ನಿಮಗೆ ಗೊತ್ತಿರಲಿ, ಚಳಿಗಾಲದಲ್ಲಿ ನಮ್ಮ ಆರೋಗ್ಯ ಕಾಪಾಡುವ ಆಹಾರಗಳಿವು!

23-11-22 10:11 pm       Source: Vijayakarnataka   ಡಾಕ್ಟರ್ಸ್ ನೋಟ್

ಚಳಿಗಾಲದಲ್ಲಿ ಎಲ್ಲರೂ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿಯನ್ನು ನಿರ್ವಹಣೆ ಮಾಡಿಕೊಂಡರೆ ಆರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.

ಈಗ ಚಳಿಗಾಲ ಇರುವುದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದೇ ನಮಗೆ ಇರುವಂತಹ ಒಂದು ದೊಡ್ಡ ಸವಾಲು. ಮನೆಯಲ್ಲಿ ಪುಟ್ಟ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಚಳಿಗಾಲದಲ್ಲಿ ಬಹಳ ಹುಷಾರಾಗಿರಬೇಕು. ವಯಸ್ಸಾದವರಿಗೆ ಹೃದಯಘಾತ ಆಗುವ ಸಾಧ್ಯತೆ ಇರುತ್ತದೆ.

ಹಾಗಾಗಿ ಉತ್ತಮ ಪ್ರಮಾಣದಲ್ಲಿ ಆರೋಗ್ಯವನ್ನು ನಿರ್ವಹಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಳಿಗಾಲದಲ್ಲಿ ಆಹಾರ ಪದ್ಧತಿಯನ್ನು ಹೊಂದಬೇಕು. ಅದಕ್ಕೆ ಪೂರಕ ಎನ್ನುವಂತೆ ಇಲ್ಲಿ ಕೆಲವೊಂದು ಆಹಾರ ಪದಾರ್ಥಗಳ ಪಟ್ಟಿ ಮತ್ತು ವಿವರಣೆ ನೀಡಲಾಗಿದೆ. ವೈದ್ಯರು ಹೇಳುವ ಪ್ರಕಾರ ಇವುಗಳನ್ನು ಚಳಿಗಾಲದಲ್ಲಿ ತಿನ್ನುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.

​ವಾಲ್ ನಟ್ ಬೀಜಗಳು

ವಾಲ್ ನಟ್ ಬೀಜಗಳು ಡ್ರೈ ಫ್ರೂಟ್ಸ್ ಜಾತಿಗೆ ಸೇರಿದ ಆಹಾರ ಪದಾರ್ಥಗಳು. ಬಾದಾಮಿ, ಗೋಡಂಬಿ, ಕಡಲೆ ಬೀಜಗಳಿಗೆ ಹೋಲಿಸಿದರೆ ಇವುಗಳ ಆರೋಗ್ಯ ಪ್ರಯೋಜನಗಳು ದುಪ್ಪಟ್ಟಾಗಿವೆ.

ವಾಲ್ ನಟ್ ಬೀಜಗಳಲ್ಲಿ ಪ್ರೋಟೀನ್, ವಿಟಮಿನ್, ಒಮೆಗಾ 3 ಫ್ಯಾಟಿ ಆಸಿಡ್, ಖನಿಜಾಂಶಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿ ಆಕ್ಸಿಡೆಂಟ್ ಪ್ರಮಾಣ ಸಾಕಷ್ಟು ಸಿಗುತ್ತದೆ.

ಚಳಿಗಾಲದಲ್ಲಿ ವಾಲ್ನಟ್ ಬೀಜಗಳನ್ನು ಸೇವನೆ ಮಾಡುವುದರಿಂದ ಬರುವಂತಹ ಆರೋಗ್ಯ ಸಮಸ್ಯೆಗಳಿಂದ ದೇಹಕ್ಕೆ 15 ಪಟ್ಟು ರಕ್ಷಣೆ ಸಿಗುತ್ತದೆ. ತಲೆ ಕೂದಲು ಉದುರುವಿಕೆ ಮತ್ತು ಅನೇಕ ಚರ್ಮದ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಅಂಜೂರದ ಹಣ್ಣುಗಳು

Fresh Figs or Anjeer fruit healthy vegan food concept organic dry fruits on  wooden background 3704587 Stock Photo at Vecteezy

ಅಂಜೂರದ ಹಣ್ಣುಗಳು ಮನುಷ್ಯರಿಗೆ ನಿಸರ್ಗದ ವರದಾನ ಎಂದು ಹೇಳಬಹುದು. ಇವುಗಳಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು, ಪೊಟ್ಯಾಶಿಯಂ, ಮ್ಯಾಂಗ ನೀಸ್, ವಿಟಮಿನ್ ಬಿ6 ಹೇರಳವಾಗಿ ಸಿಗುತ್ತವೆ.

ಅಧಿಕ ರಕ್ತದ ಒತ್ತಡದ ಸಮಸ್ಯೆಯನ್ನು ಇದು ನಿರ್ವಹಣೆ ಮಾಡುತ್ತದೆ ಮತ್ತು ಲಿವರ್ ಭಾಗವನ್ನು ಸ್ವಚ್ಛ ಮಾಡಿ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಗಲು ಅನುಕೂಲ ಮಾಡಿಕೊಡುತ್ತದೆ. ದೇಹದ ತೂಕ ಹೆಚ್ಚು ಮಾಡಿಕೊಳ್ಳಬೇಕು ಎನ್ನುವವರು ಅಂಜೂರದ ಹಣ್ಣುಗಳನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಬಹುದು.

ಬೆಲ್ಲ

What Is Jaggery and Is It Better For You Than Sugar? | HowStuffWorks

ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಜೊತೆಗೆ ನಿಮ್ಮ ಉಸಿರಾಟ ವ್ಯವಸ್ಥೆಯನ್ನು ಚಳಿಗಾಲದಲ್ಲಿ ಉತ್ತಮ ರೀತಿಯಲ್ಲಿ ಕಾಪಾಡಬಲ್ಲ ಒಂದು ಆಹಾರ ಪದಾರ್ಥ ಎಂದರೆ ಅದು ಬೆಲ್ಲ.

ಇದು ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟು ಮಾಡಿ ಶಕ್ತಿ ಕೊಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಹೊಟ್ಟೆಯನ್ನು ಮತ್ತು ಕರುಳಿನ ಭಾಗವನ್ನು ಸ್ವಚ್ಛಪಡಿಸುತ್ತದೆ.

ಸಾಕಷ್ಟು ಪ್ರಮಾಣದಲ್ಲಿ ಖನಿಜಾಂಶಗಳು ಬೆಲ್ಲದಲ್ಲಿ ಸಿಗಲಿದ್ದು ಕಡಲೆ ಬೀಜ ಮತ್ತು ಬೆಲ್ಲ ಅಂದಿನಿಂದ ಇಂದಿನವರೆಗೂ ಬೆಸ್ಟ್ ಕಾಂಬಿನೇಷನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಲೂಗಡ್ಡೆ

Are Potatoes Good for Diabetics? - Diabetes Self-Management

ಆಲೂಗಡ್ಡೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅದರಲ್ಲಿರುವ ಪೊಟಾಸಿಯಂ ಅಂಶ. ಬಿಪಿ ಇರುವವರಿಗೆ ಆಲೂಗಡ್ಡೆ ತುಂಬಾ ಒಳ್ಳೆಯದು ಎನ್ನುವ ಮಾತಿದೆ.

ಚಳಿಗಾಲದಲ್ಲಿ ಆಲೂಗಡ್ಡೆಯನ್ನು ಯಾವುದಾದರೂ ಒಂದು ರೂಪದಲ್ಲಿ ಸೇವನೆ ಮಾಡುವು ದರಿಂದ ನಮ್ಮ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ, ಫೈಬರ್, ಮ್ಯಾಂಗನೀಸ್, ಪಾಸ್ಫರಸ್, ನಯಾಸಿನ್, ವಿಟಮಿನ್ ಬಿ 6 ಎಲ್ಲವೂ ಸಹ ಸಿಗುತ್ತವೆ. ಅಷ್ಟೇ ಅಲ್ಲದೆ ಆಲೂಗೆಡ್ಡೆಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಕೂಡ ದುಪ್ಪಟ್ಟಾಗಿದೆ. ಇದಕ್ಕಿದ್ದಂತೆ ನಮಗೆ ಶಕ್ತಿ ನೀಡಲು ಬಾಳೆಹಣ್ಣು ಹೇಗೆ ಕೆಲಸ ಮಾಡುತ್ತದೆ ಅದೇ ರೀತಿ ಆಲೂಗಡ್ಡೆ ಕೂಡ.

ಕಿತ್ತಳೆ ಹಣ್ಣು

10 Types of Oranges and What They're Best for – PureWow

ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೀಸನ್. ಇದು ಸಿಟ್ರಸ್ ಜಾತಿಗೆ ಸೇರಿದ ಆಹಾರ ಪದಾರ್ಥ ಆಗಿರುತ್ತದೆ. ಇದರಲ್ಲಿ ಕೂಡ ವಿಟಮಿನ್ ಸಿ ಹೆಚ್ಚಾಗಿ ಸಿಗಲಿದ್ದು ಆರೋಗ್ಯಯುತವಾದ ಮತ್ತು ಅಂದವಾದ ತ್ವಚೆಗೆ ಇದು ಸಹಕಾರಿಯಾಗುತ್ತದೆ.

ಕಿತ್ತಳೆ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಎ ಕಣ್ಣುಗಳ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಅದರಲ್ಲಿರುವ ವಿಟಮಿನ್ ಬಿ9 ಮೆದುಳಿನ ಕಾರ್ಯ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.

ಸಾಧ್ಯವಾದರೆ ಪ್ರತಿದಿನ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಉತ್ತಮ ರಕ್ತ ಸಂಚಾರ ಆಗುತ್ತದೆ ಮತ್ತು ಹೃದಯದ ಆರೋಗ್ಯ ರಕ್ಷಣೆಯಾಗುತ್ತದೆ.

ಗುಲಾಬಿ ಹೂವಿನ ದಳಗಳು

Sacred Roses: The Spiritual Symbolism of Roses

ವಿಟಮಿನ್ ಸಿ ಹೆಚ್ಚಾಗಿರುವ ಮತ್ತು ವಿಟಮಿನ್ ಕೆ ಅಪಾರ ಪ್ರಮಾಣದಲ್ಲಿ ಕಂಡುಬರುವ ಗುಲಾಬಿ ಹೂವಿನ ದಳಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ತ್ವಚೆಯ ಸೌಂದರ್ಯವನ್ನು ಸಹ ಕಾಪಾಡುತ್ತವೆ.

ಇವುಗಳಿಂದ ಗುಲ್ಕನ್ ತಯಾರಿಸಿ ಇಟ್ಟುಕೊಂಡು ಆಗಾಗ ತಿನ್ನುತ್ತಿದ್ದರೆ ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆ ದೂರವಾಗುತ್ತದೆ ಹಾಗೂ ಹೊಟ್ಟೆಯಲ್ಲಿ ಹುಣ್ಣುಗಳು ಉಂಟಾಗಿದ್ದರೆ ಅವುಗಳು ಸಹ ಮಾಯವಾಗುತ್ತವೆ.

ಗುಲಾಬಿ ಹೂವಿನ ದಳಗಳಿಂದ ಆಂಟಿ ಆಕ್ಸಿಡೆಂಟ್ ಗಳು ಸಿಗಲಿದ್ದು ಬಾಯಿಯಲ್ಲಿನ ಅಲ್ಸರ್ ನಿವಾರಣೆಗೆ ಇದೊಂದು ಅತ್ಯುತ್ತಮ ಮನೆ ಮದ್ದು ಎಂದು ಹೇಳಬಹುದು. ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಸಹ ಗುಲಾಬಿ ಕಾಪಾಡುತ್ತದೆ.

These Winter Season Foods Are A Best Source Of Health.