ಈ ಹಣ್ಣುಗಳ ಸಿಪ್ಪೆಗಳನ್ನು ಬಿಸಾಡಿದರೇ, ನಿಮ್ಮ ಆರೋಗ್ಯಕ್ಕೆ ಲಾಸ್ ನೋಡಿ!!

25-01-23 09:15 pm       Source: Vijayakarnataka   ಡಾಕ್ಟರ್ಸ್ ನೋಟ್

ಇನ್ನು ಮುಂದೆ ಸೇಬು, ಬಾಳೆಹಣ್ಣು ತಿಂದು, ಅದರ ಸಿಪ್ಪೆಯನ್ನು ಬಿಸಾಡಲು ಹೋಗಬೇಡಿ! ಯಾಕೆಂದರೆ ಇಂತಹ ಹಣ್ಣುಗಳ ಸಿಪ್ಪೆಯಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಹೇಳಿ ಕೇಳಿ, ಈಗಂತೂ ಹಣ್ಣುಗಳ ಸೀಸನ್ ಅಂತಲೇ ಹೇಳಬಹುದು, ವೆರೈಟಿ ಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಲು ಸಿಗುತ್ತದೆ. ಅದರಲ್ಲೂ ಕೆಲವೊಂದು ಹಣ್ಣುಗಳನ್ನು, ನೋಡಿದಾಗಲೇ ಬಾಯಲ್ಲಿ ನೀರೂರುತ್ತದೆ! ಹೀಗಾಗಿ ಬೆಲೆ ಹೆಚ್ಚಾದರೂ ಪರವಾಗಿಲ್ಲ, ಒಮ್ಮೆ ಈ ಹಣ್ಣುಗಳ ರುಚಿ ನೋಡೋಣ ಎಂದು ಖರೀದಿಸುತ್ತೇವೆ

ಹೀಗೆ ಮನೆಗೆ ತಂದ ಬಳಿಕ, ಹಣ್ಣುಗಳ ಮೇಲ್ಭಾಗದ ಸಿಪ್ಪೆಗಳನ್ನು ತೆಗೆದು, ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ, ಕಾರಣ ಇಷ್ಟೇ ಅದರಿಂದ ನಮಗೆ ಏನೂ ಪ್ರಯೋಜನವಿಲ್ಲ ಎಂಬ ಭಾವನೆ ನಮ್ಮಲ್ಲಿರುತ್ತದೆ. ಹಣ್ಣುಗಳಿಗೆ ಆದ್ಯತೆ ಕೊಟ್ಟಷ್ಟು ಅದರ ಮೇಲ್ಭಾ ಗದ ಸಿಪ್ಪೆಗಳ ಬಗ್ಗೆ, ನಾವೆಲ್ಲಾ ಅಷ್ಟು ತಲೆ ಕೆಡಿಸಿ ಕೊಳ್ಳುವುದಿಲ್ಲ.

ಆದರೆ ನಿಮಗೆ ಗೊತ್ತಿರಲಿ, ಹಣ್ಣಿಗಿಂತಲೂ ಅದರ ಮೇಲ್ಭಾಗದ ಸಿಪ್ಪೆ ತುಂಬಾನೇ ಪ್ರಯೋಜನ ಕಾರಿಯಾಗಿರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಕೆಲವೊಂದು ಹಣ್ಣುಗಳ ಸಿಪ್ಪೆಯಲ್ಲಿ ಏನೆಲ್ಲಾ ಪ್ರಯೋಜನಗಳು ಕಂಡು ಬರುತ್ತದೆ ಎನ್ನುವುದರ ಬಗ್ಗೆ ನೋಡೋಣ...

ಕಲ್ಲಂಗಡಿ ಹಣ್ಣಿನ ತಿರಳು

4 Watermelon Rind Benefits

  • ನಿಮಗೆ ಗೊತ್ತಿರಲಿ ಕಲ್ಲಂಗಡಿ ಹಣ್ಣಿನ ತಿರಳು ಹಾಗೂ ಬೀಜ ಗಳಂತೆ, ಇದರ ಮೇಲ್ಭಾಗದ ಸಿಪ್ಪೆ ಕೂಡ ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದೆ.
  • ಪ್ರಮುಖವಾಗಿ ಈ ಹಣ್ಣಿನ ಸಿಪ್ಪೆಯಲ್ಲಿ ನೀರಿನಾಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುವುದರಿಂದ, ಚರ್ಮಕ್ಕೆ ನೈಸರ್ಗಿಕ ಕ್ಲೆನ್ಸರ್ ಆಗಿ ಕೆಲಸ ಮಾಡುವುದು.​

ಬಳಸುವುದು ಹೇಗೆ?

7 Amazing Benefits of Watermelon Rind | Organic Facts

  • ​ಕಲ್ಲಂಗಡಿ ಹಣ್ಣಿನ ಸಿಪ್ಪೆಯಒಳಗಿನ ಬಿಳಿ ಭಾಗವನ್ನು, ತ್ವಚೆಗೆ ಇಲ್ಲಾಂದ್ರೆ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಸರಿಯಾಗಿ ಉಜ್ಜಿಕೊಳ್ಳಿ.
  • ಇದು ಸರಿಯಾಗಿ, ಒಣಗಿದ ಬಳಿಕ, ಸ್ವಚ್ಛವಾದ ನೀರಿನಿಂದ ಮುಖ ಹಾಗೂ ಕುತ್ತಿಯ ಭಾಗವನ್ನು ತೊಳೆದುಕೊಳ್ಳಿ. ಒಳ್ಳೆಯ ಫಲಿತಾಂ ಶಕ್ಕೆ ಪ್ರತಿನಿತ್ಯವೂ ಹೀಗೆ ಮಾಡಿದರೆ ಆಗ ಕಾಂತಿ ಹಾಗೂ ನಯ ವಾದ ತ್ವಚೆಯು ನಿಮ್ಮದಾಗುವುದು.

ಸೇಬು ಹಣ್ಣಿನ ಸಿಪ್ಪೆ

Fruit and veg: is it better to peel them?

  • ಸಾಮಾನ್ಯವಾಗಿ ಸೇಬು ಹಣ್ಣನ್ನು ತಿನ್ನುವ ಮುನ್ನ ನಾವೆಲ್ಲರೂ ಕೂಡ, ಈ ಹಣ್ಣನ್ನು ಚೆನ್ನಾಗಿ ತೊಳೆದ ಬಳಿಕ, ಅದರ ಸಿಪ್ಪೆಯನ್ನು ತೆಗೆದು ಒಳಗಿನ ಬಿಳಿ ಬಣ್ಣದ ತಿರುಳನ್ನು ಮಾತ್ರ ಸೇವನೆ ಮಾಡಲು ಮುಂದಾಗುತ್ತೇವೆ.
  • ಆದರೆ ನಿಜ ಹೇಳಬೇಕು, ಈ ಹಣ್ಣಿನ ಸಿಪ್ಪೆಯಲ್ಲೂ ಕೂಡ ಹಲವು ಬಗೆಯ ಪೌಷ್ಟಿಕ ಸತ್ವಗಳು ಸಿಗುವುದರಿಂದ,  ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ, ವಿವಿಧ ಬಗೆಯ ಸೋಂಕುಗಳನ್ನು ನಿವಾರಣೆ ಮಾಡುತ್ತದೆ ಎಂದು ಹೇಳಲಾ ಗುತ್ತದೆ.
  • ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಹಣ್ಣಿನ ತಿರುಳಿನಂ ತೆಯೇ, ಇದರ ಸಿಪ್ಪೆಯಲ್ಲಿಯೂ ಕೂಡ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ, ವಿಟಮಿನ್ಸ್‌ಗಳು, ನಾರಿನಾಂಶಗಳು, ಖನಿಜಾಂಶಗಳು, ಹಾಗೂ ಇತರ ಬಗೆಯ ಆರೋಗ್ಯಕಾರಿ ಅಂಶಗಳು, ಈ ಹಣ್ಣಿನ ಸಿಪ್ಪೆಯಲ್ಲಿ, ಯಥೇಚ್ಛವಾಗಿ ಕಂಡು ಬರುತ್ತದೆಯಂತೆ.

ಬಾಳೆಹಣ್ಣಿನ ಸಿಪ್ಪೆ

12 Fruit Peels You Should Never Throw Away - The Singapore Women's Weekly

  • ಬಾಳೆಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು ಒಂದು ಕಡೆ ಎಸೆಯುವ ಬದಲು ಅಥವಾ ಕಸದ ಬುಟ್ಟಿಗೆ ಎಸೆಯುವ ಬದಲು, ಅದರ ಸಿಪ್ಪೆಯ ಒಳಗಿನ ತಿರುಳಿನ ಭಾಗವನ್ನು, ಮುಖಕ್ಕೆ ಉಜ್ಜಿ ಕೊಳ್ಳುವುದರಿಂದ, ಮುಖದ ಮೇಲಿನ ಕಲೆ, ಮೊಡವೆಗಳು ಬಹಳ ಬೇಗನೇ ನಿವಾರಣೆ ಆಗುವುದು.
  • ಇನ್ನು ಈ ಹಣ್ಣಿನ ಸಿಪ್ಪೆಯಲ್ಲಿ ಮಿನರಲ್ಸ್‌ಗಳು ಹಲ್ಲನ್ನು ಬಿಳಿ ಯಾಗಿಸಲು ಸಹಾಯ ಮಾಡುತ್ತವೆ. ಹೀಗಾಗಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಈ ಹಣ್ಣಿನ ಸಿಪ್ಪೆಯನ್ನು ಹಲ್ಲಿಗೆ ಉಜ್ಜಿಕೊಂಡರೆ ಕ್ರಮೇಣ ನಿಮ್ಮ ಹಲ್ಲುಗಳು ಬಿಳಿಯಾಗುತ್ತವೆ.​

ದಾಳಿಂಬೆ ಹಣ್ಣಿನ ಸಿಪ್ಪೆ

6,592 Peeling Pomegranate Stock Photos, Pictures & Royalty-Free Images -  iStock

  • ದಾಳಿಂಬೆಯನ್ನು ಸ್ವರ್ಗದ ಹಣ್ಣು ಎಂದು ಧರ್ಮ ಗ್ರಂಥ ದಲ್ಲಿಯೂ ಹೇಳಲಾಗಿದೆ. ಹುಳಿ ಸಿಹಿ ಮಿಶ್ರಿತ ಈ ಹಣ್ಣಿನ ಬೀಜ ಗಳ ರುಚಿ ಎಲ್ಲರಿಗೂ ಹಿಡಿಸುತ್ತದೆ. ಆದರೆ ಈ ಹಣ್ಣಿನ ಸಿಪ್ಪೆ, ತುಂಬಾನೇ ಕಹಿ ಆಗಿರುವುದರಿಂದ, ಇದು ಯಾವುದಕ್ಕೂ ಕೂಡ, ಪ್ರಯೋಜನಕ್ಕೆ ಬಾರದು ಎಂದು ಬಿಸಾಡುತ್ತೇವೆ.
  • ಆದರೆ ನಿಜ ಹೇಳಬೇಕು ಎಂದರೆ, ಈ ಹಣ್ಣಿನ ಸಿಪ್ಪೆಯಲ್ಲಿ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುವ ಗುಣವಿದೆ.
  • ಮುಖದ ಮೇಲಿನ ಮೊಡವೆ, ದದ್ದುಗಳನ್ನು ನಿವಾರಣೆ ಮಾಡು ತ್ತದೆ, ಹಾಗೂ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ, ಈ ಹಣ್ಣಿನ ಸಿಪ್ಪೆಯಿಂದ ಬಹಳಷ್ಟು ಲಾಭಗಳಿವೆ.

Healthy Reasons Why You Should Never Throw These Fruits Peels.