ಬಾಯಿ ರುಚಿ ಹೆಚ್ಚಿಸುವ ಈ ಡ್ರಿಂಕ್ಸ್ ಜಾಸ್ತಿ ಕುಡಿಯಬೇಡಿ, ಕಾಯಿಲೆಗಳು ಬರಬಹುದು!!

24-03-23 07:27 pm       Source: Vijayakarnataka   ಡಾಕ್ಟರ್ಸ್ ನೋಟ್

ಬೇಸಿಗೆಯ ಸಂದರ್ಭದಲ್ಲಿ ದೇಹವನ್ನು ತಂಪು ಮಾಡಿಕೊಳ್ಳಲು, ಕೃತಕ ಸಕ್ಕರೆ ಅಂಶ ಇರುವ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಮೊದಲು ಎರಡೆರಡು ಬಾರಿ ಆಲೋಚಿಸಿ!

ಬೇಸಿಗೆ ಕಾಲದ ಆಗಮನ ಶುರುವಾಗಿ ಬಿಟ್ಟಿದೆ. ಬೆಳಗ್ಗೆ ಸ್ವಲ್ಪ ಮೋಡದ ವಾತಾವರಣ ಇದ್ದರೂ ಕೂಡ, ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನ ತಾಪಮಾನ ಜಾಸ್ತಿ ಆಗುತ್ತಿದೆ. ಅದರಲ್ಲೂ ಕರಾವಳಿಯ ಕಡೆಗಳಲ್ಲಿ ಕೇಳುವುದೇ ಬೇಡ! ಬೆಳಗ್ಗೆ ಹನ್ನೊಂದು ಗಂಟೆಯ ಬಳಿಕ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಿಲ್ಲ, ಅಷ್ಟೊಂದು ಮಟ ಮಟ ಉರಿ ಬಿಸಿಲು! ಎಂತಹ ಆರೋಗ್ಯ ವ್ಯಕ್ತಿಯನ್ನು ಕೂಡ ಒಂದು ಕ್ಷಣಕ್ಕೆ ಅವರನ್ನು ಹೈರಾಣಾಗಿಸಿ ಬಿಡುತ್ತದೆ!

ಇನ್ನು ಬೇಸಿಗೆಯಲ್ಲಿ ತಂಪು ಪಾನೀಯಗಳಿಗೆ ಎಲ್ಲಿಲ್ಲದ ಬೇಡಿಕೆ! ಈ ಸಮಯದಲ್ಲಿ ಮನೆಯ ಫ್ರಿಡ್ದ್‌ನಲ್ಲಿ ತಂಪು ಪಾನೀಯಗಳು ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದೆರಡು ಬಾಟಲ್‌ ತಂಪು ಪಾನೀಗಳು ಅಥವಾ ಕೂಲ್ ಡ್ರಿಂಕ್ಸ್ ಅಂತೂ ಇದ್ದೇ ಇರುತ್ತದೆ! ಯಾಕೆಂದ್ರೆ ಬೇಸಿಗೆಯಲ್ಲಿ ತಕ್ಷಣಕ್ಕೆ ಬಾಯಾರಿಕೆ ನಿವಾರಿಸುವ ಜೊತೆಗೆ ಮನಸ್ಸಿಗೆ ತಂಪನ್ನು ನೀಡುವ ಈ ಕಾರ್ಬೊನೇಟೆಡ್ ಪಾನೀಯಗಳು ಅಂದರ ಬರುಗು ಬರುವ ಪಾನೀಯಗಳನ್ನು ಅತಿಯಾಗಿ ಕುಡಿಯುವುದರಿಂದ, ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಮಸ್ಯೆಗಳು ಕಂಡು ಬರಲು ಶುರುವಾಗುತ್ತದೆ....

ಕಿಡ್ನಿ ಸಮಸ್ಯೆಗಳು ಕಂಡು ಬರಬಹುದು

ಕಿಡ್ನಿ ಸಮಸ್ಯೆಗಳು ಕಂಡು ಬರಬಹುದು

  • ನಮಗೆಲ್ಲಾ ಗೊತ್ತೇ ಇದೆ, ದೇಹದ ಪ್ರಮುಖ ಅಂಗಳಲ್ಲಿ ಕಿಡ್ನಿ ಗಳು ಕೂಡ ಒಂದು ಇವುಗಳ ಪ್ರಮುಖ ಕಾರ್ಯ ವೆಂದರೆ, ದೇಹದ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವುದು.
  • ಆದರೆ ಯಾವಾಗ ಈ ಪ್ರಕ್ರಿಯೆಯಲ್ಲಿ ಅಡೆತಡೆಗಳು ಉಂಟಾಗು ತ್ತದೆಯೋ ಅಂತಹ ಸಂದರ್ಭದಲ್ಲಿ ಕಿಡ್ನಿಗಳು ತಮ್ಮ ಕೆಲಸ ಕಾರ್ಯವನ್ನು ನಿಲ್ಲಿಸಿಬಿಡುತ್ತದೆ. ಇದರಿಂದ ಆರೋಗ್ಯಕ್ಕೆ ಸಮಸ್ಯೆಗಳು ಕಂಡು ಬರಲು ಶುರು ವಾಗುತ್ತದೆ.
  • ಯಾಕೆ ಈ ವಿಷ್ಯವನ್ನು ಹೇಳುತ್ತಿದ್ದೇವೆ ಅಂದರೆ, ಯಾವಾಗ ನಾವು ಬಾಯಾರಿಕೆ ಆದಾಗ ಸಾಫ್ಟ್ ಡ್ರಿಂಕ್ಸ್ ಅಥವಾ ತಂಪು ಪಾನೀಯವನ್ನು ಅತಿಯಾಗಿ ಸೇವನೆ ಮಾಡುವುದರಿಂದ, ಕ್ರಮೇಣವಾಗಿ ಮೂತ್ರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗುತ್ತಾ ಹೋಗುತ್ತದೆ.
  • ಇದರಿಂದಾಗಿ ಕಿಡ್ನಿಗಳಿಗೆ ಸಮಸ್ಯೆಗಳು ಎದುರಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ proteinuria ಎಂದು ಕರೆಯುತ್ತಾರೆ.

ಬಾಯಿಯ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ

ಬಾಯಿಯ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ

  • ಸಿಹಿ ಅಂಶ ಹೆಚ್ಚಾಗಿ ಕಂಡು ಬರುವ ಈ ಪಾನೀಯದಲ್ಲಿ ಕೃತಕ ಸಕ್ಕರೆ ಅಂಶದ ಪ್ರಮಾಣ ಅತಿ ಹೆಚ್ಚಿನ ಪ್ರಮಾ ಣದಲ್ಲಿ ಕಂಡು ಬರುತ್ತದೆ. ಹೀಗಾಗಿ ಒಮ್ಮೆ ಕುಡಿದರೆ, ಮತ್ತೆ ಮತ್ತೆ ಕುಡಿಯಲು ಮನಸ್ಸು ಬಯಸುತ್ತದೆ.
  • ಆದರೆ ನಿಮಗೆ ಗೊತ್ತಿರಲಿ, ಅಧಿಕ ಪ್ರಮಾಣದಲ್ಲಿ ಕಂಡು ಬರುವ ಕೃತಕ ಸಕ್ಕರೆ ಅಂಶದ ಪ್ರಮಾಣ ಬಾಯಿಯ ಆರೋಗ್ಯವನ್ನು ಹದಗೆಡಿಸುತ್ತದೆ ಜೊತೆಗೆ ಹಲ್ಲು ಗಳಲ್ಲಿಯೂ ಕೂಡ ಸಮಸ್ಯೆಯನ್ನು ತಂದೊಡ್ಡುತ್ತದೆ.
  • ಹೀಗಾಗಿ ಬಾಯಿ ರುಚಿ ಹೆಚ್ಚಿಸುವ ಹಾಗೂ ಮನಸ್ಸಿಗೆ ತಂಪು ನೀಡುವ ಈ ಪಾನೀಯದಿಂದ ಆದಷ್ಟು ದೂರವಿಟ್ಟರೆ ಒಳ್ಳೆಯದು.​

ಮಧುಮೇಹ ಕಂಡು ಬರುವ ಸಾಧ್ಯತೆ ಇರುತ್ತದೆ

Diabetes - MedTech Europe, from diagnosis to cure

  • ಇಲ್ಲಿ ಮೊದಲಿಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ ಈಗಾಗಲೇ ಮಧುಮೇಹ ಇದ್ದವರು ಹಾಗೂ ಈ ಸಮಸ್ಯೆ ಇರದೇ ಇದ್ದವರೂ ಕೂಡ, ಯಾವು ದೇ ಕಾರಣಕ್ಕೂ ಕೂಡ ಅತಿಯಾಗಿ ತಂಪು ಪಾನೀಯ ಗಳನ್ನು ಕುಡಿಯಲು ಹೋಗಬಾರದು.
  • ಇದಕ್ಕೆ ಪ್ರಮುಖ ಕಾರಣ ಏನೆಂದ್ರೆ ತಂಪು ಪಾನೀಯ ಗಳಲ್ಲಿ ಕಂಡು ಬರುವ ಕೃತಕ ಸಕ್ಕರೆ ಅಂಶಗಳು ಹಾಗೂ ಸೋಡಾ ಅಂಶವು ರಕ್ತದಲ್ಲಿ ಸಕ್ಕರೆಮಟ್ಟವನ್ನು ಹೆಚ್ಚು ಮಾಡಿ, ಮಧುಮೇಹ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ.

ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಹೆಚ್ಚು ಮಾಡುತ್ತದೆ

ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಹೆಚ್ಚು ಮಾಡುತ್ತದೆ

  • ಮೊದಲೇ ಹೇಳಿದ ಹಾಗೆ ಸಕ್ಕರೆಪ್ರಮಾಣ ಹೆಚ್ಚಿರುವ, ಈ ಪಾನೀಯವನ್ನು ನಿರಂತರವಾಗಿ ಕುಡಿಯುವುದರಿಂದ,ಸಣ್ಣ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತೇವೆ.
  • ಪ್ರಮುಖವಾಗಿ ಚರ್ಮದಲ್ಲಿ ಸುಕ್ಕುಗಳು, ಮುಖದಲ್ಲಿ ನೆರಿಗೆ, ಕೂದಲುದುರುವುದು ಇಂತಹ ಸಮಸ್ಯೆಗಳು ಕಂಡು ಬರುತ್ತದೆ.
  • ಅಷ್ಟೇ ಅಲ್ಲದೆ ಈ ಪಾನೀಯಲ್ಲಿ ಸೋಡಾ ಅಂಶ ಕೂಡ ಕಂಡು ಬರುವುದರಿಂದ ವಯಸ್ಸಾಗುವಿಕೆ ಪ್ರಕ್ರಿಯೆ ಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.​

ಅಲ್ಸರ್ ಸಮಸ್ಯೆಗೆ ಕಾರಣವಾಗಬಹುದು!

Gastroparesis: a silent enemy of diabetes - Diabetes Voice

ತಂಪು ಪಾನೀಯಗಳನ್ನು ಪದೇ ಪದೇ ಅತಿಯಾಗಿ ಸೇವನೆ ಮಾಡುತ್ತಿದ್ದರೆ ಹೊಟ್ಟೆಯಲ್ಲಿ ಆಮ್ಲೀಯ ಪ್ರಭಾವ ಹೆಚ್ಚಾಗುತ್ತಾ ಹೋಗುತ್ತದೆ. ಇದು ಹೊಟ್ಟೆಯ ಒಳಪದರದ ಮೇಲೆ ಅತಿಯಾದ ಹಾನಿ ಉಂಟು ಮಾಡಿ, ಕೊನೆಗೆ ಅಲ್ಸರ್ ಸಮಸ್ಯೆಗೆ ಕಾರಣವಾಗಿ ಬಿಡುತ್ತದೆ.

summer health tips: know the harmful effects of drinking carbonated or sugary drinks.