ಆಯುರ್ವೇದದ ಪ್ರಕಾರ ಮೊಸರನ್ನು ಹೇಗೆ ಬಳಸಬೇಕು? ಇಲ್ಲಿದೆ ಫುಲ್ ಡೀಟೇಲ್ಸ್...

31-10-22 07:19 pm       Source: Vijayakarnataka   ಡಾಕ್ಟರ್ಸ್ ನೋಟ್

ಮೊಸರು ಸೇವನೆಯ ವಿಚಾರ ಎಂದು ಬಂದಾಗ ಅದಕ್ಕೆ ತನ್ನದೇ ಆದ ನಿಯಮಗಳಿವೆ. ಆಯುರ್ವೇದ ತಜ್ಞರಾದ ಡಾ. ಐಶ್ವರ್ಯ ಸಂತೋಷ್ ಈ ವಿಚಾರವನ್ನು ತಿಳಿಸಿದ್ದಾರೆ. ನಾವೆಲ್ಲರೂ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ....

ಮೊಸರು ಒಂದು ಆರೋಗ್ಯಕರ ಆಹಾರ ಪದಾರ್ಥ. ನಾವು ವಿವಿಧ ಸಂದರ್ಭದಲ್ಲಿ ವಿವಿಧ ಆಹಾರ ಪದಾರ್ಥಗಳ ಜೊತೆ ಮೊಸರು ಸೇವನೆ ಮಾಡುತ್ತೇವೆ. ಆದರೆ ಯಾವ ಸಂದರ್ಭದಲ್ಲಿ ಯಾವ ಆಹಾರ ಪದಾರ್ಥಗಳ ಜೊತೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಮೊಸರು ತಿನ್ನಲು ಸ್ವಲ್ಪ ಹುಳಿ ಇರುತ್ತದೆ. ಊಟ ಆದ ನಂತರದಲ್ಲಿ ಇದರ ಪ್ರಭಾವ ಇರುತ್ತದೆ ಮತ್ತು ಇದೊಂದು ಭಾರವಾದ ಆಹಾರ ಪದಾರ್ಥವಾಗಿದ್ದು, ದೇಹಕ್ಕೆ ಉಷ್ಣ ಪ್ರಭಾವ ಉಂಟು ಮಾಡುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞರಾದ ಡಾ. ಐಶ್ವರ್ಯ ಸಂತೋಷ್ ಏನು ಹೇಳುತ್ತಾರೆ ನೋಡೋಣ ಬನ್ನಿ. ದೇಹದಲ್ಲಿ ಕಫ ಮತ್ತು ಪಿತ್ತ ದೋಷವನ್ನು ಹೆಚ್ಚು ಮಾಡಿ ವಾತ ದೋಷವನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಮೊಸರು ಕೆಲಸ ಮಾಡುತ್ತದೆ....

ರಾತ್ರಿಯ ಸಮಯದಲ್ಲಿ ಮೊಸರು ಸೇವನೆ ಬೇಡ

A Cough Can Worsen TMJ | Denver TMJ Treatment

ಇದಕ್ಕೆ ಕಾರಣವಿದೆ. ನಮ್ಮ ದೇಹದಲ್ಲಿ ಮೊಸರು ಕಫ ಹೆಚ್ಚು ಮಾಡುತ್ತದೆ. ಅಷ್ಟೇ ಅಲ್ಲದೆ ರಾತ್ರಿಯ ಸಮಯದಲ್ಲಿ ನಮ್ಮ ಎದೆಯ ಭಾಗದ ಕಫ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಾಧಾರಣ ಶೀತ, ಕೆಮ್ಮಿನಿಂದ ಪ್ರಾರಂಭವಾಗಿ ಕಫ ನಮ್ಮ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುವಂತೆ ಮಾಡ ಬಹುದು.

ಮೊಸರನ್ನು ಬಿಸಿ ಮಾಡಬಾರದು ಅಥವಾ ಕುದಿಸಬಾರದು

ಮೊಸರು ಸೇವಿಸುವುದರಿಂದ ಸಿಗಲಿದೆ ಈ ಐದು ಪ್ರಯೋಜನಗಳು

  • ಹೌದು. ಮೊಸರನ್ನು ಏಕೆ ಬಿಸಿ ಮಾಡಬಾರದು ಅಥವಾ ಕುದಿಸಬಾರದು ಎಂದರೆ, ಇದರಲ್ಲಿ ನಮ್ಮ ದೇಹಕ್ಕೆ ಅನುಕೂಲಕರವಾದ ಕೆಲವೊಂದು ಆರೋಗ್ಯಕರ ಬ್ಯಾಕ್ಟಿರಿಯಾಗಳು ಇರುತ್ತವೆ.
  • ಆದರೆ ಬಿಸಿ ಮಾಡುವುದರಿಂದ ಅಥವಾ ಕುದಿಸುವುದರಿಂದ ಮೊಸರಿನಲ್ಲಿನ ಒಳ್ಳೆಯ ಗುಣಲಕ್ಷಣಗಳು ಇಲ್ಲವಾಗುತ್ತವೆ ಮತ್ತು ಮೊಸರಿನ ಉಷ್ಣಾಂಶ ಹೆಚ್ಚಿಸುವ ಗುಣ ಮತ್ತಷ್ಟು ವೃದ್ಧಿಯಾಗುತ್ತದೆ.

ಸಕ್ಕರೆ, ತುಪ್ಪ ಬಿಟ್ಟು ಮೊಸರು ತಿನ್ನಬೇಡಿ

How Is Sugar Made? | Taste of Home

ಹೌದು ಇದು ಸತ್ಯ. ದೇಹದಲ್ಲಿ ಉಂಟಾಗುವ ದೋಷಗಳನ್ನು ಸಮತೋಲನಗೊಳಿಸಲು ಮೊಸರಿನ ಜೊತೆ ಅಪ್ಪಟ ಹಸುವಿನ ತುಪ್ಪ, ಜೇನುತುಪ್ಪ ಅಥವಾ ನೆಲ್ಲಿಕಾಯಿ ಜೊತೆಗೆ ಸೇರಿಸಿ ತಿನ್ನಬೇಕು ಎಂದು ಹೇಳುತ್ತಾರೆ.

ಹೊಟ್ಟೆ ತುಂಬಿದ ನಂತರದಲ್ಲಿ ಮೊಸರು ಸೇವನೆ ಬೇಡ!

Stomach Ache: When To See A Doctor? - Tata 1mg Capsules

ನಿರಂತರವಾಗಿ ಮೊಸರನ್ನು ತಿನ್ನಬಾರದು. ಅಷ್ಟೇ ಅಲ್ಲದೆ ಮೊಸರು ತುಂಬಾ ಚುರುಕು. ಅಂದರೆ ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟುಮಾಡುತ್ತದೆ ಮತ್ತು ಮಲಬದ್ಧತೆ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಪ್ರತಿದಿನ ಮೊಸರು ತಿನ್ನುವ ಬದಲು ಮೊಸರಿನಿಂದ ಮಜ್ಜಿಗೆ ಮಾಡಿ ಕುಡಿಯಬಹುದು.

ಈ ಸಮಸ್ಯೆಗಳು ಇದ್ದರೆ ಮೊಸರು ತಿನ್ನಬೇಡಿ

  • ಚಳಿಗಾಲ ಹಾಗೂ ವಸಂತಕಾಲದ ಸಹಿತ ಬೇಸಿಗೆ ಕಾಲದಲ್ಲಿ ಮೊಸರು ಸೇವನೆ ಮಾಡ ಬೇಡಿ. ಯಾಕೆಂದರೆ, ಒಂದು ವೇಳೆ ನಿಮಗೆ ಚರ್ಮದ ಸಮಸ್ಯೆಗಳು, ಉಸಿರಾಟದ ತೊಂದರೆಗಳು ಮತ್ತು ಉರಿಯುತ ಸಮಸ್ಯೆಗಳು ಇದ್ದರೆ ಮೊಸರು ತಿನ್ನಬೇಡಿ.
  • ಒಂದು ವೇಳೆ ನೀವು ಈ ರೀತಿಯ ತೊಂದರೆಗಳನ್ನು ಹೊಂದಿದ್ದು, ಮೊಸರು ತಿಂದರೆ ನಿಮಗೆ ಚರ್ಮದ ಸಮಸ್ಯೆಗಳು, ರಕ್ತಸ್ರಾವ, ದೇಹದಲ್ಲಿ ಕಬ್ಬಿಣದ ಕೊರತೆ, ಜ್ವರ, ನಿರಂತರ ಸೋಂಕು, ಆರ್ಥ್ರೈಟಿಸ್ ಮತ್ತು ಇನ್ನಿತರ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

Ayurveda Suggests Some Helpful Tips For Having Curd.