ಅಸಿಡಿಟಿ- ಗ್ಯಾಸ್ಟ್ರಿಕ್ ಸಮಯದಲ್ಲಿ ಹೊಟ್ಟೆ ಕಾಪಾಡುವ ಆಹಾರಗಳಿವು

06-12-22 10:00 pm       Source: Vijayakarnataka   ಡಾಕ್ಟರ್ಸ್ ನೋಟ್

ಆಹಾರ ಸೇವನೆಯ ಸಂದರ್ಭದಲ್ಲಿ ಅಪ್ಪಿತಪ್ಪಿ ನಾವು ಅಸಿಡಿಟಿ, ಗ್ಯಾಸ್ಟ್ರಿಕ್ ಉಂಟುಮಾಡುವ ಆಹಾರಗಳನ್ನು ತಿಂದರೆ ಅದರಿಂದ ಹೇಗೆ ಬಚಾವ್ ಆಗಬಹುದು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿಗೆ ನಾವು ಅಸಿಡಿಟಿ, ಗ್ಯಾಸ್ಟ್ರಿಕ್ ಒಂದು ಸಣ್ಣ ಕಾಯಿಲೆ ಎನ್ನುವ ಹಾಗೆ ಇಲ್ಲ. ಏಕೆಂದರೆ ಇದು ಸಹ ಮುಂದೊಂದು ದಿನ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಕೊಡಬಲ್ಲ ಶಕ್ತಿ ಹೊಂದಿದೆ. ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ.

ಅದರಲ್ಲಿ ಹೆಚ್ಚಿನದು ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದರಿಂದ ಮತ್ತು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಉಂಟಾಗುತ್ತದೆ. ಇಂತಹ ಸಂದರ್ಭ ದಲ್ಲಿ ನಾವು ಏನು ಮಾಡಬಹುದು, ಹೇಗೆ ಯಾವ ಆಹಾರಗಳನ್ನು ಸೇವಿಸಿ ಇದರಿಂದ ಮುಕ್ತಿ ಪಡೆದುಕೊಳ್ಳಬಹುದು ಎಂಬುದನ್ನು ಆಹಾರ ತಜ್ಞರಾದ ಲವ್ನೀತ್ ಬಾತ್ರಾ ಸವಿ ವರವಾಗಿ ತಿಳಿಸಿ ಕೊಟ್ಟಿದ್ದಾರೆ.

ಅನ್ನ

23 Hearty Rice Recipes You Should Bookmark And Try

  • ಅನ್ನ ಮತ್ತು ಪಾಸ್ತಾ ಗ್ಯಾಸ್ಟ್ರಿಕ್ ಸಂದರ್ಭದಲ್ಲಿ ಒಬ್ಬರು ತಿನ್ನಬಹುದಾದ ಅತ್ಯುತ್ತಮ ಆಹಾರ ಪದಾರ್ಥಗಳು. ಏಕೆಂದರೆ ಇವುಗಳಲ್ಲಿ ಸ್ಟಾರ್ಚ್ ಹೆಚ್ಚಾಗಿದೆ. ಹೊಟ್ಟೆಯ ಒಳಪದರದ ರಕ್ಷಣೆಗೆ ಇದು ಸಹಾಯ ಮಾಡುತ್ತದೆ.
  • ಅಷ್ಟೇ ಅಲ್ಲದೆ ಅನ್ನ ಬಹಳ ಬೇಗನೆ ಜೀರ್ಣವಾಗುತ್ತದೆ ಮತ್ತು ಆರೋಗ್ಯದ ಅಸ್ವಸ್ಥತೆ ಎದುರಾಗ ದಂತೆ ನೋಡಿಕೊಳ್ಳುತ್ತದೆ.
  • ಕೆಲವೊಂದು ಸಂಶೋಧಕರು ಹೇಳುವಂತೆ ನಿಮ್ಮ ಎದೆಯುರಿ ಸಮಸ್ಯೆಯನ್ನು ಸುಲಭವಾಗಿ ಇದು ಹೋಗಲಾಡಿಸುತ್ತದೆ. ಪ್ರಮುಖವಾಗಿ ಇದರಲ್ಲಿ ಕಂಡು ಬರುವ ಫ್ರೀ ಬಯೋಟಿಕ್ ನಾರಿನ ಅಂಶ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಬಾಳೆಹಣ್ಣು

How Bananas Are In Danger From Their Own Pandemic - Forbes India

  • ಅಪಾರ ಪ್ರಮಾಣದ ಪೊಟ್ಯಾಶಿಯಂ ಅಂಶ ಒಳಗೊಂಡಿರುವ ಬಾಳೆಹಣ್ಣು ದೇಹದಲ್ಲಿ ಆಸಿಡ್ ಪ್ರಮಾಣದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ.
  • ಅಷ್ಟೇ ಅಲ್ಲದೆ ಬಾಳೆ ಹಣ್ಣಿನಲ್ಲಿ ಪೆಕ್ಟೀನ್ ನಿಮ್ಮ ಕರಗುವ ನಾರಿನ ಅಂಶ ಇರಲಿದ್ದು, ಸುಲಭವಾಗಿ ನಾವು ಸೇವಿಸಿದ ಆಹಾರ ನಮ್ಮ ಅನ್ನನಾಳದಲ್ಲಿ ಒಳಹೋಗುವ ಹಾಗೆ ಮಾಡುತ್ತದೆ. ಬಾಳೆಹಣ್ಣು ಆಲ್ಕಲೈನ್ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ನಮ್ಮ ಹೊಟ್ಟೆಯ ಆಮ್ಲಿಯತೆ ಸಮತೋಲನಕ್ಕೆ ಬರುತ್ತದೆ.

ಸೌತೆಕಾಯಿ

Beware! Never eat raw cucumber with meals; know the strange side effects of  kheera

ಸೌತೆಕಾಯಿ ಸಹ ಒಂದು ಆಲ್ಕಲೈನ್ ಆಹಾರವಾಗಿದ್ದು, ನಮ್ಮ ದೇಹದಲ್ಲಿ ಹೆಚ್ಚುವರಿ ಆಗಿ ಉತ್ಪತ್ತಿ ಯಾಗುವ ಆಮ್ಲಿಯ ಪ್ರಮಾಣವನ್ನು ಇದು ಸಹಜ ಸ್ಥಿತಿಗೆ ಮರಳಿಸುತ್ತದೆ. ಅಷ್ಟೇ ಅಲ್ಲದೆ ಸೌತೆಕಾಯಿ ಕ್ಯಾಲೋರಿ ಮುಕ್ತ ಆಹಾರವಾಗಿದ್ದು ಇದರಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇರಲಿದೆ.

ಸಬ್ಜಾ ಬೀಜಗಳು

Basil Seeds: A New Superfood? - Farmers' Almanac - Plan Your Day. Grow Your  Life.

  • ನೈಸರ್ಗಿಕವಾದ ರೂಪದಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಗುಣಲಕ್ಷಣವನ್ನು ಸಬ್ಜಾ ಬೀಜಗಳು ಹೊಂದಿವೆ. ನಮ್ಮ ಆಮ್ಲಿಯತೆಯನ್ನು ಕಡಿಮೆ ಮಾಡಿ ಎದೆ ಉರಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
  • ನೀವು ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆ ಹಾಕಿದರೆ ಅದು ಒಂದು ರೀತಿಯ ಗಮ್ ತರಹ ಬದಲಾ ಗುತ್ತದೆ ಮತ್ತು ನಮ್ಮ ಹೊಟ್ಟೆಯಲ್ಲಿ ಅತಿಯಾದ ಆಮ್ಲಗಳು ಉತ್ಪತ್ತಿ ಆಗದಂತೆ ನೋಡಿ ಕೊಳ್ಳುತ್ತದೆ.

ಬೇರು ಸಹಿತ ಇರುವ ತರಕಾರಿಗಳು

How to Grow Beetroot at Home?

  • ಸ್ಟಾರ್ಚ್ ಪ್ರಮಾಣ ಹೊಂದಿರುವ ತರಕಾರಿಗಳ ಗುಂಪಿನಲ್ಲಿ ಬೇರು ಸಹಿತ ಇರುವ ತರಕಾರಿಗಳು ಕೂಡ ಒಂದು. ಇವುಗಳಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಮತ್ತು ಜೀರ್ಣವಾಗುವ ನಾರಿನ ಅಂಶ ಹೆಚ್ಚಾಗಿ ಸಿಗಲಿದೆ.
  • ನಮ್ಮ ಎದೆಯುರಿ ಮತ್ತು ಕಿರಿಕಿರಿಯನ್ನು ಹೋಗಲಾಡಿಸುವ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾ ಡುತ್ತವೆ. ಉದಾಹರಣೆಗೆ ಸಿಹಿ ಗೆಣಸು, ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್ ಇತ್ಯಾದಿಗಳು.

Your Acidity Gastrick Can Be Balanced By These Simple Tricks.