ಸಪೋಟ ಹಣ್ಣಿನ ಪ್ರಯೋಜನಗಳು ಗೊತ್ತಾದ್ರೆ, ಆಮೇಲೆ ದಿನಾ ತಿನ್ನುವಿರಿ!

18-11-22 08:24 pm       Source: Vijayakarnataka   ಡಾಕ್ಟರ್ಸ್ ನೋಟ್

ಸಪೋಟ ಹಣ್ಣು ತುಂಬಾ ಟೇಸ್ಟಿ. ಫ್ರೂಟ್ ಸಲಾಡ್ ಮಾಡಲು ಇದಂತೂ ಹೇಳಿಮಾಡಿಸಿದ ಹಣ್ಣು. ರೋಡ್ ಸೈಡ್ ಅಲ್ಲಿ ಎಲ್ಲಾದರೂ ಸಿಕ್ಕರೆ ಮಾತ್ರ ಬಿಡಬೇಡಿ.

ಸಪೋಟ ಹಣ್ಣು ಒಂದು ಸಿಹಿಯಾದ, ತಿಂದರೆ ಮತ್ತೊಮ್ಮೆ ತಿನ್ನಬೇಕು ಎನಿಸುವ ಹಣ್ಣಾಗಿದೆ. ಈಗೆಲ್ಲಾ ಸಪೋಟ ಹಣ್ಣಿನ ಜ್ಯೂಸ್, ಐಸ್ ಕ್ರೀಮ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಸಪೋಟ ಹಣ್ಣು ಸಹ ವರ್ಷದಲ್ಲಿ ಕೆಲವು ಬಾರಿ ಹೆಚ್ಚಾಗಿ ಸಿಗುತ್ತದೆ. ಚೆನ್ನಾಗಿ ಹಣ್ಣಾಗಿರುವ ಸಪೋಟ ಹಣ್ಣು ತನ್ನಲ್ಲಿ ಹೆಚ್ಚು ಸಿಹಿ ಒಳಗೊಂಡಿರುತ್ತದೆ....

ಲವ್ನೀತ್ ಬಾತ್ರ ಹೇಳುವ ಪ್ರಕಾರ

Chikoo (Sapota) for Babies: Benefits, Precautions & Recipes

 • ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರ ಹೇಳುವ ಪ್ರಕಾರ ಇದರಲ್ಲಿ ಕ್ಯಾಲೋರಿ ಪ್ರಮಾಣಗಳು ಕೂಡ ಹೆಚ್ಚಾಗಿ ಸಿಗುತ್ತವೆ. ಹಾಗಾಗಿ ಸಣ್ಣ ಇರುವವರು ಸಪೋಟ ಹಣ್ಣು ತಿಂದು ಬೇಕಾದರೆ ದಪ್ಪ ಆಗಬಹುದು.
 • ಆದರೆ ನಿಯಂತ್ರಣವನ್ನು ಕಾಯ್ದುಕೊಳ್ಳಬೇಕು ಎಂಬುದು ಆರೋಗ್ಯ ತಜ್ಞರ ಸಲಹೆ. ಈ ಕೆಳಗಿನ ಆರೋಗ್ಯದ ಲಾಭಗಳನ್ನು ಸಪೋಟ ಹಣ್ಣು ತಿನ್ನುವುದರಿಂದ ನಿರೀಕ್ಷೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಜೀರ್ಣ ಶಕ್ತಿ ಹೆಚ್ಚಿಸುತ್ತದೆ

betel leaf benefits, ನಿಮಗಿದು ಗೊತ್ತಾ? ದೇಹದ ಜೀರ್ಣ ಶಕ್ತಿ ಹೆಚ್ಚಿಸುತ್ತದೆ ವೀಳ್ಯದೆಲೆ - betel leaf paan next to your dinner will keep the digestion issues at bay - Vijaya Karnataka

ಸಪೋಟ ಹಣ್ಣಿನಲ್ಲಿ ನಾರಿನ ಪ್ರಮಾಣ ತುಂಬಾ ಇದೆ. ಹಾಗಾಗಿ ಇದು ನಮ್ಮ ಹಲವಾರು ಕರುಳು ಸಂಬಂಧಿತ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸರಿಪಡಿಸಿ, ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಮುಖವಾಗಿ ಉರಿಯುತದಿಂದ ಬಳಲುತ್ತಿರುವ ಕರುಳಿಗೆ ಇದು ಒಂದು ರೀತಿಯ ಔಷಧಿಯಾಗಿ ಕೆಲಸ ಮಾಡಬಲ್ಲದು.

ಇದು ಆಂಟಿ ಇಂಪ್ಲಾಮೆಟರಿ ಕೂಡ

sapota fruit benefits, ಸಪೋಟ ಹಣ್ಣಿನ ಪ್ರಯೋಜನಗಳು ಗೊತ್ತಾದ್ರೆ, ಆಮೇಲೆ ದಿನಾ ತಿನ್ನುವಿರಿ! - why should we eat chikkoo fruit or drink its juice? - Vijaya Karnataka

 • ತುಂಬಾ ಜನರಿಗೆ ಊಟ ಆದ ನಂತರದಲ್ಲಿ ಎದೆ ಉರಿ ಬರಲು ಪ್ರಾರಂಭವಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಯ ಒಂದು ರೋಗಲಕ್ಷಣ.
 • ಆದರೆ ಇಂತಹ ಒಂದು ತೊಂದರೆಯನ್ನು ಸಪೋಟ ಹಣ್ಣು ನಿವಾರಣೆ ಮಾಡಬಲ್ಲದು. ತನ್ನ ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳಿಂದ ಎದೆಯ ಭಾಗದ ಉರಿಯುತವನ್ನು ಸರಿಪಡಿಸಿ ಕೀಲು ನೋವು ಮತ್ತು ಊತವನ್ನು ಸಹ ಇದು ಪರಿಹಾರ ಮಾಡುತ್ತದೆ.

ಕೆಮ್ಮು ಮತ್ತು ಶೀತಕ್ಕೆ ರಾಮಬಾಣ

Do You Have A cough That You Just Can't Shake? You Might Have A Chronic Cough - Health Beat

 • ಸಪೋಟ ಹಣ್ಣು ವಿಶೇಷವಾಗಿ ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಅವುಗಳ ವಿರುದ್ಧ ಕೆಲಸ ಮಾಡುವ ಗುಣವನ್ನು ಪಡೆದಿದೆ.
 • ಹಾಗಾಗಿ ಇದು ನೆಗಡಿ, ಕೆಮ್ಮು, ಕಫ ಇತ್ಯಾದಿಗಳನ್ನು ನಿವಾರಣೆ ಮಾಡಿ ಎದೆ ಕಟ್ಟುವುದು ಅಥವಾ ಮೂಗು ಕಟ್ಟುವ ಸಮಸ್ಯೆಯನ್ನು ಪರಿಹಾರ ಮಾಡಿ ಉಸಿರಾಟ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಬಲ್ಲದು.

ಮೂಳೆಗಳಿಗೆ ಆರೋಗ್ಯಕರವಾದ ಹಣ್ಣು

 • ಈಗಿನ ಕಾಲದಲ್ಲಿ ವಯಸ್ಸಾದವರು ಸೇರಿದಂತೆ ಯುವ ಜನತೆ ಕೂಡ ಮೂಳೆಗಳ ದೌರ್ಬಲ್ಯದಿಂದ ಬಳಲುತ್ತಾರೆ. ಅಂತಹವರಿಗೆ ಸಪೋಟ ಹಣ್ಣು ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಕಬ್ಬಿಣದ ಅಂಶ ಸಾಕಷ್ಟಿದೆ.
 • ಹಾಗಾಗಿ ಇದು ಮೂಳೆಗಳನ್ನು ಬಲಪಡಿಸುವಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಮೂಳೆಗಳ ಯಾವುದೇ ಸಮಸ್ಯೆಗಳನ್ನು ಸಹ ಇದು ಕ್ರಮೇಣವಾಗಿ ನಿವಾರಣೆ ಮಾಡಬಲ್ಲ ಶಕ್ತಿ ಪಡೆದಿದೆ.

Why Should We Eat Chikkoo Fruit Or Drink Its Juice.