ನಿಮಗೆ ರಕ್ತಹೀನತೆ ಇದೆ ಎಂದು ಡಾಕ್ಟರ್ ಹೇಳಿದ್ದರೆ, ಇವುಗಳನ್ನು ಮಾತ್ರ ತಿನ್ನಬೇಡಿ!

28-12-22 07:01 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮ್ಮ ದೇಹಕ್ಕೆ ಕಬ್ಬಿಣದ ಕೊರತೆ ಇದ್ದರೆ ಅದಕ್ಕೆ ತಕ್ಕಂತೆ ಆಹಾರ ತಿಂದು ಅದನ್ನು ಸರಿದೂಗಿಸಿಕೊಳ್ಳಿ. ಬದಲಿಗೆ ವ್ಯತರಿಕ್ತವಾದ ಆಹಾರ ಪದಾರ್ಥ ಗಳನ್ನು ಸೇವಿಸಿ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಡಿ.

ಮನುಷ್ಯನಿಗೆ ಸಿಗಬೇಕಾದ ಸಮಯಕ್ಕೆ ಸಿಗಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಸಿಕ್ಕರೆ ಆತನಿಗೆ ಕಾಯಿಲೆ ಎನ್ನುವುದೇ ಬರುವುದಿಲ್ಲ. ಯಾವುದೇ ಸಂದರ್ಭದಲ್ಲಿ ಎದುರಾಗುವ ಪೌಷ್ಟಿಕಾಂಶಗಳ ಕೊರತೆ ಆತನ ಆರೋಗ್ಯವನ್ನು ಹಡಗಡಿಸುತ್ತವೆ. ವರ್ಷಕ್ಕೊಂದು ಬಾರಿ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ಹಾಗೆ ಮಾಡಿಸಿಕೊಂಡು ನಮಗೆ ದೇಹದಲ್ಲಿ ಯಾವ ಪೌಷ್ಟಿಕ ಸತ್ವದ ಕೊರತೆ ಇದೆ ಎಂದು ತಿಳಿದುಕೊಂಡು ಅದಕ್ಕೆ ಸಂಬಂಧ ಪಟ್ಟಂತೆ ಆಹಾರಗಳನ್ನು ಸೇವಿಸುವುದು ಮನುಷ್ಯನ ನಿಜವಾದ ಬುದ್ಧಿವಂತಿಕೆ ಆಗಬೇಕು. ಒಂದು ವೇಳೆ ವೈದ್ಯರು ಈ ರೀತಿ ಬ್ಲಡ್ ರಿಪೋರ್ಟ್ ನೋಡಿ ಅಪ್ಪಿ ತಪ್ಪಿ ಕಬ್ಬಿಣದ ಅಂಶದ ಕೊರತೆ ಅಥವಾ ಅನೀಮಿಯ ಇದೆ ಎಂದು ಹೇಳಿದರೆ, ಈ ಕೆಳಗಿನ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೂರ ಇರಿ..

ಕ್ಯಾಲ್ಸಿಯಂ ಇರುವ ಆಹಾರಗಳು

Pouring Milk In The Glass On The Background Of Nature Stock Photo -  Download Image Now - iStock

  • ಅನೀಮಿಯ ಅಥವಾ ರಕ್ತಹೀನತೆ ಬರಲು ಕಾರಣ ಏನೆಂದರೆ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಕಂಡುಬರುವುದು. ಹಾಗಾಗಿ ಯಾರಿಗೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇರುತ್ತದೆ ಅಂತಹವರು ಕ್ಯಾಲ್ಸಿಯಂ ಹೆಚ್ಚಾಗಿರುವ ಆಹಾರಗಳನ್ನು ತಿನ್ನಬಾರದು.
  • ಏಕೆಂದರೆ ಕ್ಯಾಲ್ಸಿಯಂ ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರಗಳಲ್ಲಿ ಸಿಗುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಅಥವಾ ಉಪಯೋಗವಾಗಲು ಬಿಡುವುದಿಲ್ಲ.
  • ಇದರಿಂದ ದೇಹದ ಪರಿಸ್ಥಿತಿ ಮತ್ತಷ್ಟು ತೊಂದರೆಗೆ ಸಿಲುಕುತ್ತದೆ. ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿ ಹೊಂದಿರುವ ಆಹಾರಗಳು ಎಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳು, ಬೆಣ್ಣೆ, ಮೊಸರು, ಬಾಳೆಹಣ್ಣು ಮತ್ತು ಒಣ ಬೀಜಗಳು.

ಟ್ಯಾನಿನ್ ಹೆಚ್ಚಾಗಿರುವ ಆಹಾರಗಳು

  • ಬ್ಲಾಕ್ ಟೀ, ಗ್ರೀನ್ ಟೀ ಮತ್ತು ಕಾಫಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ ಯಾರಿಗೆ ಅನೀಮಿಯ ಇರುತ್ತದೆ ಅಂತಹವರು ಇವುಗಳನ್ನು ಸೇವಿಸಬಾರದು.
  • ಏಕೆಂದರೆ ಟ್ಯಾನಿನ್ ಅಂಶದ ಪ್ರಮಾಣ ಇವುಗಳಲ್ಲಿ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ನೀವು ತಿನ್ನುವ ಆಹಾರಗಳಲ್ಲಿ ಸಿಗುವ ಕಬ್ಬಿಣದ ಅಂಶದ ಪ್ರಮಾಣ ನಿಮ್ಮ ದೇಹಕ್ಕೆ ಸಿಗದೇ ಹೋಗ ಬಹುದು. ದ್ರಾಕ್ಷಿ ಹಣ್ಣುಗಳು, ಮುಸುಕಿನ ಜೋಳ ಕೂಡ ಇದೇ ಗುಂಪಿಗೆ ಸೇರಿರುತ್ತವೆ.

ಗ್ಲೂಟನ್ ಹೆಚ್ಚಾಗಿ ಹೊಂದಿರುವ ಆಹಾರಗಳು

foods for iron deficiency, ನಿಮಗೆ ರಕ್ತಹೀನತೆ ಇದೆ ಎಂದು ಡಾಕ್ಟರ್ ಹೇಳಿದ್ದರೆ,  ಇವುಗಳನ್ನು ಮಾತ್ರ ತಿನ್ನಬೇಡಿ! - iron deficient patients should stay away from  these foods - Vijaya Karnataka

  • ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಸಮಸ್ಯೆ ಹೊಂದಿರುವವರು ಅಪ್ಪಿ ತಪ್ಪಿ ಗ್ಲೂಟನ್ ಅಂಶ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಲು ಹೋದರೆ ಅದರಿಂದ ಕರುಳಿನ ಭಾಗದಲ್ಲಿ ತೊಂದರೆ ಉಂಟಾಗುತ್ತದೆ.
  • ಕಬ್ಬಿಣದ ಅಂಶ ಮತ್ತು ಪೋಲಿಕ್ ಆಮ್ಲ ನಮ್ಮ ದೇಹಕ್ಕೆ ಸಿಗದಂತೆ ಆಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳ ಸಂತತಿ ಕಡಿಮೆಯಾಗುತ್ತದೆ. ನೀವು ತಿನ್ನುವ ಬಾರ್ಲಿ, ಗೋಧಿ, ಓಟ್ಸ್ ಇತ್ಯಾದಿಗಳಲ್ಲಿ ಗ್ಲೂಟನ್ ಹೆಚ್ಚಾಗಿರುತ್ತದೆ. ಹಾಗಾಗಿ ಇವುಗಳಿಂದ ದೂರ ಇರಿ.

ಫೈಟೇಟ್ ಹೆಚ್ಚಿರುವ ಆಹಾರಗಳು

Should children eat brown rice regularly? | Vinmec

  • ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಉಂಟು ಮಾಡಬಲ್ಲ ಗುಣಗಳನ್ನು ಹೊಂದಿ ರುವ ಫೈಟೇಟ್ ಆಹಾರಗಳು ನಾವು ತಿನ್ನುವ ಆಹಾರದಲ್ಲಿ ಸಿಗುವ ಕಬ್ಬಿಣದ ಅಂಶವನ್ನು ನಮ್ಮ ದೇಹಕ್ಕೆ ಸಮರ್ಪಕವಾಗಿ ಸಿಗಲು ಬಿಡುವುದಿಲ್ಲ.
  • ಹಾಗಾಗಿ ಮೊದಲೇ ಕಬ್ಬಿಣದ ಅಂಶದ ಕೊರತೆ ಹೊಂದಿರುವವರು ಫೈಟೇಟ್ ಹೆಚ್ಚಾಗಿ ಹೊಂದಿರುವ, ಗೋಧಿ ಕಂದು ಬಣ್ಣದ ಅಕ್ಕಿ, ಒಣ ಬೀಜಗಳು, ಕಾಳುಗಳು ಇತ್ಯಾದಿಗಳನ್ನು ಸೇವಿಸಬಾರದು.

ಆಕ್ಸಲಿಕ್ ಆಮ್ಲ ಇರುವ ಆಹಾರಗಳು

Miraculous health benefits of spinach - Times of India

  • ಕೆಲವೊಂದು ಸಲ ಆಕ್ಸಲಿಕ್ ಆಮ್ಲ ಕೂಡ ನಮ್ಮ ದೇಹದ ಕಬ್ಬಿಣದ ಪ್ರಮಾಣಕ್ಕೆ ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಜನರು ಒಂದು ವೇಳೆ ಅನೀಮಿಯ ಇದ್ದರೆ ಈ ಆಹಾರಗಳನ್ನು ಹೆಚ್ಚು ತಿನ್ನಬಾರದು.
  • ಉದಾಹರಣೆಗೆ ಪಾಲಕ್ ಸೊಪ್ಪು, ಕಡಲೆಬೀಜ, ಓಂ ಕಾಳು, ಚಾಕ್ಲೆಟ್ ಇತ್ಯಾದಿಗಳು. ಇವುಗಳ ಹೊರತಾಗಿ ಕಬ್ಬಿಣದ ಪ್ರಮಾಣ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ.

Iron Deficient Patients Should Stay Away From These Foods.