ಸಕ್ಕರೆ ಕಾಯಿಲೆ ಇದ್ಯಾ? ಹಾಗಾದ್ರೆ ಇನ್ಮುಂದೆ ದಿನಾ ಒಂದು ಕಪ್ ಏಲಕ್ಕಿ ಚಹಾ ಕುಡಿಯಿರಿ!

13-03-23 06:56 pm       Source: Vijayakarnataka   ಡಾಕ್ಟರ್ಸ್ ನೋಟ್

ಈಗಾಗೇ ಸಕ್ಕರೆಕಾಯಿಲೆ ಇದ್ದರೆ, ಪ್ರತಿ ದಿನ ಮಿತವಾಗಿ ಒಂದು ಕಪ್, ಏಲಕ್ಕಿ ಚಹಾ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ರಕ್ತ ದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಜೊತೆಗೆ.

ಕಾಯಿಲೆಗಳ ವಿಷಯ ಬಂದಾಗ ಮಧುಮೇಹ ಅಥವಾ ಸಕರೆ ಕಾಯಿಲೆ ಮನುಷ್ಯನ ದೊಡ್ಡ ಶತ್ರು ಎಂದು ಹೇಳಬಹುದು. ಯಾಕೆಂದ್ರೆ ಒಮ್ಮೆ ಮನುಷ್ಯನಲ್ಲಿ ಈ ಕಾಯಿಲೆ ಕಾಣಿಸಿಕೊಂಡರೆ, ಆತ ಸಾಯುವವರೆಗೂ ಕೂಡ ಅತನನ್ನು ಬಿಟ್ಟು ಹೋಗುವುದಿಲ್ಲ! ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಅನುಸರಿಸುವ ಜನರಲ್ಲಿ ಈ ಕಾಯಿಲೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತವೆ, ಹಾಗೂ ಜೀವನ ಪರ್ಯಾಂತ ಅವರನ್ನು ಹಿಂಡಿ-ಹಿಪ್ಪೆ ಮಾಡಿಬಿಡುತ್ತದೆ.

ಇನ್ನು ಈ ಕಾಯಿಲೆಯ ಬಗ್ಗೆ ವೈದ್ಯರೇ ಹೇಳುವ ಪ್ರಕಾರ, ಮಧುಮೇಹ ಒಮ್ಮೆ ಕಾಣಿಸಿಕೊಂಡ ವ್ಯಕ್ತಿ ಯಾವುದೇ ಕಾರಣಕ್ಕೂ ಕೂಡ ಇದರಿಂದ ಸಂಪೂರ್ಣವಾದ ಪರಿಹಾರ ಹೊಂದಲು ಸಾಧ್ಯವಿಲ್ಲ ಕೇವಲ ಇದನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ!

ಬನ್ನಿ ಇಂದಿನ ಲೇಖನದಲ್ಲಿ ಮಧುಮೇಹ ರೋಗಿಗಳು, ಪ್ರತಿದಿನ ಒಂದು ಕಪ್ ಏಲಕ್ಕಿ ಚಹಾ ಕುಡಿಯುವುದರ ಮೂಲಕ, ಹೇಗೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡುತ್ತಾ ಹೋಗೋಣ..

ಏಲಕ್ಕಿಯ ಬಗ್ಗೆ ಹೇಳುವುದಾದರೆ...

Health news cardamom or elaichi benefits for health in rp - Cardamom  Benefits: वेलची खाण्याचे इतके फायदे अनेकांना माहीतच नाहीत; अनेक समस्यांवर  आहे प्रभावी – News18 लोकमत

  • ನಮಗೆಲ್ಲಾ ಗೊತ್ತೇ ಇರುವ ಹಾಗೆ, ಏಲಕ್ಕಿ ನೋಡಲು ಸಣ್ಣಕ್ಕೆ ಇದ್ದರೂ ಕೂಡ ತುಂಬಾನೇ ದುಬಾರಿಯಾದ ಸಾಂಬಾರ ಪದಾರ್ಥ ಎಂದೇ ಪ್ರಸಿದ್ಧಿ!
  • ಆದರೆ ಆರೋಗ್ಯ ತಜ್ಞರು ಹೇಳುವ ಹಾಗೆ, ಏಲಕ್ಕಿ ಬೆಲೆ ಯಲ್ಲಿ ದುಬಾರಿ ಆದರೂ ಕೂಡ ತನ್ನಲ್ಲಿ ಅಗಾಧ ಪ್ರಮಾ ಣದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಒಳ ಗೊಂಡಿದೆ.
  • ಇನ್ನು ಏಲಕ್ಕಿಯಲ್ಲಿ ಎರಡು ವಿಧಗಳಿವೆ. ಒಂದು ಕಪ್ಪು ಏಲಕ್ಕಿ, ಮೊತ್ತೊಂದು ಹಸಿರು ಏಲಕ್ಕಿ. ಆದರೆ ಹೆಚ್ಚು ಬಳಕೆಯಲ್ಲಿ ಇರುವುದು ಹಸಿರು ಏಲಕ್ಕಿ.
  • ಅದು ಏನೇ ಇರಲಿ, ಆದರೆ ಆರೋಗ್ಯ ಸಮಸ್ಯೆಯನ್ನು ಗುಣಪಡಿ ಸುವಲ್ಲಿ, ಇವೆರಡೂ ಕೂಡ ಒಂದೇ ಸಾಮರ್ಥ್ಯ ವನ್ನು ಹೊಂದಿವೆ.

ಏಲಕ್ಕಿಯಲ್ಲಿ ಕಂಡು ಬರುವ ಆರೋಗ್ಯ ಪ್ರಯೋಜನಗಳು

Blood Pressure Numbers: Everything You Need to Know

  • ಪುಟ್ಟದಾಗಿ ಕಂಡು ಬರುವ ಏಲಕ್ಕಿಯಲ್ಲಿ ಆಂಟಿ ಆಕ್ಸಿ ಡೆಂಟ್ ಮತ್ತು ಆಂಟಿಬಯೋಟಿಕ್ ಅಂಶಗಳು ಯಥೇ ಚ್ಛವಾಗಿ ಕಂಡು ಬರುವುದರಿಂದ, ಯಾರೆಲ್ಲಾ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಯೋ, ಅಂತಹ ಜನರಿಗೆ ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.
  • ಇದರ ಹೊರತಾಗಿ ಬಾಯಿಯಿಂದ ಬರುವ ದುರ್ವಾಸನೆ ಸಮಸ್ಯೆ, ಖಿನ್ನತೆ ಸಮಸ್ಯೆ, ದೇಹದ ತೂಕ ಇಳಿಸು ವವರಿಗೂ ಕೂಡ, ಇದರಿಂದ ಸಾಕಷ್ಟು ಲಾಭಗಳಿವೆ.

ಸಕ್ಕರೆಕಾಯಿಲೆ ಇರುವವರಿಗೆ

How Baking Soda Affects People with Type 2 Diabetes

  • ಈಗಾಗಲೇ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು, ಪ್ರತಿದಿನ ಕೆಫೀನ್ ಅಂಶ ಹೆಚ್ಚಿ ರುವ ಟೀ-ಕಾಫಿ ಕುಡಿಯುವ ಬದಲು, ದಿನಕ್ಕೆ ಒಂದು ಬಾರಿಯಾ ದರೂ ಏಲಕ್ಕಿ ಚಹಾ
  • ಕುಡಿಯುವ ಅಭ್ಯಾಸ ಮಾಡಿಕೊಂಡರೆ, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಮಧುಮೇಹ ಕಾಯಿಲೆ ಕೂಡ ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದಾಗಿದೆ.

ಏನಿದರ ಹಿಂದಿನ ಗುಟ್ಟು?

9 Surprising Cardamom Side Effects for Females | Spicy Organic

  • ಈ ಮೊದಲೇ ಹೇಳಿದ ಹಾಗೆ, ಈ ಪುಟ್ಟ ಏಲಕ್ಕಿಯಿಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಆಂಟಿ ಆಕ್ಸಿಡೆಂಟ್ ಅಂಶಗಳು ಹಾಗೂ ಹೈಪೋಲಿಪಿಡೆಮಿಕ್ ಎನ್ನುವ ಆರೋಗ್ಯಕಾರಿ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೀರ್ಘ ಕಾಲದವರೆಗೆ ಕಾಡುವ ಕಾಯಿ ಲೆಗಳಾದ ಅಧಿಕ ರಕ್ತದೊತ್ತಡ,
  • ಮಧುಮೇಹದಂತಹ ಕಾಯಿಲೆಯನ್ನು ನಿಯಂತ್ರಣ ದಲ್ಲಿಡಲು ಸಹಕಾರಿಯಾಗುತ್ತದೆ, ಎಂದು ವೈದ್ಯರು ಹೇಳುತ್ತಾರೆ.

ಏಲಕ್ಕಿ ಚಹಾ ಮಾಡುವ ವಿಧಾನ

ಏಲಕ್ಕಿ ಚಹಾ ಮಾಡುವ ವಿಧಾನ

  • ಒಂದು ಸಣ್ಣ ಬೋಗುಣಿಯಲ್ಲಿ ಒಂದು ಲೋಟ ಆಗು ವಷ್ಟು ನೀರನ್ನು ಕುದಿಯಲು ಬಿಡಿ, ಒಮ್ಮೆ ನೀರು ಚೆನ್ನಾಗಿ ಕುದಿದ ಬಳಿಕ, ಇದಕ್ಕೆ ಎರಡು ಮೂರು ಸಿಪ್ಪೆ ನಿವಾರಿಸಿರುವ ಏಲಕ್ಕಿಯ ಒಳಭಾಗದ ಬೀಜಗಳನ್ನು, ಚೆನ್ನಾಗಿ ಕುಟ್ಟಿ ಪುಡಿಮಾಡಿ ಕೊಂಡು, ಈ ಕುದಿಯುವ ನೀರಿಗೆ ಹಾಕಿ ಬಿಡಿ.
  • ಇಷ್ಟೆಲ್ಲಾ ಆದ ಬಳಿಕ, ಸರಿಸುಮಾರು ಎರಡು ನಿಮಿಷ ಗಳ ಕಾಲ ಹಾಗೆಯೇ ಕುದಿಯಲು ಬಿಡಿ. ಆ ಬಳಿಕ, ಇದಕ್ಕೆ ಒಂದು ಟೀ ಚಮಚ ಚಹಾ ಪೌಡರ್ ಹಾಕಿ, ಸ್ವಲ್ಪ ಹೊತ್ತು ಕುದಿಯಲು ಬಿಡಿ, ಬಳಿಕ ಹಾಲು ಸೇರಿಸಿಕೊಂಡು ಸಾಮಾನ್ಯ ಚಹಾ ತಯಾರಿಸಿಕೊಳ್ಳಿ. ತಪ್ಪಿಯೂ ಸಕ್ಕರೆ ಬೆರೆಸ ಬೇಡಿ.
  • ಇನ್ನು ಸೋಸಿಕೊಂಡು, ಬಿಸಿಬಿಸಿ ಇರುವಾಗಲೇ, ದಿನಕ್ಕೆ ಒಂದು ಕಪ್‌ನಂತೆ, ಈ ಟೀ ಕುಡಿಯುತ್ತಾ ಬಂದರೆ, ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣಕ್ಕೆ ಬರುವುದು, ಮಾತ್ರವಲ್ಲದೆ, ಮಧುಮೇಹ ಕೂಡ ನಿಯಂತ್ರಣ ದಲ್ಲಿರುವುದು.

manage diabetes with drinking one cup of cardamom tea everyday.