ಮಧುಮೇಹ ಇದ್ದವರು, ಬಾಯಿಗೆ ರುಚಿ ಕೊಡುವ ಈ ಹಣ್ಣುಗಳನ್ನು ತಿನ್ನದಿದ್ದರೆ ಒಳ್ಳೆಯದು!

21-03-23 07:33 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಇದ್ದವರಿಗೆ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವ ಆಹಾರ- ಪದಾರ್ಥಗಳು ನಿಷಿದ್ಧವಾಗಿವೆ. ಇದಕ್ಕೆ ಹಣ್ಣುಗಳು ಕೂಡ ಹೊರತಲ್ಲ.

ಸಕ್ಕರೆ ಕಾಯಿಲೆ ಇರುವವರಿಗೆ ಅಕ್ಕ ಪಕ್ಕದವರು ತಿನ್ನುವ ಹಾಗೆ, ಮನಸ್ಸಿಗ ಇಷ್ಟವಾದ ಆಹಾರ ಪದಾರ್ಥಗಳನ್ನು ತಿನ್ನುವ ಹಾಗಿಲ್ಲ! ತಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿಯೂ ಕೂಡ ಕೆಲವೊಂದು ರೀತಿಯ ನೀತಿ ನಿಯಮಗಳು ಇರುತ್ತವೆ.

ಉದಾಹರಣೆಗೆ ಹೇಳಬೇಕೆಂದ್ರೆ, ಈ ಕಾಯಿಲೆ ಇರುವವರು ಸಿಹಿಯಾಗಿರುವ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡುವ ಹಾಗಿಲ್ಲ ಎನ್ನುವ ನಿರ್ಬಂಧ ಒಂದು ಕಡೆಯಾದರೆ, ತಿನ್ನುವ ಅನ್ನವನ್ನು ಸಹ ಅಳತೆ ಮಾಡಿ ಸೇವಿಸ ಬೇಕು ಎನ್ನುವ ಕೊರಗು ಇನ್ನೊಂದು ಕಡೆ.

ಒಟ್ಟಾರೆಯಾಗಿ ಹೇಳ ಬೇಕೆಂದ್ರೆ ಏನು ತಿನ್ನಬೇಕೆಂದರೂ ಕೂಡ, ವೈದ್ಯರ ಸಲಹೆಗಳನ್ನು ಸರಿಯಾಗಿ ಅನುಸರಿಸ ಬೇಕು. ಇಲ್ಲಾಂದ್ರೆ ಕೆಲವೊಮ್ಮೆ ನೈಸರ್ಗಿಕ ರೂಪದಲ್ಲಿ ಇರುವಂತಹ ಹಣ್ಣು-ತರಕಾರಿಗಳು ಕೂಡ ಕೆಲವೊಮ್ಮೆ ಬ್ಲಡ್ ಶುಗರ್ ಏರಿಕೆ ಮಾಡುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಸೀಸನ್‌ನಲ್ಲಿ ಸಿಗುವಂತಹ ಯಾವೆಲ್ಲಾ ಬಗೆಯ ಹಣ್ಣುಗಳನ್ನು ದೂರ ಮಾಡಬೇಕು ಎನ್ನುವುದರ ಬಗ್ಗೆ ನೋಡೋಣ....

ಮಾವಿನ ಹಣ್ಣು

Amazing Health Benefits of Mango, king of fruits

 • ನಮಗೆಲ್ಲಾ ಗೊತ್ತೇ ಇರುವ ಹಾಗೆ, ಯುಗಾದಿ ಹಬ್ಬ ಕಳೆದ ನಂತರ ಮಾವಿನ ಹಣ್ಣುಗಳು ಭರಾಟೆ ಜೋರಾಗಿರುತ್ತದೆ. ಬೇಸಿಗೆಯ ಕಾಲದಲ್ಲಿ ಎಲ್ಲಿ ನೋಡಿದರೂ ಕೂಡ ಮಾವಿನಕಾಯಿ ಮತ್ತು ಮಾವಿನ ಹಣ್ಣುಗಳು ಕಾಣಲು ಸಿಗುತ್ತದೆ.
 • ಇನ್ನು ಮಾವಿನಕಾಯಿಗೆ ಹೋಲಿಸಿದ್ರೆ ಮಾವಿನ ಹಣ್ಣನ್ನು ಹೆಚ್ಚಿನವರು ಇಷ್ಟಪಟ್ಟು ತಿನ್ನುತ್ತಾರೆ.
 • ಯಾಕೆಂದ್ರೆ ಇದರಲ್ಲಿ ರುವಂತಹ ನೈಸರ್ಗಿಕ ಸಿಹಿ ಅಂಶ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಕೂಡ ಇಷ್ಟ ವಾಗುತ್ತದೆ.

ಸಕ್ಕರೆಕಾಯಿಲೆ ಇರುವವರು...

Suffering from diabetes? Five apps to help you manage your lifestyle better - The Economic Times

 • ಆದ್ರೆ ಸಕ್ಕರೆಕಾಯಿಲೆ ಇರುವವರು, ಈ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಯಾಕೆಂದ್ರೆ ಈ ಹಣ್ಣಿನಲ್ಲಿ ಕಂಡು ಬರುವ ಸಹಿ ಅಂಶ!
 • ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಕಂಡು ಬರುವ ಗ್ಲೈಸಮಿಕ್ ಸೂಚ್ಯಂಕ ಕೂಡ 50 ಕ್ಕಿಂತ ಜಾಸ್ತಿ ಇರುತ್ತದೆಯಂತೆ! ಹೀಗಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರು ತ್ತಿಲ್ಲ ಎನ್ನುವವರು ಮಾವಿನ ಹಣ್ಣು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.
 • ಇನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಯಾವುದೇ ಕಾರಣಕ್ಕೂ ಕೂಡ ಮಧುಮೇಹ ಇದ್ದವರು, ಊಟ ಆದ ಕೂಡಲೇ ಮಾವಿನ ಹಣ್ಣು ತಿನ್ನ ಬಾರದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆ ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆಯಂತೆ!

ಬಾಳೆಹಣ್ಣು

National Banana Day (April 19th, 2023) | Days Of The Year

 • ಬಾಳೆಹಣ್ಣು ವರ್ಷದ ಎಲ್ಲಾ ದಿನಗಳಲ್ಲಿ, ಸುಲಭವಾಗಿ, ಕೈಗೆಟಕುವ ದರದಲ್ಲಿ ಸಿಗುವ ಹಣ್ಣಾಗಿದೆ.
 • ಈ ಹಣ್ಣಿನಲ್ಲಿ ಕಾರ್ಬೋಹೈಡ್ರೇಟುಗಳ ಪ್ರಮಾಣ ಅಧಿಕವಾಗಿ ಕಂಡುಬರುವುದರ ಜೊತೆಗೆ ಉತ್ತಮ ಪ್ರಮಾಣದ ಕರಗುವ ನಾರಿನಾಂಶ ಕೂಡ ಕಂಡು ಬರುತ್ತದೆ.
 • ಇನ್ನು ಗ್ಲೈಸೆಮಿಕ್ ಸೂಚ್ಯಂಕ ಕೂಡ ಕಡಿಮೆಯೇ ಇದೆ. ಇದೇ ಕಾರಣಕ್ಕೆ ಬಾಳೆಹಣ್ಣನ್ನು ಮಧುಮೇಹಿಗಳು ಸೇವಿಸ ಬಹುದು ಎಂದು ಎಲ್ಲರೂ ಸಲಹೆಗಳನ್ನು ನೀಡುತ್ತಾರೆ.
 • ಮಧುಮೇಹ ಕಾಯಿಲೆ ಇರುವವರು, ಈ ಹಣ್ಣನ್ನು ತಿನ್ನುವ ಮೊದಲು ವೈದ್ಯರ ಸಲಹೆಗಳನ್ನು ಪಡೆದು ಕೊಂಡರೆ ಒಳ್ಳೆಯದು.
 • ವಾರದಲ್ಲಿ ಎರಡರಿಂದ ಮೂರು ಸಣ್ಣ ಗಾತ್ರದ ಬಾಳೆ ಹಣ್ಣನ್ನು ಈ ಕಾಯಿಲೆ ಇದ್ದವರು ಸೇವಿಸಬಹುದು. ಆದರೆ ನಿತ್ಯವೂ ಬಾಳೆಹಣ್ಣನ್ನು ಸೇವಿಸಬಾರದು.
 • ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ಮಧು ಮೇಹಿಗಳು, ಈ ಹಣ್ಣನ್ನು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.

ಸೀತಾಫಲ ಹಣ್ಣು

Science Behind Benefits of Having Custard Apples in Winters

 • ಕಾಲಕಾಲಕ್ಕೆ ಸಿಗುವ ಎಲ್ಲಾ ಬಗೆಯ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಬಗ್ಗೆ ನಾವು ಕೇಳಿ ದ್ದೇವೆ.
 • ಅದೇ ರೀತಿಯಲ್ಲಿ ನಮ್ಮ ಆರೋಗ್ಯ ರಕ್ಷಣೆಯಲ್ಲಿ ವಿವಿಧ ಬಗೆಯ ಪ್ರಯೋಜನ ಗಳನ್ನು ಸೀತಾಫಲ ಹಣ್ಣುಗಳಿಂದ ನಿರೀಕ್ಷೆ ಮಾಡಬಹುದು. ಆದರೆ ಸಕ್ಕರೆಕಾಯಿಲೆ ಇದ್ದವರು ಮಾತ್ರ ಈ ಹಣ್ಣಿನಿಂದ ದೂರ ಇದ್ದರೆ ಬಹಳ ಒಳ್ಳೆಯದು.
 • ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಹಣ್ಣಿನಲ್ಲಿ ಗ್ಲುಕೋಸ್ ಪ್ರಮಾಣ ಹಾಗೂ ಸಿಹಿ ಅಂಶ ಯಥೇಚ್ಛವಾಗಿ ಕಂಡು ಬರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗುವಂತೆ ಮಾಡುವ ಸಾಧ್ಯತೆ ಇರುತ್ತದೆ.
 • ಅಷ್ಟೇ ಅಲ್ಲದೆ ಮಧುಮೇಹ ಸಮಸ್ಯೆಯನ್ನು ನಿಯಂ ತ್ರಣ ತಪ್ಪುವಂತೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕ್ಕರೆಕಾಯಿಲೆ ಇರುವವರು ಈ ಹಣ್ಣಿನಿಂದ ದೂರ ಇದ್ದರೆ ಒಳ್ಳೆಯದು

ಸಪೋಟ ಹಣ್ಣು

Health Benefits of Fruit Sapota aka Chiku; Here is a long list!

 • ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ, ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದ್ರೆ ಈ ಹಣ್ಣಿನಲ್ಲಿ ಕಂಡು ಬರುವ ಸಿಹಿ ಅಂಶ ಹೆಚ್ಚಿನವರಿಗೆ ಬಹಳ ಇಷ್ಟವಾಗುತ್ತದೆ.
 • ಆರೋಗ್ಯ ತಜ್ಞರು ಹೇಳುವ ಪ್ರಕಾರ, ಯಾರು ಈಗಾಗಲೇ ಸಕ್ಕರೆಕಾಯಿಲೆಯಿಂದ ಬಳಲುತ್ತಿದ್ದಾರೆ ಅಥವಾ ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲವೋ ಅವರು ಸಪೋಟ ಹಣ್ಣನ್ನು ತಿನ್ನ ಬಾರದು ಎಂದು ಸಲಹೆ ನೀಡುತ್ತಾರೆ.
 • ಅಷ್ಟೇ ಈ ಹಣ್ಣನ್ನು ಕೂಡ ಅಷ್ಟೇ ಊಟವಾದ ಕೂಡಲೇ ತಿನ್ನಲೇಬಾರದೆಂದು, ಕಿವಿ ಮಾತನ್ನು ಕೂಡ ನೀಡುತ್ತಾರೆ.

beaware these fruits that raise blood sugar.