ಸಕ್ಕರೆ ಕಾಯಿಲೆ ಇರುವವರು, ಸೇವಿಸಬಹುದಾದ ಕಡಿಮೆ ಸಕ್ಕರೆ ಅಂಶದ ಹಣ್ಣುಗಳು

02-11-22 08:53 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವವರು, ಸ್ಟ್ರಾಬೆರಿ, ಚೆರಿ, ಕಿತ್ತಳೆ ಹಣ್ಣುಗಳನ್ನು ಸೇವನೆ ಮಾಡಬಹುದೆಂದು,ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ ಅವರು ತಮ್ಮ.

ಸಕ್ಕರೆ ಕಾಯಿಲೆಯನ್ನು ನಿರ್ವಹಣೆ ಮಾಡಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಅಕ್ಕ ಪಕ್ಕದವರು ಇಷ್ಟಪಟ್ಟು ತಿನ್ನುತ್ತಿರುವ ಸಿಹಿ ಪದಾರ್ಥಗಳನ್ನು ನಮಗೆ ಇಷ್ಟವಿದ್ದರೂ ಕೂಡ ತಿನ್ನುವ ಹಾಗಿಲ್ಲ. ನೋಡಿ ಸುಮ್ಮನೇ ಇರಲು ಕೂಡ ಆಗುವುದಿಲ್ಲ. ಹಾಗಿದ್ದರೆ ಸಂಪೂರ್ಣವಾಗಿ ಸಿಹಿ ಪದಾರ್ಥಗಳನ್ನು ದೂರ ಇರಿಸಬೇಕೆ? ಹೀಗೊಂದು ಪ್ರಶ್ನೆ ಮಧುಮೇಹ ಈಗ ತಾನೆ ಶುರುವಾಗಿರುವ ಜನರಲ್ಲಿ ಬರದೇ ಇರದು.

ಆದರೆ ವೈದ್ಯರ ಪ್ರಕಾರ ಹಾಗೇನಿಲ್ಲ. ಸಕ್ಕರೆ ಕಾಯಿಲೆ ಇರುವವರು ಹಣ್ಣುಗಳನ್ನು ತಿನ್ನ ಬಹುದು. ಏಕೆಂದರೆ ಕೆಲವೊಂದು ಹಣ್ಣುಗಳಲ್ಲಿ ಗ್ಲೈಸಮಿಕ್ ಸೂಚ್ಯಂಕ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಇದು ಬೆಸ್ಟ್. ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ಇಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ....

ಚೆರ್ರಿ ಹಣ್ಣುಗಳು

What's in season: cherries | Diabetes UK

  • ಚೆರ್ರಿ ಹಣ್ಣುಗಳಲ್ಲಿ ಸಹ ಗ್ಲೈಸಮಿಕ್ ಸೂಚ್ಯಂಕ ಕಡಿಮೆ ಇದ್ದು, ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಠಿಕ ಸತ್ವಗಳ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಪೊಟ್ಯಾಶಿಯಂ, ಆಂಟಿ ಆಕ್ಸಿಡೆಂಟ್ ಮತ್ತು ನಾರಿನ ಅಂಶ ಕೂಡ ಇರುತ್ತದೆ.
  • ಇದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಆಗುತ್ತದೆ. ಇದರ ಜೊತೆಗೆ ಚೆರ್ರಿ ಹಣ್ಣುಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಎಂದು ಹೇಳುತ್ತಾರೆ.

ಕಿತ್ತಳೆ ಹಣ್ಣು

ఆరెంజ్, నిమ్మ వంటి సిట్రస్ ఫ్రూట్స్ తినడానికి కొన్ని ఖచ్చితమైన కారణాలు.! |  7 Unusual Reasons To Eat More Citrus Fruit - Telugu BoldSky

ಕಿತ್ತಳೆ ಹಣ್ಣಿನಲ್ಲಿ ಸಹ ಗ್ಲೈಸಮಿಕ ಸೂಚ್ಯಂಕ ಕಡಿಮೆ ಇದೆ. ಇದು ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ನಾರಿನ ಅಂಶ ಸಹ ಹೆಚ್ಚಾಗಿ ಒಳಗೊಂಡಿದೆ.

ಸ್ಟ್ರಾಬೆರಿ ಹಣ್ಣುಗಳು

10 Boring Fruits With Amazing Health Benefits | Everyday Health

ಮಧುಮೇಹ ಇರುವವರಿಗೆ ಸ್ಟ್ರಾಬೆರಿ ಹಣ್ಣುಗಳು ಸಹ ಪ್ರಯೋಜನಕಾರಿ. ಏಕೆಂದರೆ ಇವುಗಳಲ್ಲಿ ಸಹ ಕಡಿಮೆ ಪ್ರಮಾಣದ ಸಕ್ಕರೆ ಇರುವುದರಿಂದ ಜೊತೆಗೆ ನಾರಿನ ಅಂಶ ಇರುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು ಮತ್ತು ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ಸಿಗುವುದರಿಂದ ಕಿತ್ತಳೆ ಹಣ್ಣಿ ಗಿಂತ ಸ್ಟ್ರಾಬೆರಿ ಹಣ್ಣು ಬೆಸ್ಟ್ ಎಂದು ಹೇಳಬಹುದು.

ಸೇಬು ಹಣ್ಣು

Fresh Apple, INR 80INR 90 / Kilogram by VIKRANT EXIMS from Pune Maharashtra  | ID - 4963146

  • ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ಮಾತಿದೆ. ಇದರರ್ಥ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎಂದು.
  • ಸೇಬುಹಣ್ಣಿನಲ್ಲಿ ಸಹ ಸಕ್ಕರೆ ಕಾಯಿಲೆ ಇರುವವರಿಗೆ ಅನುಕೂಲಕರವಾದ ರೀತಿಯಲ್ಲಿ ಗ್ಲೈಸಿಮಿಕ್ ಸೂಚ್ಯಂಕ ಇರುತ್ತದೆ. ಉತ್ತಮವಾದ ಪ್ರಮಾಣದಲ್ಲಿ ನಾರಿನ ಅಂಶ ಇರುವುದರಿಂದ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಇದು ಸಹಾಯವಾಗುತ್ತದೆ.

ಪಿಯರ್ ಹಣ್ಣು

6 health benefits of eating pears regularly | HealthShots

ದೇಹದ ತೂಕವನ್ನು ನಿರ್ವಹಣೆ ಮಾಡುವುದು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಅಗತ್ಯ. ಹಾಗಾಗಿ ನಾರಿನ ಅಂಶ ಹೆಚ್ಚಾಗಿರುವ ಪಿಯರ್ ಹಣ್ಣು ಸೇವಿಸುವುದು ತುಂಬಾ ಒಳ್ಳೆಯದು. ಇದು ದೇಹದ ಬೊಜ್ಜಿನ ಪ್ರಮಾಣವನ್ನು ಕರಗಿಸುವುದು ಮಾತ್ರವಲ್ಲದೆ ತನ್ನಲ್ಲಿ ಕಡಿಮೆ ಗ್ಲೈಸಿಮಿಕ್ ಸೂಚ್ಯಂಕ ಇರುವುದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿ ಕೆಲಸ ಮಾಡುತ್ತದೆ.

As Per The Nutrition Expert Sugar Patients Can At These Types Fruits.