ಹೈ ಬಿಪಿ ಇರುವವರು, ಜಾಸ್ತಿ ಕಾಫಿ ಕುಡಿಯಬಾರದಂತೆ ನಿಜಾನಾ?

02-03-23 07:33 pm       Source: Vijayakarnataka   ಡಾಕ್ಟರ್ಸ್ ನೋಟ್

ಕಾಫಿ ಕುಡಿಯುವ ಅಭ್ಯಾಸ ಯಾರಿಗೆ ತಾನೇ ಇಲ್ಲ ಹೇಳಿ. ಆದರೆ ಅತಿಯಾದರೆ ಇದೂ ಕೂಡ ಹಾರ್ಟ್ ಗೆ ತೊಂದರೆ ಎನ್ನುತ್ತಾರೆ.

ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬೆಡ್ ಕಾಫಿಯಿಂದ ಪ್ರಾರಂಭವಾಗುವ ನಮ್ಮ ದಿನಚರಿ ಹಾಗೂ ಹೀಗೂ ನಡೆಯುತ್ತದೆ. ದಿನದ ಕೆಲಸದ ಒತ್ತಡದಿಂದ ಪಾರಾಗಲು ಮಧ್ಯ ಮಧ್ಯ ಕಾಫಿ ಕುಡಿಯುವುದು, ಟೀ ಕುಡಿಯುವುದು ಇದ್ದೇ ಇರುತ್ತದೆ.

ಆದರೆ ಸಂಶೋಧಕರು ಹೇಳುವ ಹಾಗೆ ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದು ಅಥವಾ ಪ್ರತಿ ದಿನ ಗ್ರೀನ್ ಟೀ ಕುಡಿಯುವುದು ಹೃದಯ ರಕ್ತನಾಳದ ಕಾಯಿಲೆಗಳನ್ನು ಅಥವಾ ಹೃದಯದ ತೊಂದರೆಯನ್ನು ಹೆಚ್ಚಿಸುವುದಿಲ್ಲ. ಏಕೆಂದರೆ ಕಾಫಿ ಅಥವಾ ಗ್ರೀನ್ ಟೀ ತನ್ನಲ್ಲಿ ಕೆಫೈನ್ ಅಂಶವನ್ನು ಒಳಗೊಂಡಿದೆ. ಜೊತೆಗೆ ಪಾಲಿಫಿನಲ್ ಸಹ ಇದರಲ್ಲಿ ಇರುವುದರಿಂದ ಇದು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ...

ಹೆಚ್ಚಿನ ಕಾಫಿ ಕುಡಿಯುವುದರ ಅಡ್ಡಪರಿಣಾಮಗಳು

Can coffee cause a blood pressure spike? | The Times of India

  • ನೀವು ಒಂದು ವೇಳೆ ಕಾಫಿ ನಿಯಮಿತವಾಗಿ ಕುಡಿದರೆ ಅದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಆದರೆ ಒಂದು ದಿನಕ್ಕೆ ಎರಡು ಕಪ್ ಅಥವಾ ಮೂರು ಕಪ್ ಮತ್ತು ಅದಕ್ಕಿಂತಲೂ ಹೆಚ್ಚಿನ ಕಾಫಿ ಕುಡಿದರೆ ಅದರಿಂದ ಹೃದಯಕ್ಕೆ ತೊಂದರೆ ಅಥವಾ ಮುಂದಿನ ದಿನಗಳಲ್ಲಿ ಪಾರ್ಶ್ವವಾಯು ಸಹ ಎದುರಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಜಾಸ್ತಿ ಕಾಫಿ ಕುಡಿಯಬಾರದು...

Coffee and Caffeine — How Much Should You Drink?

  • ನಿಯಮಿತವಾಗಿ ಕಾಫಿ ಕುಡಿಯುವುದರಿಂದ ಹೃದಯಕ್ಕೂ ಸಹ ಅನುಕೂಲವಾಗುತ್ತದೆ ಮತ್ತು ಮಧುಮೇಹ ಸಮಸ್ಯೆ ನಿಯಂತ್ರಣವಾಗುತ್ತದೆ. ಕೆಲವರಿಗೆ ಕ್ಯಾನ್ಸರ್ ಮತ್ತು ಮಾನಸಿಕ ಖಿನ್ನತೆ ಕೂಡ ಉತ್ತಮವಾಗಿ ನಿರ್ವಹಣೆಯಾಗುತ್ತದೆ ಎಂದು ಹೇಳುತ್ತಾರೆ.
  • ಆದರೆ ಕಾಫಿಯ ಈ ರೀತಿಯ ಪ್ರಯೋಜನಗಳು ಅದರಲ್ಲಿರುವ ಕೆಫಿನ್ ಅಂಶದ ಕಾರಣದಿಂದ ಅಥವಾ ಬೇರೆ ಕಾರಣಗಳಿಂದ ಎಂಬುದು ತಿಳಿದಿಲ್ಲ.
  • ಆದರೆ ಹೆಚ್ಚಿನ ಪ್ರಮಾಣದ ಕಾಫಿ ಕುಡಿಯು ವುದರಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ, ಮಾನಸಿಕ ಖಿನ್ನತೆ ಎದು ರಾಗುತ್ತದೆ, ನಿದ್ರಾಹೀನತೆ ಸಮಸ್ಯೆ ಜೊತೆಗೆ ಹೃದಯದ ತೊಂದರೆಗಳು ಸಹ ಕಾಣಿಸುತ್ತವೆ ಎಂಬುದಂತೂ ಸತ್ಯ ಎಂದು ಸಂಶೋಧಕರು ಹೇಳುತ್ತಾರೆ.​

ಜಪಾನ್ ದೇಶದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ...

Top Tips to Maintain a Healthy Blood Pressure | OneWelbeck

  • ಇದೇ ನಿಟ್ಟಿನಲ್ಲಿ ಜಪಾನ್ ದೇಶದಲ್ಲಿ ನಡೆದ ಒಂದು ಅಧ್ಯಯನ ಕೆಲವು ಅಧಿಕ ರಕ್ತದ ಒತ್ತಡ ಇರುವಪುರುಷರು ಹಾಗೂ ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿ ದಿನಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಾಫಿ ಕುಡಿಯುವುದರಿಂದ ಅವರಲ್ಲಿ ಆಗುವ ಬದಲಾವ ಣೆಗಳನ್ನು ಕಂಡು ಹಿಡಿಯಲು ಮುಂದಾ ಯಿತು.
  • ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಹೃದಯ ರಕ್ತನಾಳದ ಕಾಯಿಲೆಗಳು ಕಾಣಿಸಿದವು, ಫಲವತ್ತತೆ ಸಮಸ್ಯೆಎದುರಾಯಿತು ಮತ್ತು ಕೆಲವರಿಗೆ ಪಾರ್ಶ್ವ ವಾಯು ಕೂಡ ಕಂಡುಬಂದಿತು.

ಅಧ್ಯಯನಗಳು ಹೇಳುವ ಹಾಗೆ

High Blood Pressure Symptoms: Emergency Symptoms, Treatments, and More

  • ಅಧ್ಯಯನಗಳು ಹೇಳುವ ಹಾಗೆ ಬರೋಬ್ಬರಿ 19 ವರ್ಷಗಳಲ್ಲಿ ನಡೆದ ಸಂಶೋಧನೆಯ ಸಂದರ್ಭದಲ್ಲಿ ಕೇವಲ ಹೃದಯ ರಕ್ತನಾಳದ ಕಾಯಿಲೆಗಳಿಂದ 842 ಜನರು ಸಾವನ್ನಪ್ಪಿದ್ದರು.
  • ಹಾಗಾಗಿ ಕಾಫಿ ಕುಡಿಯದೆ ಇರುವವರಿಗಿಂತ ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವ ಜನರು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಂದ ಸಾವನ್ನ ಪ್ಪುತ್ತಾರೆ ಎಂಬುದು ಸಾಬೀತಾಯಿತು.
  • ​ಅಧಿಕ ರಕ್ತದ ಒತ್ತಡ ಇರುವ ಜನರು ಹೆಚ್ಚಾಗಿ ಕಾಫಿ ಕುಡಿಯಬಾರದು ಎಂದು ಇದರಿಂದ ಜನರಿಗೆ ತಿಳಿಸಿ ಹೇಳಿದರು.

ಧೂಮಪಾನ ಮಾಡುವವರು ಮತ್ತು ಮಧ್ಯಪಾನ ಮಾಡುವವರು

ಧೂಮಪಾನ ಮಾಡುವವರು ಮತ್ತು ಮಧ್ಯಪಾನ ಮಾಡುವವರು

  • ಇತ್ತೀಚಿನ ಯುವ ಜನತೆಗೆ ಇದು ಸಾಕಷ್ಟು ಅನ್ವಯವಾಗುತ್ತದೆ.
  • ಆಗಾಗ ಧೂಮಪಾನ ಮತ್ತು ಮಧ್ಯಪಾನ ಮಾಡುವ ಜನರು ಒಂದು ವೇಳೆ ಅಧಿಕ ರಕ್ತದ ಒತ್ತಡ ಹೊಂದಿದ್ದರೆ ಮತ್ತು ಹಣ್ಣು ತರಕಾರಿಗಳನ್ನು ಕಡಿಮೆ ತಿನ್ನುತ್ತಿದ್ದರೆ ಅಂತಹವರಿಗೆ ಕಾಫಿ ಹೆಚ್ಚಾಗಿ ಕುಡಿಯುವುದು ಆರೋ ಗ್ಯಕ್ಕೆ ತೊಂದರೆ ಎಂದು ಹೇಳಲಾಗುತ್ತದೆ.
  • ಸಂಶೋಧಕರು ಹೇಳುವಂತೆ ಈ ಗುಂಪಿಗೆ ಸೇರಿದ ಜನರು ಅಚ್ಚುಕಟ್ಟಾದ ಆಹಾರ ಪದ್ಧತಿಯನ್ನು ಹೊಂದುವುದು ಅನಿವಾರ್ಯವಾಗಿದೆ.​

do you have high bp? then don't drink more than 2 cups of coffee per day.