ಈ ಆಹಾರಗಳ ಸಂಯೋಜನೆ ಮಧುಮೇಹಿಗಳಿಗೆ ಬೆಸ್ಟ್‌

08-11-22 07:58 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹಿಗಳಿಗೆ ಆಹಾರ ಸಂಯೋಜನೆ ಬಹಳ ಮುಖ್ಯ. ಆಗ ಮಾತ್ರ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯ.

ಮಧುಮೇಹ ಕಾಯಿಲೆ ಇಂತಹದ್ದೇ ಕಾರಣದಿಂದ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ ಸಕ್ಕರೆ ಕಾಯಿಲೆ ಬರದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಒಮ್ಮೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಅದನ್ನು ನಿಯಂತ್ರಿಸಲು ಆಹಾರವನ್ನೇ ಅವಲಂಭಿಸಬೇಕು.

ಮಧುಮೇಹ ಇದ್ದವರು ಮುಖ್ಯವಾಗಿ ಕಾಪಾಡಿಕೊಳ್ಳುವುದೇ ಆಹಾರ ಪದ್ಧತಿ ಮತ್ತು ಜೀವನಶೈಲಿ. ಹಾಗಾದರೆ ಸಕ್ಕರೆ ಕಾಯಿಲೆ ಇದ್ದವರು ಯಾವೆಲ್ಲಾ ಆಹಾರಗಳನ್ನು ಸಂಯೋಜಿಸಿ ಸೇವನೆ ಮಾಡಬಹುದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ.

​ಅನ್ನ ಮತ್ತು ತರಕಾರಿ ದಾಲ್‌

ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಬೇಕೇ ಹೊರತು ಆಹಾರ ಸೇವಿಸುವಕ್ಕೇ  ಬದುಕಬಾರದು – ಏನಂತೀರೀ? Enantheeri?

ತರಕಾರಿಗಳು ಮತ್ತು ಬೇಳೆಯೊಂದಿಗೆ ಅನ್ನವನ್ನು ಸೇವನೆ ಮಾಡಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಏಕೆಂದರೆ ಬೇಳೆಗಳು ಪ್ರೋಟೀನ್‌ನ ಮೂಲವಾಗಿದೆ ಮತ್ತು ತರಕಾರಿಗಳು ಉತ್ತಮ ಪ್ರಮಾಣದ ಆಹಾರದ ಫೈಬರ್ ಅನ್ನು ಹೊಂದಿರುತ್ತವೆ. ಹೀಗಾಗಿ ಮಧುಮೇಹಿಗಳು ಅನ್ನದೊಂದಿಗೆ ತರಕಾರಿ, ಬೇಳೆಯ ಸಾಂಬಾರ್‌ ಸೇವನೆ ಮಾಡುವುದು ಒಳ್ಳೆಯದು.

ಧಾನ್ಯಗಳ ಚಪಾತಿ

benefits of chapati, ದಿನಕ್ಕೆ ಒಂದೆರಡು ಚಪಾತಿ ತಿನ್ನಿ, ಎಷ್ಟೇ ದಪ್ಪಗಿದ್ದರೂ ತೂಕ  ಇಳಿಸಬಹುದು! - is chapati good for weight loss at night,things you must know  - Vijaya Karnataka

ಸಂಪೂರ್ಣ ಗೋಧಿ ಹಿಟ್ಟಿನ ಚಪಾತಿಯಲ್ಲಿ ಫೈಬರ್ ಕಡಿಮೆಯಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ನಲ್ಲಿ ತ್ವರಿತ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಗೋಧಿ ಹೊಟ್ಟು ಅಥವಾ ರಾಗಿ ಹಿಟ್ಟಿನಲ್ಲಿನ ಕಾರ್ಬೋಹೈಡ್ರೇಟ್‌ಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಅವುಗಳಲ್ಲಿ ಇರುವ ಸಕ್ಕರೆಗಳನ್ನು ಹೀರಿಕೊಳ್ಳುತ್ತದೆ

​ಡ್ರೈ ನಟ್ಸ್‌ಗಳೊಂದಿಗೆ ಅನ್ನದ ಖೀರ್ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ

Rice Kheer Recipe | Easy Chawal ki Kheer | Rice Payasam

ಖೀರ್‌ನಲ್ಲಿರುವ ಹಾಲು ಪ್ರೋಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಸರಿಯಾದ ಸಂಯೋಜನೆಯಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಫೈಬರ್ ಹೆಚ್ಚಾದಂತೆ ಬೀಜಗಳು ಅದನ್ನು ಹೆಚ್ಚು ಆರೋಗ್ಯಕರವಾಗಿಸುತ್ತದೆ. ಸಕ್ಕರೆಯ ಬದಲಿಗೆ, ಒಂದು ಅಂಜೂರ ಅಥವಾ 3 ಒಣದ್ರಾಕ್ಷಿಗಳನ್ನು ಬಳಸಿ ಏಕೆಂದರೆ ಅವುಗಳು ಹೆಚ್ಚು ಪೌಷ್ಟಿಕಾಂಶವನ್ನೂ ಹೊಂದಿರುತ್ತವೆ.

ನವಣೆಯ ಕಿಚಡಿ

ನವಣೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ವರ್ಗದಲ್ಲಿ ಬರುವುದರಿಂದ, ಇದು ಮಧುಮೇಹಿಗಳಿಗೆ ಅತ್ಯುತ್ತಮ ಊಟದ ಆಯ್ಕೆಯಾಗಿದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಇದು ಅತ್ಯಂತ ಶಕ್ತಿಯುತವಾಗಿದೆ.

ನವಣೆಯ ಅನ್ನ ಅಥವಾ ನವಣೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದಾಗಿದೆ.

ದೈಹಿಕ ಚಟುವಟಿಕೆ ಮರೆಯದಿರಿ

diabetes food diet, ಈ ಆಹಾರಗಳ ಸಂಯೋಜನೆ ಮಧುಮೇಹಿಗಳಿಗೆ ಬೆಸ್ಟ್‌ - world diabetes  day 2022 these are the best food combination for diabetes patients - Vijaya  Karnataka

ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿರುತ್ತದೆ. ಅದಕ್ಕಾಗಿ ವ್ಯಾಯಾಮ ಅತೀ ಮುಖ್ಯವಾಗಿರುತ್ತದೆ. ಎಷ್ಟು ಆಹಾರಗಳ ಸಂಯೋಜನೆ, ಕಟ್ಟುನಿಟ್ಟಿನ ಆಹಾರ ತಿಂದರೂ ಚಟುವಟಿಕೆ ಇಲ್ಲದೆ ದೇಹ ನೂರು ಕಾಯಿಲೆಗಳ ಅರಮನೆ ಇದ್ದಂತೆ. ಹೀಗಾಗಿ ದಿನಕ್ಕೆ 30 ನಿಮಿಷವಾದರೂ ವ್ಯಾಯಾಮ ಮಾಡಲೇಬೇಕು.

World Diabetes Day 2022 These Are The Best Food Combination For Diabetes Patients.