ಹೈ ಬಿಪಿಯನ್ನು ಕಂಟ್ರೋಲ್‌ ಮಾಡುತ್ತಂತೆ ಈ ಆಹಾರ

18-03-23 08:51 pm       Source: Vijayakarnataka   ಡಾಕ್ಟರ್ಸ್ ನೋಟ್

ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಈ ಆಹಾರಗಳನ್ನು ಸೇವಿಸುವುದರಿಂದ ಬಿಪಿಯನ್ನು ಕಂಟ್ರೋಲ್‌ನಲ್ಲಿಡಬಹುದಂತೆ.

ಅಧಿಕ ರಕ್ತದೊತ್ತಡವು ಗಂಭೀರ ಸಮಸ್ಯೆಯಾಗಿದ್ದು ಇದನ್ನು ಕಂಟ್ರೋಲ್‌ನಲ್ಲಿಡದಿದ್ದರೆ ಜೀವಕ್ಕೆ ಹಾನಿಯುಂಟು ಮಾಡಬಲ್ಲದು. ಇದು ಹೃದಯ ಮತ್ತು ಮೆದುಳಿಗೆ ನೇರ ಹಾನಿಯನ್ನುಂಟುಮಾಡುತ್ತದೆ. ಇದು ಹೃದಯಾಘಾತ-ಸ್ಟ್ರೋಕ್‌ಗೆ ಕಾರಣವಾಗಬಹುದು. ಇದನ್ನು ನಿಯಂತ್ರಿಸಲು ಈ ಆಹಾರಗಳು ಸಹಕಾರಿಯಾಗಬಲ್ಲದು.

ಅಧಿಕ ರಕ್ತದೊತ್ತಡದ ಲಕ್ಷಣಗಳು ಯಾವುವು?

High Blood Pressure Symptoms: Emergency Symptoms, Treatments, and More

ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯು ಯುವಜನರಲ್ಲಿಯೂ ಕಂಡುಬರುತ್ತಿದೆ, ಆದ್ದರಿಂದ ಇದರ ಲಕ್ಷಣಗಳನ್ನು ಆದಷ್ಟು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

ನಿಮಗೆ ಆಗಾಗ್ಗೆ ತಲೆನೋವು, ಉಸಿರಾಟದ ತೊಂದರೆ, ಮೂಗಿನಿಂದ ರಕ್ತಸ್ರಾವ, ಕಣ್ಣುಗಳು ಕೆಂಪಾಗುವುದ ಅಥವಾ ಹೆಚ್ಚು ಬೆವರುವಿಕೆ ಇದ್ದರೆ ಒಮ್ಮೆ ನಿಮ್ಮ ಬಿಪಿಯನ್ನು ಚೆಕ್ ಮಾಡಲೇ ಬೇಕು.

ಕುಂಬಳಕಾಯಿ ಬೀಜಗಳು​

​ಕುಂಬಳಕಾಯಿ ಬೀಜಗಳು​

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಅಂಶಗಳು ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುತ್ತವೆ. ಇದು ಅರ್ಜಿನೈನ್ ಅನ್ನು ಹೊಂದಿರುತ್ತದೆ, ಇದು ಅಮೈನೋ ಆಮ್ಲವಾಗಿದೆ ಮತ್ತು ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಪಬ್ಮೆಡ್ ಸೆಂಟ್ರಲ್ ಸಂಶೋಧನೆಯ ಪ್ರಕಾರ, ನೈಟ್ರಿಕ್ ಆಮ್ಲವು ನರಗಳನ್ನು ವಿಶ್ರಾಂತಿ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

​ಟೊಮೆಟೊ​

Tomato nutritional info, health benefits, recipes & more | A.Vogel Australia

ಬಿಪಿ ನಿಯಂತ್ರಣಕ್ಕೆ ಟೊಮೇಟೊ ಕೂಡ ಸೇವಿಸಬಹುದು. ಇದು ಲೈಕೋಪೀನ್ ಅನ್ನು ಹೊಂದಿರುತ್ತದೆ, ಇದು ರಕ್ತದ ಹರಿವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಅಥವಾ ಅದರಿಂದ ಉಂಟಾಗುವ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ದ್ವಿದಳ ಧಾನ್ಯಗಳು ಮತ್ತು ಬೇಳೆಗಳು​

​ದ್ವಿದಳ ಧಾನ್ಯಗಳು ಮತ್ತು ಬೇಳೆಗಳು​

ಯಾವಾಗ ನಾವು ಇತರ ಆಹಾರದ ಬದಲು ದ್ವಿದಳ ಧಾನ್ಯಗಳು ಮತ್ತು ಕಾಳುಗಳ ಸೇವನೆಯನ್ನು ಹೆಚ್ಚಿಸುತ್ತೇವೆಯೋ, ಆಗ ಬಿಪಿ ಸಮಸ್ಯೆಯು ಕಡಿಮೆಯಾಗುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ಅದಕ್ಕಾಗಿಯೇ ನೀವು ಅವುಗಳನ್ನು ನಿಮ್ಮ ಆಹಾರದ ಅವಿಭಾಜ್ಯ ಅಂಗವಾಗಿ ಮಾಡಬೇಕು.

​ಕ್ಯಾರೆಟ್​

5 benefits of carrots that make it the perfect winter superfood |  HealthShots

ನೀವು ನಿಯಮಿತವಾಗಿ ಕ್ಯಾರೆಟ್‌ ಸೇವಿಸುತ್ತಿದ್ದರೆ ಅಧಿಕ ಬಿಪಿ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇದನ್ನು ಸೇವಿಸುವ ಜನರಲ್ಲಿ ರಕ್ತದೊತ್ತಡದ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಕ್ಯಾರೆಟ್‌ನಲ್ಲಿ ಫೀನಾಲಿಕ್ ಸಂಯುಕ್ತಗಳಿವೆ. ಇವು ಬಿಪಿಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

​ಚಿಯಾ ಮತ್ತು ಅಗಸೆ ಬೀಜಗಳು​

benefits of flaxseed know here right way to eat | ಪ್ರತಿದಿನ 1 ಚಮಚ 'ಅಗಸೆಬೀಜ  ಸೇವಿಸಿದ್ರೆ ದೇಹಕ್ಕೆ ಎಷ್ಟು ಲಾಭಗಳು ಗೊತ್ತಾ? Health News in Kannada

ರಕ್ತದೊತ್ತಡ ಹೆಚ್ಚಾದಾಗ ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳನ್ನು ತಿನ್ನಲು ಪ್ರಾರಂಭಿಸಿ. ಅವುಗಳನ್ನು ಸೇವಿಸುವುದರಿಂದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಸಿಗುತ್ತದೆ. ಇದು ರೋಗವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

foods which reduce high blood pressure.