ದೊಡ್ಡ ದೊಡ್ಡ ಕಾಯಿಲೆಗಳನ್ನು ಗುಣ ಮಾಡುವ ಪವರ್ ಬದನೆಕಾಯಿಯಲ್ಲಿದೆ!

01-11-22 08:13 pm       Source: Vijayakarnataka   ಡಾಕ್ಟರ್ಸ್ ನೋಟ್

ಬದನೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ತುಂಬಾ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಆಹಾರ ತಜ್ಞರಾದ ಪೌಷ್ಟಿಕ ತಜ್ಞರಾದ ಲವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ತರಕಾರಿ.

ಬದನೆಕಾಯಿಯನ್ನು ಸಾಕಷ್ಟು ಜನರು ಅಲ್ಲಗಳೆಯುತ್ತಾರೆ. ಕೆಲವರು ಹಲ್ಲು ಕಪ್ಪಾಗುತ್ತವೆ ಎನ್ನುವ ಕಾರಣಕ್ಕೆ ಬದನೆಕಾಯಿ ತಿನ್ನುವುದಿಲ್ಲ. ಆದರೆ ಬದನೆಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆಹಾರ ತಜ್ಞರಾದ ಲವ್ನೀತ್ ಬತ್ರ ಈ ವಿಚಾರವನ್ನು ಕೆಳಗಿನ ರೀತಿಯಲ್ಲಿ ತಿಳಿಸಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೂಡ ಬದನೆಕಾಯಿಯನ್ನು ಸೇವಿಸಿ ಉತ್ತಮ ಆರೋಗ್ಯ ಲಾಭಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಮೆಟಬಾಲಿಸಂ ಮೂಲವೇ ಇದು

Buy Brinjal F1 Hybrid Green Round - Vegetable Seeds online from Nurserylive  at lowest price.

ಬದನೆಕಾಯಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಮತ್ತು ಅನುಗುಣವಾಗಿ ಬೇಕಾದ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣದ ಜೊತೆಗೆ ಸಾಕಷ್ಟು ವಿಟಮಿನ್ ಅಂಶಗಳು ಕೂಡ ಸಿಗುತ್ತವೆ ಎಂದು ಕೇಳಿದ್ದೇವೆ. ಪ್ರಮುಖವಾಗಿ ಬದನೆಕಾಯಿಯಲ್ಲಿ ನೋಡುವುದಾದರೆ ಗ್ಲೈಕೋಲ್ ಆಲ್ಕಾಲಾಯ್ಡ್ ಇರುತ್ತದೆ. ಇದು ಆರೋಗ್ಯವನ್ನು ವೃದ್ಧಿಸುವುದರಲ್ಲಿ ಹೆಚ್ಚು ಕೆಲಸ ಮಾಡಲಿದೆ.

ಕಾಯಿಲೆಯನ್ನು ವಾಸಿ ಮಾಡುತ್ತದೆ

Stomach Ache: When To See A Doctor? - Tata 1mg Capsules

ಬದನೆಕಾಯಿ ತನ್ನಲ್ಲಿ ಆರ್ಥ್ರೈಟಿಸ್, ಗ್ಯಾಸ್ಟ್ರಿಕ್, ಚರ್ಮದ ಮೇಲಿನ ಸೋಂಕುಗಳು, ಸುಟ್ಟ ಗಾಯ ಹೀಗೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಕ್ರಮೇಣವಾಗಿ ವಾಸಿಮಾಡುವ ಗುಣಲಕ್ಷಣವನ್ನು ಹೊಂದಿದೆ. ಹಾಗಾಗಿ ಬದನೆಕಾಯಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು ಎಂದು ಆಹಾರ ತಜ್ಞರಾದ ಲವ್ನೀತ್ ಬತ್ರ ಹೇಳಿದ್ದಾರೆ.

ತೂಕ ಕಡಿಮೆ ಮಾಡುವುದಕ್ಕೆ ಬೆಸ್ಟ್

Frequently Asked Questions About Weight Loss And Diets

ಬದನೆಕಾಯಿ ತನ್ನಲ್ಲಿ ಅತಿಯಾದ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಕೆಲಸ ಮಾಡುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮ ಪಡಿಸಿ ಹೊಟ್ಟೆ ಹಸಿವಿನ ನಿಯಂತ್ರಣದ ಜೊತೆಗೆ ಕ್ಯಾಲೋರಿಗಳ ಸೇವನೆಯನ್ನು ನಿಯಂತ್ರಣ ಮಾಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

  • ಬದನೆಕಾಯಿಯಲ್ಲಿ ಫೈಟೋ ನ್ಯೂಟ್ರಿಯಂಟ್ ಅಂಶಗಳು ಸಾಕಷ್ಟಿವೆ. ಇವುಗಳಿಂದ ಮನುಷ್ಯನ ಮೆದುಳಿನ ಕಾರ್ಯ ಚಟುವಟಿಕೆ ವೃದ್ಧಿಸುತ್ತದೆ ಜೊತೆಗೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ.
  • ಫ್ರೀ ರಾಡಿಕಲ್ ಹಾವಳಿಯನ್ನು ಕಡಿಮೆ ಮಾಡಿ ಮೆದುಳಿನ ಜೀವಕೋಶಗಳ ರಕ್ಷಣೆ ಮಾಡುತ್ತದೆ. ಒಂದು ಸಂಶೋಧನೆಯ ಮೂಲದ ಪ್ರಕಾರ ಹೇಳುವುದಾದರೆ ಮೆದುಳಿನ ಕ್ಯಾನ್ಸರ್ ಸಮಸ್ಯೆಯನ್ನು ಸಹ ನಿಯಂತ್ರಣ ಮಾಡುವ ಶಕ್ತಿ ಬದನೆಕಾಯಿಯಲ್ಲಿ ಇದೆ.

ಗರ್ಭಿಣಿಯರಿಗೆ ತುಂಬಾ ಒಳ್ಳೆಯದು

Spiritual Signs Of Pregnancy - Will A New Life Begin?

ಗರ್ಭಿಣಿಯರು ಎನ್ನುವುದಕ್ಕಿಂತ ಮಹಿಳೆಯರಿಗೆ ಬದನೆಕಾಯಿ ತುಂಬಾ ಒಳ್ಳೆಯದು ಎಂದು ಹೇಳ ಬಹುದು. ಬಾಣಂತಿಯರು, ಯುವತಿಯರು ತಮ್ಮ ಆಹಾರ ಪದ್ಧತಿಯಲ್ಲಿ ಬದನೆಕಾಯಿ ಸೇರಿಸಿ ತಿನ್ನುವುದ ರಿಂದ ದೇಹದಲ್ಲಿ ಅನಿಮಿಯಾ ಅಥವಾ ಕಬ್ಬಿಣದ ಅಂಶದ ಕೊರತೆ ಇರುವುದಿಲ್ಲ.

As Per The Nutrition Expert Brinjal Has Some Awesome Health Benefits Which Are Still Unknown.