ಈಗಂತೂ ಸೀಬೆಹಣ್ಣಿನ ಸೀಸನ್! ಮಿಸ್ ಮಾಡದೇ ಸೇವಿಸಿ ಪ್ಲೀಸ್!

03-12-22 07:41 pm       Source: Vijayakarnataka   ಡಾಕ್ಟರ್ಸ್ ನೋಟ್

ಸೀಸನಲ್ ಹಣ್ಣಾದ ಸೀಬೆ ಹಣ್ಣಿನ ಭರಾಟೆ ಈಗ ಎಲ್ಲಾ ಕಡೆ ಜೋರಾಗಿದೆ. ಉಪ್ಪು ಖಾರ ಹಾಕಿಕೊಂಡು ತಿನ್ನುತ್ತಿದ್ದರೆ, ಅದರ ಮಜವೇ ಬೇರೆ! ಆದರೆ ಚಳಿಗಾಲ ಇದೆಯಲ್ಲ, ತಿನ್ನಬೇಕಾ.

ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರುತ್ತವೆ. ಸೀಬೆಕಾಯಿ ಕೂಡ ಅಷ್ಟೇ ಆರೋಗ್ಯಕರ. ಸೀಬೆಹಣ್ಣು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈಗ ಬಂದಿರುವ ಪ್ರಶ್ನೆ ಎಂದರೆ ಚಳಿಗಾಲದಲ್ಲಿ ಸೀಬೆಹಣ್ಣು ಎಲ್ಲಾ ಕಡೆ ಹೆಚ್ಚಾಗಿ ಕಂಡುಬರುತ್ತದೆ.

ಹಾಗಾಗಿ ಇದನ್ನು ಸೀಸನಲ್ ಹಣ್ಣು ಎಂದು ಕರೆಯಬಹುದು. ಇಂತಹ ಸಂದರ್ಭದಲ್ಲಿ ನಾವು ಸೀಬೆಹಣ್ಣು ತಿನ್ನುವುದರಿಂದ ನಮಗೆ ಆರೋಗ್ಯಕ್ಕೆ ಏನಾದರೂ ತೊಂದರೆ ಆಗುತ್ತಾ ಎಂಬುದು ಹಲವರ ಪ್ರಶ್ನೆ. ಇದಕ್ಕೆ ವೈದ್ಯರಿಂದಲೇ ಸಲಹೆ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೆ ಆದರೆ ಉತ್ತರವನ್ನು ಈ ಕೆಳಗಿನಂತೆ ಅವರ ಬಾಯಲ್ಲೇ ಕೇಳಿ....

ಸೀಬೆ ಹಣ್ಣನ್ನು ಚಳಿಗಾಲದಲ್ಲಿ ತಿನ್ನಬಹುದಾ?

Jumbo Guava at best price in Panipat by Door Next Farms | ID: 17296565155

  • ಹೌದು ತಿನ್ನಬಹುದು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಮತ್ತು ನೈಸರ್ಗಿಕ ವಾದ ಆಂಟಿ ಆಕ್ಸಿಡೆಂಟ್ ಪ್ರಮಾಣ ತುಂಬಾ ಇದೆ. ನೀವು ಸಿಟ್ರಸ್ ಹಣ್ಣುಗಳಿಗೆ ಅಂದರೆ ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು ಇವುಗಳಿಗೆ ಹೋಲಿಸಿದರೆ ಅದಕ್ಕಿಂತಲೂ ಮಿಗಿಲಾಗಿ ಇದರಲ್ಲಿ ವಿಟಮಿನ್ ಸಿ ಸಿಗುತ್ತದೆ.
  • ವಿಟಮಿನ್ ಸಿ ನಮಗೆಲ್ಲ ಗೊತ್ತಿರುವ ಹಾಗೆ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ಸೋಂಕು ಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುವುದಿಲ್ಲ.

ನಾರಿನ ಅಂಶ

6 Reasons For You To Have Guavas (Amrood) This Winter Season! - Tata 1mg  Capsules

ಅಷ್ಟೇ ಅಲ್ಲದೆ ಸೀಬೆ ಹಣ್ಣುಗಳು ತಮ್ಮಲ್ಲಿ ನಾರಿನ ಅಂಶವನ್ನು ಹೆಚ್ಚಾಗಿ ಹೊಂದಿರುತ್ತವೆ. ಹೆಚ್ಚಿನ ಪ್ರಮಾಣದ ನಾರಿನ ಅಂಶ ಕೊಲೆಸ್ಟ್ರಾಲ್ ರಕ್ತದಲ್ಲಿ ಹೆಚ್ಚಾಗದಂತೆ ನಮ್ಮನ್ನು ಹೃದಯದ ಕಾಯಿಲೆ ಗಳಿಂದ ರಕ್ಷಣೆ ಮಾಡುತ್ತದೆ.

ವಿಟಮಿನ್ ಎ

5 Easy Recipes Using The Tropical Fruit Guava

ವಿಟಮಿನ್ ಎ ಹೆಚ್ಚಾಗಿರುವ ಸೀಬೆಹಣ್ಣುಗಳು ಸೋಂಕುಕಾರಕ ಕ್ರಿಮಿಗಳ ವಿರುದ್ಧ ಹೋರಾಡುವ ಆಂಟಿ ಬಾಡಿಗಳನ್ನು ಉತ್ಪತ್ತಿ ಮಾಡುವಲ್ಲಿ ನೆರವಾಗುತ್ತವೆ. ದೇಹಕ್ಕೆ ಯಾವುದಾದರೂ ಸೋಂಕು ಉಂಟು ಮಾಡುವ ರೋಗಾಣುಗಳು ಬಂದ ತಕ್ಷಣ ಅವುಗಳನ್ನು ನಾಶ ಮಾಡಿ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತವೆ.

ಕೆಂಪು ಬಣ್ಣ ಇರುವ ಸೀಬೆಹಣ್ಣು ಬಹಳ ಒಳ್ಳೆಯದು...

What Is Guava And What Does It Taste Like?

  • ಬಿಳಿ ಬಣ್ಣದ ಸೀಬೆ ಹಣ್ಣಿಗಿಂತ ಒಳಗೆ ಸ್ವಲ್ಪ ಕೆಂಪು ಬಣ್ಣ ಇರುವ ಸೀಬೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ಟೊಮ್ಯಾಟೊದಲ್ಲಿ ಇರುವ ಹಾಗೆ ಲೈಕೋಪಿನ್ ಇರುತ್ತದೆ.
  • ಇದು ನಮ್ಮನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ಮಾಡುವುದಲ್ಲದೆ ನಮ್ಮ ಚರ್ಮವನ್ನು ಚಳಿಗಾಲದಲ್ಲಿ ಬಿರುಕು ಬಿಡದಂತೆ ಕಾಪಾಡುತ್ತದೆ. ಇದರಿಂದ ಸೋಂಕುಕಾರಕ ಕ್ರಿಮಿಗಳು ನಮ್ಮ ಚರ್ಮದ ಮೂಲಕ ದೇಹ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ನೆಗಡಿ ಕೆಮ್ಮು ಅಥವಾ ಜ್ವರ

ಒಂದು ವೇಳೆ ನಿಮಗೆ ನೆಗಡಿ ಕೆಮ್ಮು ಅಥವಾ ಜ್ವರ ಬರುವ ಸಾಧ್ಯತೆ ಇದ್ದರೆ, ಸೀಬೆಕಾಯಿ ಅಥವಾ ಸ್ವಲ್ಪ ಪ್ರಮಾಣದಲ್ಲಿ ಸೀಬೆಹಣ್ಣು ತಿಂದು ಮುಂದಾಗುವ ಆರೋಗ್ಯ ತೊಂದರೆಗಳಿಂದ ರಕ್ಷಣೆ ಪಡೆದು ಕೊಳ್ಳ ಬಹುದು.

ಸೀಬೆಹಣ್ಣು ಹೇಗೆ ತಿನ್ನಬೇಕು?

  • ಮಾರುಕಟ್ಟೆಯಲ್ಲಿ ಸಾಧಾರಣವಾಗಿ ಸೀಬೆಹಣ್ಣು ಹೇಗೆ ತಂದು ತಿನ್ನುತ್ತೀರಿ ಅದೇ ರೀತಿ ತಿನ್ನಬಹುದು, ಅದಲ್ಲದೆ ಇದರಿಂದ ಸ್ಮೂತಿ ಸಹ ತಯಾರು ಮಾಡಿ ಸವಿಯಬಹುದು. ಇದಕ್ಕಾಗಿ ನಿಮಗೆ ಒಂದು ಕಪ್ ಹಾಲು ಅವಶ್ಯಕತೆ ಇರುತ್ತದೆ.
  • ಹಾಲಿನಲ್ಲಿ ಒಂದು ಮೀಡಿಯಂ ಗಾತ್ರದ ಸೀಬೆ ಹಣ್ಣನ್ನು ಹಾಕಿ ಅದಕ್ಕೆ ಖರ್ಜೂರ ಅಥವಾ ಅಂಜೂರ ಹಣ್ಣನ್ನು ಸೇರಿಸಿ ಬ್ಲೆಂಡ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ತಿಂಡಿ ತಿನ್ನುವ ಬದಲು ಇದನ್ನು ಸೇವಿಸಬಹುದು.

Healthy Reasons Why You Must Add Guava In Your Winter Diet.