ನೋಡಿ, ಇಂತಹ ಟೀಗಳನ್ನು ಕುಡಿಯುತ್ತಾ ಬಂದರೆ, ಬಿಪಿ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ!

23-02-23 08:10 pm       Source: Vijayakarnataka   ಡಾಕ್ಟರ್ಸ್ ನೋಟ್

ಶುಂಟಿ ಟೀ, ಗ್ರೀನ್ ಟೀ ಇಂತಹ ಗಿಡಮೂಲಿಕೆ ಚಹಾಗಳನ್ನು ಸೇವನೆ ಮಾಡುತ್ತಾ ಬಂದರೆ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು

ರಕ್ತದೊತ್ತಡ ಹಾಗೂ ಮಧುಮೇಹ, ಈ ಎರಡೂ ಕಾಯಿಲೆಗಳು ಪುರುಷರ ಹಾಗೂ ಮಹಿಳೆಯರು ಎನ್ನುವ ಯಾವುದೇ ಭೇದಭಾವ ತೋರದೆ, ವಯಸ್ಸಲ್ಲದ ವಯಸ್ಸಿನಲ್ಲಿ ಕಾಡುವ ಖತರ್ನಾಕ್ ಕಾಯಿಲೆ! ಅದರಲ್ಲೂ ಮಧ್ಯವಯಸ್ಸು ದಾಟಿದ ಬಳಿಕ, ಈ ಎರಡೂ ದೀರ್ಘಕಾಲದ ಕಾಯಿಲೆ ಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವರಲ್ಲಿ ಈ ಕಾಯಿಲೆಗಳು ಅನುವಂಶೀಯವಾಗಿ ಕಂಡು ಬಂದರೆ, ಇನ್ನೂ ಕೆಲವರಲ್ಲಿ ಜೀವನಶೈಲಿಯ ಪ್ರಭಾವದಿಂದಾಗಿ ಅಂಟಿಕೊಳ್ಳುತ್ತದೆ.

ಇನ್ನು ಈ ಸೈಲೆಂಟ್ ಕಿಲ್ಲರ್ ಕಾಯಿಲೆಯ ಬಗ್ಗೆ ಸ್ವಲ್ಪ ಎಚ್ಚರಿಕೆ ತಪ್ಪಿದರೆ, ಮುಂದಿನ ದಿನಗಳಲ್ಲಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಪಾರ್ಶ್ವವಾಯು ಮತ್ತು ಮೂತ್ರಪಿಂಡಗಳ ಸಮಸ್ಯೆಗೆ ಕಾರಣ ವಾಗುತ್ತದೆ. ಹೀಗಾಗಿ ಆದಷ್ಟು ಆರೋಗ್ಯಕಾರಿ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಅನುಸರಿಸಿ ಕೊಂಡು ಹೋದರೆ, ಮುಂದಿನ ದಿನಗಳಲ್ಲಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಬನ್ನಿ ಇಂದಿನ ಲೇಖನದಲ್ಲಿ, ಅಧಿಕ ರಕ್ತದೊತ್ತಡದ ಸಮಸ್ಯೆ ನಿಯಂತ್ರಣ ಮಾಡಿ ಹೃದಯದ ಆರೋಗ್ಯ ವನ್ನು ಕಾಪಾಡುವ, ವಿವಿಧ ಬಗೆಯ ಚಹಾಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೊಡೋಣ ಬನ್ನಿ...

ಅಧಿಕ ರಕ್ತದೊತ್ತಡಕ್ಕೆ ಶುಂಠಿ ಚಹಾ!

Should you drink ginger tea everyday? | - Times of India

  • ಭಾರತೀಯರ ಅಡುಗೆಯಲ್ಲಿ ಪ್ರಮುಖವಾಗಿ ಬಳಸಲ್ಪಡು ವಂತಹ ಶುಂಠಿಯಲ್ಲಿ ಆರೋಗ್ಯ ಸಮಸ್ಯೆ ಗಳನ್ನು ದೂರ ಮಾಡುವ ಎಲ್ಲಾ ಬಗೆಯ ಔಷಧೀಯ ಗುಣಗಳು ಕೂಡ ಇವೆ.
  • ಆಯುರ್ವೇದ ಪದ್ಧತಿಯಲ್ಲಿ ಕೂಡ ಶುಂಠಿಯನ್ನು ಔಷಧಿ ಯಾಗಿ ಬಳಸಲಾಗುತ್ತದೆ. ಹೀಗಾಗಿ ಅಧಿಕ ರಕ್ತ ದೊತ್ತಡದ ಸಮಸ್ಯೆ ಇದ್ದವರು, ಪ್ರತಿ ದಿನ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿ ಶುಂಠಿಯನ್ನು ಬಳಕೆ ಮಾಡುವುದರಿಂದ ಅಥವಾ ಬೆಳಗ್ಗೆ ಎದ್ದ ಕೂಡಲೇ ಶುಂಠಿ ಚಹಾ ತಯಾರು ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಳ್ಳುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗುತ್ತದೆ.

ಗ್ರೀನ್ ಟೀ

How to Make Tasty & Healthy Green Tea?

  • ಆಂಟಿ ಆಕ್ಸಿಡೆಂಟ್ ಪ್ರಮಾಣ ಅಧಿಕವಾಗಿ ಕಂಡು ಬರುವ ಇನ್ನೊಂದು ಚಹಾ ಎಂದರೆ ಅದು ಗ್ರೀನ್ ಟೀ.
  • ತನ್ನಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಹಾಗೂ ಪೋಷಕಾಂಶಗಳು ಕಂಡು ಬರುವುದರಿಂದ ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಲ್ಲಿ ಈ ಟೀ ತುಂಬಾನೇ ಫೇಮಸ್ ಆಗಿ ಬಿಟ್ಟಿದೆ.
  • ಹೀಗಾಗಿ  ಅಧಿಕ ರಕ್ತದೊತ್ತಡ ಇರುವ ರೋಗಿಗಳು, ಪ್ರತಿದಿನ, ಕೆಫೀನ್ ಅಂಶ ಹೆಚ್ಚಿರುವ, ಟೀ-ಕಾಫಿ ಕುಡಿ ಯುವ ಬದಲು, ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಅಧಿಕ ರಕ್ತದೊತ್ತಡದ ಸಮಸ್ಯೆ ನಿಯಂ ತ್ರಣಕ್ಕೆ ಬರುವುದು ಎನ್ನುವುದು ಡಾಕ್ಟರ್ ಮಾತು.
  • ರಕ್ತದೊತ್ತಡದ ಹೆಚ್ಚಾಗಿ ಇರುವವರು ಪ್ರತಿ ದಿನ ಒಂದು ಅಥವಾ ಎರಡು ಕಪ್ ಗ್ರೀನ್ ಟೀ ಕುಡಿಯಬಹುದು.

ದಾಸವಾಳ ಹೂವಿನ ಚಹಾ

What To Drink to Quickly Lower Blood Pressure | EatingWell

  • ದೀರ್ಘಕಾಲದಿಂದಲೂ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಆಂಟಿ ಆಕ್ಸಿಡೆಂಟ್ ಅಂಶ ಅಧಿಕ ಪ್ರಮಾಣದಲ್ಲಿರುವ ದಾಸವಾಳ ಹೂವಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಂತೆ.
  • ಸಂಶೋಧನೆಗಳು ಹೇಳುವ ಹಾಗೆ, ರಕ್ತದೊತ್ತಡದ ಇರುವ ರೋಗಿಗಳು, ಪ್ರತಿದಿನ ಮಿತವಾಗಿ, ದಾಸವಾಳ ಹೂವಿನ ಚಹಾ ಕುಡಿಯುವುದರಿಂದ, ರಕ್ತನಾಳಗಳ ಮೇಲೆ ಉಂ ಟಾಗುವ ಒತ್ತಡ ಕಡಿಮೆಯಾಗುತ್ತದೆ ಜೊತೆಗೆ ಹೃದಯದ ಆರೋಗ್ಯಕ್ಕೆ ಕೂಡ ತುಂಬಾನೇ ಸಹಕಾರಿ ಯಾಗುತ್ತದೆ.

ಓಲಾಂಗ್ ಚಹಾ

ಓಲಾಂಗ್ ಚಹಾ

  • ಈ ಚಹಾದಲ್ಲೂ ಕೂಡ ಅಷ್ಟೇ ಗ್ರೀನ್ ಟೀಯಲ್ಲಿ ಸಿಗು ವಷ್ಟೇ ಆಂಟಿ ಆಕ್ಸಿಡೆಂಟ್ ಅಂಶಗಳು ಕಂಡು ಬರುತ್ತದೆ.
  • ಹೀಗಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು, ಮಿತವಾಗಿ ಬಿಸಿಬಿಸಿಯಾದ ಓಲಾಂಗ್ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ಕಾಯಿಲೆಯನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ.

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀ

  • ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪ್ರತಿದಿನ ಕುಡಿಯುವ ಚಹಾದಿಂದ ನಮಗೆ ಆರೋಗ್ಯ ಲಾಭಗಳು ಸಿಗಬೇಕು ಎಂದರೆ ಚಹಾಗೆ  ಹಾಲು ಮತ್ತು ಸಕ್ಕರೆಯನ್ನು ಬೆರೆಸದೆಕುಡಿಯಬೇಕು.
  • ಹೀಗಿದ್ದಾಗ ಮಾತ್ರ ನಾವು ಕುಡಿಯುವ ಈ ಬ್ಲಾಕ್ ಟೀ ಯಿಂದ, ಅಪಾರ ಪ್ರಮಾಣದ ಪ್ರಯೋಜನಗಳು ನಮಗೆ ಸಿಗುತ್ತದೆಯಂತೆ
  • ಒಂದು ಅಧ್ಯಯನಗಳ ವರದಿಯ ಪ್ರಕಾರ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು, ಹಾಲು ಸಕ್ಕರೆ ಬೆರೆಸದೆ ಇರುವ ಟೀ ಅಂದರೆ ಬ್ಲ್ಯಾಕ್ ಟೀಯನ್ನು ದಿನಕ್ಕೆ ಎರಡು ಮೂರು ಬಾರಿ ಕುಡಿಯುತ್ತಾ ಬಂದರೆ, ಅವರಲ್ಲಿ ರಕ್ತದ ಒತ್ತಡ ಎರಡರಿಂದ ಮೂರು ಪಾಯಿಂಟ್ ಕಡಿಮೆಯಾಗುತ್ತದೆಯಂತೆ!

These five herbal teas that lower your blood pressure naturally.