ಸಕ್ಕರೆ ಕಾಯಿಲೆ ಇರುವವರು ಯಾವಾಗಲೂ ಅಷ್ಟೇ ಕಾರ್ಬೋಹೈಡ್ರೇಟ್ಸ್ ಕಮ್ಮಿ ತಿನ್ನಬೇಕು!

30-11-22 07:07 pm       Source: Vijayakarnataka   ಡಾಕ್ಟರ್ಸ್ ನೋಟ್

ಸಕ್ಕರೆ ಕಾಯಿಲೆ ಕಡಿಮೆಯಾಗಬೇಕು ಎಂದರೆ ದೇಹದ ತೂಕ ಕಡಿಮೆಯಾಗಬೇಕು. ತೂಕ ಕಡಿಮೆಯಾಗಬೇಕು ಎಂದರೆ ಬೊಜ್ಜು ಕರಗಬೇಕು. ಅದಕ್ಕಾಗಿ ಕಾರ್ಬೋಹೈಡ್ರೇಟ್ಸ್ ಕಡಿಮೆ ಇರುವ ಆಹಾರ ಸೇವಿಸಬೇಕು.

ಮಧುಮೇಹ ಇರುವವರಿಗೆ ತೂಕ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು ಸಾಮಾನ್ಯ ವಿಷಯವಾಗಿರುತ್ತದೆ. ಏಕೆಂದರೆ ಕೆಲವು ಸಂದರ್ಭಗಳಲ್ಲಿ ಇವರು ಸಣ್ಣ ಆಗುತ್ತಾರೆ ಇನ್ನು ಕೆಲವು ಸಂದರ್ಭಗಳಲ್ಲಿ ದಪ್ಪ ಆಗುತ್ತಾರೆ.

ಸಕ್ಕರೆ ಕಾಯಿಲೆಯ ಪ್ರಭಾವದಿಂದ ಹೀಗಾಗುತ್ತದೆ. ಆದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ದೇಹದ ತೂಕ ಮುಂದೊಂದು ದಿನ ಬೊಜ್ಜು ರೂಪದಲ್ಲಿ ವಿಪರೀತ ಹೆಚ್ಚಾಗುತ್ತದೆ ಮತ್ತು ಇದರಿಂದ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಸಹ ಶುರುವಾಗುತ್ತವೆ. ಕೈ ಕಾಲುಗಳಲ್ಲಿ ಊತ ಕಾಣಿಸಿ ಕೊಳ್ಳುವುದು, ಹೃದಯದ ತೊಂದರೆ, ಕಿಡ್ನಿಗಳ ಸಮಸ್ಯೆ ಹೀಗೆ ಒಂದೆರಡಲ್ಲ.

ಹಾಗಾಗಿ ಸಾಧ್ಯವಾದಷ್ಟು ಕಾರ್ಬೋಹೈಡ್ರೇಟ್ಸ್ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಮಧುಮೇಹ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಉತ್ತಮ. ಅಂತಹ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ....

ಪಾಲಕ್ ಸೊಪ್ಪು

Spinach Can Turn Harmful if Consumed in Excess

  • ಪಾಲಕ್ ಸೊಪ್ಪು ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಒಂದು ಹಸಿರು ಎಲೆ ತರಕಾರಿ. ಇದು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿದರೆ ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ಮಧುಮೇಹ ಕೂಡ ಕಂಟ್ರೋಲ್ ಆಗುತ್ತದೆ.
  • ಇದರಲ್ಲಿ ವಿಟಮಿನ್ ಕೆ ಇರಲಿದ್ದು ಬೀಟಾ ಕ್ಯಾರೋಟಿನ್ ಮತ್ತು ಪೋಲೆಟ್ ಸಹ ಹೆಚ್ಚಾಗಿದೆ. ಆರೋಗ್ಯಕರವಾದ ರೀತಿಯಲ್ಲಿ ಇದನ್ನು ಸೇವನೆ ಮಾಡಿ ಡಯಾಬಿಟಿಸ್ ಕಂಟ್ರೋಲ್ ಮಾಡಿ ಕೊಳ್ಳಬಹುದು.

ಎಲೆಕೋಸು

What Is Green Cabbage?

  • ಎಲೆಕೋಸು ತನ್ನಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಹೆಚ್ಚಾಗಿ ಹೊಂದಿದ್ದು, ಇದು ಮಧುಮೇಹ ನಿಯಂತ್ರಣ ಮತ್ತು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.
  • ಹಚ್ಚ ಹಸಿರಾದ ಎಲೆಗಳನ್ನು ಹೊಂದಿರುವ ಎಲೆಕೋಸು ಸೇವನೆ ಮಾಡಿ ಇದರಲ್ಲಿರುವ ಅಪಾರ ವಾದ ವಿಟಮಿನ್ ಪ್ರಮಾಣವನ್ನು ನಿಮ್ಮದಾಗಿಸಿಕೊಳ್ಳಬಹುದು.

ಟೊಮೆಟೊ ಹಣ್ಣುಗಳು

Top 5 health benefits of tomatoes - Tech Sports Media

  • ಟೊಮೆಟೊ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಇದನ್ನು ಆಹಾರ ತಜ್ಞರು ಸೂಪರ್ ಫುಡ್ ಗುಂಪಿಗೆ ಸೇರಿಸಿದ್ದಾರೆ.
  • ಅಷ್ಟೇ ಅಲ್ಲದೆ ಟೊಮೆಟೊ ಹಣ್ಣು ತನ್ನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳನ್ನು ಕಡಿಮೆ ಹೊಂದಿದೆ. ಹಾಗಾಗಿ ಇದನ್ನು ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ನಿಮ್ಮ ಮಧುಮೇಹವನ್ನು ಕಂಟ್ರೋಲ್ ಮಾಡಿಕೊಳ್ಳಬಹುದು.

ಸೌತೆಕಾಯಿ

Bizzare side effects of Cucumber | The Times of India

  • ಸೌತೆಕಾಯಿ ಕೂಡ ತನ್ನಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿದ್ದು, ತೂಕ ಕಡಿಮೆ ಮಾಡಿ ಕೊಳ್ಳಲು ಒಂದು ಅದ್ಭುತ ಆಹಾರವಾಗಿದೆ. ಒಂದು ಕಪ್ ಸೌತೆಕಾಯಿ ತನಲ್ಲಿ ಐದು ಗ್ರಾಂ ಗಿಂತಲೂ ಕಡಿಮೆ ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತದೆ ಎಂದು ಹೇಳುತ್ತಾರೆ.
  • ಇದರ ಜೊತೆಗೆ ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಮತ್ತು ಪೊಟ್ಯಾಶಿಯಂ ಅಂಶ ಕೂಡ ಇರಲಿದೆ ಹಾಗಾಗಿ ಇದು ನಿಮ್ಮ ಡಯಾಬಿಟಿಸ್ ಕಂಟ್ರೋಲ್ ಮಾಡುವ ಒಂದು ಅದ್ಭುತ ಆಹಾರವಾಗಿದೆ.

ಬ್ರೊಕೋಲಿ

Top 14 Health Benefits of Broccoli

  • ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಬ್ರೊಕೋಲಿ ತಿನ್ನುವ ಅಭ್ಯಾಸ ನಿಜಕ್ಕೂ ಮಾಡಿಕೊಳ್ಳಬೇಕು.
  • ಏಕೆಂದರೆ ಇದರಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗಿದೆ ಮತ್ತು ನಾರಿನ ಅಂಶ ಕೂಡ ಅಷ್ಟೇ ಇದೆ. ಅಚ್ಚ ಹಸಿರು ಬಣ್ಣದಲ್ಲಿ ಕಂಗೊಳಿಸುವ ಬ್ರೊಕೋಲಿ ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆಸ್ಪರಾಗಸ್

 ಈ ತರಕಾರಿ ಒಂದು ಕಪ್ ತೆಗೆದುಕೊಂಡರೆ ತನ್ನಲ್ಲಿ 5 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 27 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಸಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಕೆ ಹೆಚ್ಚಾಗಿರುತ್ತದೆ. ಸಾಧ್ಯವಾದಷ್ಟು ತಾಜಾ ಆಸ್ಪರಾಗಸ್ ಖರೀದಿ ಮಾಡಿ.

Diabetes Can Be Controlled By Foods With Low Carbohydrates.