ಬಿಪಿ-ಶುಗರ್ ನಿಯಂತ್ರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಗೆ ಈ 3 ಬಗೆಯ ಎಲೆಗಳನ್ನು ಜಗಿಯಿರಿ!

21-02-23 08:00 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸ ಬೇಕೆಂದರೆ, ಆರೋಗ್ಯಕಾರಿ ಆಹಾರಪದ್ಧತಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ, ಖಂಡಿತವಾಗಿಯೂ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಜನರ ಇಂದಿನ ಚಟುವಟಿಕೆ ಇಲ್ಲದ ಜಡ ಜೀವನಶೈಲಿ, ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿ ಯಿಂದಾಗಿ, ಮನುಷ್ಯನಿಗೆ ಸಣ್ಣ-ಪುಟ್ಟ ಕಾಯಿಲೆ ಗಳಿಂದ ಹಿಡಿದು, ದೀರ್ಘ ಕಾಲದ ಕಾಯಿಲೆಯಗಳು ವಯಸ್ಸಲ್ಲದ ವಯಸ್ಸಿ ನಲ್ಲಿ ಕಂಡು ಬರುತ್ತಿದೆ. ಅದರಲ್ಲೂ ಬಿಪಿ-ಶುಗರ್, ಹೃದಯದ ಸಮಸ್ಯೆ ಗಳಂತಹ ಮಾರಕ ಕಾಯಿಲೆಗಳು ಸೈಲೆಂಟಾಗಿ, ಹೆಚ್ಚಿನವರಲ್ಲಿ ಕಂಡು ಬರುವುದು ನಿಜಕ್ಕೂ ಆಘಾತಕಾರಿ ಸಂಗತಿ.

ಇದಕ್ಕೆಲ್ಲಾ ಪ್ರಮುಖ ಕಾರಣಗಳನ್ನು ನೋಡುವುದಾದರೆ, ಮೊದಲೇ ಹೇಳಿದ ಹಾಗೆ ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸದೇ ಇರುವುದರಿಂದ ಇಂತಹ ಸೈಲೆಂಟ್ ಕಿಲ್ಲರ್ ಕಾಯಿಲೆಗಳನ್ನು ಮನುಷ್ಯನನ್ನು ಟಾರ್ಗೆಟ್ ಮಾಡುತ್ತಿದೆ, ಬನ್ನಿ ಇಂದಿನ ಲೇಖನದಲ್ಲಿ ಮಧು ಮೇಹ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಿಸುವ ಎಲೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ, ಮುಂದೆ ಓದಿ...

ಕರಿಬೇವು

Herbal Remedies to lower blood sugar level: இயற்கையாகவே உங்க இரத்த சர்க்கரை  அளவைக் குறைப்பதற்கு உதவும் இந்த மூலிகைகள் என்னென்ன தெரியுமா? - Tamil BoldSky

  • ಕರಿಬೇವು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮನುಷ್ಯನ ಹಲವಾರು ಬಗೆಯ ಅನಾ ರೋಗ್ಯ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ.
  • ಪ್ರಮುಖವಾಗಿ ಇತ್ತೀಚಿಗೆ ಸಮಾಜದಲ್ಲಿ ಜನರು ಎದುರಿ ಸುತ್ತಿರುವ ಸಾಮಾನ್ಯ ಸಮಸ್ಯೆಗಳಾದ ಮಧುಮೇಹ, ರಕ್ತದೊತ್ತಡ ದಂತಹ ಆರೋಗ್ಯ ಸಮಸ್ಯೆಗಳ ಸರ ಮಾಲೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
  • ಆರೋಗ್ಯ ತಜ್ಞರು ಹೇಳುವ ಪ್ರಕಾರ ಈ ಕರಿಬೇವಿನ ಎಲೆಗಳಲ್ಲಿ ಪ್ರಬಲ ಆಂಟಿ-ಆಕ್ಸಿಡೆಂಟ್ , ಹಾಗೂ ಫ್ಲೇವನಾಯ್ಡ್ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆ ಆಗದಂತೆ ತಡೆದು, ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ, ಅಷ್ಟೇ ಅಲ್ಲದೆ ರಕ್ತದೊತ್ತಡದ ಕಾಯಿಲೆಯನ್ನು ಕೂಡ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ.

ಹೀಗೆ ಮಾಡಿ:

ಹೀಗೆ ಮಾಡಿ:

  • ಪ್ರತಿದಿನ ಎದ್ದ ಕೂಡಲೇ ಬೆಳಗಿನ ಖಾಲಿ ಹೊಟ್ಟೆಗೆ ಪ್ರತಿ ದಿನ 5 - 10 ಕರಿಬೇವಿನ ಎಲೆಗಳನ್ನು ಜಗಿದು ಅದರ ರಸ ವನ್ನು ನಿಧಾನಕ್ಕೆ ಹೀರುತ್ತಾ ಬನ್ನಿ.
  • ಸಾಧ್ಯವಾದಷ್ಟು ಆಹಾರ ಪದ್ಧತಿಯಲ್ಲಿ ಅಂದರೆ ಸಾಂಬಾರು ಮಾಡಿದರೆ, ಒಗ್ಗರಣೆಗಳಲ್ಲಿ ಪಲ್ಯಗಳಿಗೆ ಕರಿಬೇವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ.

ತುಳಸಿ ಎಲೆಗಳು

Having these three leaves in the morning is said to treat hypertension and  diabetes | The Times of India

  • ಹಿಂದಿನ ಕಾಲದಿಂದಲೂ ಕೂಡ ಅಷ್ಟೇ, ಹಿರಿಯರು ತುಳಸಿ ಗಿಡವನ್ನು ಸಾಕ್ಷಾತ್ ಮಹಾಲಕ್ಷ್ಮಿ‌ಗೆ ಹೋಲಿ ಸುತ್ತಾರೆ. ಈ ಗಿಡದ ಪ್ರತಿಯೊಂದು ಎಲೆಗಳ ಲ್ಲಿಯೂ ಕೂಡ, ಸಕತ್ ಆರೋಗ್ಯ ಪ್ರಯೋಜನಗಳಿವೆ ಎಂದು ನಂಬಲಾಗಿದೆ.
  • ಹೀಗಾಗಿ ಪ್ರತಿದಿನ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಮೂರು-ನಾಲ್ಕು ತುಳಸಿ ಎಲೆಗಳನ್ನು ಜಗಿದು, ಅದರ ರಸವನ್ನು ಹೀರು ತ್ತಾ ಬಂದರೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗು ವುದು ಮಾತ್ರವಲ್ಲದೆ, ಅನೇಕ ರೀತಿಯ ಕಾಯಿಲೆಗಳು ಕೂಡ ನಮ್ಮಿಂದ ದೂರ ವಾಗುತ್ತದೆ. ​

ತುಳಸಿ ಎಲೆಗಳ ಚಹಾ

7 Most Useful Health Benefits of Tulsi Plant

  • ಇನ್ನು ಸಕ್ಕರೆಕಾಯಿಲೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ತುಳಸಿ ಎಲೆಗಳನ್ನು ಬಳಸಿ ಮಾಡಿದ ಚಹಾ ತುಂಬಾನೇ ಪ್ರಯೋಜನಕಾರಿ.
  • ದಿನನಿತ್ಯ ಟೀ ಮಾಡುವಾಗ ಜೊತೆಗೆ ನಾಲ್ಕೈದು ತುಳಸಿ ಎಲೆಗಳನ್ನು ಜೊತೆಯಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ ಚಹಾ ತಯಾರು ಮಾಡಿ, ಬಿಸಿ ಬಿಸಿ ಇರುವಾಗಲೇ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ಮಧುಮೇಹ ಕೂಡ ಕಂಟ್ರೋಲ್‌ಗೆ ಬರುತ್ತದೆ.
  • ಅಷ್ಟೇ ಅಲ್ಲದೆ ಈಗಾಗಲೇ ಅಧಿಕರಕ್ತದೊತ್ತಡದ ಕಾಯಿಲೆ ಗಳಿಂದ ಬಳಲುತ್ತಿರುವವರು ಕೂಡ, ತುಳಸಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಇದರಿಂದ ರಕ್ತನಾಳಗಳಲ್ಲಿ ಏರುಪೇರು ಉಂಟಾಗದೇ ರಕ್ತಸಂಚಾರ ಸರಾಗವಾಗಿ, ಹೃದಯಕ್ಕೆ ಪೂರೈಕೆ ಆಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುವುದು ಮಾತ್ರವಲ್ಲದೆ, ರಕ್ತದೊತ್ತಡದ ಸಮಸ್ಯೆಯೂ ಕೂಡ ನಿಯಂತ್ರಣಕ್ಕೆ ಬರುವುದು.
  • ಒಳ್ಳೆಯ ಫಲಿತಾಂಶಕ್ಕಾಗಿ, ಪ್ರತಿದಿನ ಬೆಳಗ್ಗೆ ತುಳಸಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಇಲ್ಲಾಂದ್ರೆ ಮೂರು-ನಾಲ್ಕು ತುಳಸಿ ಎಲೆಗಳನ್ನು ಜಿಗಿದು, ಅದರ ರಸವನ್ನು ಹೀರುತ್ತಾ ಬಂದರೆ, ಇಂತಹ ದೀರ್ಘಕಾಲದ ಕಾಯಿಲೆ ಗಳನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.

ಬೇವಿನ ಎಲೆಗಳು

Eat neem leaves on an empty stomach every morning, disease will stay away  from you | Neem Leaves Benefits:ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ಬೇವಿನ ಎಲೆ  ಸೇವಿಸಿ, ಕಾಯಿಲೆಗಳಿಗೆ ಹೇಳಿ ಬೈ, ಬೈ News in

  • ಬೇವಿನ ಎಲೆಗಳು ತನ್ನಲ್ಲಿ ಕಹಿ ಗುಣಲಕ್ಷಣಗಳನ್ನು ಹೊಂದಿದೆ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯದ ವಿಷ್ಯದಲ್ಲಿ ಈ ಸೊಪ್ಪನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯೇ!
  • ಪ್ರಮುಖವಾಗಿ ಈ ಎಲೆಗಳಲ್ಲಿ ಆಂಟಿ ಇಂಪ್ಲಾಮೇಟರಿ, ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಹೇರಳವಾಗಿ ಕಂಡು ಬರುವುದರಿಂದ, ಇದೊಂದು ಆರೋಗ್ಯ ಕಾರಿ ಸೊಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಪ್ರಮುಖವಾಗಿ ಮಧುಮೇಹ ರೋಗಿಗಳು,ಪ್ರತಿದಿನ ಖಾಲಿ ಹೊಟ್ಟೆ ಮೂರು-ನಾಲ್ಕು ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಗೆ ಜಗಿದು, ಅದರ ರಸವನ್ನು ನಿಧಾನಕ್ಕೆ ಹೀರುತ್ತಾ ಬಂದರೆ, ರಕ್ತದಲ್ಲಿನ ಗ್ಲುಕೋಸ್ ಮಟ್ಟ ಅಚ್ಚುಕಟ್ಟಾಗಿ ನಿರ್ವಹಣೆ ಆಗುವುದರ ಜೊತೆಗೆ, ಈ ಕಾಯಿಲೆಯೂ ಕೂಡ ನಿಯಂತ್ರಣದಲ್ಲಿರುತ್ತದೆ.

chew these three types of leaves in morning to control bp and diabetes naturally.