ದೇಹಕ್ಕೆ ಬೇಕಾಗುವ ಫೈಬರ್‌ ಅಂಶವನ್ನು ಈ ಆಹಾರಗಳು ಪೂರೈಸುತ್ತವೆ

10-11-22 08:01 pm       Source: Vijayakarnataka   ಡಾಕ್ಟರ್ಸ್ ನೋಟ್

ಜೀರ್ಣಶಕ್ತಿ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಫೈಬರ್‌ ಅಂಶ ಅಗತ್ಯವಾಗಿರುತ್ತದೆ. ಹೀಗಾಗಿ ಯಾವೆಲ್ಲಾ ಆಹಾರಗಳಿಂದ ಫೈಬರ್‌ ಅಂಶವನ್ನು ಪೂರೈಸಬಹುದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಫೈಬರ್ ದೇಹದ ಸಕ್ಕರೆಯ ಬಳಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹಸಿವು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ಮಕ್ಕಳು ಮತ್ತು ವಯಸ್ಕರಿಗೆ ದಿನಕ್ಕೆ ಕನಿಷ್ಠ 25 ರಿಂದ 35 ಗ್ರಾಂ ಫೈಬರ್ ಅಗತ್ಯವಿರುತ್ತದೆ.

ಫೈಬರ್‌ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೀಗಾಗಿ ದಿನನಿತ್ಯ ಆಹಾರ ಪದ್ದತಿಯಲ್ಲಿ ಫೈಬರ್‌ ಅಂಶವಿರುವ ಪದಾರ್ಥಗಳನ್ನು ಸೇವನೆ ಮಾಡಲೇಬೇಕು.
ಹಾಗಾದರೆ ಯಾವೆಲ್ಲಾ ಆಹಾರಗಳಿಂದ ಫೈಬರ್‌ ಅಂಶವನ್ನು ಪೂರೈಸಬಹುದು ಎನ್ನುವ ಮಾಹಿತಿ.

ಅಗಸೆ ಮತ್ತು ಬೀಜಗಳು

ಫೈಬರ್‌ ಅಂಶವನ್ನು ಸಮೃದ್ಧವಾಗಿರಿಸಿಕೊಂಡಿರುವ ಅಗಸೆ ಮತ್ತು ಚಿಯಾ ಬೀಜಗಳು ದಿನದ ಸಂಪೂರ್ಣ ಆಹಾರವಾಗುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಆಂಟಿ ಆಕ್ಸಿಡೆಂಟ್ಸ್‌ ಮತ್ತು ಒಮೆಗಾ 3 ಆಸಿಡ್‌ಗಳು ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.

ಹೀಗಾಗಿ ಹಣ್ಣು ಮತ್ತು ತರಕಾರಿಗಳ ಸಲಾಡ್‌ಗಳ ಜೊತೆಗೆ ಇವುಗಳನ್ನು ಸೇರಿಸಿ ತಿನ್ನಬಹುದು. ಇದರಿಂದ ದೇಹಕ್ಕೆ ಫೈಬರ್ ಅಂಶ ಸಿಗುತ್ತದೆ.

​ಕಾಳುಬೇಳೆಗಳು

pulses: Pulses export falls on drought-like condition - The Economic Times

ದಿನನಿತ್ಯದ ಫೈಬರ್‌ ಅಂಶವನ್ನು ಪೂರೈಸಲು ಕಾಳುಗಳು ಸಹಾಯ ಮಾಡುತ್ತವೆ. ಅಲ್ಲದೆ ಅತೀ ಮುಖ್ಯವಾಗಿ ಮಧುಮೇಹಿಗಳಿಗೆ ಬಹಳ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಉದಾಹರಣೆಗೆ ಬೀನ್ಸ್‌ ಕಾಳುಗಳು, ಕಿಡ್ನಿ ಬೀನ್ಸ್‌ಗಳು ಸೇರಿದಂತೆ ಎಲ್ಲಾ ರೀತಿಯ ದ್ವಿದಳ ಧಾನ್ಯಗಳ ಕಾಳುಗಳನ್ನು ಸೇವನೆ ಮಾಡಬಹುದು.

ತರಕಾರಿ, ಸೊಪ್ಪು

Fruits - Indians don't eat enough vegetables: Survey - Telegraph India

ಸೊಪ್ಪು ಮತ್ತು ತರಕಾರಿಗಳು ದೇಹಕ್ಕೆ ಫೈಬರ್‌ ಮತ್ತು ಇತರೆ ಪೋಷಕಾಂಶಗಳನ್ನು ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಸುಲಭವಾಗಿ ಸಿಗುವ ಆಹಾರವೂ ಆಗಿರುವುದರಿಂದ ದಿನನಿತ್ಯ ಸುಲಭವಾಗಿ ಪೌಷ್ಟಿಕಾಂಶವನ್ನು ದೇಹಕ್ಕೆ ಪೂರೈಸಬಹುದು.

ಹೀಗಾಗಿ ತರಕಾರಿ, ಸೊಪ್ಪುಗಳನ್ನು ಸ್ವಚ್ಛವಾಗಿ ತೊಳೆದು ಸೇವನೆ ಮಾಡುವುದು ಒಳ್ಳೆಯದು.

ಹಣ್ಣುಗಳು

The #1 Fruit You Should Be Eating Every Single Day — Eat This Not That

ಫೈಬರ್‌ ಅಂಶವನ್ನು ಪೂರೈಸಿ ದೇಹಕ್ಕೆ ಶಕ್ತಿ ನೀಡುವಲ್ಲಿ ಹಣ್ಣುಗಳ ಪಾತ್ರ ದೊಡ್ಡದು. ಕಡಿಮೆ ಸಕ್ಕರೆ ಅಂಶವಿರುವ ಹಣ್ಣುಗಳಾದ ಬೆರಿ ಹಣ್ಣುಗಳು, ದ್ರಾಕ್ಷಿ, ಲಿಂಬುವಿನ ಬಳಕೆ ಮಾಡುವುದರಿಂದ ದೇಹಕ್ಕೆ ಶಕ್ತಿಯೂ ಸಿಗುತ್ತದೆ.

ಜೊತೆಗೆ ಜೀರ್ಣಶಕ್ತಿಯೂ ಉತ್ತಮವಾಗುತ್ತದೆ. ವಿಟಮಿನ್ ಸಿ ಇರುವ ಹಣ್ಣುಗಳನ್ನು ನೀವು ಸೇರಿಸಬಹುದು.

​ಬೀಜಗಳು

NUTFULLY - Nuts & Dried fruits

ಡ್ರೈ ಫ್ರೂಟ್ಸ್‌ ಮತ್ತು ಒಣ ಬೀಜಗಳು ಪೋಷಕಾಂಶದ ಆಗರ ಎನ್ನುವುದು ಸತ್ಯ. ಹೀಗಿದ್ದಾಗ ಸ್ನ್ಯಾಕ್ಸ್‌ ರೀತಿಯಲ್ಲಿ ದಿನನಿತ್ಯ ಒಂದು ಪುಟ್ಟ ಮುಷ್ಟಿಯಷ್ಟು ವಿವಿಧ ರೀತಿಯ ಬೀಜಗಳನ್ನು ತಿನ್ನುವುದು ಬಹಳ ಒಳ್ಳೆಯದು.

ಇದು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸುತ್ತದೆ. ಜೊತೆಗೆ ಶಾರೀರಿಕ ಮತ್ತು ಬೌದ್ಧಿಕ ಶಕ್ತಿಯನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.

Nutritionist Says These Are The Best Fiber Content Foods For Good Health.