ಕೊಬ್ಬು, ಕೊಲೆಸ್ಟ್ರಾಲ್ ಕರಗಿಸಬೇಕಾ? ಕಾಳು ಮೆಣಸಿನಕಾಯಿ ಚಹಾ ಕುಡಿಯಿರಿ!

21-11-22 07:15 pm       Source: Vijayakarnataka   ಡಾಕ್ಟರ್ಸ್ ನೋಟ್

ನೀವು ಕುಡಿಯುವ ಒಂದು ಲೋಟ ಕಾಳು ಮೆಣಸಿನ ಟೀ ಎಷ್ಟು ಪವರ್ ಫುಲ್ ಗೊತ್ತಾ! ಬಹಳ ಬೇಗನೆ ನಿಮ್ಮ ಹೆಚ್ಚಾದ ಬಾಡಿ ವೆಯಿಟ್ ಕಡಿಮೆ ಮಾಡಿ ಬಿಡುತ್ತದೆ....

ಇತ್ತೀಚಿಗೆ ನಾವೆಲ್ಲರೂ ಗಮನಿಸಿರುವ ಹಾಗೆ ಮೂವರಲ್ಲಿ ಒಬ್ಬರಿಗೆ ಕೊಲೆಸ್ಟ್ರಾಲ್ ಇದ್ದೇ ಇರುತ್ತದೆ. ಇದಕ್ಕೆ ಅವರು ಅನುಸರಿಸುತ್ತಿರುವ ಜೀವನ ಶೈಲಿ ಕಾರಣವಾಗಿರುತ್ತದೆ. ಸಂಜೆಯಾಗುತ್ತಲೇ ಸೇವನೆ ಮಾಡುವ ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅಭ್ಯಾಸವನ್ನು ಮಾತ್ರ ಬಿಡುವುದಿಲ್ಲ. ಹೀಗಾಗಿ ದೇಹದಲ್ಲಿ ಬೊಜ್ಜು ಪ್ರತಿ ದಿನ ಹೆಚ್ಚಾಗುತ್ತಾ ಹೋಗುತ್ತದೆ. ಇರುವ ಕ್ಯಾಲೋರಿಗಳು ಕರಗುವುದಿಲ್ಲ. ಈ ಸಂದರ್ಭದಲ್ಲಿ ದೇಹದ ತೂಕ ಕೂಡ ದಿನೇ ದಿನೇ ಹೆಚ್ಚಾಗುತ್ತದೆ.

ಹೇಗಾದರೂ ಮಾಡಿ ಇದನ್ನು ಒಂದು ನಿಯಂತ್ರಣಕ್ಕೆ ತಂದುಕೊಳ್ಳಬೇಕು ಎಂದು ಆಲೋಚನೆ ಮಾಡುವವರು ತಮ್ಮ ಕೊಲೆಸ್ಟ್ರಾಲ್ ಸಹಿತ ತೂಕವನ್ನು ಸಹ ಕಾಳು ಮೆಣಸಿನ ಟೀ ಕುಡಿದು ಕಡಿಮೆ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕಾಳು ಮೆಣಸಿನ ಬಗ್ಗೆ ಒಂದಿಷ್ಟು

What are the benefits of black pepper mixed with water?

 • ಕಾಳು ಮೆಣಸು ತನ್ನಲ್ಲಿ ಮೆಗ್ನೀಷಿಯಂ, ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶದ ಜೊತೆಗೆ ನಾರಿನ ಪ್ರಮಾಣವನ್ನು ಹೆಚ್ಚಾಗಿ ಹೊಂದಿದೆ. ಇದು ನಿಮ್ಮ ಮಾಂಸ ಖಂಡಗಳ ನೋವನ್ನು ಮತ್ತು ಉರಿಯುತವನ್ನು ದೂರ ಮಾಡುವ ಜೊತೆಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಅನುಕೂಲಕರವಾಗಿದೆ.
 • ಚಳಿಗಾಲದಲ್ಲಿ ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಜೊತೆಗೆ ನಿಮ್ಮನ್ನು ಕೆಮ್ಮಿನ ಸೋಂಕುಗಳಿಂದ ರಕ್ಷಣೆ ಮಾಡುತ್ತದೆ. ದೇಹದ ತೂಕವನ್ನು ನೀವು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.
 • ಅಂದ್ರೆ ದಪ್ಪ ಇರುವವರು ಸಣ್ಣ ಆಗಬಹುದು. ಹೌದು, ಕಾಳು ಮೆಣಸು ನಿಮ್ಮ ದೇಹದ ಬೊಜ್ಜು ಮತ್ತು ಕೊಲೆಸ್ಟ್ರಾಲ್ ಕರಗಿಸುವಲ್ಲಿ ಕೆಲಸ ಮಾಡುತ್ತದೆ. ಕಾಳು ಮೆಣಸಿನ ಟೀ ತಯಾರು ಮಾಡಿ ಕುಡಿಯುವುದು ಇದಕ್ಕೆ ಒಂದು ಅದ್ಭುತ ಪರಿಹಾರವಾಗಿದೆ.

ಕಾಳು ಮೆಣಸಿನ ಟೀ- ಇದು ವೇಟ್ ಲಾಸ್ ಟೀ!

 • ಆರೋಗ್ಯದ ಅಧ್ಯಯನಗಳು ಹೇಳುವಂತೆ ಕಾಳು ಮೆಣಸಿನ ಪ್ರಭಾವ ಆರೋಗ್ಯದ ಮೇಲೆ ಉಷ್ಣದ ಪ್ರಭಾವ ಉಂಟು ಮಾಡುತ್ತದೆ. ಯಾವುದೇ ಮಸಾಲೆ ಪದಾರ್ಥ ನಾವು ಸೇವಿಸಿದ ಆಹಾರವನ್ನು ಅತ್ಯಂತ ವೇಗವಾಗಿ ಮೆಟಬಾಲಿಸಂ ಪ್ರಕ್ರಿಯೆಗೆ ಒಳಪಡಿಸುತ್ತದೆ.
 • ದೇಹದಲ್ಲಿ ಕ್ಯಾಲರಿಗಳು ಬಹಳ ಬೇಗನೆ ಕರಗುತ್ತವೆ. ಕಾಳು ಮೆಣಸಿನ ಪೌಡರ್ ಸಹ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ಕೂಡ piperine ಎಂಬ ಅಂಶದ ಪ್ರಮಾಣ ಅಡಗಿದ್ದು, ಜೀರ್ಣಶಕ್ತಿ ಮತ್ತು ಮೆಟಬಾಲಿಸಂ ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿ ಸೇರ್ಪಡೆಯಾಗಿರುವ ಕೊಬ್ಬಿನ ಪ್ರಮಾಣವನ್ನು ಕರಗಿಸುತ್ತದೆ. ಇದು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಕ್ರಮೇಣವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಾಳು ಮೆಣಸಿನ ಚಹಾ ತಯಾರು ಮಾಡುವ ವಿಧಾನ

Benefits of black pepper tea know here black pepper tea recipe brmp | Benefits of black pepper tea: पेट की चर्बी घटानी है तो पीएं काली मिर्च की चाय, मिलते हैं और

 • ಒಂದು ಪ್ಯಾನ್ ನಲ್ಲಿ ಎರಡು ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ
 • ಈಗ ಇದಕ್ಕೆ ಕಾಳು ಮೆಣಸು ಪೌಡರ್, ಒಂದು ಟೀ ಚಮಚ ನಿಂಬೆಹಣ್ಣಿನ ರಸ ಮತ್ತು ಸ್ವಲ್ಪ ಶುಂಠಿ ಹಾಕಿ.
 • ಸ್ವಲ್ಪ ಹೊತ್ತಿನವರೆಗೆ ಇದನ್ನು ಹೀಗೆ ಬಿಸಿ ಮಾಡಿ ಆನಂತರ ಸೋಸಿಕೊಂಡು ಕುಡಿಯಿರಿ.

ಕೊನೆಯದೊಂದು ಮಾತು

Weight loss: Where do people lose weight first? | The Times of India

 • ಅತ್ಯಂತ ಪರಿಣಾಮಕಾರಿಯಾಗಿ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಂದು ಸುಲಭವಾದ ಮನೆ ಮದ್ದು ಆಗಿ ಇದನ್ನು ಟ್ರೈ ಮಾಡಬಹುದು.
 • ಸಾಧ್ಯವಾದಷ್ಟು ಈ ಸಂದರ್ಭದಲ್ಲಿ ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಿ ಮತ್ತು ನಿಮ್ಮ ಆಹಾರ ಪದ್ಧತಿಯಲ್ಲಿ ಕೂಡ ಒಳ್ಳೆಯ ಬದಲಾವಣೆಯನ್ನು ತಂದುಕೊಂಡರೆ ಬಹಳ ವೇಗವಾಗಿ ನೀವು ನಿಮ್ಮ ಬೊಜ್ಜು ಕರಗಿಸಬಹುದು ಮತ್ತು ದೇಹಕ್ಕೆ ಒಳ್ಳೆಯ ಆಕಾರ ತಂದುಕೊಳ್ಳಬಹುದು.

Black Pepper Tea Is An Effective Weight Loss Tea.