ದಿನಾಲೂ ಒಂದು ಲೋಟ ಹಾಲು ಕುಡಿದರೆ, ನಿಮ್ಮ ದಿಲ್ ಸದಾ ಖುಶ್!

26-11-22 06:50 pm       Source: Vijayakarnataka   ಡಾಕ್ಟರ್ಸ್ ನೋಟ್

ಹೃದಯದ ಆರೋಗ್ಯಕ್ಕೆ ಡೈರಿ ಉತ್ಪನ್ನಗಳು ಎಷ್ಟು ಸೇಫ್! ಅದರಲ್ಲೂ ಪ್ರತಿದಿನ ಹಾಲು ಕುಡಿಯುವ ಅಭ್ಯಾಸ ಇದ್ದವರಿಗೆ ಹೃದಯದ ಕಾಯಿಲೆಗಳು ಬರುವುದಿಲ್ಲವಾ?

ಮನುಷ್ಯನ ಜೀವನ ಶುರುವಾಗಿದ್ದೆ ಹಾಲಿನಿಂದ ಎಂದು ಹೆಮ್ಮೆಯಿಂದ ಹೇಳಬಹುದು. ಕಣ್ಣು ಬಿಡುವ ಮುಂಚೆ ತಾಯಿಯ ಎದೆ ಹಾಲು, ದೊಡ್ಡವರಾದಂತೆ ಹಸುವಿನ ಹಾಲು. ಅಂದರೆ ನಮ್ಮ ಜೀವನದಲ್ಲಿ ಹಾಲಿನ ಪಾತ್ರ ಬಹಳ ದೊಡ್ಡದು. ಹಾಲು ಒಂದು ಡೈರಿ ಪದಾರ್ಥ. ಹಾಲಿನಿಂದ ತಯಾರಾಗುವ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳು ಸಹ ಡೈರಿ ಉತ್ಪನ್ನಗಳು....

ಹೃದಯದ ವಿಚಾರ ತೆಗೆದುಕೊಂಡರೆ

Heart Failure Symptoms, Risk Factors, Diagnosis and Treatment | Narayana  Health

ದೇಹಕ್ಕೆ ಸಿಗಬೇಕಾದ ಒಳ್ಳೆಯ ಪೌಷ್ಟಿಕ ಸತ್ವಗಳು ಮತ್ತು ಖನಿಜಾಂಶಗಳು ಡೈರಿ ಉತ್ಪನ್ನಗಳಲ್ಲಿ ಸಿಗುತ್ತವೆ. ಹೃದಯದ ವಿಚಾರ ತೆಗೆದುಕೊಂಡರೆ ಡೈರಿ ಉತ್ಪನ್ನಗಳು ರಕ್ತದ ಒತ್ತಡ ನಿರ್ವಹಣೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತಿದೆ.

ಅಧ್ಯಯನಗಳ ಪ್ರಕಾರ...

High Blood Pressure Symptoms: Emergency Symptoms, Treatments, and More

  • ಈ ಬಗ್ಗೆ ನಡೆದ ಒಂಬತ್ತು ಅಧ್ಯಯನಗಳು ಸುಮಾರು 55,000ಕ್ಕೂ ಹೆಚ್ಚಿನ ಜನರನ್ನು ಅದರಲ್ಲೂ ವಿಶೇಷವಾಗಿ 15,000ಕ್ಕೂ ಹೆಚ್ಚಿನ ಅಧಿಕ ರಕ್ತದ ಒತ್ತಡ ಇರುವ ಜನರನ್ನು ಬಳಸಿಕೊಂಡವು.
  • ಅವರಿಗೆ ಡೈರಿ ಉತ್ಪನ್ನಗಳು ಮತ್ತು ಕಡಿಮೆ ಕೊಬ್ಬಿನ ಅಂಶ ಇರುವ ಹಾಲು ಕುಡಿಯಲು ಹೇಳಿ ಕ್ರಮೇಣವಾಗಿ ಡೈರಿ ಪದಾರ್ಥಗಳ ಸೇವನೆಯನ್ನು ಹೆಚ್ಚು ಮಾಡುತ್ತಾ ಹೋಯಿತು. ಈ ಸಂದರ್ಭದಲ್ಲಿ ಗಮನಿಸಿದ ಒಂದು ವಿಚಾರವೆಂದರೆ  ಅಧಿಕ ರಕ್ತದ ಒತ್ತಡ ಕ್ರಮೇಣವಾಗಿ ಅವರಲ್ಲಿ ಕಡಿಮೆಯಾಗುತ್ತಾ ಬಂತು.

ತಜ್ಞರು ತಿಳಿಸಿದ ಪ್ರಕಾರ...

6 incredible benefits of drinking cow's milk - Times of India

  • ತಜ್ಞರು ಈ ಬಗ್ಗೆ ತಮ್ಮ ವರದಿಯನ್ನು ಅತ್ಯಂತ ವಿಸ್ತಾರವಾಗಿ ನೀಡಿ ಡೈರಿ ಉತ್ಪನ್ನಗಳ ಸೇವನೆಯಿಂದ ದೇಹದಲ್ಲಿ ಆಗುವ ಕೊಲೆಸ್ಟ್ರಾಲ್, ಕೊಬ್ಬಿನ ಪ್ರಮಾಣ ಮತ್ತು ದೇಹದ ತೂಕದ ಬದಲಾವಣೆಗಳನ್ನು ಚರ್ಚಿಸಿದರು.
  • ಇದು ಮುಂಬರುವ ಸಂಶೋಧನೆಗಳಿಗೆ ಅಡಿಪಾಯವಾಗಿ ಜನರ ಆರೋಗ್ಯದ ನಿಟ್ಟಿನಲ್ಲಿ ನೆರವಿಗೆ ಬಂದಿತು. ಡೈರಿ ಉತ್ಪನ್ನಗಳ ಸೇವನೆಯಿಂದ ಸಕಾರಾತ್ಮಕವಾಗಿ ಜನರ ಆರೋಗ್ಯದ ಮೇಲೆ ಪೌಷ್ಟಿಕಾಂಶಗಳ ಸಹಿತ ಒಳ್ಳೆಯ ಪ್ರಭಾವ ಬೀರಿದ ಬಗ್ಗೆ ವರದಿ ಮಾಡಲಾಯಿತು.

ಸಂಶೋಧನೆಯಲ್ಲಿ ತಿಳಿಸಿದ ಪ್ರಕಾರ...

Side effects of milk: 4 things that happen when you drink too much milk |  HealthShots

ಪ್ರತಿಷ್ಠಿತ ಅಮೆರಿಕನ್ ಜರ್ನಲ್ ಆಫ್ ಕ್ಲೀನಿಕಲ್ ನ್ಯೂಟ್ರಿಷನ್ ತನ್ನ ವರದಿಯಲ್ಲಿ ಹೇಳಿರುವ ಹಾಗೆ ಕಡಿಮೆ ಕೊಬ್ಬಿನ ಪ್ರಮಾಣ ಇರುವ ಡೈರಿ ಉತ್ಪನ್ನಗಳು ಒಂದು ದಿನಕ್ಕೆ ನಾಲ್ಕು ಬಾರಿ ಮನುಷ್ಯನ ದೇಹ ಸೇರಿದರೆ ಅದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಮಧ್ಯ ವಯಸ್ಸಿನ ಹಾಗೂ ವಯಸ್ಸಾಗಿರುವ ಜನರಲ್ಲಿ ಇದು ಸಾಮಾನ್ಯ ಎಂದು ಹೇಳಲಾಯಿತು.

Heart Problems Are Away If You Drink Milk Daily.