ಬಿಪಿ, ಹಾರ್ಟ್ ಸಮಸ್ಯೆ, ಇರುವ ರೋಗಿಗಳಿಗೆ ಆಲೂಗಡ್ಡೆ ಬಹಳ ಒಳ್ಳೆಯದಂತೆ!

23-01-23 09:46 pm       Source: Vijayakarnataka   ಡಾಕ್ಟರ್ಸ್ ನೋಟ್

ಆಲೂಗಡ್ಡೆಯನ್ನು ಮಿತವಾಗಿ ಸೇವನೆ ಮಾಡುವುದರಿಂದ, ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.

ನಮ್ಮ ದಿನ ಬಳಕೆಯ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಮನೆಯಲ್ಲಿ ಸಾಂಬರ್ ಮಾಡಲು ರೆಡಿ ಮಾಡುವಾಗ ಮೊದಲಿಗೆ ನೆನಪಿಗೆ ಬರುವುದೇ ಆಲೂಗಡ್ಡೆ! ಆದರೆ ಕೆಲವರಿಗೆ ಆಲೂಗಡ್ಡೆ ಎಂದರೆ, ಅಷ್ಟಕ್ಕೆ ಅಷ್ಟೇ!

ಯಾಕೆಂದ್ರೆ ಈ ತರಕಾರಿಯನ್ನು ವಾರದಲ್ಲಿ ಎರಡು ಮೂರು ಬಾರಿ ಸೇವನೆ ಮಾಡಿದರೆ,ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತದೆ, ಕೈಕಾಲು ಕಾಲುಗಳಲ್ಲಿ ಮರಗಟ್ಟುವ ಸಮಸ್ಯೆ ಕಂಡು ಬರುತ್ತದೆ, ಇನ್ನೂ ಕೆಲವರಿಗೆ ಶೀತದಂತಹ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು, ಈ ತರಕಾರಿಯನ್ನು ಸೇವನೆ ಮಾಡಲೇಬಾರದು ಎಂದೆಲ್ಲ ಅಂದು ಕೊಂಡಿರುತ್ತಾರೆ. ಆದರೆ ಅನೇಕ ಆಯಾಮಗಳಲ್ಲಿ ನೋಡು ವುದಾದರೆ, ಆಲೂಗಡ್ಡೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ...

ಹೃದಯದ ಆರೋಗ್ಯಕ್ಕೆ

How Blood Vessel Damage Links Heart Disease and Eye Disease

  • ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಣ್ಣವರಿಂದ ಹಿಡಿದು, ಹಿರಿಯ ರವರೆಗೂ ಕಂಡು ಬರುತ್ತಿರು ವುದು ನಮಗೆಲ್ಲಾ ಗೊತ್ತೇ ಇದೆ.
  • ಹೀಗಾಗಿ ಹೃದಯದ ಆರೋಗ್ಯ ಚೆನ್ನಾಗಿರ ಬೇಕೆಂದರೆ, ಸರಿಯಾದ ಆಹಾರಪದ್ಧತಿ ಹಾಗೂ ಆರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸ ಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ, ಆಲೂಗಡ್ಡೆ ತುಂಬಾನೇ ಸಹಾಯಕ್ಕೆ ಬರುತ್ತದೆ.

ನಾರಿನಾಂಶ ಮತ್ತು ಪೊಟ್ಯಾಷಿಯಂ

Why You May Be Able To Eat More Potatoes, Study Suggests

  • ಬಹು ಮುಖ್ಯವಾಗಿ ಆಲೂಗಡ್ಡೆಯಲ್ಲಿ ನಾರಿನಾಂಶ ಮತ್ತು ಪೊಟ್ಯಾಷಿಯಂ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಇದರ ಜೊತೆಗೆ ವಿಟಮಿನ್ಸ್ಗಳಾದ ವಿಟಮಿನ್ ಸಿ ಹಾಗೂ ವಿಟಮಿನ್ ಬಿ6 ಅಂಶಗಳು ಕೂಡ ಯಥೇಚ್ಛವಾಗಿ ಸಿಗುತ್ತದೆ. ಇವುಗಳು ನಮ್ಮ ಹೃದಯದ ಆರೋಗ್ಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ಬಿಪಿ ಸಮಸ್ಯೆ ಇದ್ದವರಿಗೆ..

High Blood Pressure: Is Your Heart at Risk? | Health Plus

ಮೊದಲೇ ಹೇಳಿದ ಹಾಗೆ, ಆಲೂಗಡ್ಡೆಯಲ್ಲಿ ಅಧಿಕ ಪ್ರಮಾಣದಲ್ಲಿ, ನಾರಿನಾಂಶ ಹಾಗೂ ಪೊಟ್ಯಾಷಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯು ವುದು, ಮಾತ್ರವಲ್ಲದೆ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಲು ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ

ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ

  • ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನ ಶೈಲಿಯಿಂದಾಗಿ, ಇಂದು ಹೆಚ್ಚಿನವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹಾಗೂ ಕೊಬ್ಬಿನಾಂಶದ ಸಮಸ್ಯೆಯನ್ನು ಎದುರಿ ಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿ ನಲ್ಲಿ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ.
  • ಹೀಗಾಗಿ ಈ ಸಮಸ್ಯೆಯಿಂದ ದೂರವಿರಬೇಕೆಂದ್ರೆ, ಮಿತಪ್ರಮಾಣ ದಲ್ಲಿ ಆಲೂಗಡ್ಡೆಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ, ದೂರವಿರಬಹುದಾಗಿದೆ.

ಕೊನೆಯ ಮಾತು

Potato nutrition facts & health benefits | Live Science

  • ಯಾರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಕೊಳ್ಳು ವವರು, ಇಲ್ಲಾಂದ್ರೆ ಈಗಾಗಲೇ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಗಳು ಇರುವವರು, ಯಾರಿಗೆ ದೇಹದಲ್ಲಿ ಈಗಾಗಲೇ ಅತಿಯಾದ ಕೊಲೆಸ್ಟ್ರಾಲ್ ಅಂಶ ಕಂಡುಬಂದಿದೆ ಅಂತಹವರು ಆಲೂಗಡ್ಡೆಯನ್ನು ವಾರದಲ್ಲಿ ಒಂದೆರಡು ಬಾರಿಯಾದರೂ ಕೂಡ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಬಹಳ ಒಳ್ಳೆಯದು.
  • ಮೊದಲೇ ಹೇಳಿದ, ಹಾಗೆ ಈ ತರಕಾರಿಯಲ್ಲಿ ಪೊಟ್ಯಾಶಿಯಮ್ ಅಂಶದ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದಲ್ಲಿ ಕಂಡುಬರುವ ಸೋಡಿಯಂ ಅಂಶದ ವಿರುದ್ಧವಾಗಿ ಕೆಲಸ ಮಾಡುತ್ತದೆ.
  • ಇದರಿಂದ, ಅಧಿಕ ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಬೆವರಿನ ಹಾಗೂ ಮೂತ್ರ ವಿಸರ್ಜ ನೆಯ ಮೂಲಕ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹಾಗೂ ವಿಷಕಾರಿ ಅಂಶಗಳು ಹೊರ ಹೋಗಲು ಅನು ಕೂಲವಾಗುತ್ತದೆ.

Can High Blood Pressure And Heart Patients Eat Potatoes These Things You Must Know