ಎಳನೀರಿನಲ್ಲಿ ಸಿಗುವಷ್ಟೇ ಪ್ರಯೋಜನಗಳು, ಈ ಕಬ್ಬಿನ ಹಾಲಿನಲ್ಲಿಯೂ ಸಿಗುತ್ತದೆ...

06-02-23 07:45 pm       Source: Vijayakarnataka   ಡಾಕ್ಟರ್ಸ್ ನೋಟ್

ಮನುಷ್ಯನ ಲಿವರ್‌ನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳವವರಿಗೆ ಕಬ್ಬಿನ ಹಾಲು ತುಂಬಾನೇ ಉಪಯುಕ್ತ.

ಎಳನೀರಿನಷ್ಟೇ ಆರೋಗ್ಯಕಾರಿಯಾದ ಇನ್ನೊಂದು ಪಾನೀಯ ಇದ್ದರೆ, ಅದು ಕಬ್ಬಿನ ಹಾಲು ಎಂದರೆ ತಪ್ಪಾಗ ಲಾರದು. ಬೇಸಿಗೆ ಕಾಲದಲ್ಲಿ ಅಂತೂ ಎಳನೀರಿನ ಹಾಗೆ ದೇಹಕ್ಕೆ ತಂಪು ನೀಡುವ ಈ ಪಾನೀಯ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ.

ಇನ್ನು ಕಬ್ಬಿನ ಹಾಲಿಗೆ ಎರಡು ಪ್ರಮುಖ ಗುಣಲಕ್ಷಣಗಳು ಏಕೆಂದರೆ, ಬೇಸಿಗೆ ಕಾಲದಲ್ಲಿ ಇದನ್ನು ಕುಡಿದರೆ ದೇಹದ ಉಷ್ಣತೆ ತಂಪಾಗುತ್ತದೆ. ಅದೇ ರೀತಿಯಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಈ ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹದ ಉಷ್ಣತೆ ಬಿಸಿಯಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ದೇಹದ ಉಷ್ಣತೆಯನ್ನು ಅಚ್ಚುಕಟ್ಟಾಗಿ ನಿರ್ವಹಹಣೆ ಮಾಡುವುದರ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡುವ ಈ ಕಬ್ಬಿನ ಹಾಲಿನ ಇನ್ನಷ್ಟು ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ...

ದೇಹದ ಲಿವರ್‌ಗೆ ಒಳ್ಳೆಯದು

Is Sugarcane Juice Good or Bad for Diabetes?

  • ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ಯಕೃತ್ ಅಥವಾ ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ ಜಾಂಡೀಸ್(ಕಾಮಾಲೆ ರೋಗ) ಅಥವಾ ಹೆಪಟಿಟಿಸ್ ಕಾಣಿಸಿಕೊಳ್ಳುವುದು.
  • ಇಂತಹ ಸಂದರ್ಭಗಳಲ್ಲಿ ವೈದ್ಯರು ನೀಡಿರುವ ಚಿಕಿತ್ಸೆಗಳನ್ನು ಸರಿಯಾಗಿ ಅನುಸರಿಸುವುದರ ಜೊತೆಗೆ ವೈದ್ಯರ ಸಲಹೆಯ ಮೇರೆಗೆ ಕಬ್ಬಿನ ಹಾಲು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
  • ಪ್ರಮುಖವಾಗಿ ಕಬ್ಬಿನ ಹಾಲಿನಲ್ಲಿ ಸಿಗುವ ಆರೋಗ್ಯ ಕಾರಿ ಅಂಶಗಳು ದೇಹದ ವಿಷಕಾರಿ ತ್ಯಾಜ್ಯ ಗಳನ್ನು ಹೊರಹಾಕಿ,
  • ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ಲಿವರ್‌ಗೆ ಸಮಸ್ಯೆ ಬರದೇ ಇರುವ ಹಾಗೆ ನೋಡಿ ಕೊಳ್ಳುತ್ತದೆ.
  • ಜೊತೆಗೆ ದೇಹದ ಲಿವರ್ ತನ್ನ ಕಾರ್ಯ ಚಟುವಟಿ ಕೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಕೂಡ ನೆರವಿಗೆ ಬರುತ್ತದೆ.

ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರಮಾಡುತ್ತದೆ

ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರಮಾಡುತ್ತದೆ

  • ಕಬ್ಬಿನ ಹಾಲಿನಲ್ಲಿ ಕರಗುವ ನಾರಿನಾಂಶ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಇವು ಕರುಳಿನ ಒಳಗೆ ಆಹಾರದ ಚಲನೆ ಸುಲಭವಾಗಿ ಸಲು ಸಹಾಯ ಮಾಡುತ್ತವೆ ಹಾಗೂ ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
  • ಇದರಿಂದ ಅಜೀರ್ಣ, ಮಲಬದ್ಧತೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಹಾಗೂ ಹೊಟ್ಟೆಯ ಸೆಳೆತದ ಸಮಸ್ಯೆಗಳು ಎದುರಾಗದೇ ಇರಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು

ಕಬ್ಬಿನ ಹಾಲಿನಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ ಅಂಶಗಳು ಕಂಡು ಬರುವುದರಿಂದ, ವಾರದಲ್ಲಿ ಎರಡು ಮೂರು ಬಾರಿ ಯಾದರೂ ಈ ಪಾನೀಯವನ್ನು ಸೇವನೆ ಮಾಡುವು ದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬಹುದು.

ಹಲ್ಲುಗಳ ಆರೋಗ್ಯಕ್ಕೆ

ಹಲ್ಲುಗಳ ಆರೋಗ್ಯಕ್ಕೆ

  • ಪ್ರಮುಖವಾಗಿ ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ ಹಾಗೂ ರಂಜಕ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಇವು ಹಲ್ಲುಗಳ ಆರೋಗ್ಯವನ್ನು ವೃದ್ದಿಸುವುದರ ಜೊತೆಗೆ ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ ಹಾಗೂ ಬಾಯಿಯಿಂದ ಬರುವ ದುರ್ವಾಸನೆ ಸಮಸ್ಯೆಯನ್ನುಕೂಡ ದೂರ ಮಾಡುತ್ತದೆ.

ತೂಕ ಇಳಿಸುವವರಿಗೆ

Is It Bad to Lose Weight Too Quickly?

  • ಕಬ್ಬಿನ ಹಾಲಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಹಾಗೂ ಯಥೇಚ್ಛವಾಗಿ ನಾರಿನಾಂಶ ಕಂಡು ಬರುವುದರಿಂದ ದೇಹದ ತೂಕವನ್ನು ಇಳಿಸುವವರಿಗೆ ಇದೊಂದು ಒಳ್ಳೆಯ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಪ್ರಮುಖವಾಗಿ ಇದರಲ್ಲಿರುವ ನಾರಿನಾಂಶ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸಿ, ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕುತ್ತದೆ. ಇದರಿಂದಾಗಿ ದೇಹದ ತೂಕ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತದೆ.

ಹಾಗಾದ್ರೆ ಸಕ್ಕರೆಕಾಯಿಲೆ ಇದ್ದವರು ಕುಡಿಯಬಹುದಾ?

14-25 age group sees 20% increase in Type-II diabetes | Delhi News - Times  of India

  • ಕಬ್ಬಿನ ಜ್ಯೂಸ್ ಅಥವಾ ಹಾಲು ಸಿಹಿಯಾಗಿರುವು ದರಿಂದ, ಹೆಚ್ಚಿನವರಿಗೆ ಒಂದು ಗೊಂದಲವಿದೆ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿರುವ, ಈ ಕಬ್ಬಿನ ಜ್ಯೂಸ್‌ನ್ನು ಸಕ್ಕರೆ ಕಾಯಿಲೆ ಇರುವ ರೋಗಿಗಳು ಕುಡಿಯಬಹುದಾ ಎಂದು.
  • ಆದರೆ ನಿಮಗೆ ಗೊತ್ತಿರಲಿ ತನ್ನಲ್ಲಿ ನೈಸರ್ಗಿಕ ಸಕ್ಕರೆ ಯಾಂಶ ಹೊಂದಿರುವ ಈ ಕಬ್ಬಿನ ಹಾಲು ಮಧುಮೇಹ ರೋಗಿಗಳು ಕುಡಿಯುವುದರಿಂದ ಯಾವುದೇ ಸಮಸ್ಯೆಗಳು ಇಲ್ಲ.
  • ಆದರೆ ಮಿತವಾಗಿ ಸೇವನೆ ಮಾಡಬೇಕು. ವಾರದಲ್ಲಿ ಒಮ್ಮೆ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

Know The Health Benefits Of Drinking One Glass Of Sugarcane Juice Weekly Twice.