ಲವಂಗದ ಎಣ್ಣೆ ಕೇವಲ ಹಲ್ಲು ನೋವಿಗೆ ಮಾತ್ರವಲ್ಲ, ಇನ್ನು ಹಲವಾರು ಲಾಭಗಳಿವೆ!

30-12-22 07:13 pm       Source: Vijayakarnataka   ಡಾಕ್ಟರ್ಸ್ ನೋಟ್

ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಲವಂಗದ ಎಣ್ಣೆ ಹಲವು ಆಯಾಮಗಳಲ್ಲಿ ಪ್ರಯೋಜನಕ್ಕೆ ಬರುತ್ತದೆ. ಅದರ ಸೀಕ್ರೆಟ್ ಇಲ್ಲಿದೆ.

ಡಾಕ್ಟರ್ ಹೇಳುವ ಹಾಗೆ ಲವಂಗದ ಎಣ್ಣೆ ಬಹುಪಯೋಗಿ ಗಿಡಮೂಲಿಕೆ ಎಣ್ಣೆ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಹಲವಾರು ಔಷಧಿಯ ಗುಣಗಳು ಇವೆ. ಹಲ್ಲು ನೋವಿನ ನಿವಾರಣೆ ಯಿಂದ ಹಿಡಿದು ಮಾನಸಿಕ ಒತ್ತಡದ ನಿವಾರಣೆಯವರೆಗೂ ಇದರ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ಪರಿಹಾರಗಳನ್ನು ಕಂಡು ಕೊಳ್ಳುವ ತರಹ ಲವಂಗದ ಎಣ್ಣೆಯಿಂದ ಲಾಭ ಪಡೆದು ಕೊಳ್ಳಬಹುದು....

ಹಲ್ಲು ನೋವಿಗೆ ಪ್ರಮುಖ ಪರಿಹಾರ

Cavities and Tooth Decay | Phoenix, AZ | Carefree Smiles Dentistry

  • ನಿಮಗೆ ಒಂದು ವೇಳೆ ಹಲ್ಲು ನೋವು ವಿಪರಿತವಾಗಿದ್ದ ಸಂದರ್ಭದಲ್ಲಿ ಲವಂಗದ ಎಣ್ಣೆ ನಿಮಗೆ ಸುಲಭ ಪರಿಹಾರವನ್ನು ಒದಗಿಸುತ್ತದೆ. ಡಾ. ಜರ್ರಿ ದಾಸ್ ಈ ಬಗ್ಗೆ ವಿವರಿಸಿದ್ದಾರೆ.
  • ಲವಂಗದ ಎಣ್ಣೆ ತನ್ನಲ್ಲಿ ಆಂಟಿ ಸೆಪ್ಟಿಕ್ ಗುಣಲಕ್ಷಣಗಳನ್ನು ಒಳಗೊಂಡಿದ್ದು, ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಒಂದು ಹತ್ತಿಯ ಉಂಡೆ ತೆಗೆದುಕೊಂಡು ಅದರಲ್ಲಿ ಲವಂಗದ ಎಣ್ಣೆ ಅದ್ದಿಕೊಂಡು, ಅದನ್ನು ನಿಮ್ಮ ಹಲ್ಲುಗಳು ಮತ್ತು ವಸಡು ನೋಯುತ್ತಿರುವ ಜಾಗದಲ್ಲಿ ಇಟ್ಟುಕೊಳ್ಳಬೇಕು.

ನೋವು ಕಂಡು ಬಂದಿದ್ದರೆ..

Eat 2 cloves with warm water before sleeping at night, know health benefits  | Eat News – India TV

  • ಒಂದು ವೇಳೆ ಅಲ್ಲಿ ಸೋಂಕಿನಿಂದ ನೋವು ಕಂಡು ಬಂದಿದ್ದರೆ, ಲವಂಗದ ಎಣ್ಣೆ ತನ್ನಲ್ಲಿರುವ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ಅದನ್ನು ವಾಸಿ ಮಾಡುತ್ತದೆ.
  • ಇದೊಂದು ಸೋಂಕು ನಿವಾರಕವಾಗಿ ಕೆಲಸ ಮಾಡಿ ನಿಮ್ಮ ಬಾಯಿಯ ದುರ್ವಾಸನೆಯನ್ನು ಸಹ ಹೋಗಲಾಡಿ ಸುತ್ತದೆ. ಹಲ್ಲು ನೋವಿಗೆ ಲವಂಗದ ಎಣ್ಣೆಯ ಹೊರತಾಗಿ ಬೇರೆ ಬಗೆಯ ಮನೆಮದ್ದು ಗಳನ್ನು ಸಹ ಟ್ರೈ ಮಾಡಬಹುದು.

ಉಗುರು ಸುತ್ತು ಸಮಸ್ಯೆಗೆ ಪರಿಹಾರ

clove health benefits, ಲವಂಗದ ಎಣ್ಣೆ ಕೇವಲ ಹಲ್ಲು ನೋವಿಗೆ ಮಾತ್ರವಲ್ಲ, ಇನ್ನು  ಹಲವಾರು ಲಾಭಗಳಿವೆ! - clove oil is best in multiple angles to multiple  diseases - Vijaya Karnataka

  • ಲವಂಗದ ಎಣ್ಣೆ ಒಂದು ಆಂಟಿ ಸೆಪ್ಟಿಕ್ ಮತ್ತು ಆಂಟಿ ಫಂಗಲ್ ಆಗಿರುವುದರಿಂದ, ಫಂಗಸ್ ಸೋಂಕನ್ನು ಇದು ತ್ವರಿತವಾಗಿ ನಿವಾರಣೆ ಮಾಡುತ್ತದೆ. ಗಾಯ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಮತ್ತು ಫಂಗಸ್ ಬೆಳವಣಿಗೆಯನ್ನು ಇದು ತಡೆಹಾಕುತ್ತದೆ.
  • ಚರ್ಮರೋಗ ತಜ್ಞರಾದ ಡಾ. ಬಿಪ್ಲಾವ್ ಅಗರ್ವಾಲ್ ಈ ಮಾಹಿತಿಯನ್ನು ನೀಡಿದ್ದಾರೆ. ಒಂದು ವೇಳೆ ನಿಮಗೆ ಉಗುರು ಸುತ್ತು ಸಮಸ್ಯೆ ಆಗಿದ್ದರೆ, ನೀವು ಅದಕ್ಕೆ ಆರರಿಂದ ಎಂಟು ಹನಿಗಳಷ್ಟು ಲವಂಗದ ಎಣ್ಣೆ ಮತ್ತು ಎರಡು ಟೀ ಚಮಚ ತೆಂಗಿನ ಎಣ್ಣೆ ಮಿಕ್ಸ್ ಮಾಡಿ ಉಗುರು ಸುತ್ತು ಆಗಿರುವ ಜಾಗಕ್ಕೆ ಹಚ್ಚಬೇಕು. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಪರಿಹಾರ ಸಿಗುತ್ತದೆ.

ತಲೆನೋವಿಗೆ ಪರಿಹಾರ

Headache Or Migraine: Expert Tells How To Spot The Difference

  • ಲವಂಗದ ಎಣ್ಣೆ ತನ್ನಲ್ಲಿ ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಡಾ ರಶ್ಮಿ ಸಂಗೀ ಹೇಳುವ ಪ್ರಕಾರ ಎರಡು ಹನಿಗಳಷ್ಟು ಲವಂಗದ ಎಣ್ಣೆ, ಒಂದು ಟೀ ಚಮಚ ಉಪ್ಪು ಮಿಶ್ರಣ ಮಾಡಿ ಅದನ್ನು ನಿಮ್ಮ ತಲೆಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆ ನೋವಿಗೆ ಉತ್ತಮ ಪರಿಹಾರ ಸಿಗುತ್ತದೆ.
  • ಲವಂಗದ ಎಣ್ಣೆಯನ್ನು ಹಚ್ಚುವುದರಿಂದ ತಲೆಯ ಭಾಗದಲ್ಲಿ ಉರಿಯುತ ನಿವಾರಣೆಯಾಗಿ ಕೇವಲ ಐದು ನಿಮಿಷದಲ್ಲಿ ನೋವು ಕಡಿಮೆಯಾಗುತ್ತದೆ.

ಮಾನಸಿಕ ಒತ್ತಡ ನಿವಾರಣೆ ಆಗುತ್ತದೆ

  • ಲವಂಗದ ಎಣ್ಣೆ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಲ್ಲಿ ಸಹ ಕೆಲಸ ಮಾಡುತ್ತದೆ. ಅದ ಕ್ಕಾಗಿ ನೀವು ಎರಡರಿಂದ ಮೂರು ಹನಿಗಳಷ್ಟು ಲವಂಗದ ಎಣ್ಣೆಯನ್ನು ಕುದಿಯುವ ನೀರಿನಲ್ಲಿ ಹಾಕಿ ಅದರ ಆವಿಯನ್ನು ಮೂಗು ಹಾಗೂ ಬಾಯಿಯಿಂದ ಒಳಗೆ ತೆಗೆದುಕೊಳ್ಳಬೇಕು.
  • ಇದರಿಂದ ನಿಮಗೆ ನೆಮ್ಮದಿಯ ನಿದ್ರೆ ಬರುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಡಾ. ಅನುಸೂಯ ಸುರೇಶ್ ಹೇಳುತ್ತಾರೆ.

ಇದೊಂದು ಸೊಳ್ಳೆ ನಿವಾರಕ

Difference between Dengue Malaria and Chikungunya, ডেঙ্গু ম্যালেরিয়া  চিকুনগুনিয়া – News18 Bangla

  • ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿಯಾಗಿದ್ದರೆ, ಅಥವಾ ಬೇರೆ ಬೇರೆ ಬಗೆಯ ಕೀಟಗಳು ನಿಮ್ಮ ಮನೆಗೆ ಬರುತ್ತಿದ್ದರೆ, ಸುಲಭವಾಗಿ ಅವುಗಳಿಂದ ಮುಕ್ತಿ ಪಡೆದುಕೊಳ್ಳಲು, ಕೆಲವು ಹನಿಗಳಷ್ಟು ಲವಂಗದ ಎಣ್ಣೆಯನ್ನು ನಿಮ್ಮ ಬೆಡ್ ಶೀಟ್ ಮೇಲೆ ಸಿಂಪಡಿಸಿ ಮಲಗಿಕೊಳ್ಳಬಹುದು.
  • ಇದು ತುಂಬಾ ಪರಿಣಾಮಕಾರಿಯಾಗಿ ಜಿರಳೆಗಳನ್ನು ಸಹ ನಿಮ್ಮ ಹತ್ತಿರ ಸುಳಿಯದಂತೆ ನೋಡಿ ಕೊಳ್ಳುತ್ತದೆ.