ಡಯಾಬಿಟಿಸ್ ಇರುವವರು ಈ ಹಣ್ಣುಗಳನ್ನು ತಿನ್ನದಿದ್ದರೆ ಒಳ್ಳೆಯದು!

09-12-22 08:15 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮ್ಮ ಬ್ಲಡ್ ಶುಗರ್ ದಿನೇ ದಿನೇ ನಿಮಗೆ ಮಾರಕವಾಗುತ್ತಿದೆಯಾ? ಹಾಗಿದ್ದರೆ ನಿಮ್ಮ ಆಹಾರ ಪದ್ಧತಿಯ ಮೇಲೆ ಗಮನವಿಡಿ ಪ್ಲೀಸ್.

ಸಕ್ಕರೆ ಕಾಯಿಲೆ ಇರುವವರಿಗೆ ಆಹಾರ ತಿನ್ನುವ ವಿಷಯದಲ್ಲಿ ಕೆಲವೊಂದು ನೀತಿ ನಿಯಮ ಗಳು ಇರುತ್ತವೆ. ಅಂದರೆ ಇಂತಹ ಆಹಾರ ತಿನ್ನಬೇಕು, ಇಂತಹ ಆಹಾರದಿಂದ ದೂರ ಉಳಿಯಬೇಕು. ಕೆಲವು ಆಹಾರಗಳನ್ನು ಕಡಿಮೆ ತಿನ್ನಬೇಕು ಎಂದು.

ನೈಸರ್ಗಿಕ ರೂಪದಲ್ಲಿ ಇರುವಂತಹ ಆಹಾರ ಪದಾರ್ಥಗಳು ಕೂಡ ಕೆಲವೊಮ್ಮೆ ಬ್ಲಡ್ ಶುಗರ್ ಏರಿಕೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂದರೆ ಕೆಲವು ಹಣ್ಣುಗಳು. ವೈದ್ಯರು ಹೇಳುವ ಪ್ರಕಾರ ಯಾರಿಗೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುವುದಿಲ್ಲ ಅಂತಹವರು ಈ ಕೆಳಗಿನ ಕೆಲವೊಂದು ಹಣ್ಣುಗಳನ್ನು ತಿನ್ನದಿದ್ದರೆ ಒಳ್ಳೆಯದು. ಹಾಗಾದರೆ ಯಾವ ಯಾವ ಹಣ್ಣುಗಳು ಶುಗರ್ ಇರುವವರಿಗೆ ಡೇಂಜರ್ ನೋಡೋಣ ಬನ್ನಿ.

​ಮಾವಿನ ಹಣ್ಣು

Amazing Health Benefits of Mango, king of fruits

ಮಾವಿನ ಹಣ್ಣಿನಲ್ಲಿ ಸಿಹಿಯ ಪ್ರಮಾಣ ತುಂಬಾ ಇದೆ. ಇದರ ಗ್ಲೈಸಮಿಕ್ ಸೂಚ್ಯಂಕ 50 ಕ್ಕಿಂತ ಜಾಸ್ತಿ ಇರುತ್ತದೆ. ನಮ್ಮ ಬ್ಲಡ್ ಶುಗರ್ ಕಂಟ್ರೋಲ್ ಗೆ ಸಿಗುತ್ತಿಲ್ಲ ಎನ್ನುವವರು ಮಾವಿನ ಹಣ್ಣು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.

ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇರುವವರು ದಿನಕ್ಕೆ 50 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಮಾವಿನ ಹಣ್ಣು ತಿನ್ನಬಹುದು. ಅಷ್ಟೇ ಅಲ್ಲದೆ ಊಟ ಆದಮೇಲೆ ಯಾವುದೇ ಕಾರಣಕ್ಕೂ ಮಾವಿನ ಹಣ್ಣು ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದ್ದಕ್ಕಿದ್ದಂತೆ ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.

​ಬಾಳೆಹಣ್ಣು

7 Fruits for Healthy Hair and Faster Hair Growth | Be Beautiful India

ಬಾಳೆಹಣ್ಣು ತನ್ನಲ್ಲಿ ಪೊಟ್ಯಾಶಿಯಂ ಮತ್ತು ಸಕ್ಕರೆ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದೆ. ಇದು ಸಕ್ಕರೆ ಕಾಯಿಲೆ ಕಂಟ್ರೋಲ್ ಇಲ್ಲದವರಿಗೆ ಆಗಿ ಬರುವುದಿಲ್ಲ.

ನಿಮ್ಮ ಬ್ಲಡ್ ಶುಗರ್ ಒಂದು ಹಂತದಲ್ಲಿ ನಿಯಂತ್ರಣದಲ್ಲಿ ಇದ್ದಾಗ 50 ರಿಂದ 100 ಗ್ರಾಂ ಇರುವ ಒಂದು ಸಣ್ಣ ಬಾಳೆಹಣ್ಣು ಸೇವಿಸಬಹುದು.

ಸೀತಾಫಲ ಹಣ್ಣು

Buy Custard Apple online from Akshat Fruit Mart

ಇದರಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿದ್ದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗುವಂತೆ ಮಾಡುವ ಸಾಧ್ಯತೆ ಇರುತ್ತದೆ.

ಏಕೆಂದರೆ ಸೀತಾಫಲ ಹಣ್ಣು ಕೂಡ ತನ್ನಲ್ಲಿ ಅತಿಯಾದ ಸಿಹಿ ಅಂಶವನ್ನು ಒಳಗೊಂಡಿದ್ದು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ತಪ್ಪುವಂತೆ ಮಾಡಬಹುದು.

ಸಪೋಟ ಹಣ್ಣು

7 health benefits of chikoo and why you must eat it | HealthShots

ಆರೋಗ್ಯ ತಜ್ಞರು ಹೇಳುವ ಹಾಗೆ ಯಾರಿಗೆ ಸಕ್ಕರೆ ಕಾಯಿಲೆ ಕಂಟ್ರೋಲ್ ನಲ್ಲಿ ಇರುವುದಿಲ್ಲ ಅಂತಹವರು ಪ್ರತಿದಿನ 80 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಪೋಟ ಹಣ ತಿನ್ನಬಾರದು.

ಇದರಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದರಲ್ಲೂ ಊಟ ಆದ ಮೇಲೆ ಸಪೋಟ ಹಣ್ಣು ತಿನ್ನಲೇಬಾರದು.

ದ್ರಾಕ್ಷಿ ಹಣ್ಣು

Why a grape is called Queen of Fruits?

ಸಕ್ಕರೆ ಕಾಯಿಲೆ ಇರುವವರು ದ್ರಾಕ್ಷಿ ಹಣ್ಣಿನ ಬದಲು ಸಿಟ್ರಸ್ ಹಣ್ಣುಗಳನ್ನು ಸೇವಿಸಬಹುದು. ಅಂದರೆ ಮೂಸಂಬಿ ಹಣ್ಣು ಅಥವಾ ಕಿತ್ತಳೆ ಹಣ್ಣು ತಿನ್ನುವ ಅಭ್ಯಾಸ ಇಟ್ಟುಕೊಳ್ಳಬಹುದು.

ಇದು ನಿಮ್ಮ ಬ್ಲಡ್ ಗ್ಲುಕೋಸ್ ಕಂಟ್ರೋಲ್ ನಲ್ಲಿ ಇರಿಸುವುದು ಮಾತ್ರವಲ್ಲದೆ ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಇರುವ ಕಾರಣದಿಂದ ನಿಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ನಿಮಗೆ ಶುಗರ್ ಕಂಟ್ರೋಲ್ ನಲ್ಲಿ ಉಳಿದಿದ್ದರೆ ನೀವು ಆರಾಮವಾಗಿ 8 ರಿಂದ 10 ದ್ರಾಕ್ಷಿ ಹಣ್ಣುಗಳನ್ನು ತಿನ್ನಬಹುದು.

Diabetic Patients Should Stay Away From These Fruits.