ಮೂಲಂಗಿ ತಿಂದು ಚಳಿಗಾಲದಲ್ಲಿ ಬಿಪಿ ಕಂಟ್ರೋಲ್ ಮಾಡಕ್ಕಾಗುತ್ತಾ?

02-12-22 06:56 pm       Source: Vijayakarnataka   ಡಾಕ್ಟರ್ಸ್ ನೋಟ್

ಮೂಲಂಗಿ ತಿಂದರೆ ಬಿಪಿ ಕಡಿಮೆ ಆಗುತ್ತೆ, ಜ್ವರ ಬರಲ್ಲ, ಶುಗರ್ ಕೂಡ ಕಂಟ್ರೋಲ್ ಗೆ ಸಿಗುತ್ತೆ. ಮೂಲಂಗಿಯ ಈ ತರಹದ ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಒಮ್ಮೆ ಕಣ್ಣಾಡಿಸಿ.

ಬೇರೆ ಸಮಯಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಸಣ್ಣಪುಟ್ಟ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸುಲಭವಾಗಿ ನೈಸರ್ಗಿಕ ವಿಧಾನ ಗಳಲ್ಲಿ ಚಳಿಗಾಲದಲ್ಲಿ ನಮಗೆ ಸ್ವಲ್ಪ ಕೂಡ ಹುಷಾರು ತಪ್ಪದಂತೆ ಕಾಪಾಡಿಕೊಳ್ಳ ಬಹುದಾದ ಟೆಕ್ನಿಕ್ ಬಗ್ಗೆ ಆಲೋಚನೆ ಮಾಡಬೇಕು ಎಂದುಕೊಂಡರೆ ಅದು ಬಹುತೇಕ ನಾವು ತಿನ್ನುವ ಆಹಾರ ಪದಾರ್ಥಗಳಿಂದ ಎಂದು ಎಲ್ಲರೂ ಹೇಳುತ್ತಾರೆ.

ಇಲ್ಲಿ ಅಂತಹದೇ ಒಂದು ನೈಸರ್ಗಿಕ ರೂಪದ ತರಕಾರಿ ಬಗ್ಗೆ ತಿಳಿಸಲು ಹೊರಟಿದ್ದೇವೆ. ಅದೇ ಮೂಲಂಗಿ. ಹೌದು ಮೂಲಂಗಿ ಒಂದು ಆರೋಗ್ಯಕರವಾದ ತರಕಾರಿ. ಚಳಿಗಾಲದಲ್ಲಿ ಮೂಲಂಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತವೆ. ಈ ಲೇಖನದಲ್ಲಿ ಮೂಲಂಗಿಯ ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ....

ರಕ್ತದ ಒತ್ತಡ ನಿಯಂತ್ರಿಸುತ್ತದೆ

9 Effective Strategies and Tricks to Lower Blood Pressure | Gowda

  • ಬೇರೆ ಸಮಯಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಮನುಷ್ಯನಿಗೆ ಬಿಪಿ ಏರುಪೇರು ಆಗುವುದು ಸಹಜ ವಾಗಿದೆ. ಅಂತಹ ಸಂದರ್ಭದಲ್ಲಿ ಮೂಲಂಗಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ತಿನ್ನುವುದು ಒಳ್ಳೆಯದು.
  • ಏಕೆಂದರೆ ಮೂಲಂಗಿ ತನ್ನಲ್ಲಿ ಪೊಟಾಸಿಯಂ ಪ್ರಮಾಣವನ್ನು ಅಪಾರವಾಗಿ ಹೊಂದಿರುವುದರಿಂದ ಇದು ಬಿಪಿ ಕಂಟ್ರೋಲ್ ಮಾಡುವ ಒಂದು ನೈಸರ್ಗಿಕ ತರಕಾರಿ ಅಥವಾ ಆಹಾರ ಪದಾರ್ಥ ಎಂದು ಕೊಳ್ಳಬಹುದು.

ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ

Benefits of Radish: Why you must have Radish in winters

ಬಿಳಿ ಮೂಲಂಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಪಡೆದಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಕೆಮ್ಮು, ನೆಗಡಿ, ಜ್ವರ, ಶೀತ ಇತ್ಯಾದಿ ಕಾಯಿಲೆಗಳು ದೂರ ಉಳಿಯುತ್ತವೆ. ಜೊತೆಗೆ ಇದು ಆಂಟಿ ಇಂಪ್ಲಾಮೆಟರಿ ಕೂಡ ಆಗಿರುವುದರಿಂದ ಉರಿಯುತದಿಂದ ಸಹ ದೂರವಾಗಬಹುದು.

ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

Diabetes drug may help improve symptoms for people with heart failure – new  research

ಪ್ರತಿದಿನ ಒಂದೊಂದು ಮೂಲಂಗಿ ತಿನ್ನುತ್ತಾ ಬಂದರೆ ಹೃದಯಕ್ಕೆ ಯಾವುದೇ ತೊಂದರೆ ಎದುರಾಗುತ್ತದೆ ಎನ್ನುವ ಭಯ ಇಟ್ಟುಕೊಳ್ಳುವ ಹಾಗೆ ಇಲ್ಲ. ಏಕೆಂದರೆ ಇದರಲ್ಲಿ ಪೋಲಿಕ್ ಆಮ್ಲ ಹೆಚ್ಚಾಗಿದ್ದು, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಇದು ನಿಯಂತ್ರಣ ಮಾಡುತ್ತದೆ.

ರಕ್ತನಾಳಗಳನ್ನು ಬಲಪಡಿಸುತ್ತದೆ

  • ಬಿಳಿ ಮೂಲಂಗಿ ತನ್ನಲ್ಲಿ ಅಪಾರ ಪ್ರಮಾಣದ ಕೊಲಜನ್ ಹೊಂದಿರುವುದರಿಂದ ಇದು ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ.
  • ತುಂಬಾ ಗಂಭೀರವಾದ ಕಾಯಿಲೆಗಳನ್ನು ದೂರ ಇರಿಸುವಲ್ಲಿ ಸಹ ಇದು ಸಹಾಯ ಮಾಡುತ್ತದೆ. ರಕ್ತನಾಳಗಳಿಗೆ ಸಂಬಂಧಪಟ್ಟ ಯಾವುದೇ ಕಾಯಿಲೆಗಳು ಕಂಡುಬರಲು ಸಾಧ್ಯವಿರುವುದಿಲ್ಲ.

ಮೆಟಬಾಲಿಸಂ ವೃದ್ಧಿಸುತ್ತದೆ

Radish: Research-Backed Benefits & How To Use | Organic Facts

  • ಮೂಲಂಗಿ ತಿನ್ನುವುದರಿಂದ ಹೊಟ್ಟೆ ತುಂಬಾ ಆರೋಗ್ಯವಾಗಿ ಉಳಿಯುತ್ತದೆ. ಏಕೆಂದರೆ ದೇಹದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
  •  ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ. ಬೆಳಗಿನ ಸಂದರ್ಭದಲ್ಲಿ ಎದು ರಾಗುವ ವಾಕರಿಕೆ ಮತ್ತು ವಾಂತಿಯ ತರಹದ ಆರೋಗ್ಯದ ಅಸ್ವಸ್ಥತೆಗಳು ಮಾಯವಾಗುತ್ತವೆ.

Raddish Has A Power To Control Blood Pressure And Still More.