ಬಿಪಿ ಸಮಸ್ಯೆ-ಹಾರ್ಟ್‌ಗೆ ಪ್ರಾಬ್ಲಮ್ ಬರಬಾರದೆಂದರೆ ಬೀಟ್ರೂಟ್ ಜ್ಯೂಸ್ ಕುಡಿಯಿರಿ!

16-01-23 09:43 pm       Source: Vijayakarnataka   ಡಾಕ್ಟರ್ಸ್ ನೋಟ್

ಮಣ್ಣಿನಡಿಯಲ್ಲಿ ಸಿಗುವಂತಹ ತರಕಾರಿಗಳಲ್ಲಿ ಬೇರೆ ತರಕಾರಿಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಬೀಟ್ರೂಟ್

ನೈಸರ್ಗಿಕವಾಗಿ ಸಿಗುವ ಎಲ್ಲಾ ಬಗೆಯ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಏನು ಹೇಳುವುದು ನಮ್ಮಲ್ಲಿ ಹೆಚ್ಚಿನವರಿಗೆ ತರಕಾ ರಿಯ ಬಗ್ಗೆ ಒಂದು ರೀತಿಯಲ್ಲಿ ಅಸಡ್ಡೆ ಭಾವನೆ! ಮನೆಯಲ್ಲಿ ತರಕಾರಿ ಸಾಂಬಾರ್ ಮಾಡಿದರೆ, ಮುಖ ಗಂಟು ಹಾಕಿಕೊಂಡು ಬಿಡುತ್ತಾರೆ.

 

ಆದರೆ ನಿಮಗೆ ಗೊತ್ತಿರಲಿ, ತರಕಾರಿಗಳಲ್ಲಿ ಸಿಗುವಷ್ಟು ಪೌಷ್ಟಿಕ ಸತ್ವಗಳು, ಬೇರೆ ಯಾವುದೇ ಆಹಾರಪದಾರ್ಥಗಳಲ್ಲಿ ಕೂಡ ಸಿಗುವುದಿಲ್ಲ. ಅದರಲ್ಲೂ ಕೆಲವೊಂದು ತರಕಾರಿಗಳಂತೂ, ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳನ್ನು ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಕೆಂಪು ಬಣ್ಣ ಬೀಟ್ರೂಟ್!

ಬೀಟ್‌ರೂಟ್ ಬಗ್ಗೆ ಹೇಳುವುದಾದರೆ

Beetroot juice may help lower blood pressure, study says | Fox News

ಬೀಟ್ರೂಟ್ ಒಂದು ಅದ್ಭುತವಾದ ತರಕಾರಿ ಎಂದರೂ ತಪ್ಪಾಗಲಾರದು! ಯಾಕೆಂದರೆ ಮಣ್ಣಿನಡಿಯಲ್ಲಿ ಸಿಗುವಂತಹ ಈ ತರಕಾರಿ, ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಜೊತೆಗೆ, ಹಲವಾರು ವಿಧದ ವಿಟಮಿನ್ಸ್ ಗಳು, ನಾರಿನಾಂಶಗಳು, ಖನಿಜಾಂಶಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ ಅಂಶಗಳನ್ನು ಒಳಗೊಂಡಿರುವುದರಿಂದ, ಈ ತರಕಾರಿಯನ್ನು ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಕೊಂಡರೆ, ಆರೋಗ್ಯಕ್ಕೆ ಸಾಕಷ್ಟು ಲಾಭಗಳು ಸಿಗುತ್ತದೆ.

ಹೃದಯದ ಆರೋಗ್ಯಕ್ಕೆ ಬೀಟ್‌ರೂಟ್

  • ಈ ತರಕಾರಿಯ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಾಲ್ಕೈದು ತರಕಾರಿಗಳಲ್ಲಿ ಸಿಗುವ ಆರೋಗ್ಯದ ಲಾಭಗಳು ಈ ಒಂದೇ ತರಕಾರಿಯಲ್ಲಿ ಸಿಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಹೀಗಿರಬೇಕಾದರೆ, ಇಂತಹ ಒಂದು ಅದ್ಭುತ ತರಕಾರಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದು ಜಾಣತನದ ಕ್ರಮ ಅಲ್ಲವೇ?
  • ಪ್ರಮುಖವಾಗಿ ಈ ತರಕಾರಿಯಲ್ಲಿ ನೈಟ್ರೇಟ್ ಅಂಶ ಹೇರಳವಾಗಿ ಕಂಡುಬರುವುದರಿಂದ ರಕ್ತನಾಳ ಗಳಿಗೆ ಅನುಕೂಲ ಮಾಡಿಕೊಡುತ್ತವೆ. ಅಂದರೆ ಬೀಟ್ ರೂಟ್ ನಲ್ಲಿ ಸಿಗುವ ನೈಟ್ರೇಟ್ ಅಂಶಗಳು ರಕ್ತನಾಳಗಳನ್ನು ಹಿಗ್ಗಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಬೇಗನೇ ನಿವಾರಣೆಯಾಗುತ್ತದೆ.

ಬೀಟ್‌ರೂಟ್‌ನಲ್ಲಿ ಸಿಗುವ ನೈಟ್ರೇಟ್ ಅಂಶ

The Beet Goes On: Health Benefits of Beetroot Juice

  • ಬೀಟ್ರೂಟ್ನಲ್ಲಿ ನೈಸರ್ಗಿಕ ಅಂಶವಾಗಿರುವ ನೈಟ್ರೇಟ್ ಅಂಶ ಹೇರಳವಾಗಿ ಸಿಗುವುದರಿಂದ, ಆರೋಗ್ಯದ ಮೇಲೆ ಒಂದು ರೀತಿಯಲ್ಲಿ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
  • ಬಹುಮುಖ್ಯವಾಗಿ ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದರಿಂದ ರಕ್ತ ಸಂಚಾರವನ್ನು ಸುಗಮಗೊಳಿಸಲು ನೆರವಾಗುತ್ತದೆ.

ಈ ತರಕಾರಿಯ ಜ್ಯೂಸ್ ಮಾಡಿ ಕೂಡ ಕುಡಿಯಬಹುದು!

Hypertension: How To Use Beetroot For Managing High Blood Pressure

  • ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ತರಕಾರಿಯ ಜ್ಯೂಸ್ ಅನ್ನು ಹದಿನೈದು ದಿನಗಳವರೆಗೆ ಕುಡಿ ಯುತ್ತಾ ಬಂದರೆ,  ಅಧಿಕ ರಕ್ತದೊತ್ತಡದ ಸಮಸ್ಯೆ ಬಹಳ ಬೇಗನೇನಿಯಂತ್ರಣಕ್ಕೆ ಬರುತ್ತದೆ
  • ಇದರ ಜೊತೆಗೆ, ಇದರಲ್ಲಿ ಕಬ್ಬಿಣಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ, ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡಿ, ಹೃದಯದ ಅಪಧಮನಿಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಸರಿಯಾಗಿ ರಕ್ತಪೂರೈಕೆ ಆಗುವಂತೆ ಮಾಡುತ್ತದೆ.

ಬೀಟ್ರೂಟ್ ಜ್ಯೂಸ್ ರೆಡಿ ಮಾಡುವುದು ಹೇಗೆ?

New study supports nitrate-rich beetroot juice's heart health benefits

  • ಮೊದಲಿಗೆ ಎರಡು ಮೀಡಿಯಂ ಗಾತ್ರದ ಬೀಟ್ರೋಟ್ ತೆಗೆದುಕೊಂಡು ನೀರಲ್ಲಿ ಚೆನ್ನಾಗಿ ಸ್ವಚ್ಛ ಮಾಡಿ, ಮೇಲ್ಭಾಗದ ಸಿಪ್ಪೆಗಳನ್ನು ತೆಗೆಯಿರಿ.
  • ಆ ಬಳಿಕ, ಸಣ್ಣಗೆ ಕತ್ತರಿಸಿಕೊಂಡು ಮಿಕ್ಸಿಯ ಜಾರ್ಗೆ ಹಾಕಿ, ಬಳಿಕ ಸ್ವಲ್ಪ ನೀರನ್ನು ಸೇರಿಸಿ, ಚೆನ್ನಾಗಿ ರುಬ್ಬಿಕೊಳ್ಳಿ.
  • ಬಳಿಕ ಇದನ್ನು ಸೋಸಿಕೊಂಡು, ಈ ಮಿಶ್ರಣಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ, ಕುಡಿಯಿರಿ.
  • ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ತಪ್ಪಿಯೂ ಈ ಜ್ಯೂಸ್ ಗೆ ಸಕ್ಕರೆ ಬೆರೆಸಬೇಡಿ ಅಥವಾ ಉಪ್ಪು ಜಾಸ್ತಿ ಹಾಕಬೇಡಿ. ನೈಸರ್ಗಿಕ ಸಿಹಿ ಅಂಶ ಇರುವ ಈ ತರಕಾರಿಯನ್ನು ಹಾಗೆ ಜ್ಯೂಸ್ ಮಾಡಿ ಕುಡಿದರೆ, ಆರೋಗ್ಯಕ್ಕೆ ಒಳ್ಳೆಯದು

Beet Juice Lowers Blood Pressure And Boost Heart Health.