ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಈ ಸಮಸ್ಯೆ ಇದ್ದವರು ತಿನ್ನುವ ಹಾಗಿಲ್ಲ!

05-01-23 07:22 pm       Source: Vijayakarnataka   ಡಾಕ್ಟರ್ಸ್ ನೋಟ್

ಮಾರ್ಕೆಟ್ ನಲ್ಲಿ ಪಪ್ಪಾಯಿ ಹಣ್ಣು ನೋಡಿದ ಕೂಡಲೇ ಬಾಯಲ್ಲಿ ನೀರೂರುತ್ತದೆ! ಏಕೆಂದರೆ ಅದರ ರುಚಿ ಅಷ್ಟರ ಮಟ್ಟಿಗೆ ನಮಗೆ ಹಿಡಿಸಿರುತ್ತದೆ..

ಪಪ್ಪಾಯಿ ಅಥವಾ ಪರಂಗಿ ಹಣ್ಣು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡಿರುವ ಜೊತೆಗೆ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಕೂಡ ಒಳಗೊಂಡಿ ರುವ ಹಣ್ಣಾಗಿರುವುದರಿಂದ, ಮಕ್ಕಳು ದೊಡ್ಡವರು ಮತ್ತು ವಯಸ್ಸಾದವರು ಯಾವುದೇ ಹಿಂಜರಿಕೆಯಿಲ್ಲದೆ ಸೇವನೆ ಮಾಡಬಹುದು.

ವಿಶೇಷವಾಗಿ ಈ ಹಣ್ಣು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿರುವುದರಿಂದ ಕ್ಯಾನ್ಸರ್ ಕಾಯಿಲೆ ಇದ್ದವರು, ತೂಕ ಹೆಚ್ಚಿಸಿ ಕೊಂಡವರು, ಮುಟ್ಟಿನ ತೊಂದರೆ, ಕಣ್ಣುಗಳ ಆರೋಗ್ಯ ಹೀಗೆ ಅನೇಕ ವಿಧಗಳಲ್ಲಿ ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ.

ಆದರೆ ಅಚ್ಚರಿಯ ಸಂಗತಿ ಏನೆಂದ್ರೆ, ಇಷ್ಟೆಲ್ಲಾ ಲಾಭಗಳನ್ನು ಒಳಗೊಂಡಿರುವ ಈ ಹಣ್ಣನ್ನು ಪ್ರತಿಯೊಬ್ಬರೂ ಕೂಡ ತಿನ್ನುವ ಹಾಗಿಲ್ಲ! ಹಾಗಾದರೆ ಯಾರವರು? ಯಾಕೆ ಈ ಹಣ್ಣಿನಿಂದ ಅವರು ದೂರ ಉಳಿಯಬೇಕು ಎನ್ನುವ ಬಗ್ಗೆ ತಿಳಿಯೋಣ ಬನ್ನಿ.

ಗರ್ಭಿಣಿ ಮಹಿಳೆಯರು

Amino Acids for Pregnancy – The Amino Company

  • ಗರ್ಭಿಣಿಯರು ಆರೋಗ್ಯದ ವಿಷ್ಯದಲ್ಲಿ ಎಷ್ಟು ಕಾಳಜಿ ವಹಿಸುತ್ತಾರೆಯೋ ಅಷ್ಟು ಒಳ್ಳೆಯದು. ಅದರಲ್ಲೂ ತಮ್ಮಆಹಾರಪದ್ಧತಿಯ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಈ ವೇಳೆ ತನ್ನ ಗರ್ಭದಲ್ಲಿ ಮತ್ತೊಂದು ಜೀವವು ಬೆಳೆಯುತ್ತಿರುವ ಕಾರಣದಿಂದಾಗಿ ಗರ್ಭಿಣಿ ಯರು ತಿನ್ನುವ ಆಹಾರವು ಇಲ್ಲಿ ತುಂಬಾ ಮಹತ್ವ ಪಡೆದುಕೊಳ್ಳುವುದು.
  • ಹೀಗಾಗಿ ಇಂತಹ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಪಪ್ಪಾಯಿ ಹಣ್ಣು ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಇದಕ್ಕೆ ಪ್ರಮುಖ ಕಾರಣ, ಇಂತಹ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಅವಧಿಗೆ ಮುನ್ನ ಹೆರಿಗೆ ಆಗುವ ಸಾಧ್ಯತೆ ಇರುತ್ತದೆಯಂತೆ.
  • ಅಷ್ಟೇ ಅಲ್ಲದೆ ಕಾಯಿ ಪಪ್ಪಾಯಿ ಅಥವಾ ಅರ್ಧಂಬರ್ಧ ಹಣ್ಣಾದ ಪರಂಗಿಯನ್ನು ಸೇವನೆ ಮಾಡುವುದರಿಂದ, ಕೂಡ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ!

ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇದ್ದವರು!

Can coronavirus cause long-term damage to the heart? - BHF

  • ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇದ್ದವರು, ಈ ಹಣ್ಣನ್ನು ಸೇವನೆ ಮಾಡುವ ಮುನ್ನ ನಿಮ್ಮ ವೈದ್ಯರ ಬಳಿ ಕೇಳಿ, ಸಲಹೆಗಳನ್ನು ಪಡೆದುಕೊಂಡ ಬಳಿಕ ಸೇವನೆ ಮಾಡಿದರೆ ಬಹಳ ಒಳ್ಳೆಯದು.
  • ಯಾಕೆಂದ್ರೆ ಅಧ್ಯಾಯನದ ವರದಿಯ ಪ್ರಕಾರ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳಾದ ಹೃದಯದ ತೊಂದರೆ, ಹೈಬಿಪಿ, ಹೃದಯ ರಕ್ತನಾಳದ ಕಾಯಿಲೆಗಳು ಹೃದಯ ಬಡಿತ ಹಾಗೂ ಪಾರ್ಶ್ವವಾಯು ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆಯಂತೆ!

ಈಗಾಗಲೇ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು

How to keep your kidneys healthy | Regency Healthcare Ltd.

  • ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ಹೆಚ್ಚಿನ ಪ್ರಮಾಣ ದಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಅಪಾರ ಪ್ರಮಾಣ ದಲ್ಲಿ ಕಂಡು ಬರುವುದರಿಂದ, ಕ್ರಮೇಣವಾಗಿ ಇದು ದೇಹದಲ್ಲಿ ಶೇಖರಣೆ ಗೊಂಡು, ಕೊನೆಗೆ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈಗಾಗಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಈ ಹಣ್ಣಿನಿಂದ ದೂರ ಇದ್ದರೆ ಒಳ್ಳೆಯದು.
  • ಇನ್ನು ಈ ಬಗ್ಗೆ ಅಧ್ಯಾಯನಗಳು ಹೇಳುವ ಹಾಗೆ ಸಾಮಾನ್ಯವಾಗಿ ಅತಿಯಾಗಿ ವಿಟಮಿನ್ ಸಿ ಅಂಶ ದೇಹದೊಳಗೆ ಸೇರಿಕೊಂಡಾಗ, ಕ್ರಮೇಣವಾಗಿ ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಪ್ರಮಾಣವನ್ನು ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದಾಗಿ ಕಿಡ್ನಿಗಳಲ್ಲಿ ಕಲ್ಲುಗಳ ಪ್ರಮಾಣ ಕೂಡ ದಪ್ಪ ಆಗುತ್ತವೆ.
  • ಹೀಗಾಗಿ ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಮೊದಲು ವೈದ್ಯರ ಬಳಿ ಸರಿಯಾಗಿ ಚರ್ಚಿಸಿ ಈ ಹಣ್ಣನ್ನು ಸೇವನೆ ಮಾಡಿದರೆ ಒಳ್ಳೆಯದು.

ಸಕ್ಕರೆಕಾಯಿಲೆ ಇದ್ದವರು...

Worried about diabetes? Here are three ways to control the disease | Health  - Hindustan Times

  • ಮಧುಮೇಹ ಅಥವಾ ಸಕ್ಕರೆ ಕಾಯಿಲೆ ವ್ಯಕ್ತಿಯಲ್ಲಿ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಈಗಾಗಿ ಈ ಕಾಯಿಲೆ ಕಾಣಿಸಿಕೊಂಡ ಬಳಿಕ ಸರಿಯಾದ ಜೀವನಶೈಲಿ ಮತ್ತು ಆಹಾರಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಇವೆಲ್ಲದರ ಜೊತೆಗೆ ವೈದ್ಯರು ನೀಡುವ ಸಲಹೆಗಳನ್ನು ಹಾಗೂ ಅವರು ನೀಡುವ ಮಾತ್ರೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಈ ಸಮಯದಲ್ಲಿ ಕೆಲವೊಂದು ಇಷ್ಟದ ಆಹಾರಗಳನ್ನು ತ್ಯಜಿಸ ಬೇಕು ಮತ್ತು ಇನ್ನು ಕೆಲವನ್ನು ಸೇರ್ಪಡೆ ಮಾಡಬೇಕು.

ಕೊನೆಯ ಮಾತು

What is Diabetes | Type 1 / 2 & Gestational Diabetes | SIMS

  • ಇನ್ನು ಹಣ್ಣುಗಳ ವಿಷ್ಯದಲ್ಲಿ ಹೇಳುವುದಾದರೆ, ಮಧುಮೇಹಿಗಳು ಆದಷ್ಟು ಪಪ್ಪಾಯಿ ಹಣ್ಣಿನಿಂದ ದೂರ ಇದ್ದರೆ ಒಳ್ಳೆಯದು. ಅದರಲ್ಲೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಉಳಿಯುವುದಿಲ್ಲ, ಅಂತಹವರು ಅಂತಹವರು ಆದಷ್ಟು ಈ ಹಣ್ಣಿನಿಂದ ದೂರ ಇರಬೇಕು.
  • ಯಾಕೆಂದ್ರೆ ಈ ಹಣ್ಣಿನ ಸೇವನೆಯಿಂದ ಕೆಲವೊಮ್ಮೆ ರಕ್ತದಲ್ಲಿ ಸಕ್ಕರೆಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಹೃದಯ ಬಡಿತವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ಕೈ ಕಾಲು ನಡುಗುವಂತೆ ಮಾಡುತ್ತದೆ. ಹೀಗಾಗಿ ಇಂತಹ ಜನರು ಪರಂಗಿ ಪರಂಗಿ ಹಣ್ಣಿನ ಸೇವನೆಯಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು.

These People Should Not Eat Papaya Know The Reasons Why.