ಒಳ್ಳೆಯ ನಾರಿನಂಶ ಇರೋ ಆಹಾರಗಳಿವು, ಸೇವಿಸಲು ಮರೆಯದಿರಿ!

03-11-22 08:12 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮ್ಮ ಆರೋಗ್ಯಕ್ಕೆ ಅಗತ್ಯ ಈ ಫೈಬರ್ ಇರುವ ಆಹಾರ ಪದಾರ್ಥಗಳು. ಮಿಸ್ ಮಾಡದೆ ತಿನ್ನುತ್ತೀರ ಅಲ್ಲವೇ?

ನಾವು ಫೈಬರ್ ಪ್ರಮಾಣ ಇರುವ ಆಹಾರಗಳನ್ನು ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಮತ್ತು ದೇಹಕ್ಕೆ ಸಿಗಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಸಿಗುವಂತಾಗಿ ನಾವು ಆರೋಗ್ಯದಿಂದ ಕೂಡಿರಲು ಅನುಕೂಲವಾಗುತ್ತದೆ. ಪ್ರತಿ ದಿನ ಸೇವಿಸುವ ಹಲವಾರು ಹಣ್ಣು ತರಕಾರಿಗಳಲ್ಲಿ ಹೀಗೆ ನಾರಿನ ಅಂಶ ಸಿಗಲಿದ್ದು, ಇದರ ಜೊತೆ ಇನ್ನೂ ಕೆಲವು ಆಹಾರ ಪದಾರ್ಥಗಳ ಸೇವನೆಯ ಬಗ್ಗೆ ಆಹಾರ ತಜ್ಞರಾದ ಲವ್ನೀತ್ ಬಾತ್ರಾ ಹೀಗೆ ಹೇಳಿದ್ದಾರೆ....

ಸಬ್ಜಾ ಬೀಜಗಳು

Organic Sabja Seeds 100g, For Cooking, Packaging Type: Packet at Rs 60/pack  in Chennai

  • ಇವುಗಳಲ್ಲಿ ನಾರಿನ ಅಂಶದ ಪ್ರಮಾಣ ಯಥೇಚ್ಛವಾಗಿದೆ. ವಿಶೇಷವಾಗಿ ಕರಗುವ ನಾರಿನ ಅಂಶ ಇರುವುದರಿಂದ ಮತ್ತು ಪೆಕ್ಟಿನ್ ಪ್ರಮಾಣ ಜೋರಾಗಿರುವುದರಿಂದ ನಮ್ಮ ದೇಹಕ್ಕೆ ಒಮೆಗಾ 3 ಫ್ಯಾಟಿ ಆಮ್ಲಗಳು ಸಹ ಸಿಗುತ್ತವೆ.
  • ಹೀಗಾಗಿ ಸಬ್ಜಾ ಬೀಜಗಳನ್ನು ನಾವು ಮನೆಯಲ್ಲಿ ತಯಾರು ಮಾಡುವ ಸ್ಮೂತಿ ಇತ್ಯಾದಿಗಳಲ್ಲಿ ಬಳಸಬಹುದು. ರುಚಿಕರವಾಗಿ ಮೊಸರಿನ ಜೊತೆ ಕೂಡ ಮಿಕ್ಸ್ ಮಾಡಿ ಸೇವಿಸಬಹುದು. ಆಹಾರ ತಜ್ಞರಾದ ಲವ್ನೀತ್ ಬಾತ್ರ ಹೇಳುವ ಪ್ರಕಾರ ಒಂದು ಟೀ ಚಮಚ ಹಸಿ ಸಬ್ಜಾ ಬೀಜಗಳಲ್ಲಿ 3.5 ಗ್ರಾಂ ನಾರಿನ ಅಂಶ ಇದೆ.

ಪಿಯರ್ ಹಣ್ಣು

6 health benefits of eating pears regularly | HealthShots

ಒಂದು ಮೀಡಿಯಂ ಗಾತ್ರದ ಪಿಯರ್ ಹಣ್ಣು ತನ್ನಲ್ಲಿ 5.5 ಗ್ರಾಂ ನಾರಿನ ಅಂಶವನ್ನು ಒಳ ಗೊಂಡಿದೆ. ಹಾಗಾಗಿ ಇದನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಸೇಬು ಹಣ್ಣಿನ ಜೊತೆ ಪಿಯರ್ ಹಣ್ಣು ಸಹ ತಿನ್ನುವುದು ಆರೋಗ್ಯ ತಜ್ಞರ ಪ್ರಕಾರ ಆರೋಗ್ಯಕ್ಕೆ ತುಂಬಾ ಹಿತಕರ.

ಬಾರ್ಲಿ

16 Amazing Barley Water Benefits For Skin, Hair & Health | Styles At Life

  • ಬಾರ್ಲಿ ತನ್ನಲ್ಲಿ ಬೀಟಾ ಗ್ಲುಕಾನ್ ಎಂಬ ನಾರಿನ ಅಂಶವನ್ನು ಒಳಗೊಂಡಿದ್ದು, ನಮ್ಮ ದೇಹದ ರಕ್ತ ಸಂಚಾರದಲ್ಲಿ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
  • ಇದು ದೇಹದ ತೂಕವನ್ನು ಕಡಿಮೆ ಮಾಡುವ ಜೊತೆಗೆ ಜೀರ್ಣ ಶಕ್ತಿಯನ್ನು ಅಭಿವೃದ್ಧಿ ಪಡಿಸುತ್ತದೆ. ನೀವು ಬಾರ್ಲಿಯನ್ನು ಸೂಪ್, ಸಲಾಡ್, ಇತ್ಯಾದಿಗಳಲ್ಲಿ ಬಳಸಬಹುದು. ಅನ್ನದ ಬದಲು ಇದನ್ನು ತಿನ್ನಬಹುದು.

ಬೀಟ್‌ರೂಟ್‌

Beetroot Benefits for Skin: Vitamin C and Other Nutrients

ನಿಮ್ಮ ದೇಹದಲ್ಲಿ ನಾರಿನ ಪ್ರಮಾಣವನ್ನು ನೀಡುವ ಗುಣ ಹೊಂದಿರುವ ಬೀಟ್‌ರೂಟ್‌ ನಾರಿನ ಜೊತೆಗೆ ಕಬ್ಬಿಣ, ಕಾಪರ್, ಮ್ಯಾಂಗನೀಸ್, ಪೊಟಾಸಿಯಂ ಮತ್ತು ಇನ್ನಿತರ ಖನಿಜಾಂಶಗಳನ್ನು ಸಹ ಹೊಂದಿದೆ. ಉತ್ತಮ ಜೀರ್ಣ ಶಕ್ತಿಗಾಗಿ ನೀವು ಬೀಟ್ರೂಟ್ ಸೇವಿಸಬಹುದು. ಇಲ್ಲಿ ನಿಮಗೆ 3.4 ಗ್ರಾಂ ನಾರಿನ ಅಂಶ ಸಿಗುತ್ತದೆ.

ಓಟ್ಸ್

Weight Loss Tips: ಹೀಗೆ ಓಟ್ಸ್ ತಿನ್ನೋದ್ರಿಂದ ತೂಕ ಕಡಿಮೆಯಾಗತ್ತಂತೆ

  • ಇದು ಒಂದು ಆರೋಗ್ಯಕರವಾದ ಆಹಾರ ಪದಾರ್ಥವಾಗಿದ್ದು, ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವಾಗ ಓಟ್ಸ್ ನಿಂದ ತಯಾರು ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬಹುದು.
  • ಇದರಲ್ಲಿ ಸಹ ತುಂಬಾ ಸದೃಢವಾದ ಕರಗುವ ನಾರಿನ ಅಂಶ ಇರಲಿದ್ದು, ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಆಹಾರ ತಜ್ಞರ ಪ್ರಕಾರ ನಿಮ್ಮ ದೇಹಕ್ಕೆ ಇದೊಂದು ಅತ್ಯುತ್ತಮ ಆಹಾರ ಪದಾರ್ಥ.

Having These Fiber Rich Foods Are Superficial To Your Health.