ಸಾಸಿವೆ ಸೊಪ್ಪಿನ ಬಗ್ಗೆ ನಿಮಗೆ ಇದುವರೆಗೂ ಗೊತ್ತಿಲ್ಲದ ಮಾಹಿತಿ ಇದು!

09-11-22 08:08 pm       Source: Vijayakarnataka   ಡಾಕ್ಟರ್ಸ್ ನೋಟ್

ಸಾಸಿವೆ ಸೊಪ್ಪು ತನ್ನದೇ ಆದ ರುಚಿಯ ಜೊತೆಗೆ ದೇಹಕ್ಕೆ ಪೌಷ್ಟಿಕ ಸತ್ವಗಳನ್ನು ಕೊಡುತ್ತದೆ. ಇಲ್ಲಿ ಸಾಸಿವೆ ಸೊಪ್ಪಿನ ಆರೋಗ್ಯದ ಲಾಭಗಳನ್ನು ಲವ್ನೀತ್ ಬಾತ್ರಾ ಮಾತಿನಲ್ಲಿ ಕೇಳಿ.

ನಮ್ಮಲ್ಲಿ ಹಲವಾರು ಹಣ್ಣು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯ ಪ್ರಭಾವ ಗಳನ್ನೇ ಕೊಡುತ್ತವೆ. ಸಮಯಕ್ಕೆ ತಕ್ಕಂತೆ ಆರೋಗ್ಯದ ಲಾಭಗಳನ್ನು ಇವುಗಳಿಂದ ನಿರೀಕ್ಷೆ ಮಾಡಬಹುದು. ಇದರ ಜೊತೆಗೆ ಹಸಿರು ಎಲೆ ತರಕಾರಿಗಳು ಕೂಡ ಅಷ್ಟೇ ಪ್ರಯೋಜನಕಾರಿ.

ಉದಾಹರಣೆಗೆ ಮೂಲಂಗಿ ಸೊಪ್ಪು, ಎಲೆಕೋಸಿನ ಮೇಲ್ಭಾಗದ ಎಲೆಗಳು, ಬೀಟ್ರೂಟ್ ಸೊಪ್ಪು ಹೀಗೆ ಬೇಕಾದಷ್ಟು ಇವೆ. ಯಾವುದರಿಂದಲೂ ನಮಗೆ ಅಡ್ಡ ಪರಿಣಾಮಗಳು ಅಷ್ಟಾಗಿ ಇರುವುದಿಲ್ಲ. ಏಕೆಂದರೆ ಇವೆಲ್ಲವೂ ನಮಗೆ ನಿಸರ್ಗದಿಂದ ಸಿಗುವ ಆಹಾರ ಪದಾರ್ಥಗಳು.

ಅದೇ ತರಹ ಸಾಸಿವೆ ಸೊಪ್ಪು ಕೂಡ. ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಹೆಚ್ಚು ನೋಡಲು ಸಿಗುತ್ತದೆ. ರಾಗಿ ಹೊಲಗಳಲ್ಲಿ ಇದು ಕಾಮನ್. ಇದರ ಆರೋಗ್ಯ ಪ್ರಯೋಜನಗಳನ್ನು ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ಈ ಕೆಳಗಿನಂತೆ ತಿಳಿಸಿಕೊಟ್ಟಿದ್ದಾರೆ.

ಇದರಲ್ಲಿ ವಿಟಮಿನ್ ಕೆ ಹೆಚ್ಚಾಗಿದೆ

Premium Photo | Medical concept, woman suffering with knee painful -  skeleton x-ray,

  • ಸಾಸಿವೆ ಸೊಪ್ಪು ಸೇವನೆ ಮಾಡುವುದರಿಂದ ಹೃದಯ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಇದರಲ್ಲಿ ವಿಟಮಿನ್ ಕೆ ಹೆಚ್ಚಾಗಿದೆ.
  • ಇದರಿಂದ ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ ಮತ್ತು ಮೂಳೆಗಳು ಗಟ್ಟಿಯಾಗುತ್ತವೆ. ಮುಖ್ಯವಾಗಿ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ. ವಿಟಮಿನ್ ಕೆ ಹೆಚ್ಚಾಗಿರುವ ಸಾಸವೆ ಸೊಪ್ಪು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದಿಲ್ಲ.

ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು

foods that fight cancer, ಕ್ಯಾನ್ಸರ್‌ ವಿರುದ್ಧ ಹೋರಾಡುವ ಶಕ್ತಿ ಈ ನೈಸರ್ಗಿಕ  ಆಹಾರಗಳಿಗಿವೆ - natural foods that fight against cancer cells - Vijaya  Karnataka

  • ಸಾಸಿವೆ ಸೊಪ್ಪಿನಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಇರಲಿದ್ದು, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಇದರಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.
  • ಇವುಗಳು ದೇಹದ ಜೀವಕೋಶಗಳನ್ನು ಡಿಎನ್ಎ ಹಾನಿಕಾರಕ ಪ್ರಭಾವಗಳಿಂದ ಕಾಪಾಡುವುದು ಮಾತ್ರವಲ್ಲದೆ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ ರೂಪುಗೊಳ್ಳದಂತೆ ತಡೆಯುತ್ತವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆಯಿಂದ ಪಾರಾಗಲು ಈಗಿನಿಂದಲೇ ಆಗಾಗ ಸಾಸಿವೆ ಸೊಪ್ಪು ಯಾವುದಾದರೂ ಒಂದು ರೂಪದಲ್ಲಿ ತಿನ್ನುವುದು ಒಳ್ಳೆಯದು.

ಹೃದಯದ ಆರೋಗ್ಯಕ್ಕೆ ಹೇಳಿ ಮಾಡಿಸಿದೆ

Silent heart attacks all too common, and often overlooked | American Heart  Association

ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಸಾಸವೆ ಸೊಪ್ಪು, ತನ್ನಲ್ಲಿ ಬೀಟ್ ಕ್ಯಾರೋಟಿನ್ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದ್ದು, ಹೃದಯ ರಕ್ತನಾಳದ ಕಾಯಿಲೆಗಳು ಮನುಷ್ಯನಿಗೆ ಬರೆದಂತೆ ನೋಡಿ ಕೊಳ್ಳುತ್ತವೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ನಿಮಗೆ ಸಿಗುವಂತೆ ಮಾಡುತ್ತದೆ.

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

Eye pain: Taking the sting out of a sty - Mayo Clinic Health System

  • ಮೊದಲೇ ಹೇಳಿದಂತೆ ಸಾಸಿವೆ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿರುವ ಕಾರಣ ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು. ಇವುಗಳಲ್ಲಿ ಕಣ್ಣಿನ ಆರೋಗ್ಯ ಲಾಭಗಳು ಕೂಡ ಒಂದು ಎಂದು ಹೇಳಬಹುದು.
  • ಇದರಿಂದ ವಯಸ್ಸಾದ ನಂತರದಲ್ಲಿ ದೃಷ್ಟಿ ದೋಷ, ಕಣ್ಣಿನ ಪೊರೆ ಇತ್ಯಾದಿ ಸಮಸ್ಯೆಗಳಿಂದ ಪಾರಾಗಲು ಅನುಕೂಲ ವಾಗುತ್ತದೆ. ಸಾಸಿವೆ ಸೊಪ್ಪಿನ ಈ ವಿಚಾರವನ್ನು ಸಂಶೋಧನೆ ಬಹಿರಂಗ ಪಡಿಸಿದೆ ಎಂದು ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ತಿಳಿಸಿಕೊಟ್ಟಿದ್ದಾರೆ.

Mustard Leaves Have Enormous Health Benefits.