ಪಡುವುದನ್ನು ನೀವು ನೋಡಿರಬಹುದು.
ಯಾವುದು ಒಳ್ಳೆಯದು
ಪಾಲಕ್ ಮತ್ತು ಮೆಂತ್ಯ ಎರಡೂ ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಆದರೆ ಪಾಲಕ್ ಮತ್ತು ಮೆಂತ್ಯ ಸೊಪ್ಪಿನಲ್ಲಿ ಯಾವ ಹಸಿರು ಸೊಪ್ಪು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಕೇಳಿದರೆ ಹೇಳುವುದು ಕಷ್ಟ.
ಪಾಲಕ್‌ನಲ್ಲಿರುವ ಪೋಷಕಾಂಶಗಳು
ಯಾರಿಗಾದರೂ ಕಬ್ಬಿಣದ ಕೊರತೆಯಿದ್ದರೆ, ಪಾಲಕ್‌ನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಪಾಲಕ್ ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಪಾಲಕ್ ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅಷ್ಟೇ ಅಲ್ಲ, ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಕೆ ನಂತಹ ಅನೇಕ ಖನಿಜಗಳು ಮತ್ತು ವಿಟಮಿನ್ ಗಳು ಕಂಡುಬರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಪಾಲಕ್ ಸೊಪ್ಪಿನಲ್ಲಿ ಇರುವಂತಹ ಪೋಷಕಾಂಶಗಳು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳನ್ನು ದೂರವಿಡಲು ಸಹಕಾರಿಯಾಗಿದೆ.
ಮೆಂತ್ಯದಲ್ಲಿರುವ ಪೋಷಕಾಂಶಗಳು
ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಮೆಂತ್ಯ, ಕ್ಯಾಲೋರಿ ಅಂಶವು ತುಂಬಾ ಕಡಿಮೆಯಾಗಿದೆ. ಮೆಂತ್ಯವನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವೂ ಕಡಿಮೆಯಾಗುತ್ತದೆ. ಜೊತೆಗೆ, ಮೆಂತ್ಯವು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಚಳಿಗಾಲದಲ್ಲಿ ಮೆಂತ್ಯವನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಮೆಂತ್ಯ ಅಥವಾ ಪಾಲಕ್‌ನಲ್ಲಿ ಯಾವುದನ್ನು ತಿನ್ನುವುದು ಉತ್ತಮ
ರಕ್ತ ತೆಳುವಾಗುತ್ತಿರುವ ಸಮಸ್ಯೆ ಇರುವವರು ಪಾಲಕ್ ಸೊಪ್ಪು ತಿನ್ನುವುದನ್ನು ತಪ್ಪಿಸಬೇಕು. ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವಲ್ಲಿ ಪಾಲಕ್ ಸಹಕಾರಿ. ಅದೇ ರೀತಿ ಮಧುಮೇಹ ರೋಗಿಗಳೂ ಸಹ ವೈದ್ಯರ ಸಲಹೆಯಿಲ್ಲದೆ ಪಾಲಕ್ ಸೊಪ್ಪನ್ನು ಬಳಸಬಾರದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಮೆಂತ್ಯವು ಪಾಲಕ್‌ಕ್ಕಿಂತ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಹೊಂದಿದೆ ಮತ್ತು ಈ ಕಾರಣದಿಂದಾಗಿ ಮೆಂತ್ಯವನ್ನು ತಿನ್ನುವುದು ಮೂಳೆಯ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಕಡಿಮೆ ಕ್ಯಾಲೋರಿ ಡಯಟ್
ನೀವು ಕಡಿಮೆ ಕ್ಯಾಲೋರಿ ಡಯಟ್ ಮಾಡುತ್ತಿದ್ದರೆ, ಪಾಲಕ್ ಬದಲಿಗೆ ಮೆಂತ್ಯವನ್ನು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೆಂತ್ಯವು ಪಾಲಕ್‌ಕ್ಕಿಂತ ಕಡಿಮೆ ಕಾರ್ಬ್ ಅಂಶವನ್ನು ಹೊಂದಿದೆ. ಆದರೆ ಪ್ರೋಟೀನ್ ಹೇರಳವಾಗಿದೆ. 100 ಗ್ರಾಂ ಮೆಂತ್ಯದಲ್ಲಿ 2.9 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 4 ಗ್ರಾಂ ಪ್ರೋಟೀನ್ ಇದ್ದರೆ, 100 ಗ್ರಾಂ ಪಾಲಕ್‌ನಲ್ಲಿ 6 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 2 ಗ್ರಾಂ ಪ್ರೋಟೀನ್ ಕಂಡುಬರುತ್ತದೆ.
Spinach Or Methi Which Is Good For Health.
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am