ಬೆಳಗ್ಗೆ ಈ ಡ್ರೈಫ್ರೂಟ್ಸ್ ತಿನ್ನಲೇಬೇಕು, ನಿಮ್ಮ ಹೃದಯಕ್ಕೆ ಒಳ್ಳೆಯದು!

13-01-23 08:01 pm       Source: Vijayakarnataka   ಡಾಕ್ಟರ್ಸ್ ನೋಟ್

ದ್ರಾಕ್ಷಿ ಗೋಡಂಬಿ ಬಾದಾಮಿ ಇತ್ಯಾದಿಗಳಂತೆ ವಾಲ್ನಟ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಹೃದಯದ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ, ಹೃದಯಕ್ಕೆ ಸಮಸ್ಯೆ ಬರದೇ ಇರುವ.

ಸಾಮಾನ್ಯವಾಗಿ ನಾವು ಸೇವನೆ ಮಾಡುವಂತಹ, ಆಹಾರ ಪದಾರ್ಥಗಳಿಗೆ, ಯಾವುದು ಮಾರುಟ್ಟೆಯಲ್ಲಿ ಸ್ವಲ್ಪ ದುಬಾರಿ ಬೆಲೆ ಇರುತ್ತದೆಯೋ, ಅಂತಹ ಆಹಾರಪದಾರ್ಥಳಿಂದ ಆರೋಗ್ಯಕ್ಕೆ ಲಾಭಗಳು ಸ್ವಲ್ಪ ಹೆಚ್ಚು ಎಂದು ಹೇಳಬಹುದು! ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಡ್ರೈ ಫ್ರೂಟ್ಸ್‌ಗಳು.

ಹೌದು ಡ್ರೈ ಫ್ರೂಟ್ಸ್‌ಗಳು ಎಂದಾಗ ನಮಗೆ ಪಕ್ಕನೆ ನೆನಪಿಗೆ ಬರುವುದು ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಅಂಜೂರ ಇತ್ಯಾದಿಗಳಂತೆ, ವಾಲ್ನಟ್ ಬೀಜಗಳು ಕೂಡ, ನಮ್ಮ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳಿಂದ ಹಿಡಿದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವಲ್ಲಿ ಈ ವಾಲ್ನಟ್ ಬೀಜಗಳು ಪಾತ್ರ ಬಲು ದೊಡ್ಡ ಎಂದರೆ ನೀವೂ ನಂಬಲೇಬೇಕು! ಬನ್ನಿ ಇಂದಿನ ಲೇಖನದಲ್ಲಿ ಇಂತಹ ಒಣಫಲದಲ್ಲಿ ಏನೆಲ್ಲಾ ಪ್ರಯೋಜನಗಳು ಅಡಗಿದೆ ಎನ್ನುವುದನ್ನು ನೋಡೋಣ...

ವಾಲ್ನಟ್ ಬೀಜಗಳ ಪ್ರಯೋಜನಗಳು

How to make the most of walnut benefits: Have them soaked or raw?

ಮೊತ್ತ ಮೊದಲನೆಯದಾಗಿ ವಾಲ್ನಟ್ ಬೀಜಗಳಲ್ಲಿ ಅಪಾರ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಕಂಡು ಬರುತ್ತದೆ. ಇದರ ಜೊತೆಗೆ ಈ ಒಣಫಲದಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಕೂಡ ಕಂಡು ಬರುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಪಾಲಿಫಿನಾಲ್ ಅಂಶ

Soaked walnut: Why it's a superfood; know wonderful benefits, right time to  eat | Health - Hindustan Times

ತಜ್ಞರ ಪ್ರಕಾರ ಈ ಒಣಫದಲ್ಲಿ ಹೇರಳವಾಗಿ, ಪಾಲಿಫಿನಾಲ್ ಅಂಶ, ಆಲ್ಫಾ ಲಿನೊಲಿಕ್ ಆಮ್ಲ, ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಕಂಡುಬರುತ್ತದೆ. ಹೀಗಾಗಿ ಹೃದಯದ ಸಮಸ್ಯೆಯನ್ನು ಹೊಂದಿರುವ ಜನರು, ಪ್ರತಿದಿನ ಮಿತ್ರಮಾಣದಲ್ಲಿ ವಾಲ್ನಟ್ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.

ಸಂಶೋಧನೆಗಳು ಹೇಳುವ ಹಾಗೆ

Structure and Function of the Heart

ಇನ್ನು ಈ ಬೀಜಗಳ ಬಗ್ಗೆ ಸಂಶೋಧನೆಗಳು ಹೇಳುವ ಹಾಗೆ, ಪ್ರತಿದಿನ ಬೆಳಗ್ಗೆ ವಾಲ್ನಟ್‌ ಗಳನ್ನು ಸೇವನೆ ಮಾಡುವ ಜನರಲ್ಲಿ ಹಾಗೂ ಇದೇ ಅಭ್ಯಾಸವನ್ನು ಅನುಸರಿಸುವವರಿಗೆ ಹೃದಯದ ಕಾಯಿಲೆ ಕಂಡು ಬರುವಸಾಧ್ಯತೆ ಕಡಿಮೆ ಇರುತ್ತದೆ, ಅಷ್ಟೇ ಅಲ್ಲದೆ ಒಂದು ವೇಳೆ ಈಗಾಗಲೇ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅಂತಹ ಜನರಲ್ಲಿಈ ಸಮಸ್ಯೆ ಬಹಳ ಬೇಗನೇ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ

  • ಆರೋಗ್ಯಕರ ಕೊಬ್ಬಿನ ಅಂಶಗಳನ್ನು ಒಳಗೊಂಡಿರುವ ವಾಲ್ನಟ್ ಬೀಜಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆನೋಡಿಕೊಳ್ಳುತ್ತದೆ.
  • ಅಷ್ಟೇ ಅಲ್ಲದೆ, ಈ ಒಣಫಲದಲ್ಲಿ ಆಲ್ಫಾ ಲಿನೊಲಿಕ್ ಆಮ್ಲಗಳು ಹೇರಳವಾಗಿ ಕಂಡು ಬರುವುದ ರಿಂದ ಹೃದಯದ ಅಪಧಮನಿಗಳಲ್ಲಿರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ. ಇದರಿಂದ ಹೃದಯದ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೆರವಾಗುತ್ತದೆ.

ಸಕ್ಕರೆಕಾಯಿಲೆ ಇದ್ದವರು

5 Surprising Facts About Diabetes | Northwestern Medicine

  • ಸಕ್ಕರೆಕಾಯಿಲೆ ಇದ್ದವರ ಆರೋಗ್ಯದ ಪರಿಸ್ಥಿತಿ ಹೇಗಿರುತ್ತದೆ ಎಂದು ನಮಗೆಲ್ಲಾ ಗೊತ್ತೇ ಇದೆ. ತಾವು ದಿನನಿತ್ಯ ಸೇವಿಸುವ ಆಹಾರದ ಮೇಲೆ ಅವರ ಆರೋಗ್ಯ ನಿಂತಿರುತ್ತದೆ. ಹೀಗಾಗಿ ಅವರು ಆದಷ್ಟು ಪೌಷ್ಟಿಕ ಭರಿತ ಹಾಗೂ ಸಕ್ಕರೆರಹಿತ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ.
  • ಯಾವುದೇ ಕಾರಣಕ್ಕೂ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆ ಆಗದಂತೆ ನೋಡಿಕೊಳ್ಳ ಬೇಕಾ ಗುತ್ತದೆ. ಹೀಗಾಗಿ ಈ ಕಾಯಿಲೆ ಇದ್ದವರು, ಪ್ರತಿದಿನ ಒಂದೆರಡು ವಾಲ್ನಟ್ ಗಳನ್ನು ಸೇವನೆ ಮಾಡುವುದರಿಂದ ಮಧುಮೇಹ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

Eat Walnuts In Morning To Get Maximum Health Benefits.