ಮಧುಮೇಹ ಇದ್ದವರು ಕಲ್ಲಂಗಡಿ ಹಣ್ಣು ತಿಂದರೆ, ಆರೋಗ್ಯಕ್ಕೆ ಸಮಸ್ಯೆ ಆಗುತ್ತಾ?

20-01-23 10:16 pm       Source: Vijayakarnataka   ಡಾಕ್ಟರ್ಸ್ ನೋಟ್

ಆರೋಗ್ಯ ಕಾಪಾಡಲು ಕಲ್ಲಂಗಡಿ ಹಣ್ಣಿನ ಸೇವನೆಯು ಲಾಭಕಾರಿ ಆಗಿರುವುದು. ಆದರೆ ಈಗಾಲೇ ಮಧುಮೇಹ ಇದ್ದವರು, ಆದಷ್ಟು ಈ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವನೆ ಮಾಡಬೇಕು.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬರುವ ಕಲ್ಲಂಗಡಿ ಹಣ್ಣು, ಈ ಬಾರಿ ಬಹಳ ಬೇಗನೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತನ್ನಲ್ಲಿ ಅಧಿಕ ಪ್ರಮಾಣ ದಲ್ಲಿ ನೀರಿನಾಂಶ ಹೊಂದಿರುವ ಈ ಕಲ್ಲಂಗಡಿ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ಮುಖ್ಯವಾಗಿ ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಹೊಂದಿರುವ ಈ ಹಣ್ಣಿ ನಲ್ಲಿ ವಿವಿಧ ಬಗೆಯ ವಿಟಮಿನ್ಸ್, ಪೊಟ್ಯಾಷಿಯಂ, ಮೆಗ್ನೀಷಿಯಂ ಹಾಗೂ ಖನಿಜಾಂಶಗಳು, ಯಥೇಚ್ಛವಾಗಿ ಕಂಡು ಬರುತ್ತದೆ. ಇವೆಲ್ಲವೂ ಸಹ ದೇಹಕ್ಕೆ ಅಗತ್ಯವಾಗಿ ಬೇಕಾದ ಅಂಶಗಳಾಗಿ ರುತ್ತವೆ. ಹಾಗಾದ್ರೆ ಇಷ್ಟೆಲ್ಲಾ ಪ್ರಯೋಜನ ಗಳನ್ನು ಒಳಗೊಂಡಿರುವ ಈ ಹಣ್ಣನ್ನು ಮಧುಮೇಹ ಇದ್ದವರು ಸೇವನೆ ಮಾಡಬಹುದಾ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ..

ತಜ್ಞರಾದ ಡಾ.ವಿಕ್ರಂ ಅವರು ಹೇಳುವ ಪ್ರಕಾರ

Worried about diabetes? Here are three ways to control the disease | Health  - Hindustan Times

  • ಮಧುಮೇಹ ತಜ್ಞರಾದ ಡಾ.ವಿಕ್ರಂ ಅವರು ಹೇಳುವ ಪ್ರಕಾರ, ಮಧು ಮೇಹಿಗಳು, ಮಣ್ಣಿನಲ್ಲಿ ಬೆಳೆಯುವ ತರಕಾರಿಗಳನ್ನು ಹೊರತುಪಡಿಸಿ, (ಸೇವನೆ ಮಾಡಬಹುದು ಆದರೆ ಮಿತ ಪ್ರಮಾಣ ದಲ್ಲಿ) ಎಲ್ಲಾ ರೀತಿಯ ನೈಸರ್ಗಿಕವಾಗಿ ಸಿಗುವಂತಹ ತರಕಾರಿ ಗಳನ್ನು ಹಾಗೂ ಹಣ್ಣುಗಳನ್ನು ಸೇವನೆ ಮಾಡಬಹುದು.
  • ಇನ್ನು ಹಣ್ಣುಗಳ ವಿಚಾರದಲ್ಲಿ ಹೇಳುವುದಾದರೆ, ನೈಸರ್ಗಿಕ ವಾಗಿ ಸಿಗುವಂತಹ ಹಣ್ಣುಗಳನ್ನು ಸ್ವೀಟ್ ತರಹ ಮಿತವಾಗಿ ಸೇವಿಸಿದರೆ ಇನ್ನು ಒಳ್ಳೆಯದು, ಎಂದು ಸಲಹೆ  ನೀಡುತ್ತಾರೆ. ಇನ್ನು ಕಲ್ಲಂಗಡಿ ಹಣ್ಣನ್ನು ಕೂಡ ಅಷ್ಟೇ ಮಿತಪ್ರಮಾಣದಲ್ಲಿ ಮಧುಮೇಹ ಇದ್ದವರು ಸೇವನೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ

ಮಿತವಾಗಿ ಕಲ್ಲಂಗಡಿ ಹಣ್ಣು ತಿನ್ನಬಹುದಂತೆ!

Is Watermelon Good for Diabetics? - Diabetes Self-Management

ಈಗ ಮಾರುಕಟ್ಟೆಯಲ್ಲಿ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣುಗಳು, ಉದಾಹರಣೆಗೆ ಪಪ್ಪಾಯ, ಕಲ್ಲಂಗಡಿ ಹಣ್ಣನ್ನು, ಮಧುಮೇಹ ಇದ್ದ ವರು, ಸಣ್ಣ ಪ್ರಮಾಣದಲ್ಲಿ ಅಂದರೆ 4-5 ಸಣ್ಣ-ಸಣ್ಣ ಕ್ಯೂಬ್ಸ್ನಷ್ಟು ಪ್ರಮಾಣ ದಲ್ಲಿ ಸೇವನೆ ಮಾಡಿದರೆ, ಒಳ್ಳೆಯದು.

ಲೈಕೋಪಿನ್ ಎನ್ನುವ ನೈಸರ್ಗಿಕ ಅಂಶ

ಲೈಕೋಪಿನ್ ಎನ್ನುವ ನೈಸರ್ಗಿಕ ಅಂಶ

  • ಇನ್ನು ಪ್ರಮುಖವಾಗಿ, ಈ ಹಣ್ಣಿನಲ್ಲಿ ಲೈಕೋಪಿನ್ ಎನ್ನುವ ನೈಸರ್ಗಿಕ ಅಂಶ, ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ರಕ್ತನಾಳಗಳು ಗಟ್ಟಿಯಾಗುವ ಸಾಧ್ಯತೆಯನ್ನು ತಡೆಯುತ್ತದೆ.
  • ಇದರಿಂದ ರಕ್ತದ ಪರಿಚಲನೆ ಸರಿಯಾಗಿ ನಡೆದು, ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಪ್ರಮುಖವಾಗಿ ಈ ಹಣ್ಣಿ ನಲ್ಲಿ ನೈಟ್ರಿಕ್ ಆಕ್ಸೈಡ್ ಅಂಶ, ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿರು ವುದರಿಂದ ರಕ್ತನಾಳಗಳನ್ನು ಹಿಗ್ಗಿಸಿ,  ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಮಧುಮೇಹ ಇದ್ದವರು

What To Not Eat When You Have Diabetes

ಇನ್ನೂ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಹಾಗೂ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಈ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವೆನೆ ಮಾಡಬಹುದು. ಆದರೆ ಮೊದಲೇ ಹೇಳಿದ ಹಾಗೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.

ಒಂದು ವೇಳೆ ರಕ್ತದಲ್ಲಿ ಸಕ್ಕರೆ ಮಟ್ಟ, ನಿಯಂತ್ರಣಕ್ಕೆ ಸಿಗದೇ ಹೋಗುತ್ತಿ ದ್ದರೆ, ಇಂತಹ ಹಣ್ಣುಗಳನ್ನು ಸೇವನೆ ಮಾಡುವ ಸಹವಾಸ ಮಾಡಬೇಡಿ. ಯಾವುದಕ್ಕೂ ಒಮ್ಮೆ ವೈದ್ಯರ ಸಲಹೆಗಳನ್ನು ಸರಿಯಾಗಿ ಪಡೆದು, ಆ ಬಳಿಕ ಈ ಹಣ್ಣನ್ನು ಸೇವನೆ ಮಾಡಬೇಡಿ.

ಕೊನೆಯ ಮಾತು

As A Diabetic Person Can I Eat Watermelon? - Viral Bake

  • ರಸ್ತೆಬದಿಯಲ್ಲಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಇಟ್ಟಿದ್ದರೆ, ಅದನ್ನು ತಿನ್ನಲು ಹೋಗಬೇಡಿ, ಆದಷ್ಟು ತಾಜಾ ಹಣ್ಣುಗಳನ್ನು ಮನೆಗೆ ತಂದು, ಆ ಬಳಿಕ ಕತ್ತರಿಸಿ ಮಿತವಾಗಿ ಸೇವನೆ ಮಾಡಬಹುದು.
  • ಇನ್ನು ಸಂಸ್ಕರಿಸಿದ ಅಥವಾ ಪ್ಯಾಕ್ ಮಾಡಿರುವ ಕಲ್ಲಂಗಡಿ ಜ್ಯೂಸ್ ಕುಡಿಯಲು ಹೋಗಬೇಡಿ. ನೈಸರ್ಗಿಕ ಸಿಹಿ ಇರುವ ಈ ಹಣ್ಣನ್ನು, ಅರ್ಧ ಸೇಬುಹಣ್ಣು ಎಷ್ಟಿರು ತ್ತದೆಯೋ, ಅಷ್ಟು ಪ್ರಮಾಣದಲ್ಲಿಈ ಹಣ್ಣನ್ನು ಸೇವನೆ ಮಾಡಿದರೆ ಒಳ್ಳೆಯದು.
  • ಕಲ್ಲಂಗಡಿ ಹಣ್ಣನ್ನು ಮಧುಮೇಹ ಇದ್ದವರು 4-5 ಸಣ್ಣ ಸಣ್ಣ ಕ್ಯೂಬ್ಸ್ ನಷ್ಟು ಪ್ರಮಾಣದಲ್ಲಿ ಸೇವಿಸಬಹುದು.

Can Diabetes Patient Eat Watermelon These Things You Must Know.