ಸಕ್ಕರೆ ಕಾಯಿಲೆ ಇರುವವರು ಖರ್ಜೂರ ತಿನ್ನಬಹುದಾ? ಇದ್ರಿಂದ ಸಮಸ್ಯೆ ಆಗುತ್ತಾ?

29-12-22 07:17 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಇರುವವರು ಏನು ಬೇಕಾದರೂ ತಿನ್ನಬಹುದು. ಅದರ ಬಗ್ಗೆ ಭಯ ಬೇಡ. ಯಾವುದಕ್ಕೂ ಮಿತಿ ಕಾಪಾಡಿಕೊಳ್ಳಿ ಮತ್ತು ಆರೋಗ್ಯ ವಾಗಿರಿ.

ರಕ್ತದ ಒತ್ತಡದಂತೆ ಮಧುಮೇಹ ಬಂದಿರುವವರಿಗೆ ಕೆಲವೊಂದಿಷ್ಟು ನಿಯಮಗಳು ಅನ್ವಯವಾಗುತ್ತವೆ. ಸಿಹಿ ಹೆಚ್ಚು ತಿನ್ನಬಾರದು, ಮೈ ಮೇಲೆ ಗಾಯ ಮಾಡಿಕೊಳ್ಳಬಾರದು, ಆಗಾಗ ಶುಗರ್ ಚೆಕ್ ಮಾಡಿಸಿಕೊಳ್ಳಬೇಕು, ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಆಹಾರದ ವಿಚಾರದಲ್ಲಿ ಸಕ್ಕರೆ ಕಾಯಿಲೆ ಇರುವವರು ಜಾಗೃತೆಯಿಂದ ಇರಬೇಕು ಎನ್ನುವುದು ಸಹ ಒಂದು ಕಟ್ಟುಪಾಡು. ಸಕ್ಕರೆ ಕಾಯಿಲೆ ಇರುವವರು ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಂಡರೆ, ಮುಂದೆ ಯಾವುದೇ ರೀತಿಯ ತೊಂದರೆ ಆಗುವ ಭಯವಿರುವುದಿಲ್ಲ. ಈ ಲೇಖನದಲ್ಲಿ ಖರ್ಜೂರ ಯಾವ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿಸಿಕೊಡಲಾಗಿದೆ....

ಸಕ್ಕರೆ ಕಾಯಿಲೆ ಇರುವವರು ಮತ್ತು ಖರ್ಜೂರ

Dates for Diabetes: If sugar patients want to eat sweets .. Experts who can  take these in moderation in their daily diet .. | Can Diabetics Eat Dates?  Here's Everything You Need

ವರ್ಷಾನು ವರ್ಷಗಳಿಂದ ಖರ್ಜೂರ ಎಲ್ಲರೂ ಇಷ್ಟಪಟ್ಟು ತಿನ್ನುತ್ತಿರುವ ಒಂದು ಡ್ರೈ ಫ್ರೂಟ್ ಆಗಿದೆ. ನೈಸರ್ಗಿಕವಾದ ಸಿಹಿ ಇದರಲ್ಲಿದ್ದು, ಆರೋಗ್ಯಕ್ಕೆ ಅನುಕೂಲಕರವಾದ ಕಾರ್ಬೋ ಹೈಡ್ರೇಟ್, ವಿಟಮಿನ್ ಮತ್ತು ಫಲಿತಾಂಶಗಳ ಪ್ರಮಾಣ ಅಪಾರವಾಗಿ ಹೊಂದಿದೆ.

ವರದಿಗಳ ಪ್ರಕಾರ

When Is the Best Time to Eat Dates?

  • ವರದಿಗಳ ಪ್ರಕಾರ 100 ಗ್ರಾಂ ಖರ್ಜೂರ, 314 ಕ್ಯಾಲರಿಗಳನ್ನು ಒಳಗೊಂಡಿದೆ. ನೈಸರ್ಗಿಕವಾದ ಸಿಹಿ ಇದರಲ್ಲಿದ್ದು, ಆರೋಗ್ಯ ತಜ್ಞರು ಹೇಳುವ ಪ್ರಕಾರ ಮಧುಮೇಹ ಇರುವವರು ಎರಡರಿಂದ ಮೂರು ಖರ್ಜೂರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಯಾವುದೇ ತರಹದ ತೊಂದರೆ ಇಲ್ಲ.
  • ನಿಮ್ಮ ಆಹಾರ ಪದ್ಧತಿಯಲ್ಲಿ ಖರ್ಜೂರಗಳನ್ನು ಸೇರಿಸಿಕೊಳ್ಳುವ ಮುಂಚೆ ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ.

ಮಧುಮೇಹಿಗಳಿಗೆ ಖರ್ಜೂರ ಎಷ್ಟು ಪ್ರಯೋಜನಕಾರಿ?

  • ಖರ್ಜೂರಗಳನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ಸಿಗಬೇಕಾದ ನಾರಿನ ಪ್ರಮಾಣ, ಆಂಟಿ ಆಕ್ಸಿಡೆಂಟ್ ಪ್ರಮಾಣ ಹಾಗೂ ಖನಿಜಾಂಶಗಳಾದ ಕಬ್ಬಿಣ, ಮೆಗ್ನೀಷಿಯಂ ಮತ್ತು ಪೊಟ್ಯಾಶಿಯಂ ಸಮರ್ಪಕವಾಗಿ ಸಿಗುತ್ತದೆ.
  • ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಇರುವ ಖರ್ಜೂರಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಸಿಗುತ್ತವೆ.

ಖರ್ಜೂರಗಳಲ್ಲಿ ಸಿಗುವ ನಾರಿನಾಂಶ...

Dates For Diabetes - Benefits and Side Effects - HealthifyMe

  • ನಾರಿನ ಪ್ರಮಾಣ ಖರ್ಜೂರಗಳಲ್ಲಿ ಸಿಗುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಧಾನವಾಗಿ ಹೀರಿ ಕೊಳ್ಳುವ ಹಾಗೆ ಮಾಡುತ್ತದೆ. ಇದರಿಂದ ಊಟ ಮಾಡಿದ ತಕ್ಷಣ ಇದ್ದಕ್ಕಿದ್ದಂತೆ ಬ್ಲಡ್ ಶುಗರ್ ಲೆವೆಲ್ ಜಾಸ್ತಿ ಆಗುವುದಿಲ್ಲ.
  • ಇದರಿಂದ ಹೊಟ್ಟೆ ಹಸಿವು ನಿಯಂತ್ರಣವಾಗುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿರುವುದರಿಂದ ಉರಿಯುತ ನಿವಾರಣೆಯಾಗುತ್ತದೆ ಮತ್ತು ಬೊಜ್ಜು ಕಡಿಮೆ ಆಗುತ್ತದೆ.

ಇನ್ನೊಂದು ಪ್ರಮುಖ ಅಂಶ

Lucknow: SGPGI team finds new way to control blood sugar level in diabetic  patients | Cities News,The Indian Express

  • ಇನ್ನೊಂದು ಪ್ರಮುಖ ಅಂಶ ಎಂದರೆ ಖರ್ಜೂರಗಳಲ್ಲಿ ಫೈಟೋ ಈಸ್ಟ್ರೋಜನ್ ಅಂಶಗಳು ಇರುವು ದರಿಂದ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಸಮರ್ಪಕವಾಗಿ ಉತ್ಪತ್ತಿಯಾಗಲು ಅನುಕೂಲ ಮಾಡಿಕೊಡುತ್ತದೆ.
  • ಹಲವಾರು ರೀತಿಯ ಸಂಶೋಧನೆಗಳು ಇನ್ನೂ ಸಹ ಇದರ ಮೇಲೆ ಆಗಬೇಕಾಗಿದ್ದು, ಇನ್ಸುಲಿನ್ ಪ್ರತಿರೋಧತೆ ಮತ್ತು ಮಧುಮೇಹ ಸಮಸ್ಯೆಯ ಮೇಲೆ ಇದರ ಪ್ರಭಾವ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಕೊನೆ ಮಾತು

7 Health Benefits of Dates

  • ಖರ್ಜೂರಗಳು ಮಧುಮೇಹ ಇರುವವರಿಗೆ ಮತ್ತು ಮುಂಬರುವ ದಿನಗಳಲ್ಲಿ ಮಧುಮೇಹ ಬರುತ್ತದೆ ಎಂಬ ಭಯ ಇರುವವರಿಗೆ ಸುರಕ್ಷಿತ ಆಹಾರ.
  • ವೈದ್ಯರ ಸಲಹೆ ಮೇರೆಗೆ ದಿನಕ್ಕೆ ಒಂದು ಅಥವಾ ಎರಡು ತಪ್ಪಿದರೆ ಮೂರು ಖರ್ಜೂರಗಳನ್ನು ತಿಂದರೆ ಸಾಕು. ಬೇರೆ ಬಗೆಯ ಡ್ರೈ ಫ್ರೂಟ್ಸ್ ಜೊತೆಗೂ ಕೂಡ ಇವುಗಳನ್ನು ಸೇವನೆ ಮಾಡಬಹುದು.

Diabetics Can Also Eat Dates But On Moderation.