ನಮ್ಮನ್ನು ಕ್ಯಾನ್ಸರ್‌ನಿಂದ ಕಾಪಾಡುವ ಪವರ್ ಇಂತಹ ಆಹಾರಗಳಲ್ಲಿದೆ!

30-01-23 07:26 pm       Source: Vijayakarnataka   ಡಾಕ್ಟರ್ಸ್ ನೋಟ್

ಕ್ಯಾನ್ಸರ್ ಕಾಯಿಲೆಯ ಬಗ್ಗೆ ಹೆಚ್ಚು ಭಯಪಡದೇ, ಈ ಕಾಯಿಲೆ ಬರದೇ ಇರುವ ಹಾಗೆ ಸರಿ ಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕಾರಿ ಜೀವನಶೈಲಿಯನ್ನು ಮೊದಲೇ ಅನುಸರಿಸಿ ಕೊಂಡು.

ಮನುಷ್ಯನ ಆರೋಗ್ಯ ಹೇಗೆಂದರೆ, ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ! ಯಾವ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ನಿನ್ನೆ ಮೊನ್ನೆಯವರೆಗೆ ನಮ್ಮ ಕಣ್ಣು ಮುಂದೆಯೇ, ಆರೋಗ್ಯಕರ ವಾಗಿ ಮತ್ತು ಚುರುಕಾಗಿ ಆಚೆ ಇಚೆ ಓಡಾಡಿಕೊಂಡಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಗುರಿಯಾಗಿ, ಇಂದು ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿರಬಹುದು!

ಹಾಗಾದರೆ ಮನುಷ್ಯನಿಗೆ ಇದ್ದಕ್ಕಿದ್ದಂತೆ ಯಾಕೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ? ಇದರ ಹಿಂದಿನ ಕಾರಣ ಏನಿರಬಹುದು ಎಂಬು ದನ್ನು ನೋಡಲು ಹೊರಟರೆ, ಕೆಲವೊಂದು ಕಾಯಿಲೆಗಳ ರಹಸ್ಯಗಳು ಪುಟ ತೆರೆದು ಕೊಳ್ಳುತ್ತವೆ. ಉದಾಹರಣೆಗೆ ಕ್ಯಾನ್ಸರ್ ಕಾಯಿಲೆ! ಇದರ ರೋಗ ಲಕ್ಷಣಗಳು ಸೈಲೆಂಟ್ ಆಗಿ ಮನುಷ್ಯನನ್ನು ಅಟ್ಯಾಕ್ ಮಾಡುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ ಕ್ಯಾನ್ಸರ್ ಕಾಯಿಲೆಗಳು, ನಮ್ಮ ಹತ್ತರಕ್ಕೂ ಬರದೇ ಇರುವ ಹಾಗೆ ನೋಡಿಕೊಳ್ಳುವ ಕೆಲವೊಂದು ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ, ಮುಂದೆ ಓದಿ....

ಜೋಳದ ರೊಟ್ಟಿ ಸೇವಿಸಿ

ಜೋಳದ ರೊಟ್ಟಿ ತಿಂದವರು ಗಟ್ಟಿ – ಹೊನಲು

  • ಜೋಳದ ರೊಟ್ಟಿ ಎಂದ ತಕ್ಷಣ ನೆನಪಾಗುವುದು ಉತ್ತರ ಕರ್ನಾಟಕ! ದಕ್ಷಿಣ ಕರ್ನಾಟಕದಲ್ಲಿ ರಾಗಿಗೆ ಹೇಗೆ ಪ್ರಾಶಸ್ತ್ಯ ನೀಡುತ್ತಾರೆ, ಅದೇ ರೀತಿ, ಇಲ್ಲಿ ಜೋಳ ಹಾಗೂ ಜೋಳದ ರೊಟ್ಟಿಗೆ ಹೆಚ್ಚಿನ ಮಹತ್ವ ಇದೆ. ಹೌದು ರಾಗಿ ಮುದ್ದೆ, ಕುಚ್ಚಲಕ್ಕಿ ಗಂಜಿಯಲ್ಲಿ ಇರುವ ಷ್ಟೇ ಪೌಷ್ಟಿಕ ಸತ್ವಗಳು ಈ ಜೋಳದ ರೊಟ್ಟಿಯಲ್ಲಿ ಸಿಗುತ್ತದೆ.
  • ಇನ್ನು ಪ್ರಮುಖವಾಗಿ ಹೇಳಬೇಕೆಂದ್ರೆ, ಜೋಳದ ರೊಟ್ಟಿ ಯಲ್ಲಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಅಗಾಧ ಪ್ರಮಾಣ ದಲ್ಲಿ ಕಂಡು ಬರುವುದರಿಂದ, ದೇಹದ ಫ್ರೀ ರ್ಯಾಡಿಕಲ್ ಅಂಶಗಳ ವಿರುದ್ಧ ಹೋರಾಡಿ, ಹಲವಾರು ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ. ಬಹು ಮುಖ್ಯವಾಗಿ ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳು ಇದರಲ್ಲಿ ಕಂಡು ಬರುವು ದರಿಂದ, ದೇಹದ ಜೀವ ಕೋಶಗಳನ್ನು ಆರೋಗ್ಯಕರ ವಾಗಿ ಕಾಪಾಡುವಲ್ಲಿ ಸಹಾಯ ಮಾಡುತ್ತದೆ
  • ಇದರ ಜೊತೆಗೆ ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳು ಕೂಡ ಇದರಲ್ಲಿ ಇರುವುದರಿಂದ ಮತ್ತು ಬೊಜ್ಜು ನಿರೋಧಕ ಸ್ವಭಾವ ಕಂಡುಬರುವುದರಿಂದ ನಿಮ್ಮ ದೇಹದ ಜೀವಕೋಶ ಗಳನ್ನು ಆರೋಗ್ಯಕರವಾಗಿ ಕಾಪಾಡುವಲ್ಲಿ ಮತ್ತು ನಿಮ್ಮ ದೇಹದ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.​

ದಾಲ್ಚಿನ್ನಿ

ದಾಲ್ಚಿನ್ನಿ ದರ್ಬಾರ್‌ | udayavani

  • ಆರೋಗ್ಯಕಾರಿ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿ ಕೂಡ ಒಂದು. ಇದರ ರುಚಿ ಮತ್ತು ಸುವಾಸನೆ ಹೆಚ್ಚಿನ ವರಿಗೆ ಇಷ್ಟವಾಗುತ್ತದೆ. ನಾವು ರೆಡಿ ಮಾಡುವ ಅಡುಗೆಗೆ, ಚಿಟಿಕೆ ಯಷ್ಟು ಇದರ ಪುಡಿಯನ್ನು ಬಳಸಿದರೆ ಆಹಾರದ ಸ್ವಾದ ಅದ್ಭುತವಾಗಿ ಬದಲಾಗುತ್ತದೆ, ಅಲ್ಲದೆ ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
  • ಆರೋಗ್ಯ ತಜ್ಞರು ಹೇಳುವ ಹಾಗೆ ಪ್ರತಿದಿನ ಸುಮಾರು ಒಂದು ಲೋಟ ನೀರಿಗೆ ದಾಲ್ಚಿನ್ನಿ ಪುಡಿ ಯನ್ನು ಮಿಕ್ಸ್ ಮಾಡಿ ಸೇವನೆ ಮಾಡುತ್ತಾ ಬಂದರೆ, ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರವಿರ ಬಹುದು.
  • ಪ್ರಮುಖವಾಗಿ ದಾಲ್ಚಿನ್ನಿಯಲ್ಲಿ ಅಪಾರ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳು ಪಾಲಿಫಿನಾಲ್ ರೂಪ ದಲ್ಲಿ ಕಂಡುಬರುತ್ತವೆ. ಇವು ನಮ್ಮದೇಹದ ರೋಗ ನಿರೋಧಕವ್ಯವಸ್ಥೆಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ನೆರವಿಗೆ ಬರುತ್ತದೆ.
  • ಇನ್ನು ಬಹು ಮಖ್ಯವಾಗಿ ದಾಲ್ಚಿನ್ನಿ ಅಥವಾ ಚಕ್ಕೆಯಲ್ಲಿ ಕಬ್ಬಿಣದಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿದ್ದು, ದೇಹದಲ್ಲಿ ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆ ಯನ್ನು ಕಡಿಮೆ ಮಾಡುತ್ತದೆ. ​

ಡ್ರೈಫ್ರೂಟ್ಸ್ ಅಥವಾ ಒಣ ಬೀಜಗಳು

ಡ್ರೈಫ್ರೂಟ್ಸ್ ಅಥವಾ ಒಣ ಬೀಜಗಳು

  • ಒಣ ಬೀಜಗಳು ಬೆಲೆಯಲ್ಲಿ ದುಬಾರಿಯಾದರೂ ಕೂಡ, ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ. ಇದು ಹಲವಾರು ಬಾರಿ ಸಾಬೀತಾಗಿದೆ.
  • ಪ್ರಮುಖವಾಗಿ ಬಾದಾಮಿ, ವಾಲ್‌ ನಟ್‍‌ನಂತಹ ಒಣ ಬೀಜಗಳನ್ನುನೆನೆಸಿಟ್ಟು ತಿನ್ನುವುದರಿಂದ ಹೃದಯದ ಆರೋಗ್ಯ ವೃದ್ಧಿ ಆಗುವುದರ ಜೊತೆಗೆ ಮಾರಕ ಕ್ಯಾನ್ಸರ್ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ.

ಒಣಶುಂಠಿ

boost digestion, ಒಣಶುಂಠಿ ಪುಡಿಯ ಆರೋಗ್ಯಕರ ಪ್ರಯೋಜನಗಳು - health benefits of dry  ginger powder - Vijaya Karnataka

  • ಒಣಶುಂಠಿ ಎಂದ ತಕ್ಷಣ ಅದರಲ್ಲಿ ಯಾವುದೇ ಸಾರವಿಲ್ಲ, ಇದರಿಂದ ನಮ್ಮ ಆರೋಗ್ಯಕ್ಕೆ ಏನೂ ಪ್ರಯೋಜನಗಳು ಸಿಗದು ಎನ್ನುವ ಭಾವನೆ ಮನದಲ್ಲಿ ಮೂಡುತ್ತದೆ. ಆದರೆ ನಿಮಗೆ ಗೊತ್ತಿರಲಿ ಹಸಿ ಶುಂಠಿ ಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಗಳು ಸಿಗುತ್ತೆದೆಯೋ, ಒಣಶುಂಠಿ ಯಿಂದ ಕೂಡ, ಆರೋ ಗ್ಯಕ್ಕೆ ಸಾಕಷ್ಟು ಲಾಭಗಳು ಸಿಗುತ್ತದೆ.
  • ವಿಶೇಷವಾಗಿ ಮಹಿಳೆಯರು ತಮ್ಮ ಆಹಾರ ಪದ್ಧತಿ ಯಲ್ಲಿ ಒಣಶುಂಠಿಯ ಬಳಕೆ ಮಾಡುತ್ತಾ ಬಂದರೆ ದೇಹದಲ್ಲಿ ಕ್ಯಾನ್ಸರ್‌ಕಾರಕ ಜೀವಕೋಶಗಳು ಬೆಳವ ಣಿಗೆ ಆಗದಂತೆ ತಡೆಯಬಹುದು.
  • ಉದಾಹರಣೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್‌‌ ಗಳನ್ನು ತಡೆಯಲು ಸಹಾಯವಾಗುವುದು. ಹೀಗಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಶುಂಠಿಯನ್ನು ಸೇರಿಸಿ ಕೊಳ್ಳುವುದರ ಜೊತೆಗೆ, ತಮ್ಮ ದೈನಂದಿನ ಚಹಾಕ್ಕೆ ಒಣ ಶುಂಠಿ ಪುಡಿಯನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.​

ಏಲಕ್ಕಿ

Cardamom/ಏಲಕ್ಕಿ

  • ಹೆಚ್ಚಿನವರು ಏಲಕ್ಕಿಯನ್ನು ಹಬ್ಬ-ಹರಿದಿನಗಳಲ್ಲಿ ಮಾಡುವ ಅಡುಗೆಗಳಲ್ಲಿ ಅಥವಾ ಕೆಲವೊಂದು ವಿಶೇಷ ಅಡುಗೆಗಳಲ್ಲಿ ಮಾತ್ರ ಬಳಕೆ ಮಾಡುತ್ತಾರೆ. ಯಾಕೆಂದರೆ ಇದರ ಬೆಲೆ ತುಂಬಾನೇ ದುಬಾರಿ. ಆದರೆ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಏಲಕ್ಕಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ
  • ಪ್ರಮುಖವಾಗಿ ಈ ಪುಟ್ಟ ಏಲಕ್ಕಿಯಲ್ಲಿ ಫೈಟೋ ಕೆಮಿಕಲ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಮಾರಕ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡುವಲ್ಲಿಪ್ರಮುಖ ಪಾತ್ರವಹಿಸುತ್ತದೆ.

These Natural Foods Help You To Kill Cancer Cells In The Body Naturally.