ಒಣ ಅಂಜೂರವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿನ್ನಿ, ಆರೋಗ್ಯವಾಗಿರಿ..

18-01-23 08:27 pm       Source: Vijayakarnataka   ಡಾಕ್ಟರ್ಸ್ ನೋಟ್

ರಾತ್ರಿ ಮಲಗುವ ಮುನ್ನ ಅರ್ಧ ಲೋಟ ನೀರಿನಲ್ಲಿ ಎರಡು ಒಣ ಅಂಜೂರಗಳನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಬಿಪಿ-ಶುಗರ್, ಹೃದಯದ ಸಮಸ್ಯೆಗಳು ಎಲ್ಲಾ ದೂರವಾಗುತ್ತದೆ.

ರಾತ್ರಿ ಮಲಗುವ ಮುನ್ನ ಅರ್ಧ ಲೋಟ ನೀರಿನಲ್ಲಿ ಎರಡು ಒಣ ಅಂಜೂರಗಳನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಬಿಪಿ-ಶುಗರ್, ಹೃದಯದ ಸಮಸ್ಯೆಗಳು ಎಲ್ಲಾ ದೂರವಾಗುತ್ತದೆ. 

ಉದಾಹರಣೆಗೆ ಹೇಳುವುದಾದರೆ ದೇಹದ ತೂಕ ಇಳಿಸಲು, ದೀರ್ಘಕಾಲದ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಗಳಿಗೆ ಇದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಬನ್ನಿ ಇಂದಿನ ಲೇಖನದಲ್ಲಿ ಒಣ ಅಂಜೂರದಲ್ಲಿ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನ ಗಳನ್ನು ನಿರೀಕ್ಷಿಸಬಹುದು ಎನ್ನುವುದರ ಬಗ್ಗೆ ನೋಡೋಣ...

ಮಲಬದ್ಧತೆ ಸಮಸ್ಯೆ ಇದ್ದವರು

Remedies for constipation, ಮಲಬದ್ಧತೆ ಸಮಸ್ಯೆ ನಿವಾರಣೆಗೆ ಅತ್ಯದ್ಭುತ ಮನೆ ಮದ್ದುಗಳು  - natural kitchen ingredients for constipation that are easy and effective  - Vijaya Karnataka

  • ಮಲಬದ್ಧತೆ ಸಮಸ್ಯೆ ಇರುವವರು, ಪ್ರತಿದಿನ ರಾತ್ರಿ ಮಲಗುವ ಮುನ್ನ ಅರ್ಧ ಲೋಟ ನೀರಿನಲ್ಲಿ ಎರಡು-ಮೂರು ಒಣ ಅಂಜೂರಗಳನ್ನು ನೆನೆಸಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಅಂಜೂರಗಳನ್ನು ತಿಂದರೆ, ಮಲಬದ್ಧತೆ ಸಮಸ್ಯೆ ಕ್ರಮೇಣವಾಗಿ ದೂರವಾಗುತ್ತದೆ.
  • ಇದಕ್ಕೆ ಬಹು ಮುಖ್ಯಕಾರಣ, ಒಣ ಅಂಜೂರ ಹಣ್ಣಿನಲ್ಲಿ ಕರಗುವ ಮತ್ತು ಕರಗದಿರುವ ನಾರಿನ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಹೀಗಾಗಿ ಪ್ರತಿದಿನ ಒಂದೆರಡು ಈ ಒಣ ಹಣ್ಣುಗಳನ್ನು ಸೇವನೆ ಮಾಡುತ್ತಾ ಬಂದರೆ, ಮಲಬದ್ಧತೆ ಸಮಸ್ಯೆ ಬಲು ಬೇಗನೇ ನಿವಾರಣೆ ಆಗುತ್ತದೆ.

ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ

ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ

  • ಅನಾರೋಗ್ಯಕಾರಿ ಆಹಾರ ಸೇವನೆ ಮಾಡುವುದರಿಂದ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಅಂದರೆ ಎಲ್ ಡಿ ಎಲ್ ನಮ್ಮ ರಕ್ತದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಇದೇ ಕಾರಣ ದಿಂದಾಗಿ ಅಧಿಕ ರಕ್ತ ದೊತ್ತಡದ ಸಮಸ್ಯೆ ಹೆಚ್ಚಾಗಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಒಮ್ಮೆಲೆ ಕಾಡಲು ಪ್ರಾರಂಭ ವಾಗುತ್ತದೆ.
  • ಆದರೆ ಪ್ರತಿದಿನ ಒಂದೆರಡು ನೆನೆಸಿಟ್ಟ ಅಂಜೂರ ಹಣ್ಣು ಸೇವನೆ ಮಾಡುವುದರಿಂದ ನಾವು ಇಂತಹ ಸಮಸ್ಯೆಯಿಂದ ಪಾರಾಗ ಬಹುದು. ಇದಕ್ಕೆ ಮುಖ್ಯಕಾರಣ ಈ ಒಣಹಣ್ಣಿನಲ್ಲಿ ಅಪಾರ ಪ್ರಮಾಣದ ಪೆಕ್ಟಿನ್ ಅಂಶ ಕಂಡುಬರುವುದರಿಂದ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ತಡೆಯುತ್ತದೆ.

ಹೃದಯದ ಸಮಸ್ಯೆಗೆ ಒಳ್ಳೆಯದು

Structure and Function of the Heart

  • ಪ್ರತಿದಿನ ನೆನೆಸಿಟ್ಟ ಅಂಜೂರ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ, ಹೃದಯದ ಸಮಸ್ಯೆಗೆ ಕಾರಣ ವಾಗುವ ಟ್ರೈಗ್ಲಿಸರೈಡುಗಳ ಮಟ್ಟವು ಕಡಿಮೆಯಾ ಗುತ್ತದೆ. ಈ ಮಟ್ಟ ಹೆಚ್ಚಾದಷ್ಟೂ ಹೃದಯ ಸಂಬಂಧಿ ತೊಂದರೆಗಳೂ ಹೆಚ್ಚುತ್ತವೆ ಎಂದು ತಜ್ಞರು ಹೇಳುತ್ತಾರೆ.
  • ಇನ್ನೂ ಮುಖ್ಯವಾಗಿ ಈ ಒಣಹಣ್ಣುಗಳಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಅಂಶಗಳ ಜೊತೆಗೆ ಹೃದಯದ ಆರೋಗ್ಯಕ್ಕೆ ಸಮಸ್ಯೆ ಬರದೇ ಇರುವ ಹಾಗೆ ಫಿನಾಲ್ ಸಂಯುಕ್ತಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

ಕಬ್ಬಿಣಾಂಶ

ಕಬ್ಬಿಣಾಂಶ

ಒಣ ಅಂಜೂರ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಕಂಡುಬರುವುದರಿಂದ ರಕ್ತಹೀನತೆ ಸಮಸ್ಯೆಯಿಂದ ದೂರವಿರಬಹುದು. ಹೀಗಾಗಿ ಪ್ರತಿದಿನ ಒಂದೆರಡು ಒಣ ಅಂಜೂರ ಹಣ್ಣನ್ನು ಸೇವನೆ ಮಾಡುವುದರಿಂದ ರಕ್ತಹೀನತೆ ಸಮಸ್ಯೆಯಿಂದ ಪಾರಾಗಬಹುದು

ಸಕ್ಕರೆಕಾಯಿಲೆ ಇರುವವರಿಗೆ

Types of Diabetes: Causes, Identification, and More

  • ಮಧುಮೇಹ ರೋಗಿಗಳಿಗೆ ಅದರಲ್ಲೂ ವಿಶೇಷವಾಗಿ ಟೈಪ್ 2 ಮಧುಮೇಹಿಗಳು, ಪ್ರತಿದಿನ ಒಂದೆರಡು ನೆನೆಸಿಟ್ಟ ಅಂಜೂರ ವನ್ನು ಸೇವನೆ ಮಾಡುತ್ತಾ ಬಂದರೆ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
  • ಈ ಬಗ್ಗೆ ತಜ್ಞರು ಹೇಳುವುದು ಏನೆಂದರೆ, ಈ ಒಣ ಹಣ್ಣಿನಲ್ಲಿ ಕ್ಲೋರೋಜೀನಿಕ್ ಎನ್ನುವ ಸಂಯುಕ್ತ ಆಮ್ಲವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

Know The Surprising Health Benefits Of Eating Overnight Soaked Dry Figs Daily.