ಮಲಗುವ ಮುನ್ನ ಹೀಗೆ ಮಾಡಿದ್ರೆ, ನಿದ್ದೆನೂ ಬರುತ್ತೆ, ಥೈರಾಯ್ಡ್ ಸಮಸ್ಯೆನೂ ದೂರವಾಗುತ್ತೆ!

09-02-23 08:38 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮಗೆ ಯಾವ ಕಾರಣದಿಂದ ಥೈರಾಯ್ಡ್ ಬಂದಿದೆ ಎಂಬುದು ಗೊತ್ತಿಲ್ಲ. ಆದರೆ ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ.

ಇತ್ತೀಚಿಗೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಲವಾರು ಕಾರಣಗಳಿಂದ ರಾತ್ರಿ ಸಮಯದಲ್ಲಿ ನಿದ್ರೆ ಬರುವುದಿಲ್ಲ. ಅದರಲ್ಲಿ ಥೈರಾಯಿಡ್ ಸಮಸ್ಯೆ ಕೂಡ ಒಂದು. ಯಾವಾಗ ಮನುಷ್ಯನ ಥೈರಾಯ್ಡ್ ಗ್ರಂಥಿ ಹೆಚ್ಚು ಅಥವಾ ಕಡಿಮೆ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ ಆ ಸಂದರ್ಭದಲ್ಲಿ ಸಮಸ್ಯೆ ಎದುರಾಗುತ್ತದೆ.

ಆದರೆ ನಿದ್ರಾಹೀನತೆ ಮತ್ತು ಥೈರಾಯ್ಡ್ ಸಮಸ್ಯೆ ಎರಡಕ್ಕೂ ಕೂಡ ಪರಿಹಾರವಿದೆ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರಾ ತಿಳಿಸಿದ್ದಾರೆ. ಇದಕ್ಕಾಗಿ ಕೆಲವೊಂದು ಮನೆ ಮದ್ದುಗಳ ಬಗ್ಗೆ ಇಲ್ಲಿ ಮಾಹಿತಿ ಕೊಟ್ಟಿದ್ದಾರೆ.

ಹುರಿದ ಕುಂಬಳಕಾಯಿ ಬೀಜಗಳು

SATVIKK PUMPKIN SEEDS 200G SPL - Satvikk

  • ಕುಂಬಳಕಾಯಿ ಬೀಜಗಳಲ್ಲಿ ಅಪಾರ ಪ್ರಮಾಣದ ಜಿಂಕ್ ಇರಲಿದ್ದು, ಇದು ಥೈರಾಯಿಡ್ ಹಾರ್ಮೋನ್ ಸಮತೋಲನದಲ್ಲಿ ಕೆಲಸ ಮಾಡುತ್ತದೆ ಮತ್ತು ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ನೆರವಾಗುತ್ತದೆ.
  • ಅಷ್ಟೇ ಇಲ್ಲದೆ ಕುಂಬಳಕಾಯಿ ಬೀಜಗಳಲ್ಲಿ ನೈಸರ್ಗಿಕ ವಾದ ಟ್ರಿಪ್ತೋಫ್ಯಾನ್ ಎಂಬ ಅಮೈನೋ ಆಮ್ಲ ಇರಲಿದ್ದು, ಇದು ನಿದ್ರೆ ಬರಲು ಸಹಾಯ ಮಾಡುತ್ತದೆ.
  • ಇದರ ಜೊತೆಗೆ ಜಿಂಕ್, ಕಾಪರ್ ಮತ್ತು ಸಲೀನಿಯಂ ಸಹ ಇವುಗಳಲ್ಲಿ ಹೇರಳವಾಗಿದ್ದು, ನಿದ್ರೆಯ ಗುಣಮಟ್ಟ ಹಾಗೂ ಸಮಯವನ್ನು ವೃದ್ಧಿಸುತ್ತವೆ.
  • ಹಾಗಾಗಿ ರಾತ್ರಿ ಸಮಯದಲ್ಲಿ ಒಂದು ಟೇಬಲ್ ಚಮಚ ಹುರಿದ ಕುಂಬಳಕಾಯಿ ಬೀಜಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.

ನೆನೆಸಿದ ಗೋಡಂಬಿ ಬೀಜಗಳು

ರಾತ್ರಿ ಸರಿಯಾಗಿ ನಿದ್ದೆ ಬಾರದೇ ಹೆಣಗಾಡುತ್ತಿದ್ದೀರಾ? ಇಲ್ಲಿದೆ ಪರಿಹಾರ | Benefits of  Drinking Cashew Milk for a Good Night's Sleep in Kannada - Kannada BoldSky

  • ಗೋಡಂಬಿ ಬೀಜಗಳಲ್ಲಿ ಕೂಡ ಸೆಲೆನಿಯಂ ಎಂಬ ಖನಿಜಾಂಶ ಇರಲಿದ್ದು, ಇದು ದೇಹದಲ್ಲಿ ಥೈರಾಯ್ಡ್ ಗ್ರಂಥಿ ಉತ್ತಮವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ.
  • ಇದರ ಜೊತೆಗೆ ಥೈರಾಯ್ಡ್ ಮಟ್ಟ ಅತ್ಯುತ್ತಮವಾಗಿ ನಿರ್ವಹಣೆ ಆಗುತ್ತದೆ ಮತ್ತು ಆಕ್ಸಿಡೆಟೀವ್ ಒತ್ತಡದಿಂದ ಥೈರಾಯ್ಡ್ ಅಂಗಾಂಶ ರಕ್ಷಿಸಿಕೊಳ್ಳುವಂತೆ ಮಾಡುತ್ತದೆ. ನಾಲ್ಕರಿಂದ ಐದು ನೆನೆಸಿದ ಗೋಡಂಬಿ ಬೀಜಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯಕ.​

ತೆಂಗಿನಕಾಯಿ ಚೂರುಗಳು

ತೆಂಗಿನಕಾಯಿ ಚೂರುಗಳು

  • ಹಸಿ ತೆಂಗಿನ ಕಾಯಿ ತನ್ನಲ್ಲಿ ಮೀಡಿಯಂ ಚೈನ್ ಫ್ಯಾಟಿ ಆಮ್ಲಗಳನ್ನು ಒಳಗೊಂಡಿದ್ದು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಜೊತೆಗೆ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ.
  • ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಿಸು ವುದರ ಜೊತೆಗೆ ಥೈರಾಯಿಡ್ ಆರೋಗ್ಯ ವನ್ನು ಸಹ ಕಾಪಾಡುತ್ತದೆ. ರಾತ್ರಿ ಮಲಗಿಕೊಳ್ಳುವ ಮುಂಚೆ ಸ್ವಲ್ಪ ಪ್ರಮಾಣದ ಹಸಿ ತೆಂಗಿನಕಾಯಿ ಸೇವಿಸಿ ಮಲಗಿಕೊಳ್ಳಿ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರಾ ಹೇಳಿದ್ದಾರೆ.​

ನೆನೆಸಿದ ಚಿಯಾ ಬೀಜಗಳು

chia seeds for weight loss, ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಕುಡಿದರೆ,  ಆರೋಗ್ಯಕ್ಕೆ ಒಳ್ಳೆಯದು - health benefits of starting your day with chia seeds  water - Vijaya Karnataka

  • ಚಿಯಾ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಮ್ಲಗಳು ಅಪಾರ ಪ್ರಮಾಣದಲ್ಲಿದ್ದು, ಆಂಟಿ ಇನ್ಫಾಮೇಟರಿ ಗುಣಲಕ್ಷಣ ಗಳನ್ನು ಒಳಗೊಂಡಿವೆ.
  • ಇವುಗಳನ್ನು ಸೇವಿಸುವುದರಿಂದ ಥೈರಾಯ್ಡ್ ಗ್ರಂಥಿ ಉರಿ ಯುತದ ಸಮಸ್ಯೆಯಿಂದ ಬಳಲುವುದು ತಪ್ಪುತ್ತದೆ. ಹೀಗಾಗಿ ಒಂದು ಟೇಬಲ್ ಚಮಚ ನೆನೆಸಿದ ಚಿಯಾ ಬೀಜಗಳನ್ನು ರಾತ್ರಿ ಸಮಯದಲ್ಲಿ ಸೇವಿಸಿ.​

 

Have These Super Foods To Take Control On Thyroid.