ಚಳಿಗಾಲದಲ್ಲಿ ಹೈಬಿಪಿ ಇದ್ದವರು, ಸೇವಿಸಬೇಕಾದ ಮತ್ತು ಸೇವಿಸಬಾರದ ಆಹಾರಗಳು

04-01-23 07:43 pm       Source: Vijayakarnataka   ಡಾಕ್ಟರ್ಸ್ ನೋಟ್

ಅತಿಯಾದ ಒತ್ತಡದ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ, ಅನುವಂಶೀಯತೆ ಇತ್ಯಾದಿಗಳಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಂಡುಬರುವುದು.

ಸಾಮಾನ್ಯವಾಗಿ ಚಳಿಗಾಲದ ಸಮಯಲ್ಲಿ ಬಿಸಿಬಿಸಿ ಇರುವ ಆಹಾರ ಸೇವನೆ ಮಾಡ ಬೇಕೆಂದು ಮನಸ್ಸು ಹಾತೊರೆಯುತ್ತದೆ. ಅದರಲ್ಲೂ ಸಂಜೆಯ ಸಮಯ ಆಗುತ್ತಿದ್ದಂತೆ, ಟೀ ಜೊತೆಗೆಗೆ ಬಿಸಿ ಬಿಸಿಯಾಗಿರುವ ಎಣ್ಣೆಯಲ್ಲಿ ಕರಿದ ತಿಂಡಿ ಇದ್ದರೆ, ಆಹಾ ಅದರ ಮಜಾನೇ ಬೇರೆ!

ಆದರೆ ಬಾಯಿಗೆ ರುಚಿಕೊಡುವ ಇಂತಹ ತಿಂಡಿಗಳನ್ನು ಆಗಾಗ ಸೇವಿಸುವುದರಿಂದ ಜೀರ್ಣವ್ಯವಸ್ಥೆ ಏರುಪೇರಾಗಿ ಆರೋಗ್ಯಕ್ಕೆ ತೊಂದರೆ ಆಗುವುದು ಮಾತ್ರವಲ್ಲದೆ ದೇಹದ ತೂಕವೂ ಕೂಡ ಹೆಚ್ಚಾಗಬಹುದು. ಇವೆಲ್ಲದರ ಜೊತೆಗೆ ಈಗಾಗಲೇ ಅಧಿಕ ರಕ್ತದೊತ್ತಡದಿಂದ ಇರುವ ವ್ಯಕ್ತಿಗಳು, ಎಣ್ಣೆ ಹಾಗೂ ಉಪ್ಪಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರ ಇದ್ದಷ್ಟು ಒಳ್ಳೆಯದು. ಪ್ರಮುಖವಾಗಿ ಇಂತಹ ದೀರ್ಘಕಾಲದ ಕಾಯಿಲೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ತಮ್ಮ ದೈನಂದಿನ ಆಹಾರವನ್ನು ಎಚ್ಚರಿಕೆಯಿಂದ ಅನುಸರಿಸುವ ಅಭ್ಯಾಸವನ್ನು ಮಾಡಿ ಕೊಳ್ಳಬೇಕಾಗುತ್ತದೆ....

ರಕ್ತದೊತ್ತಡದ ಸಮಸ್ಯೆ

Hypertension In Winter: Why cold weather increases blood pressure and how  can you manage it

  • ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಪ್ರಮುಖ ಕಾರಣ ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನಶೈಲಿ ಹಾಗೂ ಮಾನಸಿಕ ಒತ್ತಡದಿಂದಾಗಿ, ಹೆಚ್ಚಿನವರು ಈ ರಕ್ತದೊತ್ತಡದ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.
  • ಒಂದು ವೇಳೆ ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ದೇಹದಲ್ಲಿ ರಕ್ತನಾಳಗಳ ಮೇಲೆ ಪ್ರಭಾವ ಉಂಟಾಗಿ, ಕೊನೆಗೆ ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಇದರಿಂದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಹಾಗಾದ್ರೆ ಈ ಕಾಯಿಲೆಗೆ ಕಾರಣಗಳೇನು?

How to Control High Blood Pressure in winter?

  • ಪ್ರಮುಖವಾಗಿ ಹೇಳಬೇಕೆಂದರೆ ಯಾರು ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕಾರಿ ಆಹಾರ ಪದ್ಧತಿ ಯನ್ನು ಅನುಸರಿಸುತ್ತಾರೆಯೋ ಜೊತೆಗೆ ಜಡ ಜೀವನ ಶೈಲಿಯನ್ನು ಕೂಡ ಮೈಗೂಡಿಸಿ ಕೊಳ್ಳುತ್ತಾರೆ ಯೋ ಅವರಿಗೆ ದೇಹದಲ್ಲಿ ಬೊಜ್ಜಿನ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ.
  • ಅಲ್ಲದೆ ದೇಹದ ತೂಕ ಕೂಡ ಏರಿಕೆ ಆಗಿರುತ್ತದೆ. ಹೀಗಾಗಿ ಇಂತಹ ಜನರಲ್ಲಿ ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುವ ಅಧಿಕ ರಕ್ತದೊತ್ತಡದ ಸಮಸ್ಯೆ ಕಂಡು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ.
  • ಇನ್ನು ಇವೆಲ್ಲಾದರ ಜೊತೆಗೆ, ಸಿಗರೇಟ್ ಸ್ಮೂಕಿಂಗ್, ಮದ್ಯಪಾನ ಸೇವನೆ, ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ, ಅನುವಂಶೀಯ ಕಾರಣಗಳು ಹೀಗೆ ಹತ್ತು ಹಲವಾರು ತೊಂದರೆಗಳಿಂದ ರಕ್ತದ ಒತ್ತಡ ಹೆಚ್ಚಾಗಬಹುದು.

ನಾರಿನಾಂಶ ಹಾಗೂ ಪೊಟ್ಯಾಶಿಯಂ ಹೆಚ್ಚಿರುವ ಆಹಾರಗಳು

  • ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಆದಷ್ಟು ನಾರಿನಂಶ ಹೆಚ್ಚಿರುವ ಆಹಾರ ಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು. ಉದಾಹರಣೆಗೆ ಹಚ್ಚಹಸಿರು ಎಲೆ ತರಕಾರಿಗಳು, ನೇರಳೆಹಣ್ಣು, ಸೇಬು ಹಣ್ಣು ಬೆಣ್ಣೆಹಣ್ಣುಗಳು ಇತ್ಯಾದಿ.
  • ಅಷ್ಟೇ ಅಲ್ಲದೇ ಪೊಟ್ಯಾಶಿಯಂ ಹೆಚ್ಚಿರುವ ಆಹಾರಗಳೂ ಕೂಡ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ. ಉದಾಹರಣೆಗೆ ದಿನಕ್ಕೊಂದು ಬಾಳೆಹಣ್ಣು ಸೇವನೆ ಮಾಡುವುದು, ವಾರದಲ್ಲಿ ಎರಡು ಮೂರು ಬಾರಿಯಾದರೂ ಬೀಟ್ರೂಟ್ ಸೇವನೆ ಮಾಡುವುದು, ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿದರೆ ಇಂತಹ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮೆಗ್ನಿಶಿಯಂ ಅಂಶ ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಬೇಕು..

Miraculous health benefits of spinach - Times of India

ಬಸಳೆ, ಪಾಲಕ್ ಸೊಪ್ಪು, ಬ್ರಾಕೋಲಿ, ಹರಿವೆ, ಬಾದಾಮಿ ಬೀಜಗಳು, ಇತ್ಯಾದಿಗಳಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಅಂಶ ಕಂಡು ಬರುತ್ತದೆ. ಹೀಗಾಗಿ ಇಂತಹ ತರಕಾರಿಗಳನ್ನು ನಿತ್ಯವೂ ನಿಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳುತ್ತಾ ಬಂದ್ರೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ನೆರವಾಗುತ್ತದೆ.

ಸೇವಿಸಬಾರದ ಆಹಾರಗಳು

  • ಎಣ್ಣೆಯಲ್ಲಿ ಕರಿದ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು. ಜೊತೆಗೆ ಉಪ್ಪಿನಾಂಶ ಹೆಚ್ಚಿರುವ ಸ್ನ್ಯಾಕ್ಸ್‌ಗಳನ್ನು ದೂರವಿಟ್ಟಷ್ಟು ಒಳ್ಳೆಯದು
  • ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು, ದಿನಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಸೇವನೆ ಮಾಡಬೇಕು. ಸಂಸ್ಕರಿಸಿದ ಆಹಾರವನ್ನು ಕಡೆಗಣಿಸಿ ಅಂದ್ರೆ ಉಪ್ಪಿನಾಂಶ ಇರುವ ಆಲೂಗಡ್ಡೆ ಚಿಪ್ಸ್, ಬೇಕರಿ ತಿಂಡಿಗಳು ಇತ್ಯಾದಿ. ಆದಷ್ಟು ಮನೆಯ ಆಹಾರವನ್ನು ಹೆಚ್ಚು ಸೇವನೆ ಮಾಡಿ.
  • ಜಾಸ್ತಿ ಕೆಫಿನ್ ಅಂಶ ಹೆಚ್ಚಿರುವ ಕಾಫಿಯನ್ನು ಕುಡಿಯಬೇಡಿ...

What To Eat And Avoid For Maintain Blood Pressure During Winter Season.