ನಿಮಗೆ ಗೊತ್ತಾ? ಡಾರ್ಕ್ ಚಾಕೋಲೆಟ್ ತಿನ್ನುವವರಿಗೆ, ಹಾರ್ಟ್ ಅಟ್ಯಾಕ್ ಸಮಸ್ಯೆ ಬರಲ್ವಂತೆ!

24-02-23 08:23 pm       Source: Vijayakarnataka   ಡಾಕ್ಟರ್ಸ್ ನೋಟ್

ಸಕ್ಕರೆ ಕಾಯಿಲೆ ಇರುವವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಡಾರ್ಕ್ ಚಾಕ್ಲೇಟ್, ಹಾರ್ಟ್ ಫ್ರೆಂಡ್ಲಿ ಆಹಾರ.

ದೇಹದ ಪ್ರಮುಖ ಅಂಗಾಂಗಳಲ್ಲಿ ಒಂದಾಗಿರುವ, ಹೃದಯದ ಆರೋಗ್ಯವನ್ನು ಪ್ರತಿಯೊಬ್ಬರೂ ಕೂಡ ಚೆನ್ನಾಗಿಟ್ಟುಕೊಂಡಿರಬೇಕು ಮತ್ತು ಅದರ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ನಾವು ಹಲವಾರು ರೀತಿಯ ಕಾಯಿಲೆಗಳಿಗೆ ತುತ್ತಾಗುವಂತಹ ಸಾಧ್ಯತೆಗಳು ಇರುವುದು.

ಹೀಗಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬರಬಾರದೆಂದರೆ, ಮೊದಲಿಗೆ ನಾವು ಆರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸಬೇಕು ಆರೋಗ್ಯಕಾರಿ ಆಹಾರ ಪದ್ಧತಿಯ ಜೊತೆಗೆ, ವ್ಯಾಯಾಮ, ಯೋಗಾಭ್ಯಾಸಗಳನ್ನು ಮಾಡುತ್ತಲಿರಬೇಕು. ಬನ್ನಿ ಇಂದಿನ ಲೇಖನದಲ್ಲಿ ಹೃದಯದ ಆರೋಗ್ಯವನ್ನು ವೃದ್ಧಿಸುವಲ್ಲಿ ಡಾರ್ಕ್ ಚಾಕೋಲೆಟ್ ಹೇಗೆಲ್ಲಾ ನೆರವಿಗೆ ಬರುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ...

ಡಾರ್ಕ್ ಚಾಕಲೇಟ್

7 Dark Chocolate Benefits, and How Much You Should Eat – Cleveland Clinic

  • ಒಂದೊಂದು ಬಗೆಯ ಆಹಾರ ಪದಾರ್ಥಗಳು ನಮಗೆ ಗೊತ್ತಿಲ್ಲ ದಂತೆ, ನಮ್ಮ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಎಲ್ಲರೂ ಇಷ್ಟಪಟ್ಟು ಸೇವಿಸುವ ಸಿಹಿತಿನಿಸುವ, ಅದುವೇ ಡಾರ್ಕ್ ಚಾಕಲೇಟ್!​
  • ಹೌದು, ಪ್ರಮುಖವಾಗಿ ಈ ಚಾಕಲೇಟ್‌ನಲ್ಲಿ ಫ್ಲೇವ ನಾಯ್ಡ್ ಅಂಶಗಳ ಪ್ರಮಾಣ ಹೆಚ್ಚಾಗಿ ಕಂಡು ಬರುವು ದರಿಂದ, ದೇಹ ದಲ್ಲಿ ರಕ್ತಸಂಚಾರ ಸಮರ್ಪಕವಾಗಿ ನಡೆಯುವಂತೆ ಮಾಡುವುದು, ಮಾತ್ರವಲ್ಲದೆ ಹೃದ ಯಾಘಾತ ಮತ್ತು ಹೃದಯ ರಕ್ತನಾಳದ ಕಾಯಿಲೆ ಗಳನ್ನು ದೂರ ಮಾಡುತ್ತದೆ. ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಸಮಸ್ಯೆ ಹೊಂದಿದವ ರಿಗೂ ಕೂಡ ಇದರಿಂದ ಸಾಕಷ್ಟು ಅನುಕೂಲವಿದೆ.

ಡಾರ್ಕ್ ಚಾಕೋಲೆಟ್ ಹೃದಯಕ್ಕೆ ಒಳ್ಳೆಯದಂತೆ

ಡಾರ್ಕ್ ಚಾಕೋಲೆಟ್ ಹೃದಯಕ್ಕೆ ಒಳ್ಳೆಯದಂತೆ

  • ಇತ್ತೀಚಿಗೆ ನಡೆದ ಒಂದು ಅಧ್ಯಾಯಾನದ ಪ್ರಕಾರ, ಮಿತವಾಗಿ ಡಾರ್ಕ್ ಚಾಕೋಲೆಟ್ ಸೇವನೆ ಮಾಡುವು ದರಿಂದ, ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗಿದೆ.
  • ಹಾಗಂತ ನನಗೆ ಚಾಕೋಲೆಟ್ ಇಷ್ಟ ಎಂದು, ಮಿತಿಮೀರಿ ತಿನ್ನುವುದಕ್ಕೆ ಹೋಗಬಾರದು! ಬದಲಿಗೆ ಅಧ್ಯಾಯನ ಕಾರರು ಹೇಳುವ ಹಾಗೆ, ಮಿತವಾಗಿ ಅಂದರೆ, ಪ್ರತಿದಿನ ೫೦ ಗ್ರಾಂನಷ್ಟು ಡಾರ್ಕ್‌ ಚಾಕೋಲೆಟ್ ಅನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ.​

ಅಧಿಕರಕ್ತದೊತ್ತಡದ ಸಮಸ್ಯೆಯೂ ಕೂಡ ದೂರವಾಗುವುದು

High Blood Pressure (Hypertension): Symptoms and More

  • ಹೀಗಾಗಿ ಮಿತವಾಗಿ ಡಾರ್ಕ್ ಚಾಕೋಲೆಟ್ ಸೇವನೆ ಮಾಡುವ ಅಭ್ಯಾಸವನ್ನು ಮಾಡುತ್ತಾ ಬರುವುದರಿಂದ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗು ವುದರ ಜೊತೆಗೆ, ಅಧಿಕ ರಕ್ತದ ಒತ್ತಡದ ಸಮಸ್ಯೆಯೂ ಕೂಡ ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ.
  • ಇದರಿಂದಾಗಿ ಪ್ರಾಣಕ್ಕೆ ಅಪಾಯಕಾರಿ ಆಗಿರುವಂತಹ ಹೃದ ಯಾಘಾತ, ಪಾರ್ಶುವಾಯು ಇನ್ನಿತರ, ಆರೋಗ್ಯ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತವೆ.​

ಈ ಸಮಸ್ಯೆ ಇರುವವರು ಚಾಕಲೇಟ್ ಸೇವಿಸಬೇಡಿ

20 Amazing Health Benefits of Eating dark Chocolates

  • ಈಗಾಗಲೇ ಅಧಿಕ ರಕ್ತದೊತ್ತಡ ಕೈಮೀರಿ ಹೋಗಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಜಾಸ್ತಿ ಆಗಿದ್ದರೆ, ಯಾವುದೇ ಕಾರಣಕ್ಕೂ ವೈದ್ಯರು ನೀಡಿರುವ ಮಾತ್ರೆ ಅಥವಾ ಔಷಧಿಗಳನ್ನು ಬಿಟ್ಟು ಡಾರ್ಕ್ ಚಾಕಲೇಟ್ ತಿನ್ನಲು ಮುಂದಾಗಬಾರದು.
  • ಈ ಸಮಯದಲ್ಲಿ ವೈದ್ಯರು ನೀಡಿರುವ ಸಲಹೆಗಳನ್ನು ಸರಿಯಾಗಿ ಅನುಸರಿಸಿಕೊಂಡು, ಅವರು ಸೂಚಿಸಿರುವ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು
  • ಇದರ ಜೊತೆಗೆ, ಆರೋಗ್ಯಕರವಾದ ಆಹಾರ ಪದ್ಧತಿ ಹಾಗೂ ನಿಯಮಿತವಾಗಿ ವ್ಯಾಯಾಮವನ್ನು ಮಾಡಿಕೊಂಡು ಉತ್ತಮ ಜೀವನಶೈಲಿಯನ್ನು ಅನುಸರಿಸ ಬೇಕು.

ಕೊನೆಯ ಮಾತು

Is dark chocolate good for you? Health benefits of dark chocolate explained  | GoodTo

  • ಪ್ರತಿದಿನ ಮಿತವಾಗಿ ಈ ಡಾರ್ಕ್‌ ಚಾಕೋಲೆಟ್ ಸೇವನೆ ಮಾಡುತ್ತಾ ಬರುವುದರಿಂದ, ಹೃದಯದ ಆರೋಗ್ಯ ಉತ್ತಮಗೊಳಿಸುವುದರ ಜೊತೆಗೆ, ದೇಹದಲ್ಲಿ ಸಂತೋಷ ಕರ ಹಾರ್ಮೋನ್ ಎಂದು ಕರೆಸಿ ಕೊಳ್ಳುವ ಎಂಡಾ ರ್ಫಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದರಿಂದ ಮಾನಸಿಕ ಒತ್ತಡವನ್ನು ಕ್ರಮೇಣವಾಗಿ ದೂರವಾಗುತ್ತ ಹೋಗುತ್ತದೆ.
  • ಆರೋಗ್ಯವೃದ್ಧಿಸುವ ಸಲುವಾಗಿ ಮೊಳಕೆ ಕಟ್ಟಿದ ಕಾಳುಗಳು ಅಥವಾ ಆರೋಗ್ಯಕರ ಧಾನ್ಯಗಳ ಸೇವನೆ ಮಾಡುವ ಸಂದರ್ಭ ದಲ್ಲಿ ಡಾರ್ಕ್ ಚಾಕೋಲೆಟ್ ಚೂರುಗಳನ್ನು ಬಳಕೆಮಾಡಿ ಸೇವನೆ ಮಾಡಿದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು.

study reveals that dark chocolate can be good for your heart health.