ದಪ್ಪ ಇರುವವರು ಸಣ್ಣಗೆ ಆಗಬೇಕೆಂದರೆ, ಜೀರಿಗೆ ನೀರು ಕುಡಿಯಬೇಕು!

28-01-23 09:57 pm       Source: Vijayakarnataka   ಡಾಕ್ಟರ್ಸ್ ನೋಟ್

ತೂಕವನ್ನು ಕಡಿಮೆ ಮಾಡುವ ಜೀರಿಗೆ ನೀರು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಜೀರ್ಣಶಕ್ತಿ ಮತ್ತು ಮೆಟಬಾಲಿಸಂ ಸಹ ಹೆಚ್ಚಾಗುತ್ತೆ!

ನಮ್ಮ ದೇಹದ ತೂಕ ನಮಗೇ ಶಾಪವಾದರೆ ಹೇಗೆ? ದೇಹದ ತೂಕ ಹೆಚ್ಚಾದರೆ ಅದಕ್ಕೆ ಕಾರಣ ಬೊಜ್ಜು ಎಂದು ಹೇಳುತ್ತಾರೆ. ಇನ್ನೊಂದು ರೂಪದಲ್ಲಿ ಕೊಲೆಸ್ಟ್ರಾಲ್ ಎನ್ನಬಹುದು. ಇದರಿಂದ ಕ್ರಮೇಣವಾಗಿ ಆರೋಗ್ಯ ಸಮಸ್ಯೆಗಳು ಒಂದೊಂದೇ ಶುರು ವಾಗುತ್ತವೆ. ದೇಹದ ಆಕಾರ ಬದಲಾಗುತ್ತದೆ. ಜೊತೆಗೆ ಮಾನಸಿಕವಾಗಿ ಹೆಚ್ಚು ಕಿರಿಕಿರಿ ಉಂಟಾಗುತ್ತದೆ.

ಇಂತಹ ಸಂದರ್ಭದಲ್ಲಿ ಕಾಡುವ ಒಂದು ಪ್ರಶ್ನೆಯೆಂದರೆ, ನಾನು ಮತ್ತೆ ಮೊದಲಿನಂತೆ ಆಗಲು ಸಾಧ್ಯವಿಲ್ಲವೇ ಎಂದು. ಆದರೆ ದಪ್ಪ ಇರುವವರು, ದೇಹದಲ್ಲಿ ಬೊಜ್ಜು ತುಂಬಿಕೊಂಡಿರುವವರು ತಮ್ಮ ದೇಹದ ತೂಕವನ್ನು ಸುಲಭವಾಗಿ ಜೀರಿಗೆ ನೀರು ಕುಡಿದು ಕಡಿಮೆ ಮಾಡಿಕೊಳ್ಳ ಬಹುದು ಎಂದು ಆರೋಗ್ಯ ಸಂಶೋಧಕರು ಹೇಳುತ್ತಾರೆ...

ತೂಕ ಕಮ್ಮಿ ಮಾಡುತ್ತೆ, ಮೆಟಬಾಲಿಸಂ ವೃದ್ಧಿಸುತ್ತೆ

Is a 25 Inch Waist Small for Women?

ಒಂದು ಪ್ರತಿಷ್ಠಿತ ಸಂಶೋಧನೆಯ ಅಧ್ಯಯನ ಹೇಳುವ ಪ್ರಕಾರ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಮತ್ತು ಇನ್ಸುಲಿನ್ ಮೆಟಬಾಲಿಸಂ ವೃದ್ಧಿಸುವಲ್ಲಿ ಜೀರಿಗೆ ಮಹತ್ತರವಾಗಿ ಕೆಲಸ ಮಾಡುತ್ತದೆ.

ಅಧ್ಯಯನದಲ್ಲಿ ಪಾಲ್ಗೊಂಡವರ ಪ್ರಕಾರ

Weight loss: 3 best ways to have jeera water for weight loss (and how to  use it) | The Times of India

  • ಅಧ್ಯಯನದಲ್ಲಿ ಪಾಲ್ಗೊಂಡ ಅನೇಕರು ಈ ಬಗ್ಗೆ ತಮ್ಮ ಅಭಿಪ್ರಾ ಯವನ್ನು ಹೊರಹಾಕಿದ್ದಾರೆ. ದಿನಕ್ಕೆ ಮೂರು ಬಾರಿಯಂತೆ ಎಂಟು ವಾರಗಳ ತನಕ ಅವರಿಗೆ ಜೀರಿಗೆ ಮಿಶ್ರಣ ಮಾಡಿದ ನೀರನ್ನುಮತ್ತು ಜೀರಿಗೆ ಮಾತ್ರೆಗಳನ್ನು ಸೇವಿಸಲು ಕೊಡಲಾಗುತ್ತಿತ್ತು.
  • ಕ್ರಮೇಣವಾಗಿ ಇವುಗಳನ್ನು ಸೇವಿಸುತ್ತಾ ಹೋದಂತೆ ದೇಹದ ತೂಕ ಕಡಿಮೆ ಆಗುತ್ತಾ ಬಂತು ಮತ್ತು ಮೆಟಬಾಲಿಸಂ ಸಹ ಹೆಚ್ಚಾಯಿತು ಎಂದು ಮೂರು ಪಾಲ್ಗೊಂಡವರು ಹೇಳುತ್ತಾರೆ.​

ತೂಕ ಹೆಚ್ಚಾದ ಮಹಿಳೆಯರಿಗೆ

ತೂಕ ಹೆಚ್ಚಾದ ಮಹಿಳೆಯರಿಗೆ

  • ಸಂಶೋಧಕರು ದೇಹದ ತೂಕ ಹೆಚ್ಚಾಗಿರುವ ಮಹಿಳೆಯರಿಗಾಗಿ ಒಂದು ಪ್ರಯೋಗ ನಡೆಸಿದರು. ಅದೇನೆಂದರೆ ಮಧ್ಯಾಹ್ನ ಊಟ ಮಾಡುವ ಸಂದರ್ಭದಲ್ಲಿ ಮೊಸರು ಮತ್ತು ಜೀರಿಗೆ ಪುಡಿ ಎರಡನ್ನು ಮಿಶ್ರಣ ಮಾಡಿ ಸೇವಿಸಲು ನೀಡಿದರು.
  • ಅತಿಯಾದ ತೂಕ ಹೊಂದಿರುವ ಮಹಿಳೆ ಯರಿಗೆ ದಿನಕ್ಕೆ ಎರಡು ಹೊತ್ತು ಇದೇ ರೀತಿ ಮೂರು ತಿಂಗಳ ತನಕ ಮುಂದುವರೆಸಿದರು. ​

ಕೊನೆಗೆ ಫಲಿತಾಂಶ

ಕೊನೆಗೆ ಫಲಿತಾಂಶ

  • ಅಧ್ಯಯನ ಕೊನೆಗೊಳ್ಳುತ್ತಿದ್ದಂತೆ ಅವರಿಗೆಲ್ಲ ರಕ್ತ ಪರೀಕ್ಷೆ ನಡೆಸ ಲಾಯಿತು. ಆ ಸಂದರ್ಭದಲ್ಲಿ ತಿಳಿದು ಬಂದ ಫಲಿತಾಂಶ ಏನಂದರೆ ಜೀರಿಗೆ ಪೌಡರ್ ಅವರ ದೇಹದಲ್ಲಿಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚು ಮಾಡಿದ್ದು,
  • ದೇಹದ ತೂಕ, ಸೊಂಟದ ಸುತ್ತಳತೆ, ರಕ್ತನಾಳಗಳಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾದ ಬಗ್ಗೆ ಮಾಹಿತಿ ಸಿಕ್ಕಿತು. ಹಾಗಾಗಿ ಈ ವಿಚಾರದಲ್ಲಿ ಸಂಶೋಧಕರು ಜೀರಿಗೆ ಪೌಡರ್ ಕೇವಲ ದೇಹದ ತೂಕವನ್ನು ಮಾತ್ರ ಕಡಿಮೆ ಮಾಡುವುದಿಲ್ಲ, ಬದಲಿಗೆ ಮೆಟ ಬಾಲಿಸಂ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸುತ್ತದೆ.​

ಜೀರಿಗೆ ಪೌಡರ್ ಮತ್ತು ನಿಂಬೆಹಣ್ಣು

13 Science-Backed Health Benefits of Eating Lemon | Eat This Not That

  • ಹೌದು ಈ ಕಾಂಬಿನೇಷನ್ ಸಹ ತೂಕವನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ ಎಂದು ಇರಾನ್ ದೇಶದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯ ಒಂದು ಅಧ್ಯಯನ ಹೇಳಿದೆ.
  • ಜೀರಿಗೆ ಪೌಡರ್ ಮತ್ತು ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಕೇವಲ ತೂಕ ಮಾತ್ರ ಕಡಿಮೆ ಆಗುವುದು ಮಾತ್ರ ವಲ್ಲದೆ, ಬಾಡಿ ಮಾಸ್ ಇಂಡೆಕ್ಸ್, ಒಟ್ಟಾರೆ ಕೊಲೆಸ್ಟ್ರಾಲ್ ಎಲ್ಲವೂ ಸಹ ನಿಯಂತ್ರಣಕ್ಕೆ ಬರುತ್ತದೆ. ಆದರೆ ಅಧ್ಯಯನಾಕಾರರು ಹೇಳುವ ಹಾಗೆ 8 ವಾರಗಳ ತನಕ ಇದನ್ನು ಸೇವಿಸಬೇಕು.

ತೂಕ ನಿರ್ವಹಣೆಗೆ ಜೀರಿಗೆ ನೀರು

Cumin Seed Tea Jeera Water Weight Stock Photo 1023431338 | Shutterstock

  • ಎಂಟು ವಾರಗಳ ತನಕ ಯಾರು ಜೀರಿಗೆ ನೀರು ಕುಡಿಯುತ್ತಾರೆ, ಅವರಿಗೆ ದೇಹದ ತೂಕ ನಿರ್ವಹಣೆ ಸುಲಭವಾಗುತ್ತದೆ ಎಂಬುದು ಸಂಶೋಧಕರು ಹೇಳುವ ಮಾತು.
  • ಜೀರಿಗೆ ಕ್ಯಾಪ್ಸುಲ್ ಸಹ ಸೇವಿಸಬಹುದು.ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಜೀರಿಗೆ ಹುರಿದು ಒಂದು ಕಪ್ ನೀರಿ ನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ದೇಹದ ಜೀರ್ಣಶಕ್ತಿ ಹೆಚ್ಚಾಗುವ ಜೊತೆಗೆ ಮೆಟ ಬಾಲಿಸಂ ಪ್ರಕ್ರಿಯೆ ಚೆನ್ನಾಗಿ ನಡೆದು ಇಡೀ ದಿನ ಅತ್ಯಂತ ಹುರುಪಿ ನಿಂದ ಕೂಡಿರಲು ಸಾಧ್ಯ ವಾಗುತ್ತದೆ.
  • ಸಂತೋಷಕರ ಹಾರ್ಮೋನ್ ಬಿಡುಗಡೆ ಆಗುವುದರ ಜೊತೆಗೆ ಮೂರು ತಿಂಗಳಲ್ಲಿ ದೇಹದ ತೂಕ ಕಡಿಮೆ ಆಗುತ್ತದೆ ಎಂದು ಹೇಳಲಾಗಿದೆ.

Fat Persons Can Reduce Their Weight By Having Jeera Water.