ಮಾರುಕಟ್ಟೆಯಿಂದ ಅಕ್ಕಿ ಕೊಳ್ಳುವಾಗ ಅದರ ಬಣ್ಣ ಹೇಗಿದ್ರೆ ಒಳ್ಳೆದಂತೆ ಗೊತ್ತಾ?

03-01-23 07:00 pm       Source: Vijayakarnataka   ಡಾಕ್ಟರ್ಸ್ ನೋಟ್

ಯಾವಾಗಲೂ ಮಾರುಕಟ್ಟೆಯಿಂದ ಅಕ್ಕಿಕೊಳ್ಳುವಾಗ ಈ ಕೆಲವು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯಯ ಎನ್ನುತ್ತಾರೆ ಪೌಷ್ಟಿಕ ತಜ್ಞೆ ಜೂಹಿ ಕಪೂರ್.

ಭಾರತದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮದವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕಿಯನ್ನು ಸೇವಿಸಲಾಗುತ್ತದೆ. ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ದೊರೆಯುವ ಅಕ್ಕಿಯನ್ನು ಬಳಸುತ್ತಾರೆ. ಆದರೆ ಅದರ ಗುಣಮಟ್ಟದ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. ಕೆಲವೇ ಜನರು ನಿಜವಾದ ಮತ್ತು ಒಳ್ಳೆಯ ಅಕ್ಕಿಯನ್ನು ಗುರುತಿಸುತ್ತಾರೆ. ಪೌಷ್ಟಿಕತಜ್ಞೆ ಜೂಹಿ ಕಪೂರ್ ಪೌಷ್ಟಿಕ ಮತ್ತು ಶುದ್ಧ ಅಕ್ಕಿಯ 3 ವಿಶೇಷತೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ.

ಅಕ್ಕಿಯ ವಿಧಗಳು

How Healthy is Rice? Top Reasons Why You Should Be Eating Rice in 2019 –  Cahokia Rice

ಅಕ್ಕಿಯಲ್ಲಿ ಹಲವು ವಿಧಗಳಿವೆ. ಹೆಚ್ಚಿನ ಜನರು ಬಿಳಿ ಅಕ್ಕಿಯನ್ನು ಸೇವಿಸಿದರೆ, ಕೆಲವರು ಕೆಂಪು ಅಕ್ಕಿ, ಕಪ್ಪು ಅಕ್ಕಿ ಅಥವಾ ಕಂದು ಅಕ್ಕಿಯನ್ನು ತಿನ್ನಲು ಬಯಸುತ್ತಾರೆ. ಈ ಎಲ್ಲಾ ವಿಧಗಳು ವಿಭಿನ್ನ ಪೋಷಣೆಯನ್ನು ಹೊಂದಿರಬಹುದು. ಆದರೆ ಪ್ರತಿ ಪ್ರಕಾರದ ಅಕ್ಕಿಯಲ್ಲಿ ಖಂಡಿತವಾಗಿಯೂ ಮೂರು ವಿಶೇಷತೆಗಳಿರಬೇಕು.

ಅಕ್ಕಿಯ ಬಣ್ಣ

ಅಕ್ಕಿಯ ಬಣ್ಣವು ತುಂಬಾ ಬಿಳಿ ಅಥವಾ ಹೊಳೆಯುತ್ತಿದ್ದರೆ, ಅದನ್ನು ತುಂಬಾ ಸಂಸ್ಕರಿಸಲಾಗಿದೆ ಮತ್ತು ರಾಸಾಯನಿಕವಾಗಿ ಸಂಸ್ಕರಿಸಲಾಗಿದೆ ಎಂದರ್ಥ. ಅಂದರೆ ತುಂಬಾ ಪಾಲಿಶ್‌ ಮಾಡಲಾಗಿದೆ ಎಂದರ್ಥ. ಪಾಲಿಶ್ ಮಾಡಲಾದ ಅಕ್ಕಿಯಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ. ಕೈಯಿಂದ ಆರಿಸಿದ ಅಕ್ಕಿ ತಿಳಿ ಕಂದು ಅಥವಾ ಬಿಳಿ ಬಣ್ಣವನ್ನು ಹೊಂದಿರುತ್ತದೆ.

​ಅಕ್ಕಿ ವಿನ್ಯಾಸ

Exactly How Healthy Is Brown Rice? | Cooking Light

ಅಕ್ಕಿಯ ವಿನ್ಯಾಸವು ತುಂಬಾ ಮೃದುವಾಗಿದ್ದರೆ ಅಥವಾ ಎಲ್ಲಾ ಧಾನ್ಯಗಳು ಒಂದೇ ಗಾತ್ರ ಮತ್ತು ಆಕಾರವನ್ನು ಹೊಂದಿದ್ದರೆ, ಇದು ತುಂಬಾ ಸಂಸ್ಕರಿಸಿದ ಸಂಕೇತವಾಗಿದೆ. ಕೈಯಿಂದ ತೆಗೆದ ಅಕ್ಕಿಯಲ್ಲಿ ಕೆಲವು ಭತ್ತದ ಭಾಗಗಳು ಉಳಿದಿರಬಹುದು. ಅವುಗಳ ಆಕಾರವು ಒಂದೇ ಆಗಿರುವುದಿಲ್ಲ. ಪಾಲಿಶ್ ಮಾಡದ ಅಕ್ಕಿಯಲ್ಲಿ ಸಾಮಾನ್ಯವಾಗಿ ಭತ್ತದ ಭಾಗಗಳು ಕಾಣಿಸುತ್ತವೆ.

ಯಾವ ಆಕ್ಕಿಯನ್ನು ಖರೀದಿಸಬೇಕು

A Guide to Rice: How to Pick Which One is Right For You - Fitbit Blog

ಪೌಷ್ಟಿಕತಜ್ಞೆ ಜೂಹಿ ಕಪೂರ್ ಪ್ರಕಾರ, ಅಕ್ಕಿಯನ್ನು ಖರೀದಿಸುವಾಗ ಭತ್ತವನ್ನು ಎಲ್ಲಿ ಬೆಳೆಯಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ನೀವು ನಿಮ್ಮ ಪ್ರದೇಶ ಮತ್ತು ರಾಜ್ಯದ ಸುತ್ತ ಬೆಳೆದ ಅಕ್ಕಿಯನ್ನು ಮಾತ್ರ ಖರೀದಿಸಬೇಕು. ಏಕೆಂದರೆ, ಇದು ಶುದ್ಧ ಮತ್ತು ಹೆಚ್ಚು ಪೌಷ್ಟಿಕವಾಗಿರುತ್ತದೆ. ಬ್ರ್ಯಾಂಡೆಡ್ ಅಥವಾ ಆಮದು ಮಾಡಿದ ಅಕ್ಕಿ ಪೌಷ್ಟಿಕಾಂಶದ ಕೊರತೆಯನ್ನು ಹೊಂದಿರಬಹುದು.

​ಅಕ್ಕಿಯಲ್ಲಿ ಯಾವ ಪೌಷ್ಟಿಕಾಂಶವಿದೆ?

A Guide to Rice: Nutrition Facts, Health Benefits, Brown vs. White, and  More | Everyday Health

ಹೆಲ್ತ್‌ಲೈನ್ ಪ್ರಕಾರ, ಅಕ್ಕಿಯಲ್ಲಿ ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಫೈಬರ್ ಮತ್ತು ಕೊಬ್ಬುಗಳಿವೆ. ವಿವಿಧ ರೀತಿಯ ಅಕ್ಕಿಗಳು ವಿಭಿನ್ನ ಪೌಷ್ಟಿಕಾಂಶವನ್ನು ಹೊಂದಿರುತ್ತವೆ.

Nutritionist Tips To Check Qualities Of Rice.