ಈ ಕಪ್ಪು ಒಣದ್ರಾಕ್ಷಿಗಳು ನೋಡಲು ಕಪ್ಪಗೆ ಇದ್ದರೂ, ಸಖತ್ ಆರೋಗ್ಯಕಾರಿ!

17-01-23 07:55 pm       Source: Vijayakarnataka   ಡಾಕ್ಟರ್ಸ್ ನೋಟ್

ಹಬ್ಬದ ಸಮಯದಲ್ಲಿ ಇಲ್ಲಾಂದ್ರೆ ವಿಶೇಷ ಅಡುಗೆಗಳನ್ನು ಮಾಡುವ ಸಮಯದಲ್ಲಿ ಒಣದ್ರಾಕ್ಷಿ ಹಣ್ಣುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಉದಾಹರಣೆಗೆ ಪಾಯಸ ಲಾಡು ಮತ್ತು ಇನ್ನಿತರ ಸಿಹಿ ಖಾದ್ಯಗಳಲ್ಲಿ ಒಣದ್ರಾಕ್ಷಿಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಬಾರಿ ಕಪ್ಪು ಒಣದ್ರಾಕ್ಷಿ ಬಳಕೆ ಮಾಡಿ, ಆರೋಗ್ಯ ಪಡೆಯಿರಿ.

ಒಣ ಹಣ್ಣುಗಳ ಗುಂಪಿಗೆ ಸೇರ್ಪಡೆ ಆಗುವ ಒಣ ದ್ರಾಕ್ಷಿ ಹಣ್ಣುಗಳು, ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ, ಬಿಟ್ಟರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ವೈದ್ಯರು ಹೇಳುವ ಹಾಗೆ, ಮಿತವಾಗಿ ನಾವು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ ಹಣ್ಣುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಹಲವು ಬಗೆಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ.

ಉದಾಹರಣೆಗೆ ಮೂಳೆಗಳ ಆರೋಗ್ಯಕ್ಕೆ, ಮಲಬದ್ಧತೆ ಅಜೀರ್ಣ, ಅಧಿಕ ರಕ್ತದ ಒತ್ತಡ ಹೀಗೆ ಹಲವಾರು ಸಮಸ್ಯೆಗಳು ನಮ್ಮಿಂದ ದೂರವಾಗುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ ಇಂತಹ ಕಪ್ಪು ಒಣ ದ್ರಾಕ್ಷಿಗಳಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎನ್ನುವುದರ ಬಗ್ಗೆ ನೋಡೋಣ...

ರಕ್ತ ಶುದ್ಧೀಕರಣದಲ್ಲಿ

ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ | Consume this foods daily to purify blood naturally - Kannada BoldSky

 • ರಕ್ತ ನಮ್ಮ ದೇಹದ ಜೀವದ್ರವವಾಗಿದ್ದು, ಇದಕ್ಕೆ ಬೆಲೆಕಟ್ಟುವುದು ಆಗಲಿ ಅಥವಾ ಪರ್ಯಾಯ ಒದಗಿಸು ವುದಾಗಲಿ ಸಾಧ್ಯವಿಲ್ಲದ ಮಾತು. ಬಹುಮುಖ್ಯವಾಗಿ, ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಸಿಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ನಮ್ಮ ಎಲ್ಲಾ ಅಂಗಾಂಗಗಳಿಗೆ ತಲುಪಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕೆಲಸ, ನಮ್ಮ ದೇಹದ ರಕ್ತದ ಪಾಲು ಬಲು ದೊಡ್ಡದು. ಹೀಗಾಗಿ, ದೇಹದ ರಕ್ತವನ್ನು ಹೆಚ್ಚು ಶುದ್ಧವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡಬೇಕು.
 • ರಕ್ತವನ್ನು ಆದಷ್ಟು ಶುದ್ಧವಾಗಿ ಇಟ್ಟುಕೊಳ್ಳುವ ವಿಚಾರದಲ್ಲಿ ಹೇಳುವುದಾದರೆ, ಕಪ್ಪು ಬಣ್ಣದ ಒಣ ದ್ರಾಕ್ಷಿ ಹಣ್ಣುಗಳು ಸಹಾಯಕ್ಕೆ ಬರುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ಒಣ ಹಣ್ಣಿನಲ್ಲಿ ನೈಸರ್ಗಿಕವಾದ ಆಂಟಿ-ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ದೇಹದ ರಕ್ತ ಶುದ್ಧೀಕರಣದಲ್ಲಿ ಇವುಗಳ ಪಾತ್ರವನ್ನು ಮರೆಯುವ ಹಾಗಿಲ್ಲ.

ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆ ಇದ್ದವರಿಗೆ

 • ಹೆಚ್ಚಿನವರಿಗೆ ವಿಟಮಿನ್ಸ್ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ, ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರುತ್ತಿದೆ. ಉದಾಹರಣೆಗೆ ಸಣ್ಣ ವಯಸ್ಸಿ ನಲ್ಲಿ ಕೂದಲು ಬೆಳ್ಳಗಾಗುವುದು, ಕೂದಲುದುರುವ ಸಮಸ್ಯೆಗಳು ಇತ್ಯಾದಿ.
 • ಒಂದು ವೇಳೆ ನಿಮಗೂ ಕೂಡ ಇಂತಹ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಒಣ ದ್ರಾಕ್ಷಿ ಹಣ್ಣು ಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ, ಇಲ್ಲಾಂದ್ರೆ ಪ್ರತಿದಿನ ನೆನೆಸಿಟ್ಟ ಮೂರು -ನಾಲ್ಕು ಕಪ್ಪು ಬಣ್ಣದ ಒಣ ದ್ರಾಕ್ಷಿ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಈ ಸಮಸ್ಯೆ ಪರಿಹಾರವಾಗುತ್ತದೆ.

ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು

ಮಳೆಗಾಲದಲ್ಲಿ ಗಂಡಸರ ಜೊತೆ ಹೆಂಗಸರು ಕೂಡ ನುಗ್ಗೆಕಾಯಿ ತಿನ್ನಬೇಕಂತೆ! - ಭಂಡಾರಿವಾರ್ತೆ

 • ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಮೂಳೆಗಳಿಗೆ ಹಾಗೂ ಕೀಲುಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳು ಹೆಚ್ಚಿನ ವರಲ್ಲಿ ಶುರುವಾಗುತ್ತಿದೆ.
 • ಹೀಗಾಗಿ ಈ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬೇಕು ಹಾಗೂ ಮೂಳೆಗಳ ಆರೋಗ್ಯ ಕೂಡ ಚೆನ್ನಾಗಿ ಇರಬೇಕೆಂದ್ರೆ ನಮ್ಮ ಆಹಾರ ಪದ್ಧತಿಯಲ್ಲಿ ಕ್ಯಾಲ್ಸಿಯಂ ಭರಿತ ಆಹಾರಗಳ ಜೊತೆಗೆ ವಿಟಮಿನ್ ಡಿ, ವಿಟಮಿನ್ ಸಿ ಹಾಗೂ ಪ್ರೋಟೀನ್ ಅಂಶಗಳು ಹೆಚ್ಚಾಗಿರುವ ಸಿಗುವ ಆಹಾರಗಳನ್ನು ಸೇವನೆ ಮಾಡಬೇಕು.
 • ಇವೆಲ್ಲಾ ಅಂಶಗಳು ಕೂಡ ಈ ಕಪ್ಪು ಬಣ್ಣದ ಒಣದ್ರಾಕ್ಷಿಯಲ್ಲಿ ಸಿಗುವುದರಿಂದ  ಮೂಳೆಗಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.

ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರಿಗೆ

ಸುದ್ದಿ ವಿವರ | ಅಧಿಕ ರಕ್ತದೊತ್ತಡ ಇದ್ದವರಿಗೆ ಹೆಚ್ಚು ಕಾಡಲಿದೆ ಕೊರೊನಾ ಸೋಂಕು | Eedina | ಈದಿನ

 • ಮಿತವಾಗಿ ಅಂದರೆ ಮೂರು-ನಾಲ್ಕು ಕಪ್ಪು ಬಣ್ಣದ ಒಣ ದ್ರಾಕ್ಷಿಗಳನ್ನು ನೆನೆಸಿಟ್ಟು ಪ್ರತಿದಿನ ಸೇವನೆ ಮಾಡುವುದರಿಂದ, ಅಧಿಕ ರಕ್ತದ ಒತ್ತಡದ ಸಮಸ್ಯೆ ದೂರ ಆಗುತ್ತದೆ ಎಂದು ಹೇಳುತ್ತಾರೆ.
 • ಇದಕ್ಕೆ ಪ್ರಮುಖ ಕಾರಣ, ಈ ಒಣಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಕಾರಣ, ದೇಹದಲ್ಲಿ ಸೋಡಿಯಂ ಅಂಶವನ್ನು ನಿಯಂತ್ರಣ ಮಾಡಿ, ರಕ್ತದ ಒತ್ತಡದ ಕಾಯಿಲೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ಕೆಟ್ಟ ಕೊಲೆಸ್ಟಾಲ್ ಕಡಿಮೆ ಮಾಡುತ್ತದೆ

 • ಇಂದಿನ ಯುವ ಜನತೆಯರು, ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಜಂಕ್ ಫುಡ್‌ಗಳಂತಹ ಆಹಾರಗಳನ್ನೇ ಹೆಚ್ಚು ಸೇವಿಸುವುದರ ಜೊತೆಗೆ ಜಡ ಜೀವನಶೈಲಿ ಅನುಸರಿಸುವುದರಿಂದ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಿ ಬಿಡುತ್ತಿದೆ.
 • ಇದರಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಣ್ಣ ವಯಸ್ಸಿಗೆ ನಮ್ಮನ್ನು ಆವರಿಸಿಕೊಂಡು ಬಿಡು ವುದು ಮಾತ್ರವಲ್ಲದೆ, ದೀರ್ಘ ಕಾಲದ ಕಾಯಿಲೆಯಾದ ಅಧಿಕ ರಕ್ತದ ಒತ್ತಡ ಸಮಸ್ಯೆ ಕೂಡ ಕಂಡು ಬರಲು ಶುರುವಾಗುತ್ತದೆ.
 • ಹೀಗಾಗಿ ಕೊಲೆಸ್ಟಾಲ್ ಅಂಶಗಳನ್ನು ತಗ್ಗಿಸುವಂತಹ ಆಹಾರಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಕಪ್ಪು ಒಣ ದ್ರಾಕ್ಷಿ. ಯಾಕೆಂದ್ರೆ, ದೇಹದ ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವಂತಹ ಪಾಲಿಫಿನಾಲ್ ಅಂಶಗಳು ಇದರಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ.

Amazing Health Benefits Of Black Raisins That You Must Know.