ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ ಬರಬಾರದೆಂದರೆ, ದಾಳಿಂಬೆ ಜ್ಯೂಸ್ ಕುಡಿಯಬೇಕು!

01-02-23 08:16 pm       Source: Vijayakarnataka   ಡಾಕ್ಟರ್ಸ್ ನೋಟ್

ದಾಳಿಂಬೆ ಹಣ್ಣು ಪುರುಷರಿಗೆ ಒಂದು ರೀತಿ ಉಪಯೋಗಕ್ಕೆ ಬಂದರೆ ಮಹಿಳೆಯರಿಗೆ ಇನ್ನೊಂದು ರೀತಿ ಪ್ರಯೋಜನಕ್ಕೆ ಬರುತ್ತದೆ. ಅದೇ ಸ್ತನ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದರಲ್ಲಿದೆಯಂತೆ!

ದಾಳಿಂಬೆ ಹಣ್ಣು ಒಂದು ಆರೋಗ್ಯಕರವಾದ ಹಣ್ಣಾಗಿದ್ದು, ಲೈಂಗಿಕ ವಿಚಾರದಲ್ಲಿ ಉದ್ರೇಕ ವನ್ನು ಹೆಚ್ಚು ಮಾಡು ವಲ್ಲಿ ಇದು ಪ್ರಮುಖವಾಗಿ ಕೆಲಸ ಮಾಡಬಲ್ಲದು ಎಂದು ಹೇಳುತ್ತಾರೆ. ಇದರ ಜೊತೆಗೆ ಮಹಿಳೆಯರ ಸ್ತನ ಕ್ಯಾನ್ಸರ್ ನಿವಾರಣೆಯಲ್ಲಿ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದು ಬಂದಿದೆ.

ಮಹಿಳೆಯರಿಗೆ ದಾಳಿಂಬೆ ಹಣ್ಣು

Pomegranate seeds: Health benefits, uses, side effects

ಮಾರುಕಟ್ಟೆಯಲ್ಲಿ ಸಿಗುವ ದಾಳಿಂಬೆ ಹಣ್ಣಿನ ಆರೋಗ್ಯಕರ ಪ್ರಯೋಜನಗಳನ್ನು ನೀವು ಸಹ ಉಪಯೋಗಿಸಿಕೊಳ್ಳಬಹುದು. ಯುವ ಮಹಿಳೆಯರಿಗೆ ಹಾಗೂ ಮಧ್ಯ ವಯಸ್ಸು ದಾಟಿದ ಮಹಿಳೆಯರಿಗೆ ದಾಳಿಂಬೆ ಹಣ್ಣು ತುಂಬಾ ಪ್ರಯೋಜನಕಾರಿ.

ಫೈಟೋ ಕೆಮಿಕಲ್ ಅಂಶ

World Cancer Day: Why self-examination is important - Times of India

 • ದಾಳಿಂಬೆ ಹಣ್ಣಿನ ಜ್ಯೂಸ್ ನಲ್ಲಿ ಫೈಟೋ ಕೆಮಿಕಲ್ ಎಂಬ ಅಂಶಗಳ ಪ್ರಮಾಣ ಅಪಾರವಾಗಿರುವುದರಿಂದ ಸ್ತನ ಕ್ಯಾನ್ಸರ್ ಅಭಿವೃದ್ಧಿಯಾಗುವುದನ್ನು ಇದು ತಡೆ ಯುತ್ತದೆ.
 • ಸ್ತನಗಳ ಭಾಗ ದಲ್ಲಿ ಕ್ಯಾನ್ಸರ್ ಜೀವಕೋಶಗಳ ಅಭಿವೃದ್ಧಿ ಆಗದಂತೆ ಇದು ತಡೆಯುತ್ತದೆ ಮತ್ತು ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗಿ ಉತ್ಪತ್ತಿ ಆಗದಂತೆ ನೋಡಿಕೊಳ್ಳುತ್ತದೆ.

ಆಂಟಿ ಆಕ್ಸಿಡೆಂಟ್

6 Surprising Health Benefits of Pomegranates

 • ದಾಳಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಸಹ ಇರುವು ದರಿಂದ ಹೃದಯದ ಕಾಯಿಲೆ ಬರದಂತೆ ತಡೆಯುತ್ತದೆ ಮತ್ತು ದಾಳಿಂಬೆ ಹಣ್ಣು ಆಂಟಿ ಕ್ಯಾನ್ಸರ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಇದರಿಂದ ಹೇಳ ಬಹುದು.
 • ಮುಖ್ಯವಾಗಿ ಬೊಜ್ಜಿನ ಪ್ರಮಾಣ ಇರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.​

ಅಧ್ಯಯನ ಹೇಳುವ ಹಾಗೆ

World Cancer Day: Why self-examination is important - Times of India

 • ಒಂದು ಅಧ್ಯಯನ ಹೇಳುವ ಹಾಗೆ ಕಿಮೋಥರಪಿ ಮಾಡಿಸಿ ಕೊಂಡಿರುವ ಮಹಿಳೆಯರಿಗೆ ಈಸ್ಟ್ರೋಜನ್ ಉತ್ಪತ್ತಿ ಆಗದಂತೆ ದಾಳಿಂಬೆ ಹಣ್ಣಿನ ಜ್ಯೂಸ್ ನೋಡಿಕೊಳ್ಳುತ್ತದೆ.
 • ಏಕೆಂದರೆ ಹಾರ್ಮೋನ್ ಹೆಚ್ಚಾಗಿ ಸ್ರವಿಸುವುದರಿಂದ ಕೂಡ ಕ್ಯಾನ್ಸರ್ ಗಡ್ಡೆಗಳು ಹೆಚ್ಚಾಗಿ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ.​

ದಾಳಿಂಬೆ ಹಣ್ಣು ಸಿಪ್ಪೆ , ಬೀಜಗಳು ಎಲ್ಲವೂ ಆರೋಗ್ಯಕಾರಿ

20 Things to do With Pomegranate Seeds - A Foodcentric Life

ಆದ್ದರಿಂದ ದಾಳಿಂಬೆ ಹಣ್ಣಿನ ಜ್ಯೂಸ್, ಸಿಪ್ಪೆ ಮತ್ತು ಒಳಗಿನ ಬೀಜಗಳು ಸಹ ಔಷಧೀಯ ಲಕ್ಷಣಗಳನ್ನು ಹೊಂದಿದ್ದು, ವಾಸಿ ಮಾಡುವ ಗುಣಗಳನ್ನು ಸಹ ಪಡೆದಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಇದು ಸ್ತನ ಕ್ಯಾನ್ಸರ್ ನಿವಾರಣೆಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.

ದಾಳಿಂಬೆ ಹಣ್ಣಿನ ಜ್ಯೂಸ್ ತಯಾರಿ ಹೇಗೆ?

What are the health benefits of having pomegranate juice?

 • ಮೊದಲಿಗೆ ಒಂದು ಅಥವಾ ಎರಡು ದಾಳಿಂಬೆ ಹಣ್ಣುಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ತೊಳೆದು,
 • ಚಾಕುವಿನಿಂದ ಕತ್ತರಿಸಿ ಒಳಗಿನ ಬೀಜಗಳನ್ನು ಬಿಡಿಸಿ ಒಂದು ಬ್ಲೆಂಡರ್ ನಲ್ಲಿ ಸುರಿದುಕೊಳ್ಳಿ.
 • ಇದನ್ನು ಚೆನ್ನಾಗಿ ರುಬ್ಬಿಕೊಂಡು ಆನಂತರ ಒಂದು ಕಂಟೇನರ್ ಗೆ ಸೋಸಿಕೊಳ್ಳಿ.

ಕೊನೆಗೆ ಹೀಗೆ ಮಾಡಿ

Pomegranate Juice Recipe, How to make Pomegranate Juice Recipe - Vaya.in

 • ಈಗ ಒಂದು ಸ್ಪೂನ್ ನಿಂದ ಇದನ್ನು ಮತ್ತಷ್ಟು ಹಿಂಡಿ ರಸ ತೆಗೆದುಕೊಂಡು ಬಳಸಿ ಕೊಳ್ಳಬಹುದು. ನೀವು ಒಂದು ಲೋಟ ದಾಳಿಂಬೆ ಹಣ್ಣಿನ ಜ್ಯೂಸ್ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಎರಡು ದಾಳಿಂಬೆ ಹಣ್ಣುಗಳನ್ನು ಉಪಯೋಗಿಸಬೇಕಾಗುತ್ತದೆ.
 • ಮಹಿಳೆಯರ ಹೃದಯಕ್ಕೆ ಮತ್ತು ಸ್ತನಗಳ ಆರೋಗ್ಯಕ್ಕೆ ತುಂಬಾ ಅವಶ್ಯಕವಾದ ಮತ್ತು ಅಷ್ಟೇ ಆರೋಗ್ಯಕರವಾದ ಜ್ಯೂಸ್ ಇದಾಗಿದೆ.

World Cancer Day 2023 Pomegranate Juice Is Best To Prevent Breast Cancer In Women.