ಮೊಳಕೆ ಬಂದ ಕಡಲೆಕಾಯಿ ತಿನ್ನೋದ್ರಿಂದಾಗುವ ಪ್ರಯೋಜನಗಳೇನು?

14-12-22 07:06 pm       Source: Vijayakarnataka   ಡಾಕ್ಟರ್ಸ್ ನೋಟ್

ಕಡಲೆಕಾಯಿಯನ್ನು ಹಾಗೇ ತಿನ್ನುವುದರ ಬದಲು ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆಯಂತೆ. ಅವು ಯಾವುವು ನೋಡೋಣ.

ಕಡಲೆಕಾಯಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅದನ್ನು ಮೊಳಕೆ ಬರಿಸಿದರೆ ತಿನ್ನಲೂ ಇನ್ನೂ ರುಚಿಯಾಗಿರುತ್ತದೆ. ಕಡಲೆಕಾಯಿಯನ್ನು ಮೊಳಕೆ ಬರಿಸಿ ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

ಹೃದಯಕ್ಕೆ ಒಳ್ಳೆಯದು

Women and heart health: Heart attack signs and symptoms to know about |  Lifestyle News,The Indian Express

ಮೊಳಕೆಯೊಡೆದ ಕಡಲೆಕಾಯಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ರಕ್ತ ಪರಿಚಲನೆಯನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬುಗಳಿವೆ, ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.

ತೂಕ ನಷ್ಟಕ್ಕೆ ಸಹಕಾರಿ

Weight loss: Where do people lose weight first? | The Times of India

ಮೊಳಕೆಯೊಡೆದ ಕಡಲೆಕಾಯಿಯನ್ನು ತಿನ್ನುವುದು ತೂಕ ನಷ್ಟಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮೊಳಕೆಯೊಡೆದ ಕಡಲೆಕಾಯಿ ಫೈಬರ್ ಅನ್ನು ಹೊಂದಿರುತ್ತದೆ, ಇದು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ತೂಕವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಇದರ ಜೊತೆಗೆ ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಒಮೆಗಾ 6 ಕೊಬ್ಬಿನಾಮ್ಲಗಳಿವೆ, ಇದು ನಿಮ್ಮ ಬೊಜ್ಜು ಅಪಾಯವನ್ನು ಕಡಿಮೆ ಮಾಡುತ್ತದೆ.

​ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ

Diabetes cure, symptoms, treatment, diet plan, everything you need to know  | Health - Hindustan Times

ಮೊಳಕೆಯೊಡೆದ ಕಡಲೆಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್‌ನ ವರದಿಯ ಪ್ರಕಾರ, ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಮೆಗ್ನೀಸಿಯಮ್ ಕಂಡುಬರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೂಳೆಗಳನ್ನು ಬಲವಾಗಿಸುತ್ತದೆ

ಮೊಳಕೆ ಬರಿಸಿದ ಕಡಲೆಕಾಳುಗಳಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದ್ದು, ಇದು ಮೂಳೆಗಳನ್ನು ಬಲಗೊಳಿಸುತ್ತದೆ, ಕೀಲು ನೋವಿನಿಂದ ಬಳಲುತ್ತಿರುವವರು ಮೊಳಕೆಯೊಡೆದ ಕಡಲೆಕಾಯಿಯನ್ನು ಪ್ರತಿದಿನ ಸೇವಿಸಬೇಕು.

ಜೀರ್ಣಾಂಗ ವ್ಯವಸ್ಥೆ

10 Answers To Questions About Bloating

ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಫೈಬರ್ ಅಂಶವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮಲಬದ್ಧತೆ, ಅಜೀರ್ಣ, ಗ್ಯಾಸ್ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ದೂರವಿಡುತ್ತದೆ ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ.

ಕೂದಲಿನ ಬೆಳವಣಿಗೆಗೆ

ಕಡಲೆಕಾಯಿಯಲ್ಲಿ ಫೋಲೇಟ್ ಹೇರಳವಾಗಿದೆ, ಇದರಲ್ಲಿ ವಿಟಮಿನ್ ಬಿ ಹೇರಳವಾಗಿದ್ದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲನ್ನು ಬಲಪಡಿಸುವ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.ಕಡಲೆಕಾಯಿಯಲ್ಲಿ ಫೋಲೇಟ್ ಹೇರಳವಾಗಿದೆ, ಇದರಲ್ಲಿ ವಿಟಮಿನ್ ಬಿ ಹೇರಳವಾಗಿದ್ದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲನ್ನು ಬಲಪಡಿಸುವ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.

Health Benefits Of Sprouted Peanuts.