ಪ್ರಾಸ್ಟೇಟ್ ಕ್ಯಾನ್ಸರ್ ಬರಬಾರದು ಎಂದರೆ ಬಾದಾಮಿ ಗೋಡಂಬಿ ತಿನ್ನಿ!

12-01-23 08:08 pm       Source: Vijayakarnataka   ಡಾಕ್ಟರ್ಸ್ ನೋಟ್

ಒಣ ಬೀಜಗಳಾದ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ ಬೀಜಗಳು, ವಾಲ್ನಟ್, ಪಿಸ್ತಾ ಇತ್ಯಾದಿಗಳು ಪ್ರೋಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ತಪ್ಪಿಸಲು ನೆರವಿಗೆ ಬರುತ್ತದೆ.

ಕೆಲವರಿಗೆ ಡ್ರೈ ಫ್ರೂಟ್ಸ್ ಅಥವಾ ಒಣಬೀಜಗಳನ್ನು ಸೇವನೆಯಿಂದ, ಅಲರ್ಜಿಯಂತಹ ಸಮಸ್ಯೆಗಳು ಎದುರಾಗುತ್ತವೆ. ಆದರೆ ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ಕೆಲವೊಂದು ಒಣಫಲಗಳಲ್ಲಿ ಅತಿಯಾದ ಕ್ಯಾಲೋರಿ ಅಂಶಗಳು ಇರುವುದರಿಂದ, ಇದನ್ನು ಅತಿಯಾಗಿ ಸೇವನೆ ಮಾಡಿದರೆ, ಮಾತ್ರ ಇಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಆದರೆ ಹೇಗೆ ಅಳೆದು ತೂಗಿದರೂ ಕೂಡ ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ನಿಜಕ್ಕೂ ತುಂಬಾ ಒಳ್ಳೆಯ ಲಾಭಗಳನ್ನು ತಂದು ಕೊಡುತ್ತವೆ. ಅದರಲ್ಲೂ ಬಹುಮುಖ್ಯವಾಗಿ ನೆನೆಹಾಕಿದ ಡ್ರೈ ಫ್ರೂಟ್ಸ್ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಬನ್ನಿ ಇಂದಿನ ಈ ಲೇಖನದಲ್ಲಿ ಪ್ರತಿದಿನ ಬೆಳಗ್ಗೆ ಡ್ರೈಫ್ರೂಟ್ಸ್ ಅಥವಾ ಒಣಫಲಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಮೂತ್ರಕೋಶದ ಕಾಯಿಲೆಯ ಜೊತೆಗೆ ಪ್ರಾಸ್ಟೇಟ್ ಕ್ಯಾನ್ಸರ್ ಸಮಸ್ಯೆಯನ್ನು ಹೇಗೆ ತಡೆಯ ಬಹುದು ಎನ್ನುವುದರ ಬಗ್ಗೆ ನೋಡೋಣ....

ಪ್ರಾಸ್ಟೇಟ್ ಕ್ಯಾನ್ಸರ್

  • ಸಾಮಾನ್ಯವಾಗಿ ಪುರುಷರಲ್ಲಿ ವಯಸ್ಸು ಏರುತ್ತಿದ್ದಂತೆಯೇ ಈ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಏರುತ್ತಾ ಹೋಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
  • ಇನ್ನೂ ಈ ಕ್ಯಾನ್ಸರ್‌ನ ಭಯಾನಕ ಸಂಗತಿ ಏನೆಂದರೆ, ಈ ಕ್ಯಾನ್ಸರ್ ಆವರಿಸಿದ ಆರಂಭದಲ್ಲಿ ಈ ಕಾಯಿಲೆಯ ಯಾವುದೇ ಲಕ್ಷಣಗಳು ಕೂಡ ವ್ಯಕ್ತಿಯಲ್ಲಿ ಕಂಡು ಬರುವುದಿಲ್ಲ. ಹೀಗಾಗಿ ಇಂತಹ ಭಯಾನಕ ಕ್ಯಾನ್ಸರ್ ನಮ್ಮನ್ನು ಆವರಿಸುವ ಮೊದಲು ಪುರುಷರು, ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಇಂತಹ ಕಾಯಿಲೆಗೆ ಗುಡ್ ಬೈ ಹೇಳಬಹುದು.

ಡ್ರೈ ಫ್ರೂಟ್ಸ್ ಗಳ ಪ್ರಯೋಜನಗಳು

Nuts for Cancer Prevention: Health Benefits and Hype - American Institute  for Cancer Research %

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಡ್ರೈ ಫ್ರೂಟ್ಸ್ ಗಳು ಎಂದಿಗೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಪದಾರ್ಥಗಳು. ಇವುಗಳಿಂದ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಆದರೆ ಮಿತಪ್ರಮಾಣದಲ್ಲಿ ಸೇವನೆ ಮಾಡಬೇಕು ಅಷ್ಟೇ. ಪ್ರತಿದಿನ ನಿಯಮಿತ ಪ್ರಮಾಣದಲ್ಲಿ ಒಣಫಲಗಳನ್ನು ಸೇವನೆ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

ಪೌಷ್ಟಿಕ ಸತ್ವಗಳು ಡ್ರೈಫ್ರೂಟ್ಸ್

How to use dry fruits in your beauty regimen | Be Beautiful India

  • ಸಾಮಾನ್ಯವಾಗಿ ಡ್ರೈ ಫ್ರೂಟ್ಸ್ ಎಂದಾಗ ನಮಗೆ ನೆನಪಿಗೆ ಬರುವುದು ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಬೀಜಗಳು, ಒಣ ಅಂಜೂರ ಇತ್ಯಾದಿಗಳು. ಇವು ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ.
  • ಪ್ರಮುಖವಾಗಿ ಇಂತಹ ಒಣಬೀಜಗಳಲ್ಲಿ ದೇಹದ ಆರೋಗ್ಯಕ್ಕೆ ಬೇಕಾಗುವ, ನಾರಿನ ಅಂಶ, ಕ್ಯಾಲ್ಸಿಯಂ, ಪ್ರೋಟೀನ್ ಅಂಶಗಳು, ಅಗಾಧ ಪ್ರಮಾಣದಲ್ಲಿ ಸಿಗುತ್ತವೆ. ಹೀಗಾಗಿ ಪುರುಷರು ಪ್ರತಿದಿನ ಮಿತ ಪ್ರಮಾಣದಲ್ಲಿ ಇಂತಹ ಒಣ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ, ಆರೋಗ್ಯ ವೃದ್ಧಿ ಆಗುವುದು ಮಾತ್ರವಲ್ಲದೆ, ಪುರುಷರಲ್ಲಿ ಶೇಕಡ 34% ದಷ್ಟು ಪ್ರೋಸ್ಟೇಟ್ ಕ್ಯಾನ್ಸರ್ ಕಡಿಮೆ ಆಗುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ.

ಆಂಟಿ ಆಕ್ಸಿಡೆಂಟ್ ಹಾಗೂ ಸೆಲೆನಿಯಮ್ ಅಂಶ

ಸಾಧಾರಣವಾಗಿ ಎಲ್ಲಾ ಬಗೆಯ ಒಣಬೀಜಗಳಲ್ಲಿ ಅಥವಾ ಡ್ರೈ ಫ್ರೂಟ್ಸ್ ಗಳಲ್ಲಿಯೂ ಕೂಡ ಆಂಟಿ ಆಕ್ಸಿಡೆಂಟ್ ಗುಣ ಲಕ್ಷಣಗಳ, ಜೊತೆಗೆ ಸೆಲೆನಿಯಮ್ ಅಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಿ, ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

Did You Eating Dry Fruits Daily Can Reduce The Risk Of Prostate Cancer.