ನಿಮಗೆ ಗೊತ್ತಿರಲಿ, ಸಕ್ಕರೆಕಾಯಿಲೆ ಇದ್ದವರಿಗೆ, ಇಂತಹ ತರಕಾರಿಗಳು ಬಹಳ ಒಳ್ಳೆಯದು!

11-03-23 08:00 pm       Source: Vijayakarnataka   ಡಾಕ್ಟರ್ಸ್ ನೋಟ್

ನಮಗೆಲ್ಲಾ ಗೊತ್ತೇ ಇದೆ, ಸಕ್ಕರೆ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ಮತ್ತೆ ನಮ್ಮನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಹೀಗಾಗಿ ಆರೋಗ್ಯಕಾರಿ ಜೀವನಶೈಲಿ, ಕಟ್ಟುನಿಟ್ಟಿನ ಆಹಾರ ಪದಾರ್ಥಗಳನ್ನು ಅನುಸರಿಸಿದರೆ ಮಾತ್ರ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು.

ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ನೈಸರ್ಗಿಕವಾಗಿ ಸಿಗುವಂತಹ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಅದು ಬಿಟ್ಟು ಕೇವಲ ರಸ್ತೆಬದಿಯ ಅಥವಾ ಹೋಟೇಲ್‌ ನಲ್ಲಿ ಸಿಗುವ ಜಂಕ್ ಫುಡ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿ ಆರೋಗ್ಯಕರವಾಗಿ ಬದುಕುತ್ತೇವೆ ಎಂದರೆ ಅದು ಸಾಧ್ಯವಿಲ್ಲದ ಮಾತು.

ಯಾಕೆಂದ್ರೆ ಇಂತಹ ಆಹಾರಗಳನ್ನು ಸೇವನೆಯಿಂದ ಬಾಯಿಗೆ ರುಚಿ ಅನಿಸಿದರೂ ಕೂಡ, ಮುಂದಿನ ದಿನಗಳಲ್ಲಿ ಅನಾರೋಗ್ಯಕಾರಿ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಲು ಶುರುವಾಗುತ್ತದೆ.

ಹೀಗಾಗಿ ಇಂತಹ ಜಂಕ್‌ಫುಡ್‌, ಎಣ್ಣೆಯಾಂಶ, ಸಕ್ಕರೆ ಅಂಶ ಇರುವ ಆಹಾರಗಳಿಂದ ದೂರವಿದ್ದು, ಸಾಂಪ್ರದಾ ಯಿಕ ಅಡುಗೆಗಳಿಗೆ ಹಾಗೂ ಆಹಾರ ಪದಾರ್ಥಗಳಿಗೆ ನಾವು ಹೆಚ್ಚು ಒತ್ತು ನೀಡುವುದರ ಜೊತೆಗೆ ಕೆಲವೊಂದು ನೈಸರ್ಗಿಕ ತರಕಾರಿಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ದೀರ್ಘಕಾಲದವರೆಗೆ ಕಾಡುವ ಕಾಯಿಲೆ ಎಂದೇ ಕರೆಯಲಾಗುವ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಬನ್ನಿ ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುವ ತರಕಾರಿಗಳ ಬಗ್ಗೆ ನೋಡೋಣ...

ಪಾಲಕ್ ಸೊಪ್ಪು

Miraculous health benefits of spinach - Times of India

 • ಹಸಿರು ಎಲೆ ತರಕಾರಿಗಳ ವಿಷ್ಯದಲ್ಲಿ ಹೇಳುವುದಾದರೆ, ಪಾಲಕ್ ಸೊಪ್ಪು ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.
 • ತನ್ನಲ್ಲಿ ಅಪಾರವಾದ ಆರೋಗ್ಯ ಪ್ರಯೋಜನಗಳು ಹೊಂದಿರುವ ಈ ಸೊಪ್ಪಿನಲ್ಲಿ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ, ಇದರಲ್ಲಿ ಸಿಗುತ್ತದೆ.
 • ಪ್ರಮುಖವಾಗಿ, ಈ ಸೊಪ್ಪಿನಲ್ಲಿ ವಿಟಮಿನ್ ಅಂಶಗಳಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಅಪಾರ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ, ಪೋಷಕಾಂಶಗಳಾದ ನಾರಿನಾಂಶ, ಫೋಲೆಟ್ ಅಂಶ, ಖನಿಜಾಂಶಗಳು ಕೂಡ ಯಥೇಚ್ಛವಾಗಿ ಕಂಡು ಬರುತ್ತದೆ.
 • ಪ್ರಮುಖವಾಗಿ ಪಾಲಕ್ ಸೊಪ್ಪಿನಲ್ಲಿ ನಾರಿನಾಂಶದ ಪ್ರಮಾಣ ಅಗಾಧ ಪ್ರಮಾಣದಲ್ಲಿ ಸಿಗುವುದರಿಂದಾಗಿ ದೇಹದ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ.
 • ಪ್ರಮುಖವಾಗಿ, ನಾವು ಪ್ರತಿದಿನ ಸೇವಿಸಿದ ಆಹಾರದಲ್ಲಿ ಕಂಡುಬರುವ ಗ್ಲೂಕೋಸ್ ಸರಿಯಾಗಿ ಕರಗಿ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಂತೆ ನೋಡಿ ಕೊಳ್ಳುತ್ತದೆ.

ಹೂಕೋಸು

How to Grow and Care for Cauliflower

 • ಬೇರೆಲ್ಲಾ ತರಕಾರಿಗಳಿಗೆ ಹೋಲಿಸಿದರೆ, ಹೂಕೋಸು ನೋಡಲು ದಪ್ಪವಾಗಿ ಕಂಡು ಬರುತ್ತದೆ.
 • ಈ ತರಕಾರಿಯಲ್ಲಿಯೂ ಕೂಡ ಅಷ್ಟೇ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುತ್ತದೆ.
 • ಪ್ರಮುಖವಾಗಿ ಹೂಕೋಸಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಾಂಕ ಕಂಡು ಬರುವುದ ರಿಂದ, ಸಕ್ಕರೆಕಾಯಿಲೆ ಸಮಸ್ಯೆ ಇರುವ ರೋಗಿಗಳಿಗೆ, ಬಹಳ ಒಳ್ಳೆಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೀರೆಕಾಯಿ

Premium Photo | Ridge gourd fresh and close up

 • ಸಾಮಾನ್ಯವಾಗಿ ನಾನ್‌ವೆಜ್‌ಗೆ ಹೋಲಿಸಿದರೆ, ತರಕಾರಿ ಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ನಮ್ಮ ಆಹಾರಪದ್ಧತಿಯಲ್ಲಿ ಮಿತವಾಗಿ ತರಕಾರಿಗಳನ್ನು ಸೇರುಸುವುದರಿಂದ ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತಾ ಹೋಗುತ್ತದೆ.
 • ಹೀರೆಕಾಯಿಯ ವಿಚಾರದಲ್ಲೂ ಕೂಡ ಇದೇ ರೀತಿ ಆಗಿ ನಮಗೆ ಸಾಕಷ್ಟು ಲಾಭಗಳು ಸಿಗುತ್ತವೆ.
 • ಹೌದು ಈ ತರಕಾರಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧ ವಾಗಿ ಸಿಗುವುದರಿಂದ, ದೇಹದ ತೂಕವನ್ನು ನಿಯಂತ್ರಣ ಮಾಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಮಧುಮೇಹ ಸಮಸ್ಯೆ, ನಿಮ್ಮ ಹತ್ತಿರನೂ ಬಾರದಂತೆ ನೋಡಿಕೊಳ್ಳುತ್ತದೆ.

ಮೆಂತೆ ಸೊಪ್ಪು

ಮೆಂತೆ ಸೊಪ್ಪು

 • ಮೆಂತೆ ಸೊಪ್ಪು ಕಹಿ ಗುಣವನ್ನು ಹೊಂದಿದ್ದರೂ ಕೂಡ, ತನ್ನಲ್ಲಿ ಅನೇಕ ರೀತಿಯ ಔಷಧೀಯ ಗುಣಗಳನ್ನು ಒಳಗೊಂಡಿದೆ.
 • ಹೀಗಾಗಿ ಈಗಾಗಲೇ ಮಧುಮೇಹ ಕಾಯಿಲೆಯಿಂದ, ಬಳಲುತ್ತಿ ರುವವರು ಮೆಂತೆ ಸೊಪ್ಪನ್ನು ನಿಯಮಿ ತವಾಗಿ ಸೇವನೆ ಮಾಡುತ್ತಾ ಬಂದ್ರೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ತಡೆಯಬಹುದಾಗಿದೆ.
 • ಇದರಿಂದಾಗಿ ಮಧುಮೇಹ ಕೂಡ, ನಿಯಂತ್ರಣ ದಲ್ಲಿರಲು ಸಹಕಾರಿಯಾಗುತ್ತದೆ. ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ,  ಟೈಪ್ 1 ಮತ್ತು ಟೈಪ್ 2 ಮಧುಮೇಹ ಹೊಂದಿರುವಂತಹ ಜನರಿಗೆ ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ.​

ಹಾಗಲಕಾಯಿ

Bitter Gourd ( 500 g ) – ZAG.FRESH

 • ನಮಗೆಲ್ಲಾ ಗೊತ್ತೇ ಇದೆ, ಇರುವ ಎಲ್ಲಾ ಬಗೆಯ ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಇದ್ದರೆ ಅದು ಹಾಗಲಕಾಯಿ! ಹಾಗಂತ ಹಾಗಲಕಾಯಿ ಕಹಿ ಇದೆಯೆಂದು, ಇದನ್ನು ದೂರ ಮಾಡಿದರೆ, ನಮಗೆಯೇ ಲಾಸ್ ನೋಡಿ!
 • ನಿಮಗೆ ಗೊತ್ತಿರಲಿ ಹಾಗಲಕಾಯಿ ತಿನ್ನಲು ಕಹಿ ಇರ ಬಹುದು. ಆದರೆ ಇದರಲ್ಲಿ ಕಂಡು ಬರು ಔಷಧೀಯ ಗುಣಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖ ವಾಗಿ ಈ ತರಕಾರಿ ಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ವಿವಿಧ ಬಗೆಯ ವಿಟಮಿನ್ಸ್ ಗಳು, ಪೌಷ್ಟಿಕಾಂ ಶಗಳು ಸಿಗುವುದರ ಜೊತೆಗೆ, ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಹೇರಳವಾಗಿ ಕಂಡು ಬರುತ್ತದೆ.
 • ಇವು ಸಕ್ಕರೆಕಾಯಿಲೆಯ ವಿರುದ್ಧ ಹೋರಾಡುವಲ್ಲಿ ನೆರವಿಗೆ ಬರುತ್ತದೆ. ಪ್ರಮುಖವಾಗಿರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗದಂತೆ ತಡೆದು, ಇನ್ಸುಲಿನ್ ಪ್ರಮಾಣವನ್ನು ಅಭಿವೃದ್ಧಿ ಪಡಿಸುತ್ತದೆ.

best vegetables to control diabetes and lower blood sugar naturally.