ನಿಮ್ಮ ದೇಹದೊಳಗಿನ ರಕ್ತವನ್ನು ಸದಾ ಕ್ಲೀನ್ ಆಗಿಸುವ ಆಹಾರಗಳಿವು...

03-03-23 07:53 pm       Source: Vijayakarnataka   ಡಾಕ್ಟರ್ಸ್ ನೋಟ್

ಮನುಷ್ಯನ ದೇಹದ ರಕ್ತ ಆತನಿಗೆ ಎಷ್ಟು ಇಂಪಾರ್ಟೆಂಟ್ ಎಂದರೆ, ದೇಹದ ಒಳಗಿನ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯುವುದು ರಕ್ತ ಸಂಚಾರದಿಂದಲೇ ಎನ್ನುವಷ್ಟು.

ಮನುಷ್ಯನ ದೇಹದ ರಕ್ತ ಆತನಿಗೆ ಎಷ್ಟು ಇಂಪಾರ್ಟೆಂಟ್ ಎಂದರೆ, ದೇಹದ ಒಳಗಿನ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯುವುದು ರಕ್ತ ಸಂಚಾರದಿಂದಲೇ ಎನ್ನುವಷ್ಟು. ಇಲ್ಲಿ ಕೆಂಪು ರಕ್ತ ಕಣಗಳ ಆಟ ಬಲು ಜೋರು! ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಮ್ಲಜನಕವನ್ನು ತೆಗೆದುಕೊಂಡು ಹೋಗುವ ಮತ್ತು ಅಂಗಾಂಗಗಳಿಗೆ ನೀಡುವ ಪ್ರಮುಖವಾದ ಕೆಲಸವನ್ನು ಇವು ಮಾಡುತ್ತವೆ. ಅದೇ ತರಹ ಪೌಷ್ಟಿಕಾಂಶಗಳನ್ನು ಸಹ.

ಇಂತಹ ಒಂದು ದೇಹದ ರಕ್ತವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಎಂದರೆ ನಾವು ನಮ್ಮ ಈಗಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕು....

ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...

ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...

ಉತ್ತಮವಾದ ಆಹಾರ ಪದಾರ್ಥಗಳನ್ನು ಅದರಲ್ಲೂ ಆರೋಗ್ಯ ಕರವಾದ ರಕ್ತ ಸಂಚಾರಕ್ಕೆ ಬೆಂಬಲಿಸುವ ಅತ್ಯಗತ್ಯ ಆಹಾರ ಗಳನ್ನು ಸೇವಿಸುವುದು ಅನಿವಾರ್ಯವಾಗಿದೆ ಎಂದು ಪೌಷ್ಟಿ ಕಾಂಶ ತಜ್ಞರಾದ ಅಂಜಲಿ ಮುಖರ್ಜಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿವರವಾಗಿ ಮಾಹಿತಿಯನ್ನು ಈ ರೀತಿ ಹಂಚಿ ಕೊಂಡಿದ್ದಾರೆ.

ಪೌಷ್ಟಿಕಾಂಶ ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...

Why you must eat an orange every day | Be Beautiful India

  • ಅವರು ಹೇಳುವ ಹಾಗೆ ನಾವು ಯಾವಾಗ ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುತ್ತೇವೆ ಆಗ ಅದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.
  • ಅದೇ ರೀತಿ ಕಬ್ಬಿಣದ ಅಂಶ, ವಿಟಮಿನ್ ಸಿ ಮತ್ತು ಇನ್ನಿತರ ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರ ಗಳನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ಉತ್ಪತ್ತಿಯ ಜೊತೆಗೆ ದೇಹದ ವಿವಿಧ ಕಡೆಗೆ ಆಮ್ಲಜನ ಕವನ್ನು ಅತ್ಯುತ್ತಮವಾಗಿ ಪೂರೈಸುತ್ತದೆ. ಈ ಒಂದು ಪ್ರಕ್ರಿಯೆಗೆ ನೆರವಾಗುವ ಆಹಾರ ಗಳೆಂದರೆ..

ಇಂತಹ ಆಹಾರಗಳನ್ನು ಸೇವಿಸಬೇಕು...

ಇಂತಹ ಆಹಾರಗಳನ್ನು ಸೇವಿಸಬೇಕು...

  • ಕಬ್ಬಿಣದ ಅಂಶ ಹೆಚ್ಚಾಗಿರುವ ಗೋಧಿ ಹುಲ್ಲಿನ ರಸ, ಕಬ್ಬು, ಅಲಸಂದೆ ಕಾಳು, ತೋಫು ಇತ್ಯಾದಿಗಳನ್ನು ಸೇವಿಸಿ ದರೆ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾ ಗುತ್ತದೆ.
  • ಆರೋಗ್ಯಕರವಾದ ದೇಹದ ರಕ್ತಕ್ಕೆ ಅಗತ್ಯವಾಗಿ ಬೇಕಾದ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ಅಗತ್ಯ ವಾಗಿದೆ. ಉದಾಹರಣೆಗೆ ಪಾಲಕ್ ಸೊಪ್ಪು, ಬ್ರೊಕೋಲಿ, ಕೇಲ್ ಇತ್ಯಾದಿಗಳು.

ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಇರುವ ಹಣ್ಣುಗಳು

Medjool Dates: Nutrition, Benefits, and Uses

  • ​ಕಿತ್ತಳೆ ಹಣ್ಣಿನ ಜ್ಯೂಸ್, ಖರ್ಜೂರಗಳು, ಜೇನುತುಪ್ಪ, ಒಣದ್ರಾಕ್ಷಿ ಹಾಗೂ ಅದರ ರಸ ರಕ್ತದಲ್ಲಿ ಪ್ರೋಟೀನ್ ಮತ್ತು ಕಬ್ಬಿಣದ ಅಂಶವನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತವೆ.
  • ಆಯುರ್ವೇದ ಗಿಡಮೂಲಿಕೆಗಳಾದ ಅಮಲಕಿ, ಮಂಜಿಷ್ಟ, ಗುಡುಚಿ ಇತ್ಯಾದಿಗಳು ರಕ್ತ ಶುದ್ಧೀಕರಣದಲ್ಲಿ ಕೆಲಸ ಮಾಡಿ ಆರೋಗ್ಯಕರವಾದ ರಕ್ತ ಸಂಚಾರ ಆಗುವಂತೆ ನೋಡಿಕೊಳ್ಳುತ್ತವೆ.​

ಕಬ್ಬಿಣಾಂಶ ಹೆಚ್ಚಾಗಿರುವ ಗಿಡಮೂಲಿಕೆಗಳು...

Blood The Life Giving Gold

  • ​ಕಬ್ಬಿಣದ ಅಂಶ ಹೆಚ್ಚಾಗಿರುವ ಮತ್ತು ಗಿಡಮೂಲಿಕೆ ಗಳನ್ನು ಸೇವಿಸುವುದರಿಂದ ದೇಹದಲ್ಲಿ ನೈಸರ್ಗಿಕ ರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ ಎಂಬುದು ಆರೋಗ್ಯ ತಜ್ಞರ ಮಾತು.
  • ಇದರ ಜೊತೆಗೆ ಆರೋಗ್ಯಕರವಾದ ರಕ್ತ ನಿಮ್ಮದಾಗಬೇಕು ಎಂದರೆ ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡು ವುದು, ವಾಕಿಂಗ್ ಮಾಡುವುದು, ಸ್ವಿಮ್ಮಿಂಗ್, ಸೈಕ್ಲಿಂಗ್, ಇತ್ಯಾದಿಗಳು ನೆರವಾಗುತ್ತವೆ.
  • ಹೃದಯ ಬಡಿತವನ್ನು ಹೆಚ್ಚು ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಇದರಿಂದ ಕಡಿಮೆಯಾಗುತ್ತದೆ. ಹೃದಯ ದಲ್ಲಿರುವ ಕಲ್ಮಶ ದೂರವಾಗಿ ಉತ್ತಮವಾದ ರಕ್ತ ಸಂಚಾರ ಇಡೀ ದೇಹದ ತುಂಬಾ ಇರುತ್ತದೆ.​

these foods are necessary for healthy blood in your body.