ಕಿಡ್ನಿ ಕ್ಯಾನ್ಸರ್: ಗಡ್ಡೆ ರೀತಿಯಲ್ಲಿ ಕಂಡು ಬರುವ ಭಯಾನಕ ಕಾಯಿಲೆ!

04-03-23 07:16 pm       Source: Vijayakarnataka   ಡಾಕ್ಟರ್ಸ್ ನೋಟ್

ಬಹಳಷ್ಟು ಜನರಿಗೆ ಯಾವುದೇ ಬಗೆಯ ಕ್ಯಾನ್ಸರ್ ಬಗ್ಗೆ ಮಾಹಿತಿ ಇದ್ದರೂ ಕೂಡ ಕಿಡ್ನಿಗಳ ಕ್ಯಾನ್ಸರ್ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಇಲ್ಲಿ ನಾವು ಅದನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ.

ವಯಸ್ಸಾದಂತೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಎದುರಾಗುವ ವಿವಿಧ ಆರೋಗ್ಯ ಸಮಸ್ಯೆ ಗಳಲ್ಲಿ ಕಿಡ್ನಿಗಳಲ್ಲಿ ಕಲ್ಲುಗಳು ಕಂಡುಬರುವುದು ಅಥವಾ ಗಡ್ಡೆಗಳು ಕಾಣಿಸುವುದು ಸಾಮಾನ್ಯ. ಇದನ್ನು ನಿರ್ಲಕ್ಷ ಮಾಡುವಂತಿಲ್ಲ. ಏಕೆಂದರೆ ಕಿಡ್ನಿ ಕಲ್ಲುಗಳು ಕಂಡುಬಂದರೆ ಅದನ್ನು ಸುಲಭವಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಬಹುದು.

ಆದರೆ ಕಿಡ್ನಿಗಳಲ್ಲಿ ಒಂದು ವೇಳೆ ಗಡ್ಡೆ ಕಂಡು ಬಂದರೆ, ಅದನ್ನು ಕ್ಯಾನ್ಸರ್ ಗುಂಪಿಗೆ ಸೇರಿಸ ಲಾಗುತ್ತದೆ ಮತ್ತು ಇದಕ್ಕೆ ವಿಶೇಷವಾದ ವೈದ್ಯರ ರೋಗ ನಿರ್ಣಯ ಪ್ರಕ್ರಿಯೆ ಅವಶ್ಯಕತೆ ಇರುತ್ತದೆ. ಕೆಟ್ಟ ಚಟಗಳನ್ನು ಮೈಗೂಡಿಸಿ ಕೊಂಡಿರುವ ಜನರಿಗೆ ಇದು ಸಾಮಾನ್ಯವಾಗಿರುತ್ತದೆ.

ಈ ಕಾಯಿಲೆ ಒಂದು ಸೈಲೆಂಟ್ ಕಿಲ್ಲರ್

ಈ ಕಾಯಿಲೆ ಒಂದು ಸೈಲೆಂಟ್ ಕಿಲ್ಲರ್

  • ​ಕ್ಯಾನ್ಸರ್ ರೋಗ ಎಂದರೆ ಅದು ಸೈಲೆಂಟ್ ಕಿಲ್ಲರ್ ಎನ್ನುವ ಭಾವನೆ ಈಗಾಗಲೇ ಇದೆ. ಅದರಂತೆ ಕಿಡ್ನಿ ಕ್ಯಾನ್ಸರ್ ಕೂಡ ತುಂಬಾ ದಿನಗಳವರೆಗೆ ಯಾವುದೇ ತರಹದ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಆನಂತರದಲ್ಲಿ ತುಂಬಾ ಗಂಭೀರವಾದ ರೋಗ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ.
  • ಉದಾಹರಣೆಗೆ ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಬರುವುದು, ನೋವು ಕಾಣಿಸುವುದು, ಸೊಂಟ ನೋವು ಇವೆಲ್ಲವೂ ಸಹ ಕ್ಯಾನ್ಸರ್ ತೊಂದರೆಯ ಕೊನೆ ಕ್ಷಣಗಳು ಎಂದು ಹೇಳಬಹುದು.
  • ಆರಂಭಿಕ ವರ್ಷಗಳಲ್ಲಿ ಕ್ಯಾನ್ಸರ್ ರೋಗ ತುಂಬಾ ಸೈಲೆಂಟ್ ಆಗಿರುತ್ತದೆ. ಆದರೆ ಆನಂತರದಲ್ಲಿ ಗಡ್ಡೆ ಉಂಟಾಗುವಂತೆ ಮಾಡಿ ತೊಂದರೆ ನೀಡಲು ಪ್ರಾರಂಭ ಮಾಡುತ್ತದೆ.

ಧೂಮಪಾನ ಮಾಡುವವರಲ್ಲಿ ಹೆಚ್ಚು

ಧೂಮಪಾನ ಮಾಡುವವರಲ್ಲಿ ಹೆಚ್ಚು

  • ಸಾಕಷ್ಟು ಜನರಿಗೆ ಶ್ವಾಸಕೋಶ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹವರು ಧೂಮಪಾನ ಮಾಡುವುದು ಅಥವಾ ಹೊಗೆಸೊಪ್ಪು ಜಗಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರಿಗೆ ಕಿಡ್ನಿ ತೊಂದರೆ ಎದುರಾಗುವುದು ಸಹಜ.
  • ಕಿಡ್ನಿ ಕ್ಯಾನ್ಸರ್ ಕಂಡುಬರುವಂತೆ ಇದು ಮಾಡುತ್ತದೆ. ಬೊಜ್ಜು, ಅಧಿಕ ರಕ್ತದ ಒತ್ತಡ, ಕೌಟುಂಬಿಕ ಇತಿಹಾಸ ಇವೆಲ್ಲವೂ ಸಹ ಕಿಡ್ನಿ ಕ್ಯಾನ್ಸರ್ ಬರಲು ಒಂದೊಂದು ಕಾರಣಗಳು ಆಗಿರುತ್ತವೆ.

50 ವರ್ಷ ಕಳೆದ ನಂತರದಲ್ಲಿ ಸೋನೋಗ್ರಫಿ ಟೆಸ್ಟ್

50-

  • ಕಿಡ್ನಿ ಕ್ಯಾನ್ಸರ್ ಸಮಸ್ಯೆಯನ್ನು ಕಂಡುಹಿಡಿಯಲು ಅಗತ್ಯವಾಗಿ ಬೇಕಾದ ಹಂತ ಇದಾಗಿದೆ.
  • 50 ವರ್ಷ ಕಳೆದ ನಂತರದಲ್ಲಿ ಈ ಪರೀಕ್ಷೆಯನ್ನು ಮಾಡಿಸಿ ಕೊಂಡರೆ ಕಿಡ್ನಿ ಕ್ಯಾನ್ಸರ್ ಯಾವ ಪ್ರಮಾಣ ದಲ್ಲಿದೆ ಎಂಬುದು ತಿಳಿಯುತ್ತದೆ. ಧೂಮಪಾನ ಮಾಡು ವವರು ಕಡ್ಡಾಯವಾಗಿ ಈ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಮೊದಲೇ ಕಂಡು ಹಿಡಿದುಕೊಳ್ಳುವುದು ಅನಿವಾರ್ಯ

5 Ways to Reduce Your Risk for Kidney Cancer | National Kidney Foundation

  • ಕಿಡ್ನಿಯಲ್ಲಿ ಗಂಟು ಅಥವಾ ಗಡ್ಡೆ ಕಂಡು ಬಂದಿದೆ ಎಂದರೆ ಅದನ್ನು ನೀವು ಎಂದಿಗೂ ನಿರ್ಲಕ್ಷ ಮಾಡಬಾರದು.
  • ಏಕೆಂದರೆ ಗಡ್ಡೆ ಕಿಡ್ನಿಯಲ್ಲಿ ಮಾತ್ರ ಇದ್ದರೆ ಮತ್ತು ಸಣ್ಣದಾಗಿ ದ್ದರೆ, ಅದನ್ನು ಸುಲಭವಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ತೆಗೆದುಹಾಕುತ್ತಾರೆ.
  • ಒಂದು ವೇಳೆ ಅದು ದೊಡ್ಡದಾಗಿದ್ದರೆ ಸಂಪೂರ್ಣ ಕಿಡ್ನಿಯನ್ನು ತೆಗೆಯುತ್ತಾರೆ. ಬೇರೆ ಭಾಗಗಳಿಗೆ ಹರಡ ದಂತೆ ವೈದ್ಯರು ಎಚ್ಚರಿಕೆ ವಹಿಸುತ್ತಾರೆ.
  • ರೋಬೋಟಿಕ್ ಸರ್ಜರಿ ಈಗ ಈ ನಿಟ್ಟಿನಲ್ಲಿ ಹೆಚ್ಚು ಪ್ರಚಲಿತ ವಾಗಿದೆ. ಇದು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ ಮತ್ತು ಬೇಗನೆ ಹುಷಾರಾಗುವ ಹಾಗೆ ಮಾಡುತ್ತದೆ.​

ಕಿಡ್ನಿ ಕ್ಯಾನ್ಸರ್ ಎರಡು ತರಹ ಇದೆ

ಕಿಡ್ನಿ ಕ್ಯಾನ್ಸರ್ ಎರಡು ತರಹ ಇದೆ

  • ಕಿಡ್ನಿ ಕ್ಯಾನ್ಸರ್ ನಲ್ಲಿ ಎರಡು ವಿಧಗಳಿವೆ. ಒಂದು ರೀನಲ್ ಸೆಲ್ ಕ್ಯಾನ್ಸರ್ ಮತ್ತು ಇನ್ನೊಂದು transitional ಸೆಲ್ ಕ್ಯಾನ್ಸರ್. ಹೆಚ್ಚು ಜನರಲ್ಲಿ ಕಂಡುಬರುವ ಸಾಮಾನ್ಯ ಕಿಡ್ನಿ ಕ್ಯಾನ್ಸರ್ ಎಂದರೆ ಅದು ರೀನಲ್ ಸೆಲ್ ಕ್ಯಾನ್ಸರ್.
  • ಇದು ಮೂತ್ರ ಚೀಲದವರೆಗೂ ಬೇಕಾದರೆ ಹರಡುತ್ತದೆ. ಹಾಗಾಗಿ ಮೊದಲು ಇದರ ಬಗ್ಗೆ ತಿಳಿದುಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಿ.

world kidney day 2023 know these important things about kidney cancer.