ಆಯುರ್ವೇದ ವೈದ್ಯರು ತಿಳಿಸಿರುವ ಕಿಡ್ನಿಗಳಲ್ಲಿ ಸ್ಟೋನ್‌ ಆಗದಂತೆ ತಡೆಯೋ ಆಹಾರಗಳಿವು!

18-02-23 09:57 pm       Source: Vijayakarnataka   ಡಾಕ್ಟರ್ಸ್ ನೋಟ್

ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾದರೆ, ಇದರಿಂದ ಕಾಡುವ ನೋವು ಹೇಳತೀರದು. ಕೆಲವೊಂದು ಸಲ ಮೂತ್ರ ವಿಸರ್ಜನೆ ವೇಳೆ ತೀವ್ರ ನೋವು ಉಂಟಾದರೆ, ಮತ್ತೆ ಕೆಲವು.

ಕಿಡ್ನಿಗಳಲ್ಲಿ ಸ್ಟೋನ್ ಕಂಡು ಬಂದಾಗ, ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರಲು ಶುರುವಾಗುತ್ತದೆ. ಉದಾಹರಣೆಗೆ ಕಲವರಿಗೆ ಮೂತ್ರ ವಿಸರ್ಜನೆ ವೇಳೆ ತೀವ್ರ ನೋವು ಕಂಡು ಬಂದರೆ, ಇನ್ನು ಕೆಲವರಿಗೆ ತೀವ್ರವಾಗಿ ಹೊಟ್ಟೆ ನೋವು ಕಂಡು ಬರುತ್ತದೆ. ಪ್ರಮುಖವಾಗಿ ಬೆನ್ನಿನ ಕೆಳಭಾಗ ದಲ್ಲಿ ಅಂದರೆ ಸೊಂಟದ ಹತ್ತಿರ ಅಕ್ಕ ಪಕ್ಕ ವಿಪರೀತ ನೋವು ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಕಾಡುವ ನೋವು ಅಷ್ಟಿಷ್ಟಲ್ಲ! ಈ ನೋವನ್ನು ಅನುಭವಿಸದವರಿಗೆಯೇ ಗೊತ್ತು, ಈ ಕಿಡ್ನಿ ಸ್ಟೋನ್‌ನ ನೋವು ಹೇಗಿರುತ್ತದೆಯೆಂದು.

ಒಮ್ಮೆ ಈ ನೋವು ಶುರುವಾಗಿ ಬಿಟ್ಟೆರೆ ಕುಳಿತುಕೊಳ್ಳಲು ಆಗದೇ, ಮಲಗಲು ಆಗದೇ, ನರಕಯಾತನೆ ಪಡುವ ಪರಿಸ್ಥಿತಿ ಎದುರಾಗುತ್ತದೆ. ಕೆಲವರಿಗೆ ಈ ಸಮಸ್ಯೆ ಆಗಾಗ ಬಂದು ಹೋಗುತ್ತದೆ, ಇನ್ನು ಕೆಲವರಿಗೆ ಒಂದೇ ಸಮನೆ ನೋಯುತ್ತಿರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಆಯುರ್ವೇದ ತಜ್ಞರಾದ ಡಾ ನಿತಿಕಾ ಕೊಹ್ಲಿ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ಕೆಲವೊಂದು ಆಯುರ್ವೇದ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಮುಂದೆ ಓದಿ....

ಶುಂಠಿ

natural antibiotic, ಹೆಮ್ಮಾರಿ ಕಾಯಿಲೆಗಳಿಗೆ ಕಡಿವಾಣ ಹಾಕಲು ದಿನವೂ ಶುಂಠಿ ಸೇವಿಸಿ -  benefits of eating ginger every day - Vijaya Karnataka

  • ​ಸಡನ್ ಆಗಿ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆ ಕಂಡು ಬಂದರೆ ನಮಗೆ ಪಕ್ಕನೆ ನೆನಪಿಗೆ ಬರು ವುದು, ಶುಂಠಿ ಬಳಸಿ ಮಾಡಿದ ಕಷಾಯ!
  • ತನ್ನಲ್ಲಿ ಯಥೇಚ್ಛವಾಗಿ ಔಷಧೀಯ ಗುಣಲಕ್ಷಣಗಳನ್ನು ಹೊಂದಿರುವ ಈ ಶುಂಠಿಯು, ಕೇವಲ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವುದು ಮಾತ್ರವಲ್ಲದೆ ಅಜೀರ್ಣ, ಮಲಬದ್ಧತೆ, ವಾಕರಿಕೆ ವಾಂತಿ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳನ್ನೆಲ್ಲಾ ದೂರ ಮಾಡುವ ಎಲ್ಲ ಔಷಧೀಯ ಗುಣಲಕ್ಷಣಗಳು ಕೂಡ, ಒಂದು ಸಣ್ಣತುಂಡು ಶುಂಠಿಯಲ್ಲಿ ಕಂಡು ಬರುತ್ತದೆ.

ಕಿಡ್ನಿ ಸ್ಟೋನ್‌ಗೆ ಕೂಡ ಶುಂಠಿ ಒಳ್ಳೆಯದು

remedies for kidney stone, ಆಯುರ್ವೇದ ವೈದ್ಯರು ತಿಳಿಸಿರುವ ಕಿಡ್ನಿಗಳಲ್ಲಿ ಸ್ಟೋನ್‌  ಆಗದಂತೆ ತಡೆಯೋ ಆಹಾರಗಳಿವು! - simple and effective ayurvedic remedies for kidney  stones as per ayurveda doctor - Vijaya ...

  • ಇನ್ನೂ ಆಶ್ಚರ್ಯದ ಸಂಗತಿ ಏನೆಂದರೆ, ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿರುವ ಶುಂಠಿಯು ಕಿಡ್ನಿಯಲ್ಲಿ ಕಂಡು ಬರುವ ಕಲ್ಲನ್ನು ನಿವಾರಿಸುವಲ್ಲಿಯೂ ಕೂಡ ಸಹಾಯಕ್ಕೆ ಬರುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ ನಿತಿಕಾ ಕೊಹ್ಲಿ ಅವರು ಹೇಳುತ್ತಾರೆ.
  • ಇದಕ್ಕೆ ಪ್ರಮುಖ ಕಾರಣ, ಈ ಮೂಲಿಕೆಯಲ್ಲಿ ಆ೦ಟಿ ಆಕ್ಸಿಡೆಂಟ್ ಪ್ರಮಾಣ ಸಮೃದ್ಧವಾಗಿ ಅಡಗಿದೆ. ಇವು ದೇಹದೊಳಗೆ ಉರಿಯೂತಕ್ಕೆ ಕಾರಣವಾಗುವ ಫ್ರೀ ರ್ಯಾಡಿಕಲ್ಸ್ ವಿರುದ್ದ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಅಷ್ಟೇ ಅಲ್ಲದೆ ದೇಹದೊಳಗಿನ ಕಲ್ಮಶಗಳಿಗೆ ಕಾರಣ ವಾಗುವ ಟಾಕ್ಸಿನ್‌ನ್ನು ಕಡಿಮೆ ಮಾಡಿ, ದೇಹದ ಪ್ರಮುಖ ಅಂಗವಾಗಿರುವ ಕಿಡ್ನಿ ಹಾಗೂ ಲಿವರ್ ನ ಆರೋಗ್ಯ ವನ್ನು ಕಾಪಾಡುತ್ತದೆ. ಹೀಗಾಗಿ ದೈನಂದಿನ ಅಡುಗೆ ಯಲ್ಲಿ ಶುಂಠಿಯನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ ಇಲ್ಲಾಂದ್ರೆ ಶುಂಠಿ ಚಹಾ ಕುಡಿಯುವ ಅಭ್ಯಾಸ ಕೂಡ ಬಹಳ ಒಳ್ಳೆಯದು.

ತ್ರಿಫಲಾ

ತ್ರಿಫಲಾ

  • ಆಯುರ್ವೇದದಲ್ಲಿ ತ್ರಿಫಲಾಕ್ಕೆ ಬಹಳಷ್ಟು ಪ್ರಮುಖ್ಯ ತೆಯನ್ನು ನೀಡಲಾಗಿದೆ. ಬಹಳ ಹಿಂದಿ ನಿಂದಲೂ ಸಾಂಪ್ರದಾಯಿಕವಾಗಿ ಮೂರು ಬಗೆಯ ಗಿಡಮೂಲಿಕೆ ಗಳನ್ನು ಇದರಲ್ಲಿ ಮಿಶ್ರಣ ಮಾಡಿ ತಯಾರು ಮಾಡುತ್ತಾರೆ.
  • ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುವ ಬೆಟ್ಟದ ನೆಲ್ಲಿಕಾಯಿಯನ್ನು ಕೂಡ ಸೇರಿಸಲಾಗುತ್ತದೆ. ಇನ್ನುಳಿದ ಎರಡು ಸಾಮಾಗ್ರಿಗಳು ಎಂದರೆ ಹರಿತಕಿ, ಬಿಭಿತಕಿ.
  • ಇನ್ನು ಈ ತ್ರಿಫಲದ ಬಗ್ಗೆ ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಇದರಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುವು ದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ, ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ದೂರಮಾಡುತ್ತದೆ.

ಆಯುರ್ವೇದ ತಜ್ಞರ ಪ್ರಕಾರ

ಆಯುರ್ವೇದ ತಜ್ಞರ ಪ್ರಕಾರ

  • ಇನ್ನು ಈ ಆಯುರ್ವೇದಿಕ್ ಮೂಲಿಕೆಯ ಬಗ್ಗೆ ಆಯುರ್ವೇದ ತಜ್ಞರಾದ ಡಾ ನಿತಿಕಾ ಕೊಹ್ಲಿ ಅವರು ಹೇಳುವ ಪ್ರಕಾರ, ದೇಹದಲ್ಲಿ ಸಂಗ್ರಹಣೆಗೊಂಡಿರುವ ವಿಷಕಾರಿ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರಗೆ ಹಾಕಲು ಕಿಡ್ನಿಗಳಿಗೆ ಸಹಾಯ ಮಾಡುವುದು ಮಾತ್ರವಲ್ಲದೆ, ದೇಹದ ಪ್ರಮುಖ ಅಂಗಾಂಗ ಳಲ್ಲಿ ಒಂದಾಗಿರುವ ಕಿಡ್ನಿ ಹಾಗೂ ಲಿವರ್‌ಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.
  • ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ತ್ರಿಫಲಾ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಪ್ರತಿದಿನ ಕುಡಿಯುವುದರಿಂದ, ಕಿಡ್ನಿಗೆ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳು ಕೂಡ ದೂರ ವಾಗುತ್ತದೆ ಅಲ್ಲದೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಅರಿಶಿನ

Health Benefits Of Turmeric In Winter: Why you should add a pinch of  turmeric to your winter diet

  • ಅರಿಶಿನ ತನ್ನಲ್ಲಿ ಅಗಾಧ ಪ್ರಮಾಣದ ಔಷಧಿ ಗುಣ ಲಕ್ಷಣಗಳನ್ನು ಹೊಂದಿರುವ ಆಯುರ್ವೇದ ಗಿಡ ಮೂಲಿಕೆ. ಬಹಳಷ್ಟು ಹಿಂದಿನ ಕಾಲದಿಂದಲೂ ಕೂಡ, ಈ ಚಿನ್ನದ ದೇವತೆ ಅರಿಶಿನವನ್ನು ನಮ್ಮ ಹಿರಿಯರು ಬಳಸುತ್ತಾ ಬಂದಿದ್ದಾರೆ.
  • ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡು ವಲ್ಲಿ ಇವುಗಳ ಪಾತ್ರ ಮರೆಯುವ ಹಾಗಿಲ್ಲ. ಸಾಮಾನ್ಯ ವಾಗಿ ಕಾಡುವ ಶೀತ, ಕೆಮ್ಮು, ಜ್ವರದ ಸಮಸ್ಯೆಯಿಂದ ಹಿಡಿದು ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುವ, ಇವುಗಳ ಪಾತ್ರ ಮರೆಯುವ ಹಾಗಿಲ್ಲ.
  • ಪ್ರಮುಖವಾಗಿ ಅರಿಶಿನದಲ್ಲಿ ಉತ್ಕರ್ಷಣ ನಿರೋಧಕ ಅಂದರೆ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿ ರುವುದರ ಜೊತೆಗೆ ದೇಹದ ಉರಿಯೂತ ಅಂಶಗಳನ್ನು ನಿವಾರಣೆ ಮಾಡುವ ಗುಣಲಕ್ಷಣಗಳು ಇದರಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ, ಇದರೊಂದು ಆರೋಗ್ಯಕಾರಿ ಗಿಡ ಮೂಲಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಹೀಗಾಗಿ ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯ ಬೇಕೆಂದರೆ, ಪ್ರತಿದಿನ ಅರಿಶಿನ ಮಿಶ್ರಿತ ಹಾಲು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

simple and effective ayurvedic remedies for kidney stones as per ayurveda doctor.