ದಿನಾ ಸಕ್ಕರೆ ಹಾಕದ ಕಾಫಿ ಕುಡಿದರೆ, ಆರೋಗ್ಯಕ್ಕೆ ಲಾಭದ ಮೇಲೆ ಲಾಭವಿದೆ!

19-01-23 09:38 pm       Source: Vijayakarnataka   ಡಾಕ್ಟರ್ಸ್ ನೋಟ್

ಪ್ರತಿದಿನ ಸಕ್ಕರೆ ಬೆರೆಸದ ಕಾಫಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ, ಕೆಲವರಿಗೆ ಖಾಲಿ ಹೊಟ್ಟೆಗೆ, ಬಿಸಿಬಿಸಿ ಒಂದು ಲೋಟ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಅದರಲ್ಲೂ ಕೆಲವರಿಗೆ ಅಂತೂ ಒಂದು ದಿನ ಕಾಫಿ ಕುಡಿಯದೆ ಹೋದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಇನ್ನು ಕೆಲವರಿಗೆಯಂತೂ ಬೆಳಗಿನ ಸಮಯದಲ್ಲಿ ಇಲ್ಲಾಂದ್ರೆ ಮಧ್ಯಾಹ್ನದ ಸಮಯದಲ್ಲಿ ಬಿಸಿಬಿಪಿ ಕಾಫಿ ಕುಡಿಯದಿದ್ದರೆ ತಲೆ ನೋವು ಕಾಡಲು ಶುರುವಾಗುತ್ತದೆ.

ಹಾಗಾದ್ರೆ ಈ ಒಂದು ಕಪ್ ಕಾಫಿಯಲ್ಲಿ ಅಂತಹ ಶಕ್ತಿ ಏನಿದೆ ಎಂದು ನೋಡುವುದಾದರೆ, ಕಾಫಿಯಲ್ಲಿ ಕೆಫಿನ್ ಅಂಶ ಯಥೇಚ್ಛ ವಾಗಿ ಕಂಡುಬರುತ್ತದೆ. ಇವು ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು, ನಮ್ಮ ಹತ್ತಿರನೂ ಬರದೇ ಇರುವ ಹಾಗೆ ನೋಡಿಕೊಳ್ಳು ತ್ತದೆ. ಆದರೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಷ್ಟೇ...ಬನ್ನಿ ಇಂದಿನ ಲೇಖನದಲ್ಲಿ ಕಾಫಿ ಕುಡಿಯುವುದರ ಕೆಲವೊಂದು ಆರೋಗ್ಯ ಪ್ರಯೋಜನಗಳು ಏನೆಲ್ಲಾ ಎನ್ನುವುದರ ಬಗ್ಗೆ ನೋಡೋಣ...

ಲಿವರ್ ಕ್ಯಾನ್ಸರ್ ಭಯ ಇರುವುದಿಲ್ಲ!

6 tips to keep your liver healthy | The Times of India

 • ಸಂಶೋಧನೆ ಹೇಳುವಂತೆ, ದಿನಾ ಒಂದು ಅಥವಾ ಎರಡು ಕಪ್ ಕಾಫಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಶೇಕಡ 40% ಲಿವರ್ ಕ್ಯಾನ್ಸರ್ ಸಮಸ್ಯೆ ಕಾಡುವ ಸಾಧ್ಯತೆ ಕಡಿಮೆ ಇರುತ್ತದೆಯಂತೆ!
 • ಹೀಗಾಗಿ ದೇಹದ ಪ್ರಮುಖ ಅಂಗವಾದ ಲಿವರ್ ಆರೋಗ್ಯವಾಗಿ ಇರಬೇಕೆಂದರೆ, ದಿನಕ್ಕೆ ಕನಿಷ್ಟ ಪಕ್ಷ, ಒಂದು ಬಾರಿಯಾದರೂ ಕಾಫಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಅಷ್ಟೇ ಅಲ್ಲದೆ ಆರೋಗ್ಯಕ ರವಾದ ಆಹಾರ ಪದ್ಧತಿಯ ಜೊತೆಗೆ ಸರಿಯಾದ ಜೀವನ ಶೈಲಿಯನ್ನು ಅನುಸರಿಸಿ.

ತೂಕ ಇಳಿಸಲು ನೆರವಾಗುವುದು

Is It Bad to Lose Weight Too Quickly?

 • ಒಮ್ಮೆ ಹೆಚ್ಚಿಸಿಕೊಂಡ ತೂಕವನ್ನು, ಮತ್ತೆ ಇಳಿಸಿಕೊಳ್ಳು ವುದು ಅಷ್ಟು ಸುಲಭದ ಮಾತಲ್ಲ! ಇದಕ್ಕೆ ತುಂಬಾ ಶ್ರಮ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಅವರಿಗೆ ಖಂಡಿತವಾಗಿಯೂ ತೂಕ ಇಳಿಸಲು ಆಗದು.
 • ಮೊತ್ತ ಮೊದಲು, ತೂಕ ಇಳಿಸಿಕೊಳ್ಳಲು ಬಯಸುವವರು, ಕಟ್ಟುನಿಟ್ಟಿನ ಆರೋಗ್ಯಕಾರಿ ಆಹಾರ ಕ್ರಮ, ವ್ಯಾಯಾಮವನ್ನು ಸರಿಯಾಗಿ ಅನುಸರಿಸಬೇಕು. ಇದರ ಜೊತೆಗೆ ಪ್ರತಿದಿನ ಒಂದು ಕಪ್ ಸಕ್ಕರೆ ಬೆರೆಸದ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳ ಬೇಕು. ಪ್ರಮುಖವಾಗಿ ಕಾಫಿಯಲ್ಲಿ ತುಂಬಾ ಕಡಿಮೆ ಪ್ರಮಾಣ ದಲ್ಲಿ ಕ್ಯಾಲೋರಿ ಅಂಶ ಇರುವುದರಿಂದ, ದೇಹದ ತೂಕ ಇಳಿಸಲು ಇದು ಸಹಕಾರಿ.

ಟೈಪ್-2 ಮಧುಮೇಹ

5 Surprising Facts About Diabetes | Northwestern Medicine

 • ಮಧುಮೇಹ ರೋಗಿಗಳು, ತಮ್ಮ ಆಹಾರ ಪದ್ಧತಿಯಲ್ಲಿ ಎಷ್ಟು ಜಾಗರೂಕತೆ ವಹಿಸುತ್ತಾರೆಯೋ ಅಷ್ಟು ಒಳ್ಳೆಯದು. ಹೀಗಾಗಿ ಆದಷ್ಟು ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಪಾನೀಯಗಳನ್ನು ಸೇವನೆ ಮಾಡಬೇಕು.
 • ಇನ್ನು ಮುಂಜಾನೆ ಟೀ-ಕಾಫಿಯ ಕುಡಿಯುವ ವಿಚಾರದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಕೂಡ ಸಕ್ಕರೆ ಬೆರೆಸದ ಟೀ ಅಥವಾ ಕಾಫಿ ಕುಡಿದರೆ ಒಳ್ಳೆಯದು.
 • ಇನ್ನು ಒಂದು ಅಧ್ಯಾಯನದ ವರದಿಯ ಪ್ರಕಾರ, ಕಾಫಿಯಲ್ಲಿ ಸಿಗುವ ಕೆಫಿನ್ ಅಂಶ ತನ್ನ ಆಂಟಿ ಆಕ್ಸಿಡೆಂಟ್ ಹಾಗೂ ಮೆಗ್ನೀ ಷಿಯಂ ಅಂಶದ ಪ್ರಭಾವದಿಂದ ಸಕ್ಕರೆ ಕಾಯಿಲೆಯ ಸಾಧ್ಯತೆ ಯನ್ನು ಕಡಿಮೆ ಮಾಡುತ್ತದೆಯಂತೆ. ಅದರಲ್ಲೂ ಟೈಪ್-2 ಮಧುಮೇಹ ರೋಗಿಗಳಿಗೆ, ಇದರಿಂದ ಬಹಳ ಉಪಯೋಗ ವಿದೆಯಂತೆ!
 • ಇನ್ನೂ ಸಂತಸದ ವಿಚಾರ ಏನೆಂದರೆ, ಪ್ರತಿದಿನ ಮಿತವಾಗಿ ಕಾಫಿ ಕುಡಿಯುವ ಅಭ್ಯಾಸ ಇದ್ದವರಿಗೆ ಮಧುಮೇಹ ಕಂಡುಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆಯಂತೆ.

ಅಸ್ತಮಾ ಸಮಸ್ಯೆಯನ್ನು ದೂರ ಮಾಡುತ್ತದೆ!

ಅಸ್ತಮಾ ಸಮಸ್ಯೆಯನ್ನು ದೂರ ಮಾಡುತ್ತದೆ!

 • ಅಸ್ತಮಾ ಸಮಸ್ಯೆಗೆ ತುರ್ತು ಮನೆ ಮದ್ದು ಯಾವುದಾದರೂ ಇದೆ ಎಂದರೆ ಅದು ಬ್ಲ್ಯಾಕ್ ಕಾಫಿ ಎಂದು ಹೇಳಬಹುದು.
 • ಒಂದು ವೇಳೆ, ನಿಮ್ಮ ಮನೆಯಲ್ಲಿ ಆಸ್ತಮಾ ರೋಗಿಗಳು ಇದ್ದು, ಅವರಿಗೆ ಉಸಿರಾಡಲು ಕಷ್ಟವಾಗುವ ಸಂದರ್ಭ ಎದುರಾಗುತ್ತಿದ್ದರೆ, ಕೂಡಲೇ ಅವರಿಗೆ ಹಾಲು ಸಕ್ಕರೆ ಬೆರೆಸದೆ ಕಾಫಿ ಅಂದರೆ ಬ್ಲ್ಯಾಕ್ ಕಾಫಿ ಕುಡಿಯಲು ನೀಡಿದರೆ, ಕೂಡಲೇ ಈ ಕಾಯಿಲೆಯನ್ನು ನಿಯಂತ್ರಿಸಬಹುದು.
 • ಕುಡಿಯಲು ಸ್ವಲ್ಪ ಕಹಿ ಎನಿಸಿದರೂ ಕೂಡ ಅಸ್ತಮಾ ಸಮಸ್ಯೆ ಇದ್ದವರಿಗೆ ಹಾಗೂ ಇದರ ರೋಗಲಕ್ಷಣವಾದ ಉಸಿರಾಟದ ತೊಂದರೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ

Structure and Function of the Heart

 • ಹೃದಯದ ಆರೋಗ್ಯವನ್ನು ಕಾಪಾಡುವುದಕ್ಕಾಗಿ, ದಿನಕ್ಕೆ ಒಂದು ಬಾರಿ ಕಾಫಿಯನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

Know The Health Benefits Of Drinking One Cup Of Coffee Without Sugar.